ರೀಲ್ಸ್ಗಾಗಿ ರೈಲ್ವೆ ಪ್ಲಾಟ್‌ಫಾರ್ಮ್‌ನಲ್ಲಿ ಕಾರು ಓಡಿಸಿದ ವ್ಯಕ್ತಿ, ವಿಡಿಯೋ ವೈರಲ್
ಇಲ್ಲೊಬ್ಬ ರೀಲ್ಸ್ ಮಾಡಲು ಹೋಗಿ ಪೊಲೀಸರ ಅತಿಥಿಯಾಗಿದ್ದಾನೆ. ಅಷ್ಟಕ್ಕೂ ಆತ ಮಾಡಿರೋ ಕೆಲಸ ಏನು ಗೊತ್ತಾ?
ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಹೀರೋ ಆಗಿ ಸಾಕಷ್ಟು ಫಾಲೋವರ್ಸ್ಗಳನ್ನು ಗಳಿಸಬೇಕು ಎಂಬುದು ಸಾಕಷ್ಟು ಜನರ ಕನಸು. ಅದಕ್ಕಾಗಿ ಸಾಕಷ್ಟು ರೀಲ್ಸ್ಗಳನ್ನು ಪೋಸ್ಟ್ ಮಾಡುವುದನ್ನು ಕಾಣಬಹುದು. ಇದಕ್ಕೊಂದು ಉತ್ತಮ ನಿದಶರ್ನವೆಂಬಂತೆ ಇಲ್ಲೊಬ್ಬ ರೀಲ್ಸ್ ಮಾಡಲು ಹೋಗಿ ಪೊಲೀಸರ ಅತಿಥಿಯಾಗಿದ್ದಾನೆ. ಅಷ್ಟಕ್ಕೂ ಆತ ಮಾಡಿರೋ ಕೆಲಸ ಏನು ಗೊತ್ತಾ?
ಸಾಮಾನ್ಯವಾಗಿ ರೈಲ್ವೆ ಪ್ಲಾಟ್‌ಫಾರ್ಮ್‌ಗಳಲ್ಲಿ ಪ್ರಯಾಣಿಕರು ಓಡಾಡುತ್ತಿರುವುದು ಅಥವಾ ವಿಶ್ರಾಂತಿಸುತ್ತಿರುವುದನ್ನು ನೀವು ಕಂಡಿರುತ್ತೀರಿ. ಇಲ್ಲೊಬ್ಬ ತನ್ನ ಇನ್ಟ್ಸಾಗ್ರಾಮ್ ವಿಡಿಯೋಗಾಗಿ ರೈಲ್ವೆ ಪ್ಲಾಟ್‌ಫಾರ್ಮ್ ಬಳಸಿಕೊಂಡಿದ್ದಾನೆ. ಪ್ಲಾಟ್‌ಫಾರ್ಮ್‌ನಲ್ಲಿ ರಾಜಾರೋಷವಾಗಿ ಕಾರು ಓಡಿಸಿ, ವಿಡಿಯೋ ಮಾಡುವಂತೆ ಸ್ನೇಹಿತನಿಗೆ ಕೇಳಿಕೊಂಡಿದ್ದಾನೆ. ಉತ್ತರ ಪ್ರದೇಶದ ಆಗ್ರಾದ ಸುನಿಲ್ ಕುಮಾರ್ ಎಂದು ಗುರುತಿಸಲಾಗಿದೆ. ಇನ್‌ಸ್ಟಾಗ್ರಾಮ್‌ಗಾಗಿ ವೀಡಿಯೊಗಳನ್ನು ಮಾಡುವ ಪ್ರಯತ್ನದಲ್ಲಿ ತನ್ನ ಕಾರನ್ನು ಪ್ಲಾಟ್‌ಫಾರ್ಮ್‌ನಲ್ಲಿ ಓಡಿಸಿದ್ದಾನೆ. ಇದೀಗಾಗಲೇ ಆತನ ಮೇಲೆ ಕೇಸು ದಾಖಲಾಗಿದೆ.
सोशल मीडिया पर आगरा का एक वीडियो वायरल हो रहा है, जिसमें एक युवक प्लेटफॉर्म पर कार दौड़ाते नजर आ रहा है। प्लेटफार्म पर कार को दौड़ता देखकर यात्रियों में भगदड़ मच गई।#railway #agranews #videoviral #agracantstation pic.twitter.com/QQKxCO0d0j
— Hindustan UP-Bihar (@HindustanUPBH) March 15, 2023
ಈ ಘಟನೆ ಮಾರ್ಚ್ 8 ರಂದು ರಾತ್ರಿ 11:30 ಕ್ಕೆ ನಡೆದಿದೆ. ರೈಲ್ವೆ ಪ್ಲಾಟ್‌ಫಾರ್ಮ್‌ನ ಭದ್ರತಾ ಲೋಪ ಈ ಘಟನೆ ಪ್ರಮುಖ ಕಾರಣವಾಗಿದ್ದು, ಕಾರು ಓಡಿಸಿದ ವ್ಯಕ್ತಿಯ ಮೇಲೆ ಕ್ರಮ ಕೈಗೆತ್ತಿಕೊಳ್ಳಲಾಗಿದೆ ಎಂದು ಆಗ್ರಾ ವಿಭಾಗೀಯ ವಾಣಿಜ್ಯ ವ್ಯವಸ್ಥಾಪಕ ಶ್ರೀವಾಸ್ತವ ಹೇಳಿದ್ದಾರೆ. ರೈಲ್ವೆ ಕಾಯಿದೆಯ ಸೆಕ್ಷನ್ 159 ಮತ್ತು 147 ಉಲ್ಲಂಘಿಸಿದ್ದಕ್ಕಾಗಿ ಸುನೀಲ್ ಕುಮಾರ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ವರದಿಯಾಗಿದೆ.
ಇದನ್ನೂ ಓದಿ: ಜೈಲಿನಲ್ಲಿ ಮೂರು ಹೊತ್ತು ಊಟ ಸಿಗುತ್ತೇ ಎಂದು ಈತ ಮಾಡಿದ ಕೆಲಸ ಏನು ಗೊತ್ತಾ?
ಹರಿಯಾಣದ ಗುರುಗ್ರಾಮ್‌ನಿಂದ ವ್ಯಕ್ತಿಯೊಬ್ಬ ಚಲಿಸುತ್ತಿದ್ದ ಕಾರಿನಿಂದ ನಗದನ್ನು ಎಸೆಯುತ್ತಿರುವ ವಿಡಿಯೋ ವೈರಲ್ ಆದ ಬಳಿಕ ಈ ಘಟನೆ ನಡೆದಿದೆ. ಸ್ಥಳೀಯ ಪೋಲೀಸರ ಪ್ರಕಾರ, ಅವರು ಈ ಕ್ರಮವನ್ನು ತೆಗೆದುಕೊಳ್ಳಲು ಹೊಸದಾಗಿ ಬಿಡುಗಡೆಯಾದ ವೆಬ್ ಸಿರೀಸ್ ಫರ್ಜಿಯಿಂದ ಸ್ಫೂರ್ತಿ ಪಡೆದಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿ ಎಎನ್‌ಐಗೆ ತಿಳಿಸಿದ್ದಾರೆ.
ಇತ್ತೀಚೆಗೆ ಮೆಟ್ರೋ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ರೀಲ್‌ಗಳು ಮತ್ತು ಡ್ಯಾನ್ಸ್ ವೀಡಿಯೊಗಳನ್ನು ಚಿತ್ರೀಕರಿಸುವವರ ವಿರುದ್ಧ ದೆಹಲಿ ಮೆಟ್ರೋ ರೈಲು ಕಾರ್ಪೊರೇಷನ್ (DMRC) ಪ್ರಯಾಣಿಕರಿಗೆ ತೊಂದರೆಯಾಗಬೇಡಿ ಎಂದು ಒತ್ತಾಯಿಸಿದೆ.
ಮತ್ತಷ್ಟು ವೈರಲ್ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ:
Published On - 12:31 pm, Thu, 16 March 23