3ಸಾವಿರ ಅಡಿ ಎತ್ತರದಲ್ಲಿ ಬೆಟ್ಟಗಳ ಮಧ್ಯೆ ನೆಲೆಗೊಂಡ ಗಣೇಶನ ವಿಗ್ರಹ, ಇಲ್ಲಿದೆ ನೋಡಿ ವಿಡಿಯೋ

ಬೆಟ್ಟಗಳ ಮಧ್ಯೆ 3ಸಾವಿರ ಅಡಿ ಎತ್ತರದಲ್ಲಿ ಬಂಡೆಯ ಮೇಲೆ ನೆಲೆಗೊಂಡ ಏಕದಂತನಿಗೆ ಪೂಜಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಮಿಲಿಯನ್​​ ವೀಕ್ಷಣೆ ಪಡೆದುಕೊಂಡಿದೆ.

3ಸಾವಿರ ಅಡಿ ಎತ್ತರದಲ್ಲಿ ಬೆಟ್ಟಗಳ ಮಧ್ಯೆ  ನೆಲೆಗೊಂಡ ಗಣೇಶನ ವಿಗ್ರಹ, ಇಲ್ಲಿದೆ ನೋಡಿ ವಿಡಿಯೋ
ಧೋಲ್ಕಲ್ ಗಣೇಶImage Credit source: The Travelling Slacker
Follow us
ಅಕ್ಷತಾ ವರ್ಕಾಡಿ
|

Updated on:Mar 18, 2023 | 1:37 PM

ಬೆಟ್ಟಗಳ ಮಧ್ಯೆ 3ಸಾವಿರ ಅಡಿ ಎತ್ತರದಲ್ಲಿ ಬಂಡೆಯ ಮೇಲೆ ನೆಲೆಗೊಂಡ ಏಕದಂತನಿಗೆ ಪೂಜಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಮಿಲಿಯನ್​​ ವೀಕ್ಷಣೆ ಪಡೆದುಕೊಂಡಿದೆ. ಆದರೆ ಇಲ್ಲಿ ಯಾವುದೇ ದೇವಾಲಯವಿಲ್ಲ. ಬದಲಾಗಿ ಪುಟ್ಟ ಜಾಗದಲ್ಲಿ ಗಣೇಶನ ವಿಗ್ರಹವನ್ನು ಕಾಣಬಹುದು. ದಟ್ಟ ಕಾಡು ಸುತ್ತಲೂ ಬೆಟ್ಟ, ಭೂಮಿಯಿಂದ 3000 ಅಡಿ ಎತ್ತರದಲ್ಲಿರುವ ಬೆಟ್ಟದ ಮೇಲೆ ಗಣಪತಿಯ ವಿಗ್ರಹವನ್ನು ಹೇಗೆ ಸ್ಥಾಪಿಸಲಾಯಿತು? ಇಲ್ಲಿಗೆ ಹೋಗಲು ಸಾಧ್ಯವೇ ಹೀಗೆ ಸಾಕಷ್ಟು ಪ್ರಶ್ನೆಗಳು ನಿಮ್ಮಲ್ಲಿ ಕಾಡಬಹುದು. ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ.

@suggher_chhattisgarh ಎಂಬ ಇನ್ಸ್ಟಾಗ್ರಾಮ್​​ ಖಾತೆಯಲ್ಲಿ ಹಂಚಿಕೊಳ್ಳಲಾದ ಈ ಗಣೇಶನ ವಿಡಿಯೋ ಇದೀಗಾಗಲೇ ಮಿಲಿಯನ್​​ ವೀಕ್ಷಣೆ ಪಡೆದುಕೊಂಡಿದೆ. ಆ ಪೋಸ್ಟ್​ ಇಲ್ಲಿದೆ ನೋಡಿ.

ಛತ್ತೀಸ್‌ಗಢದ ದಾಂತೇವಾಡದಲ್ಲಿರುವ ಬೈಲಾಡಿಲಾದ ಧೋಲ್ಕಲ್ ಬೆಟ್ಟದ ತುದಿಯಲ್ಲಿ ಈ ಗಣೇಶನ ವಿಗ್ರಹ ನೆಲೆಗೊಂಡಿದೆ. ಪುರಾಣಗಳ ಪ್ರಕಾರ ಈ ಬೆಟ್ಟದಲ್ಲಿಯೇ ಗಣೇಶ ಮತ್ತು ಪರಶುರಾಮರ ಯುದ್ಧ ನಡೆದಿತ್ತು ಎಂದು ಹೇಳಲಾಗುತ್ತದೆ. ಜೊತೆಗೆ ಈ ಯುದ್ಧದಲ್ಲಿ ಪರಶುರಾಮನ ಕೊಡಲಿಗೆ ಗಣೇಶನ ಒಂದು ಹಲ್ಲು ಮುರಿಯಿತು. ಆದ್ದರಿಂದ ಬೆಟ್ಟದ ಕೆಳಗಿನ ಗ್ರಾಮಕ್ಕೆ ಫರಸ್ಪಾಲ್ ಎಂದು ಹೆಸರಿಸಲಾಯಿತು. ಈ ಘಟನೆಯನ್ನು ಬ್ರಹ್ಮಾಂಡ ಕೊನೆಯವರೆಗೂ ನೆನಪಿನಲ್ಲಿಟ್ಟುಕೊಳ್ಳಬೇಕು ಎಂದು ಚಿಂಡಕ್ ನಾಗವಂಶಿ ರಾಜರು ಗಣೇಶನ ಮೂರ್ತಿಯನ್ನು ಬೆಟ್ಟದ ಮೇಲೆ ಸ್ಥಾಪಿಸಿದರು ಎಂದು ಉಲ್ಲೇಖಿಸಲಾಗಿದೆ. ಈ ಪ್ರತಿಮೆ 11ನೇ ಶತಮಾನದ್ದು ಎಂದು ನಂಬಲಾಗಿದೆ.

ಇದನ್ನೂ ಓದಿ: ಪುಟ್ಟ ಗುಡಿಸಲು, ಹೊಸ ಸೈಕಲು, ಇರುವುದಲ್ಲಿಯೇ ಬೆಟ್ಟದಷ್ಟು ಖುಷಿ ಕಂಡುಕೊಂಡ ಕುಟುಂಬ

6 ಅಡಿ ಎತ್ತರ 2.5 ಅಡಿ ಅಗಲದ ಗ್ರಾನೈಟ್ ಕಲ್ಲಿನಿಂದ ಮಾಡಲಾಗಿರುವ ಈ ಪ್ರತಿಮೆಯು ಅತ್ಯಂತ ಕಲಾತ್ಮಕವಾಗಿದೆ. ಈ ಗಣೇಶನ ವಿಗ್ರಹದಲ್ಲಿ ಮೇಲಿನ ಬಲಗೈಯಲ್ಲಿ ಕುಡುಗೋಲು, ಮೇಲಿನ ಎಡಗೈಯಲ್ಲಿ ಮುರಿದ ಹಲ್ಲು, ಕೆಳಗಿನ ಬಲಗೈಯಲ್ಲಿ ಅಭಯ ಮುದ್ರೆಯಲ್ಲಿ ಅಕ್ಷಮಾಲೆ ಮತ್ತು ಕೆಳಗಿನ ಎಡಗೈಯಲ್ಲಿ ಮೋದಕವನ್ನು ಆಯುಧವಾಗಿ ಪ್ರತಿಷ್ಠಾಪಿಸಲಾಗಿದೆ. ಸ್ಥಳೀಯ ಆದಿವಾಸಿಗಳು ಏಕದಂತನನ್ನು ತಮ್ಮ ರಕ್ಷಕ ಎಂದು ಪೂಜಿಸುತ್ತಾರೆ. ಅವರ ಪ್ರಕಾರ, ಪಾರ್ವತಿ ದೇವಿ ಮತ್ತು ಸೂರ್ಯದೇವನ ವಿಗ್ರಹಗಳನ್ನು ಧೋಲ್ಕಲ್ ಶಿಖರದ ಬಳಿಯ ಎರಡನೇ ಶಿಖರದಲ್ಲಿ ಸ್ಥಾಪಿಸಲಾಗಿದೆ. ಸುಮಾರು 15 ವರ್ಷಗಳ ಹಿಂದೆ ಕಳ್ಳತನವಾಗಿತ್ತು. ಕಳ್ಳತನವಾಗಿರುವ ವಿಗ್ರಹದ ಬಗ್ಗೆ ಇಲ್ಲಿಯವರೆಗೆ ಯಾವುದೇ ಮಾಹಿತಿ ಬಂದಿಲ್ಲ. ಬೆಟ್ಟಕ್ಕೆ ತೆರಳುವ ಮಾರ್ಗದಲ್ಲಿ ಕಾಡು ಪ್ರಾಣಿಗಳ ಭಯವಿದೆ, ಆದರೆ ದೇವರ ದರ್ಶನಕ್ಕೆ ಹೋಗುವ ಭಕ್ತರಿಗೆ ಯಾವತ್ತೂ ತೊಂದರೆಯಿಲ್ಲ ಎಂದು ಅಲ್ಲಿನ ಆದಿವಾಸಿಗಳ ನಂಬಿಕೆ.

ಮತ್ತಷ್ಟು ವೈರಲ್​ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ:

Published On - 1:37 pm, Sat, 18 March 23