Viral Vdeo: ಪುಟ್ಟ ಗುಡಿಸಲು, ಹೊಸ ಸೈಕಲು, ಇರುವುದಲ್ಲಿಯೇ ಬೆಟ್ಟದಷ್ಟು ಖುಷಿ ಕಂಡುಕೊಂಡ ಕುಟುಂಬ

Akshatha Vorkady

|

Updated on:Mar 17, 2023 | 7:02 PM

ವಿಡಿಯೋದಲ್ಲಿ ಒಂದು ಪುಟ್ಟ ಗುಡಿಸಲಿನ ಮುಂದೆ ವ್ಯಕ್ತಿ ಹಾಗೂ ಪುಟ್ಟ ಬಾಲಕ ತಮ್ಮ ಮನೆಗೆ ಹೊಸ ಸೈಕಲ್​​ ಬಂದಿರುವ ಖುಷಿಯಲ್ಲಿ ಸಂಭ್ರಮಿಸುತ್ತಿರುವುದನ್ನು ಕಾಣಬಹುದು. ಇರುವುದರಲ್ಲಿಯೇ ಖುಷಿ ಪಡುವ ಈ ಕುಟುಂಬದ ಹೃದಯ ಸ್ಪರ್ಶಿ ವಿಡಿಯೋ ಸಾಮಾಜಿಕ ಬಳಕೆದಾರರ ಮನಸ್ಸನ್ನು ಗೆದ್ದಿದೆ.

Viral Vdeo: ಪುಟ್ಟ ಗುಡಿಸಲು, ಹೊಸ ಸೈಕಲು, ಇರುವುದಲ್ಲಿಯೇ ಬೆಟ್ಟದಷ್ಟು ಖುಷಿ ಕಂಡುಕೊಂಡ ಕುಟುಂಬ
ವೈರಲ್​​​ ವಿಡಿಯೋ
Image Credit source: Twitter

ಇರುವುದಲ್ಲಿಯೇ ಖುಷಿ ಕಂಡುಕೊಳ್ಳಿ ಅನ್ನೊ ಮಾತಿಗೆ. ಸಾಮಾನ್ಯವಾಗಿ ಮನುಷ್ಯ ಪ್ರತೀ ಬಾರೀ ಅತೃಪ್ತನಾಗುತ್ತಾನೆ. ಮೊದಲಿಗೆ ಕಷ್ಟ ಪಟ್ಟು ಒಂದು ಬೈಕ್​​ ತೆಗೆದುಕೊಂಡರೆ, ಖರೀದಿಸಿದ ಕೆಲವೇ ದಿನಗಳಲ್ಲಿ ನಾನೊಂದು ಪುಟ್ಟ ಕಾರು ಖರೀದಿಸಬೇಕು ಎಂಬ ಆಸೆ ಹುಟ್ಟಲು ಪ್ರಾರಂಭವಾಗುತ್ತದೆ. ಇದಾದ ಬಳಿಕ ಹೇಗೋ ಕಷ್ಟ ಪಟ್ಟು ಒಂದು ಪುಟ್ಟ ಕಾರು ಖರೀದಿಸಿದರೆ, ಇನ್ನೂ ಸ್ವಲ್ಪ ದುಬಾರಿ ಬೆಲೆಯ ಕಾರಿನ ಕಡೆ ಚಿತ್ತ ಹೋಗಿ ಅದನ್ನು ಖರೀದಿಸಲೇ ಬೇಕು ಎಂಬ ಆಸೆ ಹುಟ್ಟುತ್ತದೆ. ಹೀಗೆ ಪ್ರತೀ ಬಾರಿ ಇನ್ನೂ ಏನೋ ಬೇಕು ಎಂದು ಆಸೆ ಪಡುವುದು ಪ್ರತಿಯೊಬ್ಬರಲ್ಲೂ ಸಾಮಾನ್ಯವಾಗಿದೆ.

ಆದರೆ ಇಲ್ಲೊಂದು ವಿಡಿಯೋ ಇದೀಗಾ ಟ್ವಿಟರ್​​ನಲ್ಲಿ ಸಾಕಷ್ಟು ಬಳಕೆದಾರರನ್ನು ತಲುಪಿದೆ. ಮಾರ್ಚ್​ 8ರಂದು ಐಪಿಎಸ್​​ ಅಧಿಕಾರಿ ನಾಗೇಶ್​ ರಾವ್​​ ಈ ಪೋಸ್ಟ್​​​ ಹಂಚಿಕೊಂಡಿದ್ದರು. ಅದೇ ಪೋಸ್ಟ್​​​ನ್ನು ನಾರ್ವೆಯ ರಾಜತಾಂತ್ರಿಕ ಎರಿಕ್ ಸೊಲ್ಹೆಂಗ್ ತಮ್ಮ ಟ್ವಿಟರ್ ಖಾತೆಯಲ್ಲಿ ಶೇರ್​​ ಮಾಡಿ, ನನ್ನ ಹೃದಯವನ್ನು ಸ್ಪರ್ಶಿಸಿದೆ ಎಂದು ಪೋಸ್ಟ್​​ನಲ್ಲಿ ಬರೆದುಕೊಂಡಿದ್ದಾರೆ. ಆ ಪೋಸ್ಟ್​​​ ಇಲ್ಲಿದೆ.

ಈ ವಿಡಿಯೋದಲ್ಲಿ ಒಂದು ಪುಟ್ಟ ಗುಡಿಸಲಿನ ಮುಂದೆ ವ್ಯಕ್ತಿ ಹಾಗೂ ಪುಟ್ಟ ಬಾಲಕ ತಮ್ಮ ಮನೆಗೆ ಹೊಸ ಸೈಕಲ್​​ ಬಂದಿರುವ ಖುಷಿಯಲ್ಲಿ ಸಂಭ್ರಮಿಸುತ್ತಿರುವುದನ್ನು ಕಾಣಬಹುದು. ಅಪ್ಪ ಹೊಸ ಸೈಕಲ್​​​ನ್ನು ಹೂವಿನಿಂದ ಅಲಂಕರಿಸಿ, ಪೂಜಿಸುತ್ತಿದ್ದರೆ, ಈ ಪುಟ್ಟ ಬಾಲಕ ಕುಣಿದು ಕುಪ್ಪಳಿಸುತ್ತಿರುವುದನ್ನು ಕಾಣಬಹುದು. ಇರುವುದರಲ್ಲಿಯೇ ಖುಷಿ ಪಡುವ ಈ ಕುಟುಂಬದ ಹೃದಯ ಸ್ಪರ್ಶಿ ಈ ವಿಡಿಯೋ ಸಾಮಾಜಿಕ ಬಳಕೆದಾರರ ಮನಸ್ಸನ್ನು ಗೆದ್ದಿದೆ.

ಮಾರ್ಚ್​ 8ರಂದು ಐಪಿಎಸ್​​ ಅಧಿಕಾರಿ ನಾಗೇಶ್​ ರಾವ್​​ ಈ ಪೋಸ್ಟ್​​​ ಹಂಚಿಕೊಂಡಿದ್ದರು. ಇಂದು ಬೆಳಗ್ಗೆ(ಮಾ. 17) ನಾರ್ವೆಯ ರಾಜತಾಂತ್ರಿಕ ಎರಿಕ್ ಸೊಲ್ಹೆಂಗ್ ಈ ಪೋಸ್ಟ್​​​ ಟ್ವೀಟ್​​ ಮಾಡಿದ್ದು, ಇದೇ ಪೋಸ್ಟ್​​​ನ್ನು ನಟಿ ಸುಮಲತಾ ಅಂಬರೀಶ್​​​ ಅವರು ರಿಟ್ವೀಟ್​ ಮಾಡಿದ್ದಾರೆ.

ಐಪಿಎಸ್​​ ಅಧಿಕಾರಿ ನಾಗೇಶ್​ ರಾವ್​​ ಹಂವಿಕೊಂಡಿರುವ ಪೋಸ್ಟ್​​ ಇಲ್ಲಿದೆ

ಇದನ್ನೂ ಓದಿ: 18 ವರ್ಷ ತುಂಬುವ ಮೊದಲೇ ಚೊಚ್ಚಲ ಮಗು ಹೆತ್ತು 28ನೇ ವಯಸ್ಸಿಗೆ 9 ಮಕ್ಕಳಿಗೆ ಜನ್ಮ ನೀಡಿದ ಮಹಿಳೆ

ಬಹುತೇಕ ಎಲ್ಲಾ ಸಾಮಾಜಿಕ ಮಾಧ್ಯಮಗಳ ಪ್ಲಾಟ್‌ಫಾರ್ಮ್‌ಗಳಲ್ಲಿ ಅನೇಕ ಜನರು ಪೋಸ್ಟ್ ಮಾಡಿದ ಈ ವೀಡಿಯೊವನ್ನು ನಾನು ಹಲವಾರು ಬಾರಿ ವೀಕ್ಷಿಸಿದ್ದೇನೆ. ಪ್ರತಿ ಬಾರಿ ಅದು ನನ್ನ ಹೃದಯವನ್ನು ತುಂಬಾ ಆಳವಾಗಿ ಸ್ಪರ್ಶಿಸಿದೆ. ಸೈಕಲ್​​ ಒಂದನ್ನು ಖರೀದಿಸಿದಾಗ, ಅದು ನಮಗೆ ಚಿಕ್ಕ ವಿಷಯ ಎಂದೆನಿಸಿದರೂ ಕೂಡ, ಇವರು ಹಿಂದೂ ಸಂಪ್ರದಾಯದಂತೆ ಅದನ್ನು ಹೂವುಗಳಿಂದ ಅಲಂಕರಿಸಿ ಪೂಜಿಸುತ್ತಿರುವುದು ನಿಜಕ್ಕೂ ಕಣ್ಣೀರು ತರಿಸಿದೆ ಎಂದು ಪೋಸ್ಟ್​​​ನಲ್ಲಿ ನಾಗೇಶ್​ ರಾವ್ ಬರೆದುಕೊಂಡಿದ್ದಾರೆ.

ಮತ್ತಷ್ಟು ವೈರಲ್​​ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: 

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada