AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Surprise Holiday: ಇ-ಮೇಲ್ ​​ಚೆಕ್​​​ ಮಾಡಿ ಆಫೀಸಿಗೆ ಹೊರಡಿ, ಇಂದು ನಿಮಗೂ ರಜೆ ಇರಬಹುದು

ಪ್ರತೀ ವರ್ಷ ಮಾರ್ಚ್​ 17ರಂದು ಅಂತರಾಷ್ಟ್ರೀಯ ನಿದ್ರಾ ದಿನವನ್ನು ಆಚರಿಸಲಾಗುತ್ತದೆ. ಈ ದಿನದ ಅಂಗವಾಗಿ ಈ ಕಂಪೆನಿ ತಮ್ಮ ಉದ್ಯೋಗಿಗಳಿಗೆ ಸರ್ಪ್ರೈಸ್ ​​​ ಆಗಿ ರಜೆಯನ್ನು ಘೋಷಣೆ ಮಾಡಿದೆ.

Surprise Holiday: ಇ-ಮೇಲ್ ​​ಚೆಕ್​​​ ಮಾಡಿ ಆಫೀಸಿಗೆ ಹೊರಡಿ, ಇಂದು ನಿಮಗೂ ರಜೆ ಇರಬಹುದು
ಅಂತರಾಷ್ಟ್ರೀಯ ನಿದ್ರಾ ದಿನ
ಅಕ್ಷತಾ ವರ್ಕಾಡಿ
|

Updated on: Mar 17, 2023 | 10:50 AM

Share

ಬೆಂಗಳೂರಿನ ಕಂಪನಿಯೊಂದು ತನ್ನ ಉದ್ಯೋಗಿಗಳ ಆರೋಗ್ಯ ಕ್ಷೇಮಕ್ಕಾಗಿ ಇಂದು ಆಫೀಸಿಗೆ ಬರಬೇಡಿ, ಮಲಗಿ ವಿಶ್ರಾಂತಿಸಿ ಎಂದು  ರಜೆಯನ್ನು ಘೋಷಿಸಿದೆ. ಮಾರ್ಚ್​ 17ರಂದು ಅಂತರಾಷ್ಟ್ರೀಯ ನಿದ್ರಾ ದಿನ(World Sleep Day ) ವಾಗಿ ಘೋಷಿಸಲಾಗಿದ್ದು,  ಈ ದಿನದ ಅಂಗವಾಗಿ ಈ ಕಂಪೆನಿ ತನ್ನ ಉದ್ಯೋಗಿಗಳಿಗೆ ಸರ್ಪ್ರೈಸ್ ​​​ ಆಗಿ ರಜೆಯನ್ನು ನೀಡಿದೆ.  ಕಂಪೆನಿಯ ಸಿಬ್ಬಂದಿಗಳಿಗೆ ಹೆಚ್​​ಆರ್​​​​ ಡಿಪಾರ್ಟ್​ಮೆಂಟ್​​ನಿಂದ ಮೇಲ್​​ ಬಂದಿದ್ದು, ಸರ್ಪ್ರೈಸ್ ಹಾಲಿಡೇ, ಅನೌನ್ಸಿಂಗ್ ದಿ ಗಿಫ್ಟ್ ಆಫ್ ಸ್ಲೀಪ್ ಎಂದು ಸಂದೇಶವನ್ನು ಕಳುಹಿಸಲಾಗಿದೆ.

Wakefit Solutions ಕಂಪೆನಿಯ ಈ ಸರ್ಪ್ರೈಸ್ ರಜೆಯ ಕುರಿತು ಉದ್ಯೋಗಿಗಳಿಗೆ ಕಳುಹಿಸಲಾದ ಮೇಲ್‌ನ ಸಂದೇಶದ ಸ್ಕ್ರೀನ್‌ಶಾಟ್ ಇದೀಗಾ ಭಾರೀ ವೈರಲ್​ ಆಗುತ್ತಿದೆ. ಇಲ್ಲಿದೆ ನೋಡಿ ಪೋಸ್ಟ್​​.

ಇದನ್ನೂ ಓದಿ: ಆರೋಗ್ಯವಂತ ವ್ಯಕ್ತಿ ಎಷ್ಟು ಹೊತ್ತು ನಿದ್ರೆ ಮಾಡಬೇಕು? ತಜ್ಞರು ಹೇಳುವುದೇನು?

ಆರೋಗ್ಯವನ್ನು ಕಾಪಾಡುವಲ್ಲಿ ನಿದ್ರೆ ಎಷ್ಟು ಮುಖ್ಯ. ಇಂದು ನೀವು ನಿಮ್ಮ ಆರೋಗ್ಯವನ್ನು ಕಾಪಾಡುವ ಸಲುವಾಗಿ ಈ ವಿಶೇಷ ರಜೆಯನ್ನು ನಿದ್ದೆಗಾಗಿ ಮೀಸಲಿಡಿ. ನಿಮ್ಮನ್ನು ಆರೋಗ್ಯವಾಗಿಡಿ. ವಿಶ್ರಾಂತಿ ಪಡೆಯಲು ಇಂದು ಪರಿಪೂರ್ಣ ಅವಕಾಶವಿದೆ ಎಂದು ಸಂದೇಶದಲ್ಲಿ ಬರೆಯಲಾಗಿದೆ.

ಈ ಕಂಪೆನಿಯೂ ಸರ್ಪ್ರೈಸ್ ನೀಡಿದ್ದು, ಇದೇ ಮೊದಲಲ್ಲ. ಕಳೆದ ವರ್ಷ ವಿಶ್ರಾಂತಿಸುವ ಹಕ್ಕು (Right to Nap policy) ನೀಡಿದ್ದು, ಅದು ಎಲ್ಲಾ ಉದ್ಯೋಗಿಗಳಿಗೆ ತಮ್ಮ ಕೆಲಸದ ಸಮಯದಲ್ಲಿ 30 ನಿಮಿಷಗಳ ಕಿರು ನಿದ್ದೆ ಮಾಡಲು ಅವಕಾಶ ಮಾಡಿಕೊಟ್ಟಿತು.

ಮತ್ತಷ್ಟು ವೈರಲ್​ ಸುದ್ದಿಗಾಗಿ ಇಲ್ಲಿ ಕ್ಲಿಕ್​​ ಮಾಡಿ :

Follow Us
ಅಕ್ಷತಾ ವರ್ಕಾಡಿ
ಅಕ್ಷತಾ ವರ್ಕಾಡಿ

ಅಕ್ಷತಾ ವರ್ಕಾಡಿ – ಮೂಲತಃ ಕಾಸರಗೋಡು ಜಿಲ್ಲೆಯ ಮಂಜೇಶ್ವರದ ವರ್ಕಾಡಿಯವರು. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ (M.C.J) ಎಂ.ಎ ಮಾಡಿದ್ದು, ಟಿವಿ9 ಡಿಜಿಟಲ್​ ಮೂಲಕ ವೃತ್ತಿ ಜೀವನವನ್ನು ಆರಂಭಿಸಿದ್ದಾರೆ. ಸುದ್ದಿ ಮಾಧ್ಯಮದಲ್ಲಿ​ 3 ವರ್ಷಗಳ ಅನುಭವ ಇವರಿಗಿದೆ. ಆಧ್ಯಾತ್ಮ, ಶಿಕ್ಷಣ, ಉದ್ಯೋಗವಕಾಶ, ಆರೋಗ್ಯ ಮತ್ತು ವೈರಲ್ ಸುದ್ದಿಗಳ ಬಗ್ಗೆ ಬರೆಯುವುದರಲ್ಲಿ ಆಸಕ್ತಿಹೊಂದಿದ್ದು, ಇವರು ಓದುಗರಿಗೆ ಉತ್ತಮ ಹಾಗೂ ಆಸಕ್ತಿದಾಯಕ ಲೇಖನಗಳನ್ನು ಒದಗಿಸುತ್ತಿದ್ದಾರೆ.

Read More
ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಫರೇಷನ್’
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಫರೇಷನ್’
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್
ಅಲ್ಪಸಂಖ್ಯಾತ ಮತದಾರರ ವೋಟ್ ಡಿಲಿಟ್, BJP ಮುಖಂಡರ ಮೇಲೆ FIR ದಾಖಲು
ಅಲ್ಪಸಂಖ್ಯಾತ ಮತದಾರರ ವೋಟ್ ಡಿಲಿಟ್, BJP ಮುಖಂಡರ ಮೇಲೆ FIR ದಾಖಲು
ದರ್ಶನ್ ಕೇಸ್: ಮಾಫಿ ಸಾಕ್ಷಿ ವಿಡಿಯೋ ವೈರಲ್ ಮಾಡಿದವರಿಗೆ ಕೋರ್ಟ್ ಶಾಕ್
ದರ್ಶನ್ ಕೇಸ್: ಮಾಫಿ ಸಾಕ್ಷಿ ವಿಡಿಯೋ ವೈರಲ್ ಮಾಡಿದವರಿಗೆ ಕೋರ್ಟ್ ಶಾಕ್