ಬೆಳಗಾವಿ ಜಿಲ್ಲೆಯ 18 ಕ್ಷೇತ್ರಗಳ ಪೈಕಿ 10ರಲ್ಲಿ ಮರಾಠ ಸಮುದಾಯದ ಬೆಂಬಲವಿಲ್ಲದೆ ಗೆಲ್ಲಲು ಆಗಲ್ಲ‌: ರಮೇಶ್ ಜಾರಕಿಹೊಳಿ

| Updated By: ಗಂಗಾಧರ​ ಬ. ಸಾಬೋಜಿ

Updated on: Feb 12, 2023 | 6:17 PM

ಜಿಲ್ಲೆಯ 10 ಕ್ಷೇತ್ರಗಳಲ್ಲಿ ಮರಾಠರ ಬೆಂಬಲ ಅಗತ್ಯ. ಮರಾಠ ಸಮುದಾಯದ ಬೆಂಬಲ ಇಲ್ಲದೇ ಯಾವುದೇ ಪಕ್ಷ ಇರಲಿ ಚುನಾವಣೆಯಲ್ಲಿ ಗೆಲ್ಲುವುದಕ್ಕೆ ಆಗಲ್ಲ ಎಂದು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಹೇಳಿದರು.

ಬೆಳಗಾವಿ ಜಿಲ್ಲೆಯ 18 ಕ್ಷೇತ್ರಗಳ ಪೈಕಿ 10ರಲ್ಲಿ ಮರಾಠ ಸಮುದಾಯದ ಬೆಂಬಲವಿಲ್ಲದೆ  ಗೆಲ್ಲಲು ಆಗಲ್ಲ‌: ರಮೇಶ್ ಜಾರಕಿಹೊಳಿ
ರಮೇಶ್ ಜಾರಕಿಹೊಳಿ
Follow us on

ಬೆಳಗಾವಿ: ಜಿಲ್ಲೆಯ 10 ಕ್ಷೇತ್ರಗಳಲ್ಲಿ ಮರಾಠರ ಬೆಂಬಲ ಅಗತ್ಯ. ಮರಾಠ ಸಮುದಾಯದ ಬೆಂಬಲ ಇಲ್ಲದೇ ಯಾವುದೇ ಪಕ್ಷ ಇರಲಿ ಚುನಾವಣೆಯಲ್ಲಿ ಗೆಲ್ಲುವುದಕ್ಕೆ ಆಗಲ್ಲ ಎಂದು ಮಾಜಿ ಸಚಿವ ರಮೇಶ್ ಜಾರಕಿಹೊಳಿ (Ramesh Jarakiholi)  ಹೇಳಿದರು. ಜಿಲ್ಲೆಯ ಗೋಕಾಕ್​ನಲ್ಲಿ ಆಯೋಜಿಸಿದ್ದ ಕ್ಷತ್ರಿಯ ಮರಾಠ ಸಮಾವೇಶದಲ್ಲಿ ಅವರು ಮಾತನಾಡಿ, ರಾಜಕೀಯ ಪಕ್ಷಗಳು ನಮ್ಮ ಬಳಿ ಬರಬೇಕು ಅಂದ್ರೆ ಒಗ್ಗಟ್ಟಾಗಬೇಕು. ಚುನಾವಣೆಯಲ್ಲಿ ಒಗ್ಗಟ್ಟಾಗಿ ಮುಗಿದ ಮೇಲೆ ಮನೆಯಲ್ಲಿದ್ರೆ ಆಗಲ್ಲ. ಜಿಲ್ಲೆಯ 3 ಕ್ಷೇತ್ರಗಳಲ್ಲಿ ಯಾರ ಬೆಂಬಲವಿಲ್ಲದೇ ಮರಾಠರು ಗೆಲ್ತಾರೆ. ಒಂದೇ ಪಕ್ಷಕ್ಕೆ ಸೀಮಿತವಾಗಿ ಮಾತನಾಡಲು ಬರುವುದಿಲ್ಲ. ರಾಜ್ಯಸಭಾ ಸದಸ್ಯ ಸ್ಥಾನ ಮರಾಠರಿಗೆ ಯಾಕೆ ಕೊಡಲಿಲ್ಲ ಎಂದು ಬೆಳಗಾವಿಯಲ್ಲಿ ನಡೆದ ಸಭೆಯಲ್ಲಿ ನಾನು ಆಕ್ಷೇಪ ವ್ಯಕ್ತಪಡಿಸಿದ್ದೆ ಎಂದು ಹೇಳಿದರು.

ಪಂಚಮಸಾಲಿ ಸಮಾಜ ಗುರಿಯಾಗಿಸಿ ರಮೇಶ್ ವಾಗ್ದಾಳಿ

ಅಹಿಂದ ಹಾಗೂ ಮರಾಠ ಸಮುದಾಯ ಎರಡೂ ಒಗ್ಗೂಡಬೇಕು. ನಾವು ಒಗ್ಗಟ್ಟಾದ್ರೆ ಚುನಾವಣೆಯಲ್ಲಿ ಹೆಚ್ಚು ಸ್ಥಾನ ಗೆದ್ದು ಬರುತ್ತೇವೆ. ಗೋಕಾಕ್​ಗೆ ಬಂದು ದೊಡ್ಡ ದೊಡ್ಡದಾಗಿ ಮಾತನಾಡಿ ಹೋಗಿದ್ದಾರೆ. ನಾವು ಒಂದಾದ್ರೆ ಅವರ ಪರಿಸ್ಥಿತಿ ಏನಾಗುತ್ತೆ  ಎಂದು ಪಂಚಮಸಾಲಿ ಸಮಾಜ ಗುರಿಯಾಗಿಸಿಕೊಂಡು ರಮೇಶ್ ವಾಗ್ದಾಳಿ ಮಾಡಿದರು. ಕೇವಲ 6% ಇದ್ದವರೇ ಗೋಕಾಕ್​ಗೆ ಬಂದು ಅಷ್ಟು ಮಾತಾಡ್ತಾರೆ. ನಾವು 74% ಒಗ್ಗೂಡಿದ್ರೆ ಅವರ ಪರಿಸ್ಥಿತಿ ಏನಾಗುತ್ತೆ ಎಂದರು.

ಇದನ್ನೂ ಓದಿ: ಸಿಡಿ ಮುಂದಿಟ್ಟು ಚುನಾವಣೆಗೆ ಹೋದರೆ ಮೂರು ಕುಟುಂಬಗಳ ಇಮೇಜ್ ಡ್ಯಾಮೇಜ್ ಆಗಲಿದೆ: ಬಾಲಚಂದ್ರ ಜಾರಕಿಹೊಳಿ

ಮುಸ್ಲಿಮರ ಜೊತೆಗೆ ಜಾರಕಿಹೊಳಿ ಕುಟುಂಬ

ಅಹಿಂದ ಹಾಗೂ ಮರಾಠ ಸಮಾಜದವರು 1 ಟಿಕೆಟ್ ಕೇಳುತ್ತೇವೆ. 8 ಪರ್ಸೆಂಟ್​ ಇದ್ದವರು 50 ಟಿಕೆಟ್ ಕೇಳುತ್ತಾರೆ. ಅಂಥವೆಲ್ಲಾ ವಿಚಾರ ಮಾಡಿ ಹೆಜ್ಜೆ ಇಟ್ಟರೇ ನಾವು ಗೆಲ್ಲುತ್ತೇವೆ. ಸಮುದಾಯ ಒಗ್ಗಟ್ಟು ಪ್ರದರ್ಶಿಸಿ ಎಲ್ಲರೂ ನಮ್ಮ ಕಡೆ ನೋಡ್ತಾರೆ. ನಾವೆಲ್ಲರೂ ಒಂದಾಗಿ ಪಕ್ಷಾತೀತವಾಗಿ ಸ್ವಾಮೀಜಿಯವರನ್ನು ಮುಂದಿಟ್ಟುಕೊಂಡು ರಾಜಕೀಯ ಮಾಡೋಣ. ಸಮಾಜದ ಬೇಡಿಕೆ ಈಡೇರಿಸದಿದ್ರೆ ಶ್ರೀಗಳ ನೇತೃತ್ವದಲ್ಲಿ ವಿಧಾನಸೌಧ ನಡಗುವ ಹಾಗೇ ಮಾಡಬಹುದು.

ಇದನ್ನೂ ಓದಿ: 100 ರೂಪಾಯಿಗೆ ಕನಕಪುರದಲ್ಲಿ ಬ್ಲೂ ಫಿಲ್ಮ್ ತೋರಿಸಿದ್ದ ಡಿ.ಕೆ.ಶಿವಕುಮಾರ್: ರಮೇಶ್ ಜಾರಕಿಹೊಳಿ ಗಂಭೀರ ಆರೋಪ

ಹಿಂದುಳಿದ ಸಮುದಾಯ, ಎಸ್​​ಸಿ, ಎಸ್‌ಟಿ, ಮರಾಠ ಸಮುದಾಯ, ಮುಸ್ಲಿಮರ ಜೊತೆಗೂ ನಮ್ಮ ಜಾರಕಿಹೊಳಿ ಕುಟುಂಬ ಇದೆ. ಮುಸಲ್ಮಾನ ಸಮಾಜ ಸಹ ನಮ್ಮದು ಎಂದು ಭಾಷಣದೂದ್ದಕ್ಕೂ ಪಂಚಮಸಾಲಿ ಲಿಂಗಾಯತ ನಾಯಕರ ಟಾರ್ಗೆಟ್ ಮಾಡಿ ರಮೇಶ್ ಜಾರಕಿಹೊಳಿ ಮಾತನಾಡಿದಂತ್ತಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.