ಮಲ್ಲಿಕಾರ್ಜುನ ಖರ್ಗೆ ಸಿಎಂ ಆದ್ರೆ ಕೆಲಸ ಮಾಡಲು ಸಿದ್ಧ ಎಂಬ ಡಿಕೆ ಶಿವಕುಮಾರ್​ ಹೇಳಿಕೆಗೆ ಸಿದ್ದರಾಮಯ್ಯ ಹೇಳಿದಿಷ್ಟು

|

Updated on: Apr 09, 2023 | 3:21 PM

ಯಾರು ಸಿಎಂ ಆಗಬೇಕೆಂದು ಹೈಕಮಾಂಡ್ ತೀರ್ಮಾನಿಸಲಿದೆ. ಹೈಕಮಾಂಡ್ ಕೈಗೊಳ್ಳುವ ನಿರ್ಧಾರಕ್ಕೆ ನಾವು ಬದ್ಧರಾಗಿದ್ದೇವೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದರು.

ಬೆಂಗಳೂರು: ಯಾರು ಸಿಎಂ ಆಗಬೇಕೆಂದು ಹೈಕಮಾಂಡ್ ತೀರ್ಮಾನಿಸಲಿದೆ. ಹೈಕಮಾಂಡ್ ಕೈಗೊಳ್ಳುವ ನಿರ್ಧಾರಕ್ಕೆ ನಾವು ಬದ್ಧರಾಗಿದ್ದೇವೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದರು. ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಸಿಎಂ ಆದರೆ ಕೆಲಸ ಮಾಡಲು ಸಿದ್ಧ ಎಂಬ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಹೇಳಿಕೆಗೆ ಸಿದ್ದರಾಮಯ್ಯ ಪ್ರತಿಕ್ರಿಯಿಸಿದರು. ಮಲ್ಲಿಕಾರ್ಜುನ ಖರ್ಗೆ ಕೈ ಕೆಳಗೆ ಕೆಲಸ ಮಾಡುವುದನ್ನು ಇಷ್ಟಪಡುತ್ತೇನೆ. ಖರ್ಗೆ ಅವರು ಏನು ಬಯಸುತ್ತಾರೋ ಅದನ್ನು ಈಡೇರಿಸುವ ಕೆಲಸ ನನ್ನದು ಎಂದು ಡಿಕೆ ಶಿವಕುಮಾರ್​ ನಿನ್ನೆ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದರು. ಆ ಮೂಲಕ ಖರ್ಗೆ ಅವರು ಮುಖ್ಯಮಂತ್ರಿಯಾದರೆ ತ್ಯಾಗಕ್ಕೂ ಸಿದ್ಧ ಎಂದು ಡಿಕೆ ಶಿವಕುಮಾರ್ ಪರೋಕ್ಷ ಸುಳಿವು ನೀಡಿದ್ದರು. ಆ ಮೂಲಕ ಸಿದ್ದರಾಮಯ್ಯ ವಿರುದ್ಧ ಹೊಸ ರಾಜಕೀಯ ದಾಳ ಉರುಳಿಸಿದ್ದಾರೆ ಎಂದೇ ವಿಶ್ಲೇಷಿಸಲಾಗುತ್ತಿದೆ.

ಕರ್ನಾಟಕಕ್ಕೆ ಯಾಕೆ ಬರಬೇಕು: ಸಿದ್ದರಾಮಯ್ಯ ಆಕ್ರೋಶ 

ಬಿಜೆಪಿ ಬಂದ ಮೇಲೆ ಹೊಸ ಸಹಕಾರ ಇಲಾಖೆ ಮಾಡಿದ್ದಾರೆ. ಸಹಕಾರ ಇಲಾಖೆ ರಾಜ್ಯದ ವಿಷಯ. ಈಗ ಎಲ್ಲ ರಾಜ್ಯಗಳಲ್ಲಿ ಹಾಲು ಒಕ್ಕೂಟಗಳನ್ನು ಮಾಡಿದ್ದಾರೆ. ಆಯಾ ರಾಜ್ಯಗಳಲ್ಲಿ ರೈತರ ಸಂಘಟನೆ ಮಾಡುವ ಮೂಲಕ ಹಾಲು ಸಂಗ್ರಹಿಸುವ ಉದ್ದೇಶವಿದೆ. ರೈತರ ಆದಾಯ ಹೆಚ್ಚಿಸಲು ಹಾಲು ಒಕ್ಕೂಟ ಮಾಡಲಾಗಿದೆ. ಬೇಕಾದ್ರೆ ಗುಜರಾತ್​​​ನಲ್ಲಿ ಮಿಲ್ಕ್ ಸೊಸೈಟಿ ಮಾಡಿಕೊಳ್ಳಲಿ. ಕರ್ನಾಟಕಕ್ಕೆ ಯಾಕೆ ಬರಬೇಕೆಂದು ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು.

ಇದನ್ನೂ ಓದಿ: ಮಲ್ಲಿಕಾರ್ಜುನ ಖರ್ಗೆ ಕೈ ಕೆಳಗೆ ಕೆಲಸ ಮಾಡುವುದನ್ನು ಇಷ್ಟಪಡುತ್ತೇನೆ; ಹೊಸ ದಾಳ ಉರುಳಿಸಿದ ಡಿಕೆ ಶಿವಕುಮಾರ್

ಅಮುಲ್​ಗೆ ರಾಜ್ಯ ಸರ್ಕಾರ ಯಾಕೆ ಉತ್ತೇಜನ ಕೊಡುತ್ತಿದೆ. ಇದಕ್ಕೆ ಕನ್ನಡಿಗರು ವಿರೋಧ ಮಾಡುವಂತೆ ಸಿದ್ದರಾಮಯ್ಯ ಕರೆ ನೀಡಿದರು. ಅಮುಲ್ ಬೆಂಬಲಿಸಿದ ಸಿ.ಟಿ.ರವಿ ಹಾಗೂ ಶೋಭಾ ಕರಂದ್ಲಾಜೆಗೆ ಛೀಮಾರಿ ಹಾಕಬೇಕು ಎಂದು ಕಿಡಿಕಾರಿದರು.

ಮೇ 10ರಂದು ರಾಜ್ಯದ 224 ವಿಧಾನಸಭಾ ಕ್ಷೇತ್ರಗಳಲ್ಲಿ ಮತದಾನ ನಡೆಯಲಿದೆ. ಅಮಿತ್​ ಶಾಗೆ ಬಿಜೆಪಿ ಸೋಲಿನ ಭಯ ಇದ್ದಂತೆ ವಾಸನೆ ಹೊಡೆದಿದೆ. ನೀತಿ ಸಂಹಿತೆ ಜಾರಿಯಲ್ಲಿರುವಾಗ ಮೋದಿ ಹೇಗೆ ಬಂದ್ದರು ಗೊತ್ತಿಲ್ಲ.

ಇದನ್ನೂ ಓದಿ: ಸಿದ್ದರಾಮಯ್ಯ ವಿರುದ್ಧ ವರುಣಾದಲ್ಲಿ ಸ್ಪರ್ಧೆ ಮಾಡುವ ಬಗ್ಗೆ ದೆಹಲಿಯಿಂದಲೇ ಸ್ಪಷ್ಟನೆ ಕೊಟ್ಟ ಸೋಮಣ್ಣ

ಪ್ರಧಾನಿ ಮೋದಿಗೆ ಕಾಣದ ಹುಲಿ: ಸಿದ್ದರಾಮಯ್ಯ ವ್ಯಂಗ್ಯ

ಬಂಡೀಪುರ ಸಫಾರಿ ವೇಳೆ ಪ್ರಧಾನಿ ನರೇಂದ್ರ ಮೋದಿಗೆ ಕಾಣದ ಹುಲಿ ಎಂದು ಟ್ವೀಟ್​​ ಮೂಲಕ ಸಿದ್ದರಾಮಯ್ಯ ವ್ಯಂಗ್ಯ ಮಾಡಿದ್ದಾರೆ. ಹಿಡಿದು ಮಾರಿಬಿಡ್ತಾರೆ ಅನ್ನೋ ಭಯಕ್ಕೆ ಯಾವ ಗುಹೆಯಲ್ಲಿದೆಯೋ, ಯಾವ ಗುಹೆಯೊಳಗೆ ಅಡಗಿ ಕೂತಿದೆಯೋ.. ಅಯ್ಯೋ ಪಾಪ..! ಬಂಡೀಪುರ ಉಳಿಸಿ ಎಂಬ ಅಭಿಯಾನ ಮಾಡುವಂತೆ ಆಗದಿರಲಿ. ಅದೇ ನೀವು ಕರುನಾಡಿಗೆ ಮಾಡುವ ದೊಡ್ಡ ಉಪಕಾರ ಮೋದಿಜೀ ಎಂದು ಕಿಡಿಕಾರಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 3:20 pm, Sun, 9 April 23