Gujarat Assembly Elections 2022 : ನರೇಂದ್ರ ಮೋದಿ ತಾಯಿಯನ್ನು ಅವಮಾನಿಸಿದ್ದಕ್ಕಾಗಿ AAP ವಿರುದ್ಧ ಸ್ಮೃತಿ ಇರಾನಿ ತೀವ್ರ ವಾಗ್ದಾಳಿ

| Updated By: ಅಕ್ಷಯ್​ ಪಲ್ಲಮಜಲು​​

Updated on: Oct 14, 2022 | 5:20 PM

ಪ್ರಧಾನಿ ನರೇಂದ್ರ ಮೋದಿ ಅವರ ತಾಯಿಯನ್ನು ಅವಮಾನಿಸಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮತ್ತು ಅವರ ಆಮ್ ಆದ್ಮಿ ಪಕ್ಷದ ವಿರುದ್ಧ ಕೇಂದ್ರ ಸಚಿವೆ ಮತ್ತು ಬಿಜೆಪಿ ನಾಯಕಿ ಸ್ಮೃತಿ ಇರಾನಿ ತೀವ್ರ ವಾಗ್ದಾಳಿ ನಡೆಸಿದ್ದಾರೆ.

Gujarat Assembly Elections 2022 : ನರೇಂದ್ರ ಮೋದಿ ತಾಯಿಯನ್ನು ಅವಮಾನಿಸಿದ್ದಕ್ಕಾಗಿ AAP ವಿರುದ್ಧ ಸ್ಮೃತಿ ಇರಾನಿ ತೀವ್ರ ವಾಗ್ದಾಳಿ
Follow us on

ದೆಹಲಿ : ಪ್ರಧಾನಿ ನರೇಂದ್ರ ಮೋದಿ ಅವರ ತಾಯಿಯನ್ನು ಅವಮಾನಿಸಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮತ್ತು ಅವರ ಆಮ್ ಆದ್ಮಿ ಪಕ್ಷದ ವಿರುದ್ಧ ಕೇಂದ್ರ ಸಚಿವೆ ಮತ್ತು ಬಿಜೆಪಿ ನಾಯಕಿ ಸ್ಮೃತಿ ಇರಾನಿ ತೀವ್ರ ವಾಗ್ದಾಳಿ ನಡೆಸಿದ್ದಾರೆ. ರಾಷ್ಟ್ರ ರಾಜಧಾನಿಯಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಇರಾನಿ, ಗುಜರಾತ್‌ನಲ್ಲಿ ವಿಧಾನಸಭಾ ಚುನಾವಣೆಗೆ ಮುನ್ನ ಕೆಟ್ಟಾಗಿ ರಾಜಕಾರಣ ಮಾಡುತ್ತಿರುವ ಆಮ್ ಆದ್ಮಿ ಪಕ್ಷದ ಗುಜರಾತ್ ಘಟಕವು ಪ್ರಧಾನಿಯ ತಾಯಿಯನ್ನು ಅವಮಾನಿಸಿದೆ ಎಂದು ಹೇಳಿದರು. ಅರವಿಂದ್ ಕೇಜ್ರಿವಾಲ್ ಅವರ ಆಜ್ಞೆಯ ಮೇರೆಗೆ ಗುಜರಾತ್ ಎಎಪಿ ನಾಯಕರು ಪ್ರಧಾನಿ ಮೋದಿಯವರ ತಾಯಿಯ ವಿರುದ್ಧ ಅಸಭ್ಯ ಭಾಷೆ ಬಳಸುತ್ತಿದ್ದಾರೆ ಎಂದು ಅವರು ಆರೋಪಿಸಿದ್ದಾರೆ. ಎರಡು ಬಾರಿ ದೇಶದ ಆಶೀರ್ವಾದ ಪಡೆದು ಪ್ರಧಾನ ಸೇವಕನ ಜವಾಬ್ದಾರಿಯನ್ನು ನಿರ್ವಹಿಸುತ್ತಿರುವ ಮಗನಿಗೆ ಜನ್ಮ ನೀಡಿದ ಕಾರಣಕ್ಕಾಗಿ ಗುಜರಾತ್‌ನ ಆಮ್ ಆದ್ಮಿ ಪಕ್ಷದ ನಾಯಕರೊಬ್ಬರು ಮೋದಿ ಅವರ ತಾಯಿಯನ್ನು ಅವಮಾನಿಸಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.

ಮುಂಬರುವ ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಪ್ ಹೀನಾಯ ಸೋಲನ್ನು ಎದುರಿಸಲಿದೆ ಎಂದು ಇರಾನಿ ಎಚ್ಚರಿಸಿದ್ದಾರೆ. ನಾನು ಇಂದು ಅರವಿಂದ್ ಕೇಜ್ರಿವಾಲ್ ಜಿ ಅವರಿಗೆ ಹೇಳಲು ಬಯಸುತ್ತೇನೆ, ಕೋಪವನ್ನು ವ್ಯಕ್ತಪಡಿಸಲು ಪದಗಳು ನಿಯಂತ್ರಣದಲ್ಲಿ ಇರಲಿ. ಗುಜರಾತ್ ಮತ್ತು ಗುಜರಾತಿಗಳು ಮುಂಬರುವ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷವನ್ನು ನಾಶಪಡಿಸುವ ಪ್ರತಿಜ್ಞೆಯನ್ನು ತೆಗೆದುಕೊಂಡಿದ್ದಾರೆ ಎಂದು ಹೇಳಿದ್ದಾರೆ.

ಸ್ಮೃತಿ ಇರಾನಿ ಅವರು ಎಎಪಿ ಗುಜರಾತ್ ಮುಖ್ಯಸ್ಥ ಗೋಪಾಲ್ ಇಟಾಲಿಯಾ ಅವರ ಹೊಸ ವೀಡಿಯೊವನ್ನು ಟ್ವೀಟ್ ಮಾಡಿದ್ದು ಇದು ಅವರ ರಾಜಕೀಯ ಸಣ್ಣತನವನ್ನು ಹೇಳುತ್ತಿದೆ. ರಾಜಕೀಯ ಲಾಭಕ್ಕಾಗಿ ತುಂಬಾ ಕೆಳಮಟ್ಟಕ್ಕೆ ಇಳಿದಿದ್ದಾರೆ ಎಂದು ಆರೋಪಿಸಿದ್ದಾರೆ. ಗೋಪಾಲ್ ಇಟಾಲಿಯಾ ಅವರು ಪ್ರಧಾನಿ ನರೇಂದ್ರ ಮೋದಿಯವರಿಗೆ ನಿಂದನೀಯ ಪದಗಳನ್ನು ಬಳಸಿದ ವೀಡಿಯೊಗೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ಅವರನ್ನು ಬಂಧಿಸಿದ ಮೂರು ಗಂಟೆಗಳ ನಂತರ ಬಿಡುಗಡೆ ಮಾಡಿದರು. ಅವರ ಬಂಧನ ಬಿಜೆಪಿ ಮತ್ತು ಎಎಪಿ ನಡುವೆ ಮತ್ತಷ್ಟು ರಾಜಕೀಯ ಗಲಾಟೆಗೆ ಕಾರಣವಾಗಿತ್ತು.

ಪ್ರಧಾನಿ ನರೇಂದ್ರ ಮೋದಿಯ ಬಗ್ಗೆ ಅವಹೇಳನಕಾರಿ ಭಾಷೆ ಬಳಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ನಂತರ ಇಟಾಲಿಯಾ ಅವರನ್ನು ಎನ್‌ಸಿಡಬ್ಲ್ಯೂ ಸಮನ್ಸ್ ನೀಡಿತ್ತು. ವೈರಲ್ ವೀಡಿಯೊದಲ್ಲಿ, ಇಟಾಲಿಯಾ ಪ್ರಧಾನಿ ಮೋದಿಯನ್ನು ನಿಂದಿಸುತ್ತಿರುವುದನ್ನು ಮತ್ತು ಅವರ ಬಗ್ಗೆ ಜಾತಿವಾದಿ ಟೀಕೆಗಳನ್ನು ಮಾಡುವುದನ್ನು ಕಾಣಬಹುದು.

ಪ್ರಧಾನಿಯವರ ತಾಯಿಯನ್ನು ಅವಮಾನಿಸುವ ಮೂಲಕ ಎಎಪಿ ನಾಯಕರು ಕೀಳು ರಾಜಕಾರಣಕ್ಕಾಗಿ ಗುಜರಾತ್ ಮತ್ತು ಅಲ್ಲಿನ ಜನರ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ ಎಂದು ಬಿಜೆಪಿ ನಾಯಕ ಎಚ್ಚರಿಸಿದ್ದಾರೆ. ಗುಜರಾತಿಗಳು ಅವರಿಗೆ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಲಿದ್ದಾರೆ.

ತನ್ನ ಗುಜರಾತ್ ಘಟಕದ ನಾಯಕರನ್ನು ರಕ್ಷಿಸಿದ್ದಕ್ಕಾಗಿ ದೆಹಲಿ ಸಿಎಂ ಕೇಜ್ರಿವಾಲ್ ವಿರುದ್ಧ ವಾಗ್ದಾಳಿ ನಡೆಸಿದ ಇರಾನಿ, “ಅರವಿಂದ್ ಕೇಜ್ರಿವಾಲ್ ಅವರ ಆಶೀರ್ವಾದದೊಂದಿಗೆ, ಗುಜರಾತ್‌ನ ಎಎಪಿ ನಾಯಕರು ಪ್ರಧಾನಿಯ ತಾಯಿಯ ಮೇಲೆ ದುರುದ್ದೇಶಪೂರ್ವಕವಾಗಿ ದಾಳಿ ಮಾಡಿದ್ದಾರೆ.