ವಿಧಾನಸಭಾ ಚುನಾವಣೆ: ಅಮಿತ್ ಶಾ ನಮ್ಮ ಮನೆಯಲ್ಲಿ ಕುಳಿತುಕೊಂಡು ಜೀವ ತೆಗೆದರು, ಸೋಮಣ್ಣ ಹೇಳಿಕೆಯ ಹಿಂದಿನ ಗುಟ್ಟೇನು?  

| Updated By: ವಿವೇಕ ಬಿರಾದಾರ

Updated on: Nov 25, 2023 | 10:50 AM

2023ರ ವಿಧಾನಸಭೆ ಚುನಾವಣೆಯಲ್ಲಿ ಮಾಜಿ ಸಚಿವ ವಿ ಸೋಮಣ್ಣ ವರುಣ ಮತ್ತು ಚಾಮರಾಜನಗರ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದರು. ಎರಡೂ ಕ್ಷೇತ್ರದಲ್ಲಿ ಸೋಲನ್ನು ಕಂಡರು. ಇದರಿಂದ ಬೇಸರಗೊಂಡ ವಿ ಸೋಮಣ್ಣ ಇಂದು ತುಮಕೂರು ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿದರು. ಈ ವೇಳೆ ತಾವು ಎರಡು ಕ್ಷೇತ್ರದಲ್ಲಿ ಸ್ಪರ್ಧಿಸಲು ಕಾರಣವೇನು ಎಂಬುವುದರ ಹಿಂದಿನ ರಹಸ್ಯ ಹೇಳಿದರು.

ವಿಧಾನಸಭಾ ಚುನಾವಣೆ: ಅಮಿತ್ ಶಾ ನಮ್ಮ ಮನೆಯಲ್ಲಿ ಕುಳಿತುಕೊಂಡು ಜೀವ ತೆಗೆದರು, ಸೋಮಣ್ಣ ಹೇಳಿಕೆಯ ಹಿಂದಿನ ಗುಟ್ಟೇನು?  
ವಿ ಸೋಮಣ್ಣ ಸಿದ್ದಗಂಗಾ ಮಠ ಭೇಟಿ
Follow us on

ತುಮಕೂರು ನ.25: ಕಳೆದ ವಿಧಾನಸಭೆ ಚುನಾವಣೆಯಲ್ಲಿ ಮಾಜಿ ಸಚಿವ ವಿ ಸೋಮಣ್ಣ (V Somanna) ಅವರು ವರುಣ (Varuna) ಮತ್ತು ಚಾಮರಾಜನಗರದಲ್ಲಿ (Chamarajanagar) ಸ್ಪರ್ಧಿಸಿ ಸೋತಿದ್ದಾರೆ. ವಿ ಸೋಮಣ್ಣ ಅವರು ಸೋಲಿನ ಬೇಸರವನ್ನು ತುಮಕೂರು (Tumakur) ಸಿದ್ಧಗಂಗಾ ಮಠದ ಸಿದ್ದಲಿಂಗ ಸ್ವಾಮೀಜಿ ಬಳಿ ಹಂಚಿಕೊಂಡಿದ್ದಾರೆ. “ಇಲ್ಲಿ ಬಿಟ್ಟು ಅಲ್ಲಿ ಸ್ಪರ್ಧೆ ಮಾಡಿದ್ದೇ ನನ್ನ ಮಹಾ ಅಪರಾಧವಾಯ್ತು. ಕೇಂದ್ರ ಗೃಹ ಅಮಿತ್ ಶಾ (Amith Shah) ನಮ್ಮ ಮನೆಯಲ್ಲಿ ಕುಳಿತುಕೊಂಡು ಜೀವ ತೆಗೆದರು. ಎರಡು ಗಂಟೆ ಮನೆಯಲ್ಲಿ ಕುಳಿತುಕೊಂಡಿದ್ದರು, ಆಗಲ್ಲ ಅಂತಾ ಹೇಳಿದ್ದೆ. ಪ್ರಧಾನಿ ಮೋದಿಯವರು ದೆಹಲಿಗೆ ಕರೆಸಿ ನೀನು ಸ್ಪರ್ಧೆ ಮಾಡು ಅಂದರು, ಏನ್ಮಾಡಲಿ” ಎಂದು ಬೇಸರ ವ್ಯಕ್ತಪಡಿಸಿದರು. ಈ ಮೂಲಕ ತಾವು ಎರಡು ಕ್ಷೇತ್ರದಲ್ಲಿ ಸ್ಪರ್ಧಿಸಲು ಕಾರಣವೇನು ಎಂಬುವುದರ ಹಿಂದಿನ ರಹಸ್ಯವನ್ನು ಬಹಿರಂಗಪಡಿಸಿದ್ದಾರೆ.

ಈ ಬಗ್ಗೆ ಮಾತನಾಡುತ್ತಿರುವಾಗಲೇ ಕ್ಯಾಮೆರಾ ಕಂಡೊಡನೆ ವಿ ಸೋಮಣ್ಣ ಮಾತು ಬದಲಿಸಿದರು. ಈ ವೇಳೆ ವಿ ಸೋಮಣ್ಣ ಅವರಿಗೆ ಪತ್ನಿ ಶೈಲಜಾ, ಪುತ್ರ ಡಾ.ಅರುಣ್ ಮತ್ತು ಶಾಸಕ ಜ್ಯೋತಿ ಗಣೇಶ್ ಸೇರಿದಂತೆ ಹಲವರು ಸಾಥ್​ ನೀಡಿದರು.

ಸಿದ್ಧಗಂಗಾ ಮಠಕ್ಕೆ ವಿ ಸೋಮಣ್ಣ ಭೇಟಿ ನೀಡಿದ ಹಿನ್ನೆಲೆಯಲ್ಲಿ ಸಂಸದ ಜಿ.ಎಸ್.ಬಸವರಾಜು ಕೂಡ ಮಠಕ್ಕೆ ತೆರಳಿದರು. ಜಿ.ಎಸ್​ ಬಸವರಾಜು ಅವರಿಗೆ ವಿ.ಸೋಮಣ್ಣ ಡಿಸೆಂಬರ್​ 6ರಂದು ಸಿದ್ಧಗಂಗಾ ಮಠದ ಆವರಣದಲ್ಲಿ ನಡೆಯುವ ಗುರುಭವನ ಉದ್ಘಾಟನಾ ಕಾರ್ಯಕ್ರಮಕ್ಕೆ ಆಹ್ವಾನಿಸಿದರು.

ಇದನ್ನೂ ಓದಿ: ಡಿಸೆಂಬರ್ 6ರ ನಂತರ ಮುಂದಿನ ನಡೆಯ ಬಗ್ಗೆ ಹೇಳುತ್ತೇನೆ: ವಿ ಸೋಮಣ್ಣ, ಮಾಜಿ ಸಚಿವ

ಡಿಸೆಂಬರ್​ 7, 8, 9, 10ರೊಳಗೆ ದೆಹಲಿಗೆ ಹೋಗಿ ನಮ್ಮ ಭಾವನೆ ವ್ಯಕ್ತಪಡಿಸುತ್ತೇವೆ. ಶಾಸಕ ಬಸನಗೌಡ ಪಾಟೀಲ್​ ಯತ್ನಾಳ್, ಅರವಿಂದ ಲಿಂಬಾವಳಿ, ಶಾಸಕ ಅರವಿಂದ ಬೆಲ್ಲದ್​, ಶಾಸಕ ರಮೇಶ್ ಜಾರಕಿಹೊಳಿ ಸೇರಿದಂತೆ ಹಲವು ನಾಯಕರು ಹೈಕಮಾಂಡ್​​ ಬಳಿ ನಮ್ಮ ನೋವು ಹೇಳುತ್ತೇವೆ. ನಾವು ಹಿರಿಯರು ನಮ್ಮದೇ ಆದ ಅನುಭವ, ಸೇವೆ, ಆಲೋಚನೆ ಇದೆ. ಅದನ್ನೆಲ್ಲ ಹೈಕಮಾಂಡ್​ ನಾಯಕರ ಮುಂದೆ ಹೇಳುತ್ತೇವೆ ಎಂದು ವಿ ಸೋಮಣ್ಣ ಹೇಳಿದರು.

ಡಿಸೆಂಬರ್​ 6 ರಂದು ಸಿದ್ಧಗಂಗಾ ಮಠದ ಆವರಣದಲ್ಲಿ ಗುರುಭವನ ಉದ್ಘಾಟನೆ ಇದೆ. ನಾನು ಸಿದ್ಧಗಂಗಾ ಮಠದ ಭಕ್ತ, 44 ವರ್ಷಗಳ ಸಂಬಂಧ ನನ್ನದು. ಸಿದ್ಧಗಂಗಾ ಮಠದಲ್ಲಿ ಗುರುಭವನ ನಿರ್ಮಾಣ ಮಾಡುವ ಪುಣ್ಯ ಸಿಕ್ಕಿದೆ. ಕಾರ್ಯಕ್ರಮಕ್ಕೆ ಈ ಭಾಗದ ಜನಪ್ರತಿನಿಧಿಗಳನ್ನು ಆಹ್ವಾನಿಸಿದ್ದೇನೆ. ಕಾರ್ಯಕ್ರಮಕ್ಕೆ ಸಚಿವರಾದ ಡಾ.ಪರಮೇಶ್ವರ್, ರಾಜಣ್ಣ ಬರಲಿದ್ದಾರೆ. ಈ ಕಾರ್ಯಕ್ರಮಕ್ಕೆ ರಾಜಕೀಯ ಲೇಪನ ಬೇಡ ಎಂದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 10:38 am, Sat, 25 November 23