ದೆಹಲಿ: ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ (Arvind Kejriwal) ಅವರ ಸರ್ಕಾರ ಇತ್ತಿಚೇಗೆ ಹಬ್ಬದಂದು ಪಟಾಕಿ ಸಿಡಿಸುವುದನ್ನು ಮತ್ತು ಮಾರಾಟ ಮಾಡುವುದನ್ನು ನಿಷೇಧ ಮಾಡಿತ್ತು, ಆದರೆ ಇದೀಗ ಅವರದೇ ಸರ್ಕಾರ ಸಚಿವರು ಸರ್ಕಾರ ನಿಯಮವನ್ನು ಉಲ್ಲಂಘನೆ ಮಾಡಿದ್ದರೆ ಎಂದು ಬಿಜೆಪಿ (BJP) ಆರೋಪಿದೆ. ಅರವಿಂದ್ ಕೇಜ್ರಿವಾಲ್ ಸರ್ಕಾರ ಹಿಂದೂ ವಿರೋಧಿ ಎಂದು ಹೇಳಿದೆ. ಅರವಿಂದ್ ಕೇಜ್ರಿವಾಲ್ ಸಚಿವ ಸಂಪುಟ ವಿಸ್ತಾರಣೆ ಮಾಡಿದ್ದಾರೆ. ಸಂಪುಟದಲ್ಲಿ ನೂತನ ಸಚಿವರಾಗಿ ರಾಜ್ ಕುಮಾರ್ ಆನಂದ್ ಆಯ್ಕೆಯಾಗಿದ್ದಾರೆ, ಈ ಸಂಭ್ರಮಕ್ಕಾಗಿ ಅವರ ಬೆಂಬಲಿಗರು ಪಟಾಕಿ ಹೊಡೆದಿದ್ದರೆ, ಆದರೆ ದೆಹಲಿಯಲ್ಲಿ ಪಟಾಕಿ ನಿಷೇಧ ಮಾಡಿರುವ ಸರ್ಕಾರ, ಇದೀಗ ತಮ್ಮ ಸಂಪುಟದ ಸಚಿವರೇ ಪಟಾಕಿ ಹೊಡೆದಿದ್ದರೆ ಎಂದು ಬಿಜೆಪಿ ನಾಯಕ ತಜಿಂದರ್ ಪಾಲ್ ಸಿಂಗ್ ಬಗ್ಗಾ ಟೀಕಿಸಿದ್ದಾರೆ. ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರೇ ಜನರಿಗೆ ಒಂದು ರೂಲ್ಸ್, ನಿಮ್ಮ ನಾಯಕರಿಗೆ ಒಂದು ರೂಲ್ಸ್ ಎಂದು ಪ್ರಶ್ನಿಸಿದ್ದಾರೆ.
हिन्दू दिवाली पर पटाखे जलाते है तो प्रदूषण होगा, @ArvindKejriwal उन्हे जेल भेजेगा लेकिन केजरीवाल का मंत्री बनने की ख़ुशी में अगर पटाखे जलाए जाते हैं तो उसमें से ऑक्सिजन निकलेगा।केजरीवाल तुम्हारा हिन्दू विरोधी चेहरा आज फिर सामने आ गया,तुम्हे दिक़्क़त दीवाली से है पटाखो से नही pic.twitter.com/B3dHU0IZj4
— Tajinder Pal Singh Bagga (@TajinderBagga) October 19, 2022
ದೆಹಲಿ ಮುಖ್ಯಮಂತ್ರಿ ವಿರುದ್ಧ ವಾಗ್ದಾಳಿ ನಡೆಸಿದ ಬಿಜೆಪಿ ನಾಯಕ ತಜಿಂದರ್ ಪಾಲ್ ಸಿಂಗ್ ಬಗ್ಗಾ, ಅರವಿಂದ್ ಕೇಜ್ರಿವಾಲ್ ಅವರು ಹಿಂದೂ ವಿರೋಧಿ ಎಂದು ಆರೋಪಿಸಿದ್ದಾರೆ.ಸಚಿವ ರಾಜ್ ಕುಮಾರ್ ಆನಂದ್ ಅವರ ಬೆಂಬಲಿಗರು ಪಟಾಕಿ ಹೊಡೆಯುತ್ತಿರುವ ವೀಡಿಯೊವನ್ನು ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಹಿಂದೂಗಳು ದೀಪಾವಳಿಯಂದು ಪಟಾಕಿಗಳನ್ನು ಹೊಡೆದರೆ ಮಾಲಿನ್ಯ ಉಂಟಾಗುತ್ತದೆ. ಇದೀಗ ಅರವಿಂದ್ ಕೇಜ್ರಿವಾಲ್ ಅವರನ್ನು ಜೈಲಿಗೆ ಕಳುಹಿಸುಬೇಕು, ಕೇಜ್ರಿವಾಲ್ ಸಂಪುಟದಲ್ಲಿ ಮಂತ್ರಿಯಾಗಿರುವುದಕ್ಕೆ ಸಂಭ್ರಮಪಟ್ಟು ಪಟಾಕಿ ಸುಟ್ಟರೆ ಅದರಿಂದ ಆಮ್ಲಜನಕ ಹೊರಬರುತ್ತದೆ ಎಂದು ಟೀಕಿಸಿದ್ದಾರೆ.
ಇದನ್ನು ಓದಿ: ಕಾಶ್ಮೀರಿ ಪಂಡಿತರನ್ನು ಅವರ ಕಾಲೊನಿಯಲ್ಲಿ ಬಂಧಿ ಮಾಡಲಾಗಿದೆ, ಇದು ನ್ಯಾಯವೇ?: ಅರವಿಂದ ಕೇಜ್ರಿವಾಲ್
ಕೇಜ್ರಿವಾಲ್ ನಿಮ್ಮ ಹಿಂದೂ ವಿರೋಧಿ ಮುಖ ಮತ್ತೆ ಬಯಲಾಗಿದೆ. ನಿಮಗೆ ದೀಪಾವಳಿಯಲ್ಲಿ ಸಮಸ್ಯೆ ಇದೆ, ಪಟಾಕಿಯಿಂದಲ್ಲ ಎಂದು ಹೇಳಿದ್ದಾರೆ.ದೆಹಲಿಯಲ್ಲಿ ದೀಪಾವಳಿಯಂದು ಪಟಾಕಿ ಸಿಡಿಸಿದರೆ 200 ರೂಪಾಯಿ ದಂಡ ಮತ್ತು ಆರು ತಿಂಗಳ ಜೈಲು ಶಿಕ್ಷೆ ವಿಧಿಸುವ ನಿರ್ಧಾರವನ್ನು ದೆಹಲಿ ಸರ್ಕಾರ ಬುಧವಾರ ಹೊರತಂದಿದೆ. ಪಟಾಕಿಗಳನ್ನು ತಯಾರಿಸುವುದು, ಸಂಗ್ರಹಿಸುವುದು ಮತ್ತು ಮಾರಾಟ ಮಾಡುವುದು 5,000 ರೂಪಾಯಿಗಳವರೆಗೆ ದಂಡ ಮತ್ತು ಸ್ಫೋಟಕ ಕಾಯ್ದೆಯ ಸೆಕ್ಷನ್ 9B ಅಡಿಯಲ್ಲಿ ಮೂರು ವರ್ಷಗಳ ಜೈಲು ಶಿಕ್ಷೆಯೊಂದಿಗೆ ಶಿಕ್ಷಾರ್ಹ ಅಪರಾಧ ಎಂದು ಸರ್ಕಾರ ಘೋಷಿಸಿದೆ.
Published On - 11:37 am, Thu, 20 October 22