ಆರ್​ಎಸ್​ಎಸ್ ಹಿನ್ನಲೆ ಉಳ್ಳವರು ಪಕ್ಷಕ್ಕೆ ದುಡಿಯೋದು ಸ್ವಲ್ಪ ಕಡಿಮೆ: ಸಂಸದ ರಮೇಶ್ ಜೀಗಜಿಣಗಿ ಹೇಳಿಕೆ

| Updated By: Rakesh Nayak Manchi

Updated on: Jun 02, 2022 | 3:50 PM

ಸಂಘ ಪರಿವಾರದ ಹಿನ್ನಲೆಯವರು ಪಕ್ಷ ನಿಷ್ಠೆ ತೋರಿಸಲ್ವಾ ಎಂಬ ಪ್ರಶ್ನೆಗೆ ಕಾರಣವಾಗಿದೆ. ಸಂಘ ಪರಿವಾರದಲ್ಲಿ ಇರುವವರು ಪಕ್ಷಕ್ಕೆ ದುಡಿಯುವುದು ಸ್ವಲ್ಪ ಕಡಿಮೆ ಎಂದು ನನಗೆ ಅನ್ನಿಸುತ್ತಿದೆ ಎಂದು ವಿಜಯಪುರ ಕ್ಷೇತ್ರದ ಬಿಜೆಪಿ ಸಂಸದ ರಮೇಶ್ ಜಿಗಜಿಣಗಿ ಹೇಳಿದ್ದಾರೆ.

ಆರ್​ಎಸ್​ಎಸ್ ಹಿನ್ನಲೆ ಉಳ್ಳವರು ಪಕ್ಷಕ್ಕೆ ದುಡಿಯೋದು ಸ್ವಲ್ಪ ಕಡಿಮೆ: ಸಂಸದ ರಮೇಶ್ ಜೀಗಜಿಣಗಿ ಹೇಳಿಕೆ
ರಮೇಶ್ ಜಿಗಜಿಣಗಿ
Follow us on

ಬೆಳಗಾವಿ: ಸಂಘ ಪರಿವಾರದ ಹಿನ್ನಲೆಯವರು ಪಕ್ಷ ನಿಷ್ಠೆ ತೋರಿಸಲ್ವಾ ಎಂಬ ಪ್ರಶ್ನೆಗೆ ಕಾರಣವಾಗಿದೆ. ಸಂಘ ಪರಿವಾರದಲ್ಲಿ ಇರುವವರು ಪಕ್ಷಕ್ಕೆ ದುಡಿಯುವುದು ಸ್ವಲ್ಪ ಕಡಿಮೆ ಎಂದು ನನಗೆ ಅನ್ನಿಸುತ್ತಿದೆ ಎಂದು ವಿಜಯಪುರದ ಬಿಜೆಪಿ ಸಂಸದ ರಮೇಶ್ ಜಿಗಜಿಣಗಿ (Ramesh Jigajinagi) ಹೇಳಿಕೆ ನೀಡಿದ್ದಾರೆ. ವಾಯುವ್ಯ ಶಿಕ್ಷಕರ ಮತಕ್ಷೇತ್ರ ಚುನಾವಣೆ (Election) ಹಿನ್ನಲೆ ಶಿಕ್ಷಕರ ಕ್ಷೇತ್ರದ ಅರುಣ ಶಹಾಪುರ ಪರ ಪ್ರಚಾರಕ್ಕಾಗಿ ಚಿಕ್ಕೋಡಿಗೆ ಬಂದ ಅವರ ಸುದ್ದಿಗೋಷ್ಠಿ ನಡೆಸಿದರು. ಈ ವೇಳೆ ಹೇಳಿಕೆ ನೀಡಿದ ಅವರು, ಆರ್​ಎಸ್​ಎಸ್ (RSS)​ ಹಿನ್ನೆಲೆಯುಳ್ಳವರು ಪಕ್ಷಕ್ಕೆ ದುಡಿಯೋದು ಸ್ವಲ್ಪ ಕಡಿಮೆ. ನನ್ನ ಚುನಾವಣೆ ಸೇರಿದಂತೆ ಉಳಿದ ಚುನಾವಣೆಗಳಲ್ಲಿ ಅರುಣ್ ಶಹಾಪುರ (Arun Shapur) ದೂರ ಉಳಿದಿದ್ದರು. ಸಂಘ ಪರಿವಾರದಿಂದ ಬಂದ ಹಿನ್ನಲೆ ಹಾಗಿರುತ್ತೇನು ಗೊತ್ತಿಲ್ಲ ಎಂದರು.

ಇದನ್ನೂ ಓದಿ: ಕೋಡಿಹಳ್ಳಿ ಚಂದ್ರಶೇಖರ್​ ಆಪ್ ಸೇರ್ಪಡೆ: ವ್ಯಂಗ್ಯವಾಡಿದ ಬಿಜೆಪಿ ನಾಯಕ ಅಮಿತ್ ಮಾಳವೀಯ

ಸಂಘ ಪರಿವಾರದ ಹಿನ್ನಲೆ ಉಳ್ಳವರು ಪಕ್ಷದ ಕಾರ್ಯದಲ್ಲಿ ಭಾಗವಹಿಸಲ್ಲಾ. ನನಗಂತೂ ಅದರ ಬಗ್ಗೆ ಗೊತ್ತಿಲ್ಲ. ಆದರೆ ನನಗೆ ಹಾಗೇ ಅನ್ನಿಸುತ್ತಿದೆ. ನಾನೇನು ಸಂಘ ಪರಿವಾರದಿಂದ ಬಂದಿಲ್ಲ. ನಾವು ಜನತಾದಳ ಪರಿವಾರದಿಂದ ಬಂದವನು. ಕಾಂಗ್ರೆಸ್ ಪಕ್ಷಕ್ಕೂ ಆಹ್ವಾನ ಇತ್ತು, ಆದರೆ ಬಿಜೆಪಿಗೆ ಬಂದಿದ್ದೇನೆ. ಬಿಜೆಪಿ ಹಾಗೂ ಸಂಘದ ಬಗ್ಗೆ ಮನಸ್ಸಿನಲ್ಲಿ‌ ಭಕ್ತಿ ಇದೆ. ಬಾಬಾ ಸಾಹೇಬ್ ಅಂಬೇಡ್ಕರ್ ಅವರನ್ನ ಹಾಳು ಮಾಡಿದ್ದೆ ಕಾಂಗ್ರೆಸ್ ಪಕ್ಷ. ಅವರು ಸತ್ತಾಗ ಆರು ಅಡಿ ಜಾಗ ಕೊಟ್ಟಿಲ್ಲ. ಹಾಗಾಗಿ ಬಿಜೆಪಿ ಪಕ್ಷಕ್ಕೆ ಬಂದೆ ಎಂದರು.

ಇದನ್ನೂ ಓದಿ: ಕಾಂಗ್ರೆಸ್​ ತೊರೆದು ಬಿಜೆಪಿಗೆ ಸೇರ್ಪಡೆಯಾದ ಗುಜರಾತ್ ನಾಯಕ ಹಾರ್ದಿಕ್ ಪಟೇಲ್

ಶಿಕ್ಷಕರ ಕ್ಷೇತ್ರದ ಚುನಾವಣೆ ಹಿನ್ನೆಲೆ ಕಾಂಗ್ರೆಸ್ ಅಭ್ಯರ್ಥಿಯಿಂದ ಹಣ ಮತ್ತು ಲ್ಯಾಪ್​ಟಾಪ್ ಹಂಚಿಕೆ ಆರೋಪ ಕೇಳಿಬಂದಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಸಂಸದ ರಮೇಶ್ ಜಿಗಜಿಣಗಿ, ಅವರು ಈ ಹಿಂದೆ ಚೆನ್ನಾಗಿ ಕೆಲಸ ಮಾಡಿದ್ದಿದ್ದರೆ, ಶಿಕ್ಷಕರ ಚುನಾವಣೆಗೆ ಹಣ ಹಾಗೂ ಲ್ಯಾಪ್ ಟಾಪ್ ಹಂಚಿಕೆ ಮಾಡುವ ಪರಿಸ್ಥಿತಿ ಬರುತ್ತಿರಲಿಲ್ಲ. ಇದೇನು ಸಾರ್ವತ್ರಿಕ ಚುನಾವಣೆ ಅಲ್ಲ. ಅವರ ಆಟಾ ಇಲ್ಲ ನಡೆಯಲ್ಲ. ಜನರು ಹೆಬ್ಬೆಟ್ಟು ಒತ್ತುವವರಲ್ಲ, ಹಣ ಪಡೆದರೂ ಮತ ಹಾಕಲ್ಲ. ಮತದಾರರು ವಿದ್ಯಾವಂತರಿದ್ದಾರೆ, ಒಂದು ಲಕ್ಷ ಹಣ ಮತ್ತು ಟಿವಿ ಕೊಡಲಿ. ಆದರೆ, ಜನರು ಕಾಂಗ್ರೆಸ್​ಗೆ ಮತ ಹಾಕಲ್ಲ ಎಂಬ ವಿಶ್ವಾಸ ಇದೆ ಎಂದು ಹೇಳಿದರು.

ಹೆಚ್ಚಿನ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ