ಬೆನ್ನುಮೂಳೆ ಸ್ನಾಯುವಿನ ಕ್ಷೀಣತೆಯಿಂದ

ಬೇಬಿ ಜನೀಶ್​ನನ್ನು ಉಳಿಸಿ

ಬೆನ್ನುಮೂಳೆಯ ಸ್ನಾಯುವಿನ ಕ್ಷೀಣತೆ (Spinal Muscular Atrophy) ಒಂದು ಆನುವಂಶಿಕ ರೋಗ. ಬೆನ್ನುಹುರಿ ಮತ್ತು ಮೆದುಳಿನ ಕಾಂಡದ ನರದಲ್ಲಿರುವ ಜೀವಕೋಶಗಳು ತಾನೇ ತಾನಾಗಿ ಜೀವ ಕಳೆದುಕೊಳ್ಳುವುದರಿಂದ, ಈ ರೋಗ ಬಂದ ವ್ಯಕ್ತಿಯು ತನ್ನ ಸ್ನಾಯುಗಳ ಚಲನೆಯನ್ನು ನಿಯಂತ್ರಿಸಲು ಸಾಧ್ಯವಾಗುವುದಿಲ್ಲ. ಇದು ಒಂದು ನರವೈಜ್ಞಾನಿಕ ರೋಗದ ಸ್ಥಿತಿ ಮತ್ತು ಮೋಟಾರ್ ನ್ಯೂರಾನ್ ಕಾಯಿಲೆಯ ಒಂದು ವಿಧವಾಗಿದೆ

ತಂದೆ ನವೀನ್, ತಾಯಿ ಜ್ಯೋತಿ ಮತ್ತು ಮಗು ಜನೀಶ್

ಏನಿದು ಬೇಬಿ ಜನೀಶ್ಉಳಿಸಿ ಅಭಿಯಾನ?

ಬೇಬಿ ಜನೀಶ್ ಯಾರು? ಸ್ಪೈನಲ್ ಮಸ್ಕ್ಯೂಲರ್ ಎಟ್ರೋಪಿ ಎಂಬ ಅಪರೂಪದ ರೋಗ ಇರುವ ಜನೀಶ್, ಒಂದು ವಿಶೇಷ ಮಗು. ಈ ರೋಗ, ಮಗುವಿನ ಬೆಳವಣಿಗೆಯನ್ನು ಸಂಪೂರ್ಣ ಚಿವುಟಿ ಹಾಕಬಹುದು ಮತ್ತು ಚಿಕಿತ್ಸೆ ಸಿಗದಿದ್ದರೆ ಪ್ರಾಣಾಂತಿಕವೂ ಆಗಬಹುದು. ಈ ರೋಗಕ್ಕೆ ಸದ್ಯ ಸಿಗುತ್ತಿರುವ ಔಷಧಿ ಎಂದರೆ, ನೋವಾರ್ಟಿಸ್ ಕಂಪೆನಿಯ ಝೋಲ್ಗೆಂಜ್ಮಾ (https://www.zolgensma.com/). ಇದರ ಬೆಲೆ ರೂ. 16 ಕೋಟಿ. ಮಗುವಿನ ತೂಕ 13.6 ಕಿಲೋ ದಾಟಿದರೆ ಅಥವಾ ಮಗು ಮೂರು ವರ್ಷ ದಾಟಿದರೆ, ಮಗುವಿನ ಮೇಲೆ ಔಷಧಿ ಪರಿಣಾಮ ಆಗಲಿಕ್ಕಿಲ್ಲ ಎಂಬುದು ಪರಿಣಿತರ ಅಭಿಪ್ರಾಯ. ಆದ್ದರಿಂದ, ಮಗುವನ್ನು ಉಳಿಸಿಕೊಳ್ಳಲು ತುಂಬಾ ಕಡಿಮೆ ಸಮಯ ಇದೆ.

ಒಂದು ವರ್ಷದ ಹಿಂದೆ ಟಿವಿ9 ಕನ್ನಡ ಅಭಿಯಾನವೊಂದನ್ನು (https://www.youtube.com/watch?v=wiiBJuZNveE) ಪ್ರಾರಂಭಿಸಿ ಜನೀಶ್ನ ಪ್ರಾಣ ಉಳಿಸಲು ಕಂಕಣ ತೊಟ್ಟಿತು. ಟಿವಿ9ನ ಅಭಿಯಾನಕ್ಕೆ ಕರ್ನಾಟಕದ ಜನ ಕೈ ಜೋಡಿಸಿದರು. ಆಗ ಸಂಗ್ರಹವಾದ ರೂ. 7 ಕೋಟಿ, ನೇರವಾಗಿ ಜನೀಶ್ನ ಅಪ್ಪನ ಬ್ಯಾಂಕ್ ಖಾತೆಗೆ ಹೋಗಿದೆ. ಆದರೆ, ಆ ಮಗುವನ್ನು ಉಳಿಸಲು ಇನ್ನೂ ರೂ. ಒಂಬತ್ತು ಕೋಟಿ ಬೇಕಾಗಿದೆ.

ಕೈ ಮುಗಿದು ಕರ್ನಾಟಕದ ಜನರನ್ನು ಟಿವಿ9 ಕೇಳುತ್ತಿದೆ, ಆ ಮಗುವನ್ನು ಉಳಿಸಲು ಸಹಾಯ ಮಾಡಿ (https://www.youtube.com/watch?v=AJYaRWmg7FI). ತಮ್ಮಲ್ಲಿ ಅರಿಕೆ ಮಾಡುವುದೇನೆಂದರೆ, ತಂದೆ-ತಾಯಿಯ ಅಧಿಕೃತ ಖಾತೆಗೆ ಮಾತ್ರ ಹಣ ಹಾಕಿ. ಅವರ ಬ್ಯಾಂಕ್ನ ಖಾತೆಯ ವಿವರ ಇಲ್ಲಿದೆ.

₹ 6,00,86,429 Left to be Raised

₹ 36,165 Raised On 28 May 2022

₹ 9,99,13,571 Raised so far

₹ 16,00,00,000 Medicine cost

ಬ್ಯಾಂಕ್​ ವಿವರ

  • Account Name - JYOTHI Bank Name - INDIAN OVERSEAS BANK Account Number - 374201000000285 IFSC Code - IOBA0003742 Branch Name - SAHAKARANAGARA

Donate via Paytm/Google Pay/PhonePe

Scan the QR code from the app and make payment

Claim your donation acknowledgment now! For payment done via UPI

ನಿಮ್ಮ ಇಚ್ಛೆಗನುಸಾರವಾಗಿ ಹಣ ನೀಡಿ ಮತ್ತು ಆ ಮಗುವಿನ ಜೀವ ಉಳಿಸಲು ಸಹಾಯ ಮಾಡಿ.

Click on your DTH Provider to Add TV9 Kannada