Stock Market Today: ಸೆನ್ಸೆಕ್ಸ್ 550 ಅಂಶ ಚೇತರಿಕೆ, 17,486ರಲ್ಲಿ ವಹಿವಾಟು ಮುಗಿಸಿದ ನಿಫ್ಟಿ

ಮುಂಬೈ ಷೇರುಪೇಟೆ ಸೂಚ್ಯಂಕ ಬಿಎಸ್​ಇ ಮಂಗಳವಾರ 549.62 ಅಂಶ ಚೇತರಿಕೆಯೊಂದಿಗೆ 58,960.60ರಲ್ಲಿ ದಿನದ ವಹಿವಾಟು ಮುಕ್ತಾಯಗೊಳಿಸಿದೆ. ನಿಫ್ಟಿ ಕೂಡ ಸತತ ಮೂರನೇ ದಿನವೂ ಉತ್ತಮ ವಹಿವಾಟು ದಾಖಲಿಸಿ ಶೇಕಡಾ 1ರ ಚೇತರಿಕೆ ಕಂಡಿದೆ.

Stock Market Today: ಸೆನ್ಸೆಕ್ಸ್ 550 ಅಂಶ ಚೇತರಿಕೆ, 17,486ರಲ್ಲಿ ವಹಿವಾಟು ಮುಗಿಸಿದ ನಿಫ್ಟಿ
ಸಾಂದರ್ಭಿಕ ಚಿತ್ರ
Image Credit source: PTI

Updated on: Oct 18, 2022 | 5:23 PM

ಮುಂಬೈ: ಜಾಗತಿಕ ಆರ್ಥಿಕ ಅನಿಶ್ಚಿತತೆಗಳ ನಡುವೆಯೂ ಮುಂಬೈ ಷೇರುಪೇಟೆ  (Stock Market) ಸಂವೇದಿ ಸೂಚ್ಯಂಕ ಬಿಎಸ್​ಇ (BSE) ಮಂಗಳವಾರ 549.62 ಅಂಶ ಚೇತರಿಕೆಯೊಂದಿಗೆ 58,960.60ರಲ್ಲಿ ದಿನದ ವಹಿವಾಟು ಮುಕ್ತಾಯಗೊಳಿಸಿದೆ. ನಿಫ್ಟಿ (Nifty) ಕೂಡ ಸತತ ಮೂರನೇ ದಿನ ಉತ್ತಮ ವಹಿವಾಟು ದಾಖಲಿಸಿ ಶೇಕಡಾ 1ರ ಚೇತರಿಕೆ ಕಂಡಿದೆ. 175.15 ಅಂಶ ಚೇತರಿಕೆಯೊಂದಿಗೆ 17,486.95ರಲ್ಲಿ ದಿನದ ವಹಿವಾಟು ಅಂತ್ಯಗೊಳಿಸಿದೆ.

0.75 ಶೇಕಡಾ ಚೇತರಿಕೆಯೊಂದಿಗೆ ದಿನದ ಆರಂಭದ ವಹಿವಾಟು ಆರಂಭಿಸಿದ್ದ ಸೆನ್ಸೆಕ್ಸ್ ಒಂದು ಹಂತದಲ್ಲಿ 59,143.66 ರ ವರೆಗೂ ತಲುಪಿತ್ತು. ನಿಫ್ಟಿ ಸಹ ಒಂದು ಹಂತದಲ್ಲಿ 17,527.80 ರ ವರೆಗೆ ವಹಿವಾಟು ದಾಖಲಿಸಿತ್ತು.

Loading...

ಉತ್ತಮ ಗಳಿಕೆ ದಾಖಲಿಸಿ ಕಂಪನಿಗಳು:

ಸೆನ್ಸೆಕ್ಸ್​ನಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ನೆಸ್ಲೆ ಇಂಡಿಯಾ, ಐಟಿಸಿ, ಭಾರ್ತಿ ಏರ್​ಟೆಲ್, ಇಂಡಸ್​ಇಂಡ್ ಬ್ಯಾಂಕ್, ಎಲ್​ ಆ್ಯಂಡ್ ಟಿ, ಮಹೀಂದ್ರಾ & ಮಹೀಂದ್ರಾ, ರಿಲಯನ್ಸ್ ಇಂಡಸ್ಟ್ರೀಸ್, ಎಚ್​ಸಿಎಲ್ ಟೆಕ್ನಾಲಜೀಸ್ ಉತ್ತಮ ಗಳಿಕೆ ದಾಖಲಿಸಿವೆ.

ಮತ್ತೊಂದೆಡೆ ಎಚ್​ಡಿಎಫ್​ಸಿ, ಎನ್​ಟಿಪಿಸಿ, ಟೆಕ್ ಮಹೀಂದ್ರಾ, ಸನ್ ಫಾರ್ಮಾಸ್ಯೂಟಿಕಲ್ ಇಂಡಸ್ಟ್ರೀಸ್, ಎಚ್​ಡಿಎಫ್​ಸಿ ಬ್ಯಾಂಕ್ ಷೇರು ಮೌಲ್ಯದಲ್ಲಿ ಕುಸಿತವಾಗಿದೆ.

ಜಾಗತಿಕ ಮಾರುಕಟ್ಟೆ ವಹಿವಾಟು ಹೇಗಿದೆ?:

ಯುರೋಪ್ ಮತ್ತು ಏಷ್ಯಾ ಮಾರುಕಟ್ಟೆಗಳಲ್ಲಿ ಮಂಗಳವಾರ ಸಂಜೆ 5 ಗಂಟೆ ವೇಳೆಗೆ ಷೇರು ಮೌಲ್ಯ ವೃದ್ಧಿಯಾಗಿವೆ. ಯುಎಸ್ ಫ್ಯೂಚರ್ಸ್ ಅಡ್ವಾನ್ಸ್​ಡ್ ಗಳಿಕೆ ದಾಖಲಿಸಿದೆ. ಜಪಾನಿನ ಯೆನ್ ಕರೆನ್ಸಿ ಎದುರು ಅಮೆರಿಕನ್ ಡಾಲರ್ 149ರಲ್ಲಿ ವಹಿವಾಟು ನಡೆಸಿದೆ.

ಇದನ್ನೂ ಓದಿ: GPF Rule Change 2022: ಜಿಪಿಎಫ್​ನಲ್ಲಿ ವರ್ಷಕ್ಕೆ ಎಷ್ಟು ಹೂಡಿಕೆ ಮಾಡಬಹುದು? ನಿಯಮದಲ್ಲಿ ಬದಲಾವಣೆ ಮಾಡಿದ ಕೇಂದ್ರ

ಜರ್ಮನಿಯ ಡಿಎಎಕ್ಸ್ ಶೇಕಡಾ 0.9ರಷ್ಟು ಏರಿಕೆ ಕಂಡಿದೆ. ಪ್ಯಾರಿಸ್​ನಲ್ಲಿ ‘ಸಿಎಸಿ 40’ ಶೇಕಡಾ 0.4 ಏರಿಕೆ ದಾಖಲಿಸಿದೆ. ಲಂಡನ್​ನಲ್ಲಿ ‘ಎಫ್​ಟಿಎಸ್​ಇ 100’ ಶೇಕಡಾ 0.06 ಗಳಿಕೆ ದಾಖಲಿಸಿದೆ.

ವಾರದ ಆರಂಭದ ವಹಿವಾಟಿನಲ್ಲಿ ಸೋಮವಾರ ಬೆಳಿಗ್ಗೆ ಬಿಎಸ್​ಇ ಹಾಗೂ ನಿಫ್ಟಿ ತುಸು ಕುಸಿತ ಕಂಡಿದ್ದವು. ಆದರೆ ದಿನದ ಕೊನೆಯಲ್ಲಿ ತುಸು ಹೆಚ್ಚಳ ದಾಖಲಿಸುವ ಮೂಲಕ ಭರವಸೆ ಮೂಡಿಸಿದ್ದವು.

ಇನ್ನಷ್ಟು ವಾಣಿಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 5:17 pm, Tue, 18 October 22

ಗಣಪತಿ ಶರ್ಮಾ

ಕೇರಳದ ಕಾಸರಗೋಡು ಮೂಲದ ಕನ್ನಡಿಗ, ಪ್ರಸ್ತುತ ಬೆಂಗಳೂರಿನಲ್ಲಿ ವಾಸ. 14 ವರ್ಷಗಳಿಂದ ಪತ್ರಕರ್ತನಾಗಿ ಕಾರ್ಯನಿರ್ವಹಿಸುತ್ತಿದ್ದು, ವರದಿಗಾರಿಕೆ ಅನುಭವದ ಜತೆಗೆ ಬರವಣಿಗೆ, ಅನುವಾದದಲ್ಲಿ ಆಸಕ್ತಿ ಮತ್ತು ಪರಿಣತಿ. ಪ್ರಚಲಿತ ವಿದ್ಯಮಾನಗಳು, ರಾಜ್ಯ-ರಾಷ್ಟ್ರ ರಾಜಕೀಯ, ಉದ್ಯಮ, ವೈಯಕ್ತಿಕ ಹಣಕಾಸು ವಿಚಾರಗಳ ಬರವಣಿಗೆಯ ಬಗ್ಗೆ ಹೆಚ್ಚಿನ ಆಸಕ್ತಿ, ಒಲವು. ವಿಜಯ ಕರ್ನಾಟಕ, ಸಮಯ ನ್ಯೂಸ್ ಟಿವಿ, ವಿಜಯವಾಣಿ, ಪ್ರಜಾವಾಣಿ ಪತ್ರಿಕೆಗಳು ಹಾಗೂ ಡಿಜಿಟಲ್ ಮೀಡಿಯಾದಲ್ಲಿ ಕೆಲಸ ಮಾಡಿದ ಅನುಭವ. 2022 ರಿಂದ ಟಿವಿ9 ಕನ್ನಡ ಡಿಜಿಟಲ್​ನಲ್ಲಿ ಕಾರ್ಯನಿರ್ವಹಣೆ.

Read More
Loading...
Unable to load recommendations.
Follow Us