ವಾಷಿಂಗ್ಟನ್: ಅಮೇರಿಕಾದ ಮಾಜಿ ಅಧ್ಯಕ್ಷ ಬರಾಕ್ ಒಬಾಮ ತಮಗೆ ಭಾರತದ ಮೇಲೆ ಇರುವ ವಿಶೇಷ ಅಭಿಮಾನದ ಕುರಿತು ತಮ್ಮ ಆತ್ಮಚರಿತ್ರೆಯಲ್ಲಿ ಉಲ್ಲೇಖಿಸಿದ್ದಾರೆ. ಎಲ್ಲಕ್ಕಿಂತ ಹೆಚ್ಚಾಗಿ ಭಾರತದ ಮೇಲೆ ಪ್ರೀತಿ ಮೂಡಲು ಮಹಾತ್ಮ ಗಾಂಧಿಯವರೆಡೆಗಿನ ಸೆಳೆತವೆ ಮೂಲ ಕಾರಣ ಎಂದು ತಮ್ಮ ಆತ್ಮಚರಿತ್ರೆಯಲ್ಲಿ ಬರೆದುಕೊಂಡಿದ್ದಾರೆ.
ಒಬಾಮ ‘ಎ ಪ್ರಾಮಿಸ್ಡ್ ಲ್ಯಾಂಡ್’ ಎಂಬ ಆತ್ಮಚರಿತ್ರೆಯನ್ನು ಎರಡು ಸಂಪುಟಗಳಲ್ಲಿ ಬರೆದಿದ್ದು, ಅದರಲ್ಲಿ ಮೊದಲ ಭಾಗವು ಮಂಗಳವಾರ ಜಾಗತಿಕವಾಗಿ ಪುಸ್ತಕ ಮಳಿಗೆಗಳನ್ನು ಮುಟ್ಟಿತು. ಈ ಪುಸ್ತಕದಲ್ಲಿ ಒಬಾಮ ತನ್ನ 2008ರ ಚುನಾವಣಾ ಪ್ರಚಾರದಿಂದ ಹಿಡಿದು ಮೊದಲ ಹಂತದ ರಾಜಕೀಯ ಅವಧಿಯ ಅಂತ್ಯದವರೆಗೆ ಬರೆದಿದ್ದಾರೆ.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ ಹಿಂಜರಿಕೆ, ವಿಷಯ ಪಾಂಡಿತ್ಯದ ಕೊರತೆ ಇದೆ -ಒಬಾಮ
ಒಬಾಮಗೆ ಮಾದರಿಯಾದ ಮಹಾತ್ಮಾ ಗಾಂಧಿ:
2010ರಲ್ಲಿ ಭಾರತಕ್ಕೆ ಮೊದಲ ಭೇಟಿ:
ಭಾರತಕ್ಕೆ ಮೊದಲ ಬಾರಿ ಭೇಟಿ ನೀಡಿದಾಗ ಒಬಾಮ ಗಾಂಧೀಜಿಯವರ ಮನೆ ಮತ್ತು ಅವರ ಸರಳ ಜೀವನದ ಬಗ್ಗೆ ತಿಳಿದುಕೊಂಡರು ಹಾಗೂ ಗಾಂಧೀಜಿ ಇದ್ದಿದ್ದರೆ ಅವರ ಪಕ್ಕದಲ್ಲಿ ಕುಳಿತು ನನ್ನಲ್ಲಿದ್ದ ಹಲವು ಪ್ರಶ್ನೆಗಳಿಗೆ ಉತ್ತರವನ್ನು ಕೇಳುತ್ತಿದ್ದೆ ಎಂದು ತಮ್ಮ ಆತ್ಮಚರಿತೆಯಲ್ಲಿ ಬರೆದಿದ್ದಾರೆ.
ರಾಜಕೀಯ ಪಕ್ಷಗಳು, ವಿವಿಧ ಸಶಸ್ತ್ರ ಪ್ರತ್ಯೇಕತಾವಾದಿ ಚಳುವಳಿಗಳು ಮತ್ತು ಭ್ರಷ್ಟಾಚಾರದ ಹಗರಣಗಳ ನಡುವೆಯೂ ಆಧುನಿಕ ಭಾರತವನ್ನು ಯಶಸ್ಸಿನ ಕಥೆಯೆಂದು ಪರಿಗಣಿಸಬಹುದು ಎಂದು ಹೇಳಿದ್ದಷ್ಟೇ ಅಲ್ಲದೇ, ಭಾರತದ ಆರ್ಥಿಕ ಪರಿವರ್ತನೆಯ ವಾಸ್ತುಶಿಲ್ಪಿ ಮತ್ತು ಪ್ರಗತಿಯ ಲಾಂಛನದಂತೆ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಕಾಣುತ್ತಿದ್ದರು ಎಂದಿದ್ದಾರೆ.
ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿಯ ಬಗ್ಗೆಯೂ ತಮ್ಮ ಪುಸ್ತಕದಲ್ಲಿ ಬರೆದಿದ್ದು, ತಾವು ಒಟ್ಟಿಗೆ ಕುಳಿತು ಊಟ ಮಾಡಿದ ಕ್ಷಣವನ್ನು ನೆನಪಿಸಿಕೊಂಡಿದ್ದಾರೆ.
Published On - 4:13 pm, Tue, 17 November 20