365 ಸಾಲುಗಳ ಸುದೀರ್ಘ ಪ್ರೇಮಕವನ ಬರೆದ ಬೆಂಗಳೂರು ನವೋದ್ಯಮಿ

|

Updated on: Feb 19, 2021 | 10:06 AM

ಎಲ್ಲರಲ್ಲೂ ಪ್ರೀತಿಯ ಭಾವನೆ ಇದ್ದೇ ಇರುತ್ತೆ. ಆದರೆ, ಹೇಳಿಕೊಳ್ಳಲು ಹೇಳಿಕೊಳ್ಳಲು ಹಿಂಜರಿಕೆ ಇರುತ್ತದೆ. ಇಂಥವರು ಮಾಂತ್ರಿಕ ಪುಸ್ತಕದ ಪ್ರೇಮ ಕವನಗಳ ಮಧುರ ಸಾಲುಗಳನ್ನು ಮುಕ್ತವಾಗಿ ಬಳಸಿಕೊಳ್ಳಬಹುದು ಎನ್ನುತ್ತಾರೆ ಲೇಖಕ ಪ್ರವೀಣ್ ಮಾಯಕಾರ.

365 ಸಾಲುಗಳ ಸುದೀರ್ಘ ಪ್ರೇಮಕವನ ಬರೆದ ಬೆಂಗಳೂರು ನವೋದ್ಯಮಿ
365 ಸಾಲುಗಳ ದೀರ್ಘ ಕವನವೇ ಒಂದು ಪುಸ್ತಕ!
Follow us on

ವೃತ್ತಿ-ಪ್ರವೃತ್ತಿ ಎರಡನ್ನೂ ಸರಿದೂಗಿಸಿಕೊಂಡು ಹೋಗುವವರು ವಿರಳ. ಇಂತಹ ವಿರಳರಲ್ಲಿ ಮೊದಲ ಸಾಲಲ್ಲಿ ನಿಲ್ಲುವವರು ಬೆಂಗಳೂರು ಮೂಲದ ನವೋದ್ಯಮಿ ಪ್ರವೀಣ್ ಮಾಯಕಾರ. ದೂರದ ಸ್ವೀಡನ್​ನಿಂದ ಭಾರತಕ್ಕೆ, ನವೋದ್ಯಮದಿಂದ ಕವನಕ್ಕೆ, ಸಿನಿಮಾಗೆ, ಅವರ ಆಸಕ್ತಿಗಳು ವಿಭಿನ್ನ. ಅವರ ‘ಮಾಂತ್ರಿಕಾ’ ಮತ್ತು ‘ಬೀಯಿಂಗ್ ಯುನಿಕ್’ ಎಂಬ ಎರಡು ಕವನ ಸಂಕಲನಗಳನ್ನು ಲೇಖಕ ಜೋಗಿ, ಅನುವಾದಕಿ ಮಮತಾ ಜಿ ಸಾಗರ್, ಹಂಪಿ ಕನ್ನಡ ವಿವಿ ವಿಶ್ರಾಂತ ಉಪಕುಲಪತಿ ಡಾ.ಅ.ಮುರಿಗೆಪ್ಪ,  ಖ್ಯಾತ ಸಂಪಾದಕಿ, ಲೇಖಕಿ ಸುಮಾ ಠೇಕೂರ್ ಪ್ರೇಮಿಗಳ ದಿನದಂದು ಬೆಂಗಳೂರಿನ ಚಿತ್ರಕಲಾ ಪರಿಷತ್​ನಲ್ಲಿ ಲೋಕಾರ್ಪಣೆಗೊಳಿಸಿದ್ದಾರೆ.

365 ಸಾಲುಗಳ ದೀರ್ಘ ಕವನವೇ ಒಂದು ಪುಸ್ತಕ!
ಪ್ರೀತಿಯೆಂಬ ರಮ್ಯ, ರೋಚಕ ಭಾವನೆಯನ್ನು ಹದವಾಗಿ ಹೇಳಲು ಪ್ರವೀಣ್ ಮಾಯಕಾರ ಕಂಡುಕೊಂಡ ದಾರಿಯೇ ಅಪೂರ್ವ. 26 ಸುನೀತಗಳ (Sonnets) 365 ಸಾಲುಗಳ ಸುದೀರ್ಘ ಕವಿತೆಗಳು ಮಾಂತ್ರಿಕಾ ಸಂಕಲನದಲ್ಲಿವೆ. ಇನ್ನೊಂದು ಕವಿತಾ ಸಂಕಲನ ಬೀಯಿಂಗ್ ಯನಿಕ್​ನಲ್ಲಿ 365 ಕವನಗಳಿವೆ. ಪ್ರತಿದಿನದ ಅರ್ಥವನ್ನೂ ವಿಶಿಷ್ಟವಾಗಿ ಹೇಳಬಲ್ಲ ಸಶಕ್ತ ಕವನಗಳನ್ನು ದಿನಕ್ಕೊಂದು ಓದಿಕೊಳ್ಳಬಹುದು. ಎಲ್ಲ ಸುನೀತಗಳನ್ನೂ ಎ ಯಿಂದ ಝಡ್ (A to Z) ಅನುಕ್ರಮದಲ್ಲಿ ಬರೆಯಲಾಗಿದ್ದು, ಪ್ರತಿ ಸುನೀತವೂ ಅನನ್ಯವಾದ ಅಕ್ಷರದಿಂದ ಪ್ರಾರಂಭವಾಗುತ್ತದೆ. ಈ ಸಂಕಲನವು ಇಂಗ್ಲೀಷ್ ಮತ್ತು ಕನ್ನಡ ಎರಡೂ ಭಾಷೆಗಳ ಪದಗಳಿಂದ ಬರೆದ ಪ್ರಾಯೋಗಿಕ ಸಂಕಲವೂ ಆಗಿದೆ ಎಂಬುದು ವಿಶೇಷ. ಅಲ್ಲದೇ 2016ರಲ್ಲಿಯೇ ‘ಹಾರುವ ಮುನ್ನ’ ಎಂಬ ಸಂಕಲನವನ್ನೂ ಪ್ರಕಟಿಸಿದ್ದಾರೆ  ಪ್ರವೀಣ್ ಮಾಯಕಾರ.

ಕವಿ, ನವೋದ್ಯಮಿ ಪ್ರವೀಣ್ ಮಾಯಕಾರ

365 ಸಾಲುಗಳ ಕವಿತೆ ಬರೆದದ್ದು ಹೇಗೆ?
ಮೂಲತಃ ಕವನಗಳನ್ನು ಬರೆಯುವ ಹವ್ಯಾಸ, ಆಸಕ್ತಿ ಹೊಂದಿದ್ದ ಪ್ರವೀಣ್ ಮಾಯಕಾರರನ್ನು ಒಂದು ದಿನ ತಮಗೆ ಎಷ್ಟು ದೀರ್ಘ ಕವಿತೆ ಬರೆಯುವ ಸಾಮರ್ಥ್ಯವಿದೆ ಎಂಬ ಎಂಬ ಪ್ರಶ್ನೆ ಕಾಡಿತು. ಆ ಪ್ರಶ್ನೆಯ ಉತ್ತರವೇ ಮಾಂತ್ರಿಕ ಪುಸ್ತಕದ 365 ಸಾಲುಗಳ ಕವಿತೆ. ಬಹುರೂಪಿ ಬುಕ್​ಹಬ್​ನಲ್ಲಿ ದೊರೆಯಲಿರುವ ಈ ಎರಡೂ ಪುಸ್ತಕಗಳು ಹೊಸತನ ಹೊಂದಿವೆ. ‘ಮಾಂತ್ರಿಕಾ’ದ ಬೆಲೆ ₹150. ಈ ಹೊಸ ಪ್ರಯೋಗದ ಪುಸ್ತಕವನ್ನು ಕೊಂಡು ಓದುವಂತೆ ಅವರು ಆಸಕ್ತರಲ್ಲಿ ಮನವಿ ಮಾಡುತ್ತಾರೆ.

ಇವರ ವೃತ್ತಿ ಪ್ರವೃತ್ತಿಗಳೇ ವಿಶಿಷ್ಟ..
ಮೂಲತಃ ಬೆಂಗಳೂರಿನವರಾದ ಪ್ರವೀಣ್ ಮಾಯಕಾರ ಸದ್ಯ ಸ್ವೀಡನ್​ನ ಸ್ಟಾಕ್​ಹೋಮ್​ನಲ್ಲಿ ನೆಲೆಸಿದ್ದಾರೆ.  ಬೆಂಗಳೂರಿನಲ್ಲೇ ಇಂಜಿನಿಯರಿಂಗ್ ಪದವಿ,  ಲುಂಡ್​ನಲ್ಲಿ ಸ್ನಾತಕೋತ್ತರ ಪದವಿ ಪಡೆದ ಅವರು, ತಾಂತ್ರಿಕ ಕ್ಷೇತ್ರದಲ್ಲಿ ಪರಿಣಿತರು. ಉದ್ಯಮಿ, ಸಂಗೀತ ಸಂಯೋಜಕರು ಮತ್ತು ಬರಹಗಾರರೂ ಹೌದು. ಅಲ್ಲದೇ, ಇತ್ತೀಚಿನ ದಿನಗಳಲ್ಲಿ ಸಿನಿಮಾ ನಿರ್ಮಾಣ, ಚಿತ್ರ ಸಂಭಾಷಣೆ ಮತ್ತು ನಟನೆಯತ್ತಲೂ ವಾಲುತ್ತಿದ್ದಾರೆ ಎಂಬುದು ವಿಶೇಷ.

ಏಕೆ ಓದಬೇಕು?
ಎಲ್ಲರಲ್ಲೂ ಪ್ರೀತಿಯ ಭಾವನೆ ಇದ್ದೇ ಇರುತ್ತೆ. ಆದರೆ, ಎಲ್ಲರ ಬಳಿಯೂ ಅದನ್ನು ಅಭಿವ್ಯಕ್ತಿ ಮಾಡಲು ಸಾಧ್ಯವಿಲ್ಲ. ಅಂಥವರು ಪ್ರೇಮವನ್ನು ಹೇಳಿಕೊಳ್ಳಲು ಈ ಪುಸ್ತಕದ ಮಧುರ ಸಾಲುಗಳನ್ನು ಮುಕ್ತವಾಗಿ ಬಳಸಿಕೊಳ್ಳಿ. ಈ ಕವಿತೆಗಳು ಸ್ವತಃ ಕವಿತೆಗಳನ್ನು ಬರೆಯಲು ಈ ಕವಿತೆಗಳು ಪ್ರೇರಣೆಗೊಳ್ಳಲಿ ಎನ್ನುತ್ತಾರೆ ಪ್ರವೀಣ್ ಮಾಯಕಾರ. ವೃತ್ತಿಯಲ್ಲೇ ಕಳದುಹೋಗದೇ, ತಮ್ಮ ಪೃವೃತ್ತಿಯ ಮೂಲಕ ಜೀವನದ ಘಳಿಗೆಯನ್ನು ಪ್ರೇಮದ ದಾರಿಯಲ್ಲಿ ಕಂಡುಕೊಳ್ಳುತ್ತಿರುವ ಪ್ರವೀಣ್ ಮಾಯಕಾರ ನಿಜಕ್ಕೂ ಎಲ್ಲ ‘ವರ್ಕೋಹಾಲಿಕ್’ ಗಳಿಗೂ ಮಾದರಿ.

ಇದನ್ನೂ ಓದಿ: Poetry; ಅವಿತಕವಿತೆ: ಹುಷಾರಾಗಿರು! ಸುಲಭಕ್ಕೆ ಒಪ್ಪಿಸಿಕೊಳ್ಳಬೇಡ

ಇದನ್ನೂ ಓದಿ: ಶಬ್ದಾಡಂಬರದ ಕಾಲದಲ್ಲಿ ಅರ್ಥಪೂರ್ಣ ಚರ್ಚೆಯ ಅನುಸಂಧಾನ; ಸಂವಿಧಾನ ಸ್ವೀಕರಿಸಿದ ದಿನ ನೆನಪಾಗ್ತಾರೆ ವಾಚಸ್ಪತಿ ಮಿಶ್ರ

Published On - 2:02 pm, Thu, 18 February 21