Shivaji Jayanti: ಬಡ ವೃದ್ಧೆಯ ಆ ಮಾತು.. ತಕ್ಷಣಕ್ಕೆ, ಹಸಿದಿದ್ದ ಶಿವಾಜಿಯ ಹೊಟ್ಟೆ ತುಂಬಿಸಿತ್ತು; ಮುಂದೆ ಜೀವನವನ್ನೂ ರೂಪಿಸಿತ್ತು!

Shivaji Jayanti: ನಮಗೆ ಬೇಕಿರುವುದು ಶಿವಾಜಿ ಸಾಹಸ, ತಾಳ್ಮೆ, ಚುರುಕುತನದ ಜತೆಜತೆಗೆ ಎಲ್ಲಕ್ಕಿಂತ ಹೆಚ್ಚಾಗಿ ಧರ್ಮ ಸಹಿಷ್ಣುತೆ. ಛತ್ರಪತಿ ಶಿವಾಜಿ ನಮಗೆ ಸೌಹಾರ್ದತೆಯು ಸಾಮಾಜಿಕ ಜೀವನ ನಡೆಸಲು ಪ್ರೇರಣೆಯಾಗಲಿ. ಆಗುತ್ತಲೇ ಇರಲಿ..

Shivaji Jayanti: ಬಡ ವೃದ್ಧೆಯ ಆ ಮಾತು.. ತಕ್ಷಣಕ್ಕೆ, ಹಸಿದಿದ್ದ ಶಿವಾಜಿಯ ಹೊಟ್ಟೆ ತುಂಬಿಸಿತ್ತು; ಮುಂದೆ ಜೀವನವನ್ನೂ ರೂಪಿಸಿತ್ತು!
ಮರಳು ಶಿಲ್ಪ ಕಲಾವಿದ ರಾಜೇಶ್ ಮುಳಿಯಾ ಕೈಚಳಕದಲ್ಲಿ ಅರಳಿದ ಶಿವಾಜಿ
Follow us
guruganesh bhat
| Updated By: ಸಾಧು ಶ್ರೀನಾಥ್​

Updated on:Feb 20, 2021 | 2:28 PM

ಛತ್ರಪತಿ ಶಿವಾಜಿ ಭೋಂಸ್ಲೆ, ಈ ವ್ಯಕ್ತಿತ್ವ ಬದುಕಿ ಬಾಳಿ ಮೂರು ಶತಮಾನಗಳ ನಂತರವೂ ಅಸಂಖ್ಯಾತ ಜನರ ಮೈ ರೋಮಗಳನ್ನು ನವಿರೇಳುವಂತೆ ಮಾಡುತ್ತದೆ. ದೇಶ ಕಂಡ ಅಪ್ರತಿಮ ಆಡಳಿತಗಾರ ಛತ್ರಪತಿ ಶಿವಾಜಿಯವರ 391ನೇ ಹುಟ್ಟುಹಬ್ಬ ಇಂದು. (Chhatrapati Shivaji Jayanti 2021) ಶಿವಾಜಿ ಮಹಾರಾಜರು ಜನಿಸಿದ್ದು ಇದೇ ದಿನ. ಮಹಾರಾಷ್ಟ್ರದ ಗುಡ್ಡಗಾಡು ಪ್ರದೇಶದಲ್ಲಿ ಹುಟ್ಟಿ, ಸ್ವತಂತ್ರ ಸಾಮ್ರಾಜ್ಯ ಕಟ್ಟಿದ ವೀರ ಪುರುಷ ಇಂದಿಗೂ ಗೂಗಲ್, ಟ್ವಿಟರ್​ಗಳಲ್ಲಿ ಮೊದಲ ಸ್ಥಾನದಲ್ಲಿ ನಿಲ್ಲುತ್ತಾರೆ ಎಂದರೆ ಊಹಿಸಿ, ಅವರ ಅಪಾರ ಚೈತನ್ಯದ ಶಕ್ತಿಯೇ ಅಸಂಖ್ಯಾತ ಮಂದಿಯ ಕಣಕಣದಲ್ಲಿ ಹರಿಯುತ್ತಿದೆ. ಅಂತೆಯೇ, ಅವರ ಹೆಸರಲ್ಲಿ ಎಷ್ಟೋ ಬಾರಿ ವಿವಾದವೂ ಭುಗಿಲೇಳುತ್ತದೆ. 

ಶಿವಾಜಿ ಮದುವೆಯೂ ಬೆಂಗಳೂರಿನಲ್ಲೇ ಆಯಿತು.. ಪುಣೆಯ ಶನೇರಿ ಎಂಬಲ್ಲಿ ಜನಿಸಿದ ಶಿವಾಜಿ ಎಂಬ ಪುಟ್ಟ ಬಾಲಕನ ಅಪ್ಪ ಶಹಾಜಿ ಬೆಂಗಳೂರನ್ನು ಜಹಗೀರಾಗಿ ಪಡೆದು, ಇಲ್ಲೇ ಬೆಂಗಳೂರಿನಲ್ಲಿ ನೆಲೆಸಿದ್ದರು. ತನ್ನ 12 ವಯಸ್ಸಿನವರೆಗೂ ಬೆಂಗಳೂರಲ್ಲಿ ವಾಸವಿದ್ದ ಶಿವಾಜಿ, ಪೂರ್ಣಪ್ರಮಾಣದ ಯುದ್ಧ ಕೌಶಲವನ್ನು ಬಹುಬೇಗನೇ ಕಲಿತು, ಹದಿಯರಯದಲ್ಲೇ ತೋರಣದುರ್ಗವನ್ನು ವಶಪಡಿಸಿಕೊಂಡು ತಮ್ಮಲ್ಲಿನ ಮಹತ್ವಾಕಾಂಕ್ಷೆಯನ್ನು ಪ್ರದರ್ಶಿಸಿದ್ದರು. ಮುಂದೆ.. ಅವರ ಮದುವೆಯೂ ಬೆಂಗಳೂರಿನಲ್ಲೇ ಆಯಿತು ಎಂಬುದು ವಿಶೇಷ.

Shivaji

ಶಿವಾಜಿ ಮಹಾರಾಜ್

ಅಮ್ಮ ಜೀಜಾಬಾಯಿಯೇ ಗುರು.. ಶಿವಾಜಿಯ ಹೆಸರು ಬಂದಾಗೆಲ್ಲ ಅಮ್ಮ ಜೀಜಾಬಾಯಿಯನ್ನು ಮರೆಯುವಂತಿಲ್ಲ. ಜನನಿ ತಾನೇ ಮೊದಲ ಗುರು ಎಂಬ ಮಾತನ್ನು ಶಿವಾಜಿಯ ಬಾಲ್ಯ ಸಾಬೀತುಪಡಿಸಿತು. ಜೀವನ ಮೌಲ್ಯ, ಯಾರನ್ನು ಹೇಗೆ ನಡೆಸಿಕೊಳ್ಳಬೇಕು, ಹೇಗೆ ಗೌರವ ನೀಡಿ ಪಡೆಯಬೇಕು ಎಂಬುದನ್ನೆಲ್ಲ ಶಿವಾಜಿ ತಮ್ಮ ಅಮ್ಮನಿಂದಲೇ ಕಲಿತರು. ಅವರ ವ್ಯಕ್ತಿತ್ವ ರೂಪುಗೊಳ್ಳಲು ಜೀಜಾಬಾಯಿ ತಮ್ಮನ್ನೇ ಧಾರೆ ಎರೆದುಕೊಂಡಿದ್ದರು. ರಾಜನಾಗಲು ಬೇಕಾದ ಕಲೆಗಳನ್ನು ಕಲಿಯಲು ಶಿವಾಜಿ ಎಂಬ ಪುಟ್ಟ ಬಾಲಕನಿಗೆ ಅಮ್ಮ ಜೀಜಾಬಾಯಿಯೇ ಪ್ರೇರಣೆಯಾದಳು.

Chhatrapati Shivaji Jayanti 2021

ಶಿವಾಜಿ..ದೇಶ ಸ್ಮರಿಸಲೇ ಬೇಕಾದ ನಾಯಕ.

ಬಡ ವೃದ್ಧೆಯ ಆ ಮಾತು.. ಹಸಿದಿದ್ದ ಶಿವಾಜಿಯ ಹೊಟ್ಟೆ ತುಂಬಿಸಿತ್ತು!

ಶಿವಾಜಿ ಅಪ್ರತಿಮ ವೀರ, ಅದರಲ್ಲಿ ಎಳ್ಳಷ್ಟೂ ಸಂಶಯವಿಲ್ಲ. ಅವರ ಸುತ್ತ ಹೆಣೆದುಕೊಂಡಿರುವ ಕಥೆಗಳು ಅವರ ಸಾಹಸ, ತಾಳ್ಮೆ, ಧೈರ್ಯ ಮುಂತಾದ ಅಮೂಲ್ಯ ಮೌಲ್ಯಗಳನ್ನು ಪ್ರತಿಬಿಂಬಿಸುತ್ತವೆ. ಒಮ್ಮೆ ಶಿವಾಜಿ ಅಪರಿಚಿತ ಜಾಗದಲ್ಲಿ ಒಬ್ಬಂಟಿಯಾಗಿ ಸಿಲುಕಿದ್ದರಂತೆ, ಹತ್ತಿರದಲ್ಲೇ ಒಂದು ಗುಡಿಸಲು ಕಂಡು ಒಳಹೊಕ್ಕರು. ಹಸಿದ ಶಿವಾಜಿಗೆ ಆ ಗುಡಿಸಲಿನ ಬಡ ವೃದ್ಧೆ ಅನ್ನ ಬಡಿಸಿದಳು. ಆಗಿನ್ನೂ ಶಿವಾಜಿ ಉಮೇದು ಉತ್ಸಾಹ ಸ್ವಲ್ಪ ಹೆಚ್ಚೇ ಇದ್ದ ಪ್ರಾಯದ ಪೋರ.

ಬಿಸಿ ಅನ್ನದ ಬಟ್ಟಲಿಗೆ ಥಟ್ಟನೆ ಕೈಹಾಕಿದರು, ಬಿಸಿ ಸುಮ್ಮನಿರುತ್ತದೆಯೇ? ಕೈ ಸುಟ್ಟಿತು. ಆ ಬಡಪಾಯಿ ವೃದ್ಧೆ ‘ ಮಗಾ..ಒಮ್ಮೆಲೆ ಬಿಸಿ ಅನ್ನದ ಮಧ್ಯಕ್ಕೆ ಕೈಹಾಕಬಾರದು, ಸುತ್ತಲಿನಿಂದ ನಿಧಾನವಾಗಿ ಉಣ್ಣುತ್ತ ಬರಬೇಕು’ ಎಂದು ಕಿವಿಮಾತು ಹೇಳಿದಳು. ಇದೇ ಮಾತು ಶಿವಾಜಿಯ ಹೊಟ್ಟೆ ತುಂಬಿಸಿತು. ಇದನ್ನೇ ಜೀವನಾಧಾರವಾಗಿಟ್ಟುಕೊಂಡು ಮುಂದೆ ಮುಂದೆ ಬಲಿಷ್ಠನಾಗಿ ಬೆಳೆಯುತ್ತಾ ಸಾಗಿದ ಶಿವಾಜಿ ಸ್ವತಂತ್ರ ಸಾಮ್ರಾಜ್ಯ ಕಟ್ಟಿದ. ಒಂದೊಂದೇ ವಿರೋಧಿಗಳನ್ನು ನಿಧಾನವಾಗಿ ಹಿಮ್ಮೆಟ್ಟಿಸಿ ಸ್ವತಂತ್ರ ಹಿಂದವೀ ಸಾಮ್ರಾಜ್ಯದ ಅನಭಿಷಿಕ್ತ ಛತ್ರಪತಿಯಾದರು ಶಿವಾಜಿ. ಶಿವಾಜಿ ಉಡದ ಬಾಲ ಹಿಡಿದು ಕೋಟೆ ಏರಿದ ಕಥೆಯನ್ನು ಕೇಳಿದ ನಮ್ಮ ಬಾಲ್ಯವನ್ನು ನಾವು ಎಂದಾದರೂ ಮರೆಯಲು ಸಾಧ್ಯವೇ? ಹೀಗೆ ಶಿವಾಜಿಯನ್ನು ಸುತ್ತ ಸುತ್ತಿಕೊಂಡ ಕತೆಗಳು ಒಂದಾ, ಎರಡಾ?

shivaji

ಶಿವಾಜಿ ಹೆಸರನ್ನು ರಾಜಕೀಯವಾಗಿ ಬೆಳೆಯಲು ಬಳಸಲಾಗುತ್ತಿದೆ.

ಆಗಲೇ ಭೂ ಸುಧಾರಣೆಗಳನ್ನು ಜಾರಿಗೆ ತಂದರು ಶಿವಾಜಿಗೆ ಭಾರತೀಯರಲ್ಲಿದ್ದ ಮಾನಸಿಕ ಒಡಕು ಸ್ಪಷ್ಟವಾಗಿ ಅರಿವಿತ್ತು. ಹೀಗಾಗಿ ಅಸಂಘಟಿತ ಹಲವು ಸಮುದಾಯಗಳನ್ನು ಒಂದುಗೂಡಿಸಿದರು. ಗುರ್ಜರರು, ಬೆಸ್ತರು, ರಾಮೋಜಿಗಳನ್ನು ಅವರು ವಿಶ್ವಾಸಕ್ಕೆ ತೆಗೆದುಕೊಂಡರು. ತಮ್ಮ ರಾಜ್ಯದಲ್ಲಿ ಆಗಲೇ ಭೂಸುಧಾರಣೆಯನ್ನು ಜಾರಿಗೊಳಿಸಿದ್ದರು. ಜಹಗೀರುದಾರಿಯನ್ನು ರದ್ದುಗೊಳಿಸಿ, ರೈತರಿಂದ ತಕ್ಕುನಾದ ಬೆಲೆಗೇ ಧಾನ್ಯಗಳನ್ನು ಖರೀದಿಸಬೇಕೆಂಬ ನಿಯಮಗಳನ್ನು ಆಗಲೇ ಜಾರಿಗೊಳಿಸಿದ್ದರು.

ಅಲ್ಲದೇ, ಯೂರೋಪ್​ನಲ್ಲಿ ಅಭಿವೃದ್ಧಿಯಾಗುತ್ತಿದ್ದ ಸಮುದ್ರಯಾನ, ಹಡಗು ನಿರ್ಮಾಣ ಮುಂತಾದ ಅಂದಿನ ಆಧುನಿಕ ಕೌಶಲಗಳನ್ನು ಕಲಿಯಲು ಬಯಸಿದ್ದರು ಶಿವಾಜಿ. ಧರ್ಮ ಸಹಿಷ್ಣವೂ ಆಗಿದ್ದರು. ತನ್ನ ಸೈನ್ಯದಲ್ಲಿ ಅಪಾರ ಪ್ರಮಾಣದ ಮುಸ್ಲಿಂ ಸೈನಿಕರನ್ನು ನೇಮಿಸಿಕೊಂಡು ಅವರಿಗೆ ಅಗತ್ಯ ಸೌಕರ್ಯಗಳನ್ನು ಕಲ್ಪಿಸಿಕೊಟ್ಟಿದ್ದರು. ಗೆರಿಲ್ಲಾ ಯುದ್ಧಕಲೆ ಎಂದರೆ ಇಂದಿಗೂ ಶಿವಾಜಿ ಚಿತ್ರಣ ಮನದಲ್ಲಿ ಮೂಡುತ್ತದೆ. ಆಧುನಿಕ ಸೇನಾಪಡೆಗಳು ಸಹ ಅಂದಿನ ಗೆರಿಲ್ಲಾ ಯುದ್ಧಕಲೆಯನ್ನು ಅನುಸರಿಸುತ್ತವೆ.

shivaji maharaj

ಮಹಾರಾಜ ಶಿವಾಜಿ ಅನುಸರಿಸಿದ ಗೆರಿಲ್ಲಾ ಯುದ್ಧಕಲೆಯನ್ನು ಈಗಲೂ ಸೇನಾಪಡೆಗಳು ಅನುಸರಿಸುತ್ತವೆ.

ಬಿಜಾಪುರದ ಅದಿಲ್ ​ಷಾಹಿಯನ್ನೂ, ಮೊಘಲರ ಔರಂಗಜೇಬನನ್ನೂ ತನ್ನ ಜೀವನದುದ್ದಕ್ಕೂ ಎದುರಿಸಿ ಸೋಲಿಸಿದ ಕೀರ್ತಿ ಶಿವಾಜಿ ಮಹಾರಾಜರದು. ಅವರು ಎಷ್ಟು ಶೂರರಾಗಿದ್ದರೋ ಅಷ್ಟು ಸಹಿಷ್ಣಗಳೂ ಆಗಿದ್ದರು ಎಂಬುದನ್ನು ಇಂದು ನಾವು ಮರೆಯುತ್ತಿದ್ದೇವೆ. 1952ರಲ್ಲಿ ಛತ್ರಪತಿ ಶಿವಾಜಿ ಕಥೆಯಾಧರಿಸಿ ಮರಾಠಿ ಸಿನಿಮಾವೊಂದು ತೆರೆಕಂಡಿತ್ತು. ಅವರ ಜೀವನದ ಕುರಿತ ಪ್ರಕಟಗೊಂಡ ಗ್ರಂಥಗಳು ಲೆಕ್ಕವಿಡಲಾಗದಷ್ಟು.

ರಾಜಕೀಯ ಕಾರಣಗಳಿಗಾಗಿಯೇ ಸುದ್ದಿ ಆಗಬೇಕೇ?

ಆದರೆ, ಇದೆಲ್ಲದಕ್ಕಿಂತ ಹೊರತಾಗಿ ಅವರು ಪದೇ ಪದೇ ರಾಜಕೀಯ ಕಾರಣಗಳಿಗಾಗಿ ಸುದ್ದಿಯಾಗುತ್ತಾರೆ. ಮಹಾರಾಷ್ಟ್ರ ರಾಜಕೀಯದಲ್ಲಿ ಶಿವಾಜಿ ಮಹಾರಾಜರ ಹೆಸರನ್ನೇ ನೆಚ್ಚಿಕೊಂಡು ಉಸಿರಾಡುತ್ತಿರುವವರನ್ನು ಮತ್ತೆ ಉಲ್ಲೇಖಿಸಬೇಕಿಲ್ಲ ತಾನೇ! ಕರ್ನಾಟಕ, ಕನ್ನಡದ ಜತೆಯೂ ಶಿವಾಜಿ ಮಹಾರಾಜರ ಹೆಸರಲ್ಲಿ ವಿವಾದ ಎಬ್ಬಿಸುತ್ತಾರೆ ಎಂಬುದು ವಿಷಾದಕರ ಸಂಗತಿಯಲ್ಲದೇ ಮತ್ತೇನಲ್ಲ.

ನಮಗೆ ಬೇಕಿರುವುದು ಶಿವಾಜಿ ಸಾಹಸ, ತಾಳ್ಮೆ, ಚುರುಕುತನದ ಜತೆಜತೆಗೆ ಧರ್ಮ ಸಹಿಷ್ಣುತೆ. ಛತ್ರಪತಿ ಶಿವಾಜಿ ನಮಗೆ ಸೌಹಾರ್ದತೆಯ ಸಾಮಾಜಿಕ ಜೀವನ ನಡೆಸಲು ಪ್ರೇರಣೆಯಾಗಲಿ. ಆಗುತ್ತಲೇ ಇರಲಿ..

ಇದನ್ನೂ ಓದಿ: ಛತ್ರಪತಿ ಶಿವಾಜಿ ಮಹಾರಾಜರ ಪೂರ್ವಿಕರು ಕರ್ನಾಟಕದ ಗದಗ ಜಿಲ್ಲೆಯವರು: ಉದ್ಧವ್ ಠಾಕ್ರೆಗೆ ತಕ್ಕ ಉತ್ತರ

ಇದನ್ನೂ ಓದಿ: ಗಣರಾಜ್ಯೋತ್ಸವ ವಿಶೇಷ | ಸಂವಿಧಾನ ಪ್ರತಿಯ ಮೆರುಗು ಹೆಚ್ಚಿಸಿದ ಶಾಂತಿನಿಕೇತನ ಕಲಾವಿದರ ಚಿತ್ರಕಲೆ

Published On - 11:58 am, Fri, 19 February 21

ಅಧಿಕಾರಿಗಳ ಜೊತೆ ಕಾಫೀ ಹೀರಿದ ಮುಖಂಡರಲ್ಲಿ ಬಸನಗೌಡ ಯತ್ನಾಳ್ ಕಾಣಿಸಲಿಲ್ಲ
ಅಧಿಕಾರಿಗಳ ಜೊತೆ ಕಾಫೀ ಹೀರಿದ ಮುಖಂಡರಲ್ಲಿ ಬಸನಗೌಡ ಯತ್ನಾಳ್ ಕಾಣಿಸಲಿಲ್ಲ
ಹೆಚ್ಎಂಪಿ ವೈರಸ್ ಪತ್ತೆಗೆ ಪ್ರತ್ಯೇಕವಾದ ಕಿಟ್ ಇಲ್ಲ: ದಿನೇಶ್ ಗುಂಡೂರಾವ್
ಹೆಚ್ಎಂಪಿ ವೈರಸ್ ಪತ್ತೆಗೆ ಪ್ರತ್ಯೇಕವಾದ ಕಿಟ್ ಇಲ್ಲ: ದಿನೇಶ್ ಗುಂಡೂರಾವ್
ಫಿನಾಲೆ ಟಿಕೆಟ್ ಆಸೆಗೆ ಮನುಷ್ಯತ್ವ ಮರೆತ ಬಿಗ್ ಬಾಸ್ ಸ್ಪರ್ಧಿಗಳು
ಫಿನಾಲೆ ಟಿಕೆಟ್ ಆಸೆಗೆ ಮನುಷ್ಯತ್ವ ಮರೆತ ಬಿಗ್ ಬಾಸ್ ಸ್ಪರ್ಧಿಗಳು
ಪ್ರಶ್ನೆಯನ್ನು ಸಿದ್ದರಾಮಯ್ಯ ಇಲ್ಲವೇ ಶಿವಕುಮಾರ್​​ರನ್ನು ಕೇಳಬೇಕು: ಸತೀಶ್
ಪ್ರಶ್ನೆಯನ್ನು ಸಿದ್ದರಾಮಯ್ಯ ಇಲ್ಲವೇ ಶಿವಕುಮಾರ್​​ರನ್ನು ಕೇಳಬೇಕು: ಸತೀಶ್
ಸಫಾರಿ ವೇಳೆ ಜೀಪ್​ನಿಂದ ಘೇಂಡಾಮೃಗದ ಮುಂದೆ ಬಿದ್ದ ತಾಯಿ-ಮಗಳು; ಆಮೇಲೇನಾಯ್ತು
ಸಫಾರಿ ವೇಳೆ ಜೀಪ್​ನಿಂದ ಘೇಂಡಾಮೃಗದ ಮುಂದೆ ಬಿದ್ದ ತಾಯಿ-ಮಗಳು; ಆಮೇಲೇನಾಯ್ತು
ರೆಸಾರ್ಟ್​ನಲ್ಲಿ ನಟಿ ಹರಿಪ್ರಿಯಾ ಸೀಮಂತ ಶಾಸ್ತ್ರ; ಆಶೀರ್ವಾದ ಮಾಡಿದ ತಾರಾ
ರೆಸಾರ್ಟ್​ನಲ್ಲಿ ನಟಿ ಹರಿಪ್ರಿಯಾ ಸೀಮಂತ ಶಾಸ್ತ್ರ; ಆಶೀರ್ವಾದ ಮಾಡಿದ ತಾರಾ
ಹೆಚ್​ಎಂಪಿ ವೈರಸ್ ವಿಷಯದಲ್ಲಿ ನಮ್ಮ ಸರ್ಕಾರ ಅಲರ್ಟ್ ಆಗಿದೆ: ಶಿವಕುಮಾರ್
ಹೆಚ್​ಎಂಪಿ ವೈರಸ್ ವಿಷಯದಲ್ಲಿ ನಮ್ಮ ಸರ್ಕಾರ ಅಲರ್ಟ್ ಆಗಿದೆ: ಶಿವಕುಮಾರ್
ತನ್ನ ತಂದೆ ಬಗ್ಗೆ ಮಾತಾಡಿದ ಬಿಜೆಪಿ ನಾಯಕನ ಹೇಳಿಕೆಗೆ ಕಣ್ಣೀರು ಹಾಕಿದ ಅತಿಶಿ
ತನ್ನ ತಂದೆ ಬಗ್ಗೆ ಮಾತಾಡಿದ ಬಿಜೆಪಿ ನಾಯಕನ ಹೇಳಿಕೆಗೆ ಕಣ್ಣೀರು ಹಾಕಿದ ಅತಿಶಿ
ರಾಮಚಂದ್ರಪ್ಪನಿಂದ ಪೀಡಿತ ಮತ್ತೊಬ್ಬ ಮಹಿಳೆ ತನ್ನ ವೇದನೆ ಹೇಳಿಕೊಂಡಿದ್ದಾರೆ
ರಾಮಚಂದ್ರಪ್ಪನಿಂದ ಪೀಡಿತ ಮತ್ತೊಬ್ಬ ಮಹಿಳೆ ತನ್ನ ವೇದನೆ ಹೇಳಿಕೊಂಡಿದ್ದಾರೆ
ಹೆಚ್ಎಂಪಿವಿ 2001ರಿಂದ ಭಾರತದಲ್ಲಿದೆ, ನಿಶ್ಶಕ್ತರು ಇದರ ಟಾರ್ಗೆಟ್: ದಿನೇಶ್
ಹೆಚ್ಎಂಪಿವಿ 2001ರಿಂದ ಭಾರತದಲ್ಲಿದೆ, ನಿಶ್ಶಕ್ತರು ಇದರ ಟಾರ್ಗೆಟ್: ದಿನೇಶ್