ಟಾರ್ ರೋಡ್ ಆದ್ರೂ ಸೈ.. ಕಲ್ಲು ಮಣ್ಣಿನ ರಸ್ತೆಗೂ ಸೈ.. ಮಲೆನಾಡ್ ಬೀದಿಗಳಲ್ಲಿ ಗ್ರೇಟ್ ಮಲ್ನಾಡ್ ಚಾಲೆಂಜ್​ನ ಸೈಕಲ್ ಸವಾರಿ

|

Updated on: Dec 01, 2020 | 7:01 AM

ಬೈಕ್ ಱಲಿ. ಜೀಪ್ ಱಲಿ.. ಕಾರ್ ಱಲಿಗಳನ್ನ ನೋಡಿ ಇರ್ತಿರಾ.. ಹಾಗೇ ಸೈಕಲ್ ಱಲಿ, ರೇಸ್ ಕೂಡ ನೋಡಿ ಇರ್ತಿರಾ.. ನೂರಾರು ಕೀಲೋಮೀಟರ್ ಸೈಕಲ್ ಹೊಡೆಯೋ ಸೈಕಲ್ ಚಾಲೆಂಜ್‌ ನೋಡಿದ್ದೀರಾ, ಮಲೆನಾಡಿನ ಬೆಟ್ಟ-ಗುಡ್ಡ, ನದಿ-ಝರಿ, ಗದ್ದೆ-ಕಾಫಿತೋಟಗಳ ಮಧ್ಯೆ ಸಾಗೋ ಸೈಕಲ್ ಸವಾರಿ ನಿಜಕ್ಕೂ ರೋಮಾಂಚನಕಾರಿ.

ಟಾರ್ ರೋಡ್ ಆದ್ರೂ ಸೈ.. ಕಲ್ಲು ಮಣ್ಣಿನ ರಸ್ತೆಗೂ ಸೈ.. ಮಲೆನಾಡ್ ಬೀದಿಗಳಲ್ಲಿ ಗ್ರೇಟ್ ಮಲ್ನಾಡ್ ಚಾಲೆಂಜ್​ನ ಸೈಕಲ್ ಸವಾರಿ
ಮಲೆನಾಡ್ ಬೀದಿಗಳಲ್ಲಿ ಗ್ರೇಟ್ ಮಲ್ನಾಡ್ ಚಾಲೆಂಜ್​ನ ಸೈಕಲ್ ಸವಾರಿ
Follow us on

ಚಿಕ್ಕಮಗಳೂರು: ಹಸಿರು ಹೊದ್ದು ಮಲಗಿರೋ ಕಾಫಿ ತೋಟದ ಮಧ್ಯದ ದಾರಿಯಲ್ಲಿ ಸಾಗ್ತಿರೋ ಸೈಕಲ್ ಸವಾರಿ. ಎಷ್ಟೇ ಸುಸ್ತಾದ್ರೂ ನಿಲ್ಸೋ ಮಾತೇ ಇಲ್ಲ, ಪೆಡಲ್‌ ತುಳೀತಾ ಇರೋದೇ, ಗುರಿಯ ಕಡೆ ಸಾಗ್ತಾ ಹೋಗ್ತಾ ಇರೋದೇ. ಪ್ಯಾಟೇ ರೋಡ್ ಆದ್ರೂ ಸರಿ, ಹಳ್ಳಿ ರೋಡ್ ಆದ್ರೂ ಸರಿ ಸವಾರಿ ಮಾಡ್ತಾ ಇರೋದೇ. ಕಾಫಿನಾಡು ಚಿಕ್ಕಮಗಳೂರಿನಲ್ಲಿ ಇಂತಹ ರೋಮಾಂಚನಕಾರಿ ಸೈಕಲ್ ಪಯಣ ಕಂಡುಬಂದಿದೆ.

ಬೆಂಗಳೂರಿನ ಮಂದಿಯಿಂದ ಗ್ರೇಟ್ ಮಲ್ನಾಡ್ ಚಾಲೆಂಜ್:
ಬೆಂಗಳೂರಿನ Eye Cycle.in (ಐ ಸೈಕಲ್.ಇನ್) ಟೀಂ ಮಲೆನಾಡಿನಲ್ಲಿ ಗ್ರೇಟ್ ಮಲ್ನಾಡ್ ಚಾಲೆಂಜ್ ಅನ್ನೋ ಈವೆಂಟ್‌ ಅನ್ನ ಆಯೋಜನೆ ಮಾಡಿದ್ದು, ಚಿಕ್ಕಮಗಳೂರಿನಿಂದ ಕುಂದಾಪುರದವರೆಗೆ ಈ ಸೈಕಲ್ ಸವಾರಿ ಸಾಗಲಿದೆ. ಮೊನ್ನೆ ಚಿಕ್ಕಮಗಳೂರಿನಿಂದ ಶುರುವಾದ ಈ ಸೈಕಲ್ ಪಯಣ, ಕಾಫಿನಾಡನ್ನ ಮೂರು ದಿನ ಸುತ್ತಿ ಆ ಬಳಿಕ ಕುಂದಾಪುರದತ್ತ ಸೈಕ್ಲಿಸ್ಟ್‌ಗಳು ಹೋಗಲಿದ್ದಾರೆ. ಕಾಫಿತೋಟ, ಗದ್ದೆ, ಜೆಲ್ಲಿ ರೋಡ್, ಟಾರ್ ರೋಡ್, ಅಪ್, ಡೌನ್‌ ಹೀಗೆ ಎಲ್ಲಾ ಅಡೆ ತಡೆಗಳನ್ನ ದಾಟಿ ಸೈಕಲ್ ಸವಾರರು ಎಂಜಾಯ್ ಮಾಡುತ್ತಲೇ ಸಾಗುತ್ತಿದ್ದಾರೆ.

ಪ್ರಕೃತಿಯನ್ನ ಉಳಿಸಲು ಜೊತೆ ಜೊತೆಗೆ ಸೈಕಲ್ ಸವಾರಿ ಮಾಡೋದ್ರಿಂದ ಆರೋಗ್ಯವೂ ಉತ್ತಮವಾಗಿರುತ್ತೆ ಅನ್ನೋ ಮಹತ್ವವನ್ನ ಸಾರುವ ಉದ್ದೇಶದಿಂದ ಈ ಸೈಕ್ಲಿಂಗ್ ಯಾನ ನಡೀತಾ ಇದೆ. 7 ದಿನಗಳ ಕಾಲ ಬರೋಬ್ಬರಿ 500 ಕೀಲೋ ಮೀಟರ್ ದೂರ ಈ ಮಲ್ನಾಡ್ ಸಾಹಸದಲ್ಲಿ 30 ಮಂದಿ ಸೈಕ್ಲಿಸ್ಟ್‌ಗಳು ಭಾಗಿಯಾಗಿದ್ದಾರೆ. ಕೇವಲ ಯುವಕರಲ್ಲದೇ ಯುವತಿಯರು, ಮಹಿಳೆಯರೂ ಕೂಡ ಈ ಚಾಲೆಂಜ್‌ನನ್ನ ಸ್ವೀಕರಿಸಿ ಸೈಕಲ್ ಏರಿದ್ದಾರೆ.

ಒಟ್ಟಿನಲ್ಲಿ ಪ್ರಕೃತಿಯನ್ನ ಉಳಿಸಲು, ಆರೋಗ್ಯದ ಮಹತ್ವವನ್ನ ಸಾರಲು ಹೊರಟಿರುವ ಈ ಸೈಕಲ್‌ ಪಯಣಕ್ಕೆ ನಮ್ಮ ಕಡೆಯಿಂದಲೂ ಆಲ್ ದಿ ಬೆಸ್ಟ್.