ಇದೀಗ ಚಿಟ್ಟೆಯ ಕಾಲ ಆರಂಭವಾಗಿದ್ದು, ಈ ವರ್ಷ ನೈಸರ್ಗಿಕವಾಗಿ ಚಿಟ್ಟೆಯ ಸಂತಾನವು ಹೆಚ್ಚಾಗಿದೆ ಮತ್ತು ಅವುಗಳು ಅಪರೂಪದ ಆಕೃತಿ ಹಾಗೂ ಬಣ್ಣದೊಂದಿಗೆ ಹೊಸ ದೃಶ್ಯದ ಅಲೆಯನ್ನು ಹೊರಹೊಮ್ಮಿಸುತ್ತಿವೆ.
ಇತ್ತೀಚೆಗೆ ಬ್ರಾಂಡೆಡ್ ರಾಯಲ್ ಎಂಬ ಅಪರೂಪದ ಚಿಟ್ಟೆಗಳ ಪ್ರಭೇದ ಕಂಡುಬಂದಿದ್ದು, ಈ ಹಿಂದೆ ಭಾರತದಲ್ಲಿ ಇವು ವಿರಳವಾಗಿದ್ದವು. ಅಂದರೆ 130 ವರ್ಷಗಳ ನಂತರ ನೀಲಗಿರಿಯಲ್ಲಿ ಈ ರೀತಿಯ ಚಿಟ್ಟೆಗಳು ಹೇರಳವಾಗಿ ಕಂಡುಬಂದಿವೆ. ಈ ಮೊದಲು ಇಂತಹ ದೃಶ್ಯವನ್ನು 1888ರಲ್ಲಿ ಬ್ರಿಟಿಷ್ ಕೀಟಶಾಸ್ತ್ರಜ್ಞ ಜಿಎಫ್ ಹ್ಯಾಂಪ್ಸನ್ ದಾಖಲಿಸಿದ್ದರು. ಆದರೆ ಈಗ ನೀಲಗಿರಿಯಲ್ಲಿ ಈ ಚಿಟ್ಟೆ ಪ್ರಭೇದಗಳನ್ನು ದಾಖಲಿಸಲು ಸಂರಕ್ಷಣಾವಾದಿಗಳನ್ನು ಒಳಗೊಂಡಿರುವ ವಿಂಟರ್-ಬ್ಲೈತ್ ಅಸೋಸಿಯೇಶನ್(ಡಬ್ಲ್ಯುಬಿಎ) ಇದ್ದು ಇಲ್ಲಿ ಇವುಗಳನ್ನು ಸಂಗ್ರಹಿಸಲಾಗುತ್ತಿದೆ ಎಂದು ವಿನೋದ್ ಶ್ರೀರಾಮುಲು ಹೇಳಿದ್ದಾರೆ.
ಚಿಟ್ಟೆಗಳ ಕಾಲವು ಸಾಮಾನ್ಯವಾಗಿ ನೈಋತ್ಯ ಮಾರುತಗಳೊಂದಿಗೆ ಪ್ರಾರಂಭವಾಗಿ ಮಳೆಗಾಲ, ಚಳಿಗಾಲ ಸೇರಿದಂತೆ ಫೆಬ್ರವರಿಯವರೆಗೂ ಮುಂದುವರಿಯುತ್ತದೆ. ಮಳೆಯ ನಂತರ ಹುಟ್ಟುವ ಕೋಮಲ ಹಸಿರಿನಿಂದ ಮಕರಂದವನ್ನು ಹುಡುಕುತ್ತಿರುವ ಅವುಗಳನ್ನು ವೀಕ್ಷಿಸಲು ಉತ್ತಮ ಸಮಯ ಎನ್ನುತ್ತಾರೆ ಚಿಟ್ಟೆ ಸಂರಕ್ಷಣೆ ಎನ್ ಜಿಒ ಆಕ್ಟ್ ಫಾರ್ ಬಟರ್ ಫ್ಲೈಸ್ ನ ಸಂಸ್ಥಾಪಕ ಪಿ. ಮೋಹನ್ ಪ್ರಸಾದ್.
ಚಿಟ್ಟೆಯ ಪ್ರಭೇದಗಳು:
ಈ ವರ್ಷ ವಿಶೇಷವಾಗಿ ಅನೇಕ ಅಪರೂಪದ ಚಿಟ್ಟೆಯ ಪ್ರಭೇದಗಳು ದೇಶದಾದ್ಯಂತ ನೋಡಲು ಸಿಗುತ್ತದೆ. ಪಶ್ಚಿಮ ಘಟ್ಟಗಳಿಗೆ ಸ್ಥಳೀಯವಾಗಿರುವ ಕಪ್ಪು ಬಣ್ಣದ ವೆಲ್ವೆಟ್ ರೆಕ್ಕೆಯ ಚಿಟ್ಟೆ, ಬ್ಲೂ ಮಾರ್ಮನ್, ಸ್ಪಾಟೆಡ್ ಆಂಗಲ್ ಚಿಟ್ಟೆ, ಸಂರಕ್ಷಿತ ಪ್ರಭೇದವಾದ ಲಿಲಿಯಾಕ್ ಸಿಲ್ವರ್ ಲೈನ್ ಬೆಂಗಳೂರಿನಲ್ಲಿ ಮಾತ್ರ ಸಂತಾನೋತ್ಪತ್ತಿ ಮಾಡಲ್ಪಟ್ಟಿದೆ ಎನ್ನುವುದು ವಿಶೇಷ.
ವಿಶಾಲಪಟ್ಟಂನಲ್ಲಿ ಮೊದಲ ಬಾರಿಗೆ ದಾಖಲಾದ ಮಾರ್ಬಲ್ಡ್ ಮ್ಯಾಪ್ ಚಿಟ್ಟೆಯನ್ನು ವನ್ಯಜೀವಿ ಸಂರಕ್ಷಣಾ ಕಾಯ್ದೆಯ ವೇಳಾಪಟ್ಟಿಯ ಅಡಿಯಲ್ಲಿ ಸಂರಕ್ಷಿಸಲಾಗಿದೆ. ಈ ಅಪರೂಪದ ಪ್ರಭೇದವು ಸಿಕ್ಕಿಂ, ಅರುಣಾಚಲ ಪ್ರದೇಶ, ಜಾರ್ಖಂಡ್, ಭೂತಾನ್ ಮತ್ತು ಮ್ಯಾನ್ಮಾರ್ ನ ಗುಡ್ಡಗಾಡು ಕಾಡುಗಳಿಗೆ ಸೀಮಿತವಾಗಿದೆ.
ಟ್ರೀ ಅಪ್ಸರೆ ಇನ್ನೊಂದು ವಿಶೇಷ ಚಿಟ್ಟೆಯಾಗಿದೆ. ಕಾಮನ್ ಬರ್ಡ್ವಿಂಗ್, ಕಾಮನ್ ಜೆಸ್ಟರ್, ಪೇಂಟೆಡ್ ಜೆಜೆಬೆಲ್ ಮತ್ತು ವಾಗ್ರ್ಯಾಂಟ್ ಮುಂತಾದ ಪ್ರಭೇದಗಳು ಪೂರ್ವ ಘಟ್ಟದ ತೆಲಂಗಾಣದಲ್ಲಿ ಕಾಣಿಸಿಕೊಂಡಿದ್ದು, ನೈಸರ್ಗಿಕವಾದ ಉತ್ಸಾಹಕ್ಕೆ ಕಾರಣವಾಗಿದೆ. ಇನ್ನು ಕಿತ್ತಳೆ ಬಾಲದ ಆವ್ಲ್ ಸಾಮಾನ್ಯವಾಗಿ ಪಶ್ಚಿಮ ಘಟ್ಟಗಳಲ್ಲಿ, ಕೊಡಗು ಮತ್ತು ಹಿಮಾಲಯದಲ್ಲಿ ಕಂಡುಬರುತ್ತದೆ.
ಪೂರ್ವ ಘಟ್ಟಗಳ ಅರಣ್ಯ ಆವಾಸಸ್ಥಾನಗಳಿಗೆ ಸಂರಕ್ಷಣಾ ಸಂಶೋಧನೆ, ಕ್ರಮ ಮತ್ತು ಗಮನವನ್ನು ಸಜ್ಜುಗೊಳಿಸಲು ಇಂತಹ ಚಿಟ್ಟೆಗಳ ಸಂಶೋಧನೆಗಳು ಸಹಾಯ ಮಾಡುತ್ತವೆ ಎಂದು ನಾವು ಭಾವಿಸುತ್ತೇವೆ ಎನ್ನುವುದು ಆಂಧ್ರ ಪ್ರದೇಶದ ಅರಣ್ಯ ಮುಖ್ಯ ಸಂರಕ್ಷಣಾಧಿಕಾರಿ ರಾಹುಲ್ ಪಾಂಡೆ ಅವರ ಅಭಿಪ್ರಾಯವಾಗಿದೆ.
ಚಿಟ್ಟೆಗಳ ಆಹಾರ:
ಅಂಜೂರದ ಹಣ್ಣಿನಂತಹ ಕಾಡು ಹಣ್ಣುಗಳನ್ನು ಅಥವಾ ದಾಳಿಂಬೆ, ಪೇರಲದಂತಹ ಸಾಮಾನ್ಯ ಹಣ್ಣುಗಳನ್ನು ತಿನ್ನುತ್ತವೆ.