ಮದುಮಗಳು ರೇಷ್ಮೆ ಮಾಸ್ಕ್ ಧರಿಸಿದಾಗ.. ಇದು ನವಿರಾದ ರೇಷ್ಮೆಯ ಖದರ್!

|

Updated on: May 26, 2020 | 3:18 PM

ರೇಷ್ಮೆ ಅಂದತಕ್ಷಣ ನವಿರು ಅನ್ನೋ ಉಪಮೇಯ ತನ್ನಿಂತಾನೇ ಬಂದುಬಿಡುತ್ತದೆ. ಅದರ ಖದರೇ ಹಾಗೆ! ಇನ್ನು ಮದುವೆ ಶುಭ ಘಳಿಗೆಯಲ್ಲಿ ರೇಷ್ಮೆ ವಸ್ತ್ರ ಇರಲೇಬೇಕು. ಅದು ಹೆಣ್ಣಿಗೆ ಗಂಡಿನ ಕಡೆಯವರು ತೊಡಿಸುವ ಸೀರೆಯೇ ಆಗಿರಬಹುದು ಅಥವಾ ಹಿರಿಯರಿಗೆ ನೀಡುವ ವಸ್ತ್ರಗಳೇ ಇರಬಹುದು. ಅಲ್ಲಿ ರೇಷ್ಮೆಯದ್ದೇ ನವಿರಾದ ಮಾತು-ಕತೆ! ಆದ್ರೆ ಇಂದಿನ ಕೊರೊನಾ ಕಾಲದಲ್ಲಿ ರೇಷ್ಮೆಗೆ ವಿಶೇಷ ಕಳೆತಂದಿದೆ ಇಲ್ಲೊಂದು ಮದುವೆ ಜೋಡಿ. ನೀವೇ ನೋಡಿ! ಮೇ 22 ರಂದು ಕೊರೊನಾ ಭೀತಿಯ ನಡುವೆ ನವಜೋಡಿಯೊಂದು ನವಜೀವನಕ್ಕೆ ಕಾಲಿಟ್ಟಿತು. ವಿಶೇಷ […]

ಮದುಮಗಳು ರೇಷ್ಮೆ ಮಾಸ್ಕ್ ಧರಿಸಿದಾಗ.. ಇದು ನವಿರಾದ ರೇಷ್ಮೆಯ ಖದರ್!
Follow us on

ರೇಷ್ಮೆ ಅಂದತಕ್ಷಣ ನವಿರು ಅನ್ನೋ ಉಪಮೇಯ ತನ್ನಿಂತಾನೇ ಬಂದುಬಿಡುತ್ತದೆ. ಅದರ ಖದರೇ ಹಾಗೆ! ಇನ್ನು ಮದುವೆ ಶುಭ ಘಳಿಗೆಯಲ್ಲಿ ರೇಷ್ಮೆ ವಸ್ತ್ರ ಇರಲೇಬೇಕು. ಅದು ಹೆಣ್ಣಿಗೆ ಗಂಡಿನ ಕಡೆಯವರು ತೊಡಿಸುವ ಸೀರೆಯೇ ಆಗಿರಬಹುದು ಅಥವಾ ಹಿರಿಯರಿಗೆ ನೀಡುವ ವಸ್ತ್ರಗಳೇ ಇರಬಹುದು. ಅಲ್ಲಿ ರೇಷ್ಮೆಯದ್ದೇ ನವಿರಾದ ಮಾತು-ಕತೆ!

ಆದ್ರೆ ಇಂದಿನ ಕೊರೊನಾ ಕಾಲದಲ್ಲಿ ರೇಷ್ಮೆಗೆ ವಿಶೇಷ ಕಳೆತಂದಿದೆ ಇಲ್ಲೊಂದು ಮದುವೆ ಜೋಡಿ. ನೀವೇ ನೋಡಿ! ಮೇ 22 ರಂದು ಕೊರೊನಾ ಭೀತಿಯ ನಡುವೆ ನವಜೋಡಿಯೊಂದು ನವಜೀವನಕ್ಕೆ ಕಾಲಿಟ್ಟಿತು. ವಿಶೇಷ ಅಂದ್ರೆ ಮದುಮಗಳ ರೇಷ್ಮೆ ಮೇಲಿನ ಮೋಹದಿಂದ ಮಾಸ್ಕ್ ಸಹ ರೇಷ್ಮೆಯಷ್ಟೇ ನವಿರಾಗಿರಲಿ ಎಂದು ಬಯಸಿ, ರೇಷ್ಮೆ ಮಾಸ್ಕ್ ಧರಿಸಿದ್ದಾರೆ. ಜೊತೆಗೆ ಪತಿರಾಯನಿಗೂ ಅದನ್ನೇ ತೊಡಿಸಿದ್ದಾಳೆ. ಇದು ಎಂದಿನಂತೆ ಸೋಷಿಯಲ್ ಮೀಡಿಯಾಗೆ ಪುಷ್ಕಳ ಆಹಾರವಾಗಿದೆ!