ಬೀಜಿಂಗ್: ಚೀನಾದ ಹೆನಾನ್ನಲ್ಲಿರುವ ಶಾವೋಲಿನ್ ದೇವಾಲಯಗಳ ಕತೆಯನ್ನು ನೀವು ಕೇಳಲೇಬೇಕು. ಕೊರೊನಾ ಕಾಲದಲ್ಲಿ ಈ ದೇವಾಲಯಗಳನ್ನು ಮುಚ್ಚಲಾಗಿತ್ತು. ಅಸಲಿಗೆ ಈ ದೇವಾಲಯಗಳಿಗೆ ಸಾಕಷ್ಟು ಜನ ಭೇಟಿ ಕೊಡ್ತಾರೆ. ಆದರೆ, ಕೊರೊನಾ ಬಿಕ್ಕಟ್ಟಿನ ಕಾಲಕ್ಕೆ ಇಲ್ಲಿ ಜನರಿಗೆ ನಿರ್ಬಂಧ ಹೇರಲಾಗಿತ್ತು.
ಅದಾದ ಬಳಿಕ ಈಗ ಈ ದೇವಾಲಯಗಳಲ್ಲಿ ಸಾರ್ವಜನಿಕರ ಪ್ರವೇಶಕ್ಕೆ ಅವಕಾಶ ಮಾಡಿ ಕೊಡಲಾಗಿದೆ. ಅದಕ್ಕೂ ಮೊದಲು ಇಲ್ಲಿ ಸ್ವಚ್ಛತಾ ಕಾರ್ಯ ನಡೆಯಿತು. ಅವರ ಸ್ವಚ್ಛತಾ ಶೈಲಿಯೇ ನಿಜಕ್ಕೂ ಎಲ್ಲರ ಗಮನ ಸೆಳೆಯುತ್ತದೆ. ಶಾವೋಲಿನ್ ದೇವಾಲಯ, ಅಲ್ಲಿನ ಸಂಪ್ರದಾಯ ಮತ್ತು ಸನ್ಯಾಸಿಗಳ ಜೀವನಶೈಲಿ ಎಲ್ಲವೂ ವಿಭಿನ್ನ. ಅದಕ್ಕೆ ಅವರು ಏನೇ ಮಾಡೋದಿದ್ದರೂ ವಿಭಿನ್ನವಾಗೇ ಮಾಡ್ತಾರೆ.
ಎಲ್ಲಾ ಚಟುವಟಿಕೆಗಳನ್ನ ಕುಂಗ್ ಫೂ ಶೈಲಿಯಲ್ಲೇ ಮಾಡ್ತಾರೆ:
ಉದಾಹರಣೆಯನ್ನೇ ತೆಗೆದುಕೊಂಡರೆ ಕೊರೊನಾ ಸೋಂಕು ಒಂದಿಷ್ಟು ತಹಬಂದಿಗೆ ಬಂದಿದೆ ಅಂದಾಗ ದೇವಾಲಯ ತನ್ನ ಸ್ಚಚ್ಛತಾ ಕಾರ್ಯಗಳನ್ನು ಕೂಡಾ ಸಾಂಪ್ರದಾಯಿಕ ಕುಂಗ್ ಫೂ ಶೈಲಿಯಲ್ಲೇ ಮಾಡ್ತಾರೆ. ನಿಜ ಹೇಳಬೇಕೆಂದರೆ ಇಲ್ಲಿನ ಸನ್ಯಾಸಿಗಳು ತಾವು ಮಾಡುವ ಎಲ್ಲ ಚಟುವಟಿಕೆಗಳನ್ನು ಕುಂಗ್ ಫೂ ಶೈಲಿಯಲ್ಲೇ ಮಾಡ್ತಾರೆ. ಅಂತಹ ವಿಡಿಯೋ ಮತ್ತು ಫೋಟೋ ವೈರಲ್ ಆಗಿದೆ.
ಈ ದೇವಾಲಯಗಳ ಬಗ್ಗೆ ಹೇಳೋದು ಬಹಳ ಇದೆ. ಇದು ಕೊರೊನಾ ಕಾಲಕ್ಕೆ ಕುಂಗ್ ಫೂ ಸೂತ್ರಗಳನ್ನೇ ಅಳವಡಿಸಿಕೊಂಡು ಸೇಫಾಗಿತ್ತಂತೆ. ಅದು ಹಳೆಯ ಕತೆಯಾದ್ರೆ ಈಗ ಮತ್ತೊಂದೆಡೆ ಚೀನಾದಲ್ಲಿ ಕೊರೊನಾ 2ನೇ ಅಲೆ ಅಲ್ಲಲ್ಲಿ ಆರಂಭವಾಗಿದ್ದು ಮತ್ತೆ ಆತಂಕ ಮೂಡಿಸಿದೆ. ಆದರೂ ಈ ದೇವಾಲಯಗಳು ಯಾವುದೇ ಭಯವಿಲ್ಲದೇ ಕೂಲಾಗಿವೆ. ಅದರ ಜೊತೆ ಕುಂಗ್ ಫೂ ಶಾಲೆಗಳನ್ನು ಮರು ತೆರೆಯುವ ಬಗ್ಗೆ ಪ್ಲಾನ್ ಮಾಡಿಕೊಂಡಿವೆ. ಅದಕ್ಕೂ ಮೊದಲು ದೇವಾಲಯಗಳು ಸೋಂಕು ಹರಡದಂತೆ ಸ್ಯಾನಿಟೈಸ್ ಆಗ್ತಾ ಇದೆ. ಅದೂ ಕುಂಗ್ ಶೈಲಿಯಲ್ಲಿ. ಈ ಮೂಲಕ ಅದು ಮತ್ತೆ ಪ್ರವಾಸಿಗರನ್ನು ತನ್ನತ್ತ ಆಕರ್ಷಿಸಲು ರೆಡಿಯಾಗಿದೆ.-ರಾಜೇಶ್ ಶೆಟ್ಟಿ
Published On - 4:50 pm, Sat, 20 June 20