ಬಬಲ್ ಮ್ಯಾಜಿಕ್: ಸೋಪ್ ಬಬಲ್ ಒಳಗೆ ಬರೋಬ್ಬರಿ 783 ಸಣ್ಣ ಗುಳ್ಳೆಗಳನ್ನು ಸೃಷ್ಟಿಸಿ ದಾಖಲೆ!

| Updated By: ganapathi bhat

Updated on: Apr 06, 2022 | 8:52 PM

ಗುಳ್ಳೆಯೊಳಗೆ ಗುಳ್ಳೆಯಂತೆ ಬರೋಬ್ಬರಿ 783 ಬಬಲ್​ಗಳನ್ನು ಸೃಷ್ಟಿಸಿ ಗಿನ್ನಿಸ್ ದಾಖಲೆ ಬರೆದ ಚಾಂಗ್.

ಬಬಲ್ ಮ್ಯಾಜಿಕ್:  ಸೋಪ್ ಬಬಲ್ ಒಳಗೆ ಬರೋಬ್ಬರಿ 783 ಸಣ್ಣ ಗುಳ್ಳೆಗಳನ್ನು ಸೃಷ್ಟಿಸಿ ದಾಖಲೆ!
ಬಬಲ್ ಒಳಗೆ ಬಬಲ್!
Follow us on

ಮಕ್ಕಳೆಲ್ಲಾ ಒಂದೊಂದು ಗುಳ್ಳೆಗಳನ್ನು ಊದಿ, ಹಾರಿಸಿ ಸಂತಸಪಡುತ್ತಾರೆ. ಅದನ್ನು ಹಿಡಿಯಲು, ಅಂಗೈಯಲ್ಲಿ ಇಟ್ಟು ನೋಡಲು ಕಾಯುತ್ತಾರೆ. ಆದರೆ, ಆ ಗುಳ್ಳೆಗಳು ಅಷ್ಟು ಹೊತ್ತು ಇರುವುದಿಲ್ಲ. ಸಣ್ಣ ಗಾಳಿಗೋ ಬಬಲ್ ಚಲನೆಗೋ ಒಡೆದು ಹೋಗುತ್ತದೆ. ಒಂದು ಬಬಲ್ ಸೃಷ್ಟಿಸೋದೆ ಕಷ್ಟ ಅನಿಸಿಬಿಡುತ್ತದೆ. ಆದರೆ, ಈ ವ್ಯಕ್ತಿ ಗುಳ್ಳೆಯೊಳಗೆ ಗುಳ್ಳೆಯಂತೆ ಬರೋಬ್ಬರಿ 783 ಬಬಲ್​ಗಳನ್ನು ಸೃಷ್ಟಿಸಿ ಸಾಧನೆ ಮಾಡಿದ್ದಾರೆ.

ಬಬಲ್ ಒಳಗೆ ಬಬಲ್​ನಂತೆ 783 ಗುಳ್ಳೆಗಳನ್ನು ಸೃಷ್ಟಿಸಿದ್ದಾರೆ. ಆ ಮೂಲಕ, ಗಿನ್ನಿಸ್ ವಿಶ್ವ ದಾಖಲೆ ಕೂಡ ಮಾಡಿದ್ದಾರೆ. ಗಿನ್ನಿಸ್ ವಿಶ್ವ ದಾಖಲೆ ತಂಡ ಸದ್ಯ ತನ್ನ ಅಧಿಕೃತ ಫೇಸ್​ಬುಕ್​ ಖಾತೆಯಲ್ಲಿ ಹಂಚಿಕೊಂಡಿರುವ ಈ ಬಬಲ್ ವಿಡಿಯೊ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಎಲ್ಲರ ಗಮನ ಸೆಳೆಯುತ್ತಿದೆ. ಗಿನ್ನಿಸ್ ರೆಕಾರ್ಡ್ ಬುಕ್​ನಲ್ಲಿ ದಾಖಲೆ ಬರೆದ ಪ್ರತಿಭಾವಂತನ ಸಾಧನೆಯ ಕಥೆ ಇದು. ನಮಗೆಲ್ಲ ಅಸಾಧ್ಯ ಎಂದೆನಿಸುವ ವಿಷಯ ಇಲ್ಲೊಬ್ಬ ಪ್ರತಿಭಾವಂತ ವ್ಯಕ್ತಿಗೆ ಸಾಧ್ಯವಾಗಿದೆ.  ಈ ದಾಖಲೆ ಬರೆದ ವ್ಯಕ್ತಿಯ ಹೆಸರು ಚಾಂಗ್.

ಅಂದಹಾಗೆ, ಗಿನ್ನಿಸ್ ದಾಖಲೆಯ ವಿಡಿಯೊ ನೋಡುವುದೇ ಖುಷಿ. ದಾಖಲೆ ಬರೆಯಲೇಬೇಕೆಂದು ಉತ್ಸಾಹದಲ್ಲಿ ಹೆಜ್ಜೆ ಇಟ್ಟವರು, ಇಲ್ಲಿ ತಮ್ಮ ವಿಭಿನ್ನ ಪ್ರಯತ್ನದ ಮೂಲಕವೇ ಎಲ್ಲರನ್ನು ಚಕಿತಗೊಳಿಸುತ್ತಾರೆ. ಅದೇ ರೀತಿ ಈಗ ಈ ವಿಡಿಯೊ ಸಹ ವೈರಲ್ ಆಗಿ ನೆಟ್ಟಿಗರ ಗಮನ ಸೆಳೆಯುತ್ತಿದೆ. ಇವರು ದಾಖಲೆ ಮಾಡುವ ವಿಡಿಯೊವನ್ನು ಈಗ ಎಲ್ಲರೂ ಬಹು ಕುತೂಹಲದಿಂದ ನೋಡುತ್ತಿದ್ದಾರೆ.

ಬಬಲ್ ಒಳಗೆ ಬಬಲ್!

ಸ್ಕೇಟಿಂಗ್​ನಲ್ಲಿ ಗಿನ್ನಿಸ್​ ದಾಖಲೆ ನಿರ್ಮಿಸಿದ ಕುಂದಾನಗರಿ ಕುವರ ಅಭಿಷೇಕ್ ನವಲೆ; ದರ್ಶನ್​ ನೀಡಿದ್ದರು ನೆರವು

 

Published On - 8:51 pm, Sun, 17 January 21