ಯಾರಾದರೂ ನಡೆದು ಹೋಗುತ್ತಿರುವಾಗ ಅವರಿಗೆ ರಸ್ತೆ ಮೇಲೆ ನೂರು ರೂಪಾಯಿ ಸಿಕ್ಕಿದರೆ ಎಷ್ಟು ಖುಷಿಯಾಗಿಬಿಡು ತ್ತೆ ಅಲ್ವಾ! ಆದೇ ರೀತಿ ನೂರು ರೂಪಾಯಿ ಬದಲು ವಜ್ರ ಸಿಕ್ಕಿಬಿಟ್ಟರೆ ಹೇಗಿರುತ್ತೆ..? ಅಂತಾ ಎಂದಾದರೂ ಯೋಚಿಸಿದ್ದೀರಾ… ಹಾಗಿದ್ರೆ ಇಲ್ಲೊಂದು ಸುದ್ದಿ ಹಾಗೆಯೇ ಇದೆ. ರಸ್ತೆಯಲ್ಲಿ ವ್ಯಕ್ತಿಯೊಬ್ಬನಿಗೆ ಗಾಜಿನ ಚೂರು ಸಿಕ್ಕಿದೆ. ಆದರೆ ಅದು ಯಃಕಶ್ಚಿತ್ ಗಾಜು ಆಗಿರಲಿಲ್ಲ. ಅಮೂಲ್ಯವಾದ ವಜ್ರವಾಗಿತ್ತು.
ಚಿನ್ನಕ್ಕಿಂತ ಹೆಚ್ಚು ಬೆಲೆ ಬಾಳುವ 9.07 ಕ್ಯಾರೆಟ್ ರತ್ನವನ್ನು ಗಾಜಿನ ತುಂಡು ಎಂದು ಭಾವಿಸಿ ಬ್ಯಾಂಕ್ ಮ್ಯಾನೇಜರ್ ಕೈಗೆತ್ತಿಕೊಂಡಿರುವ ಘಟನೆ ನೈಋತ್ಯ ಅರ್ಕಾನ್ಸಾಸ್ ರಾಜ್ಯ ಉದ್ಯಾನವನದ ಬಳಿ ನಡೆದಿದೆ. ಮಾಮೆಲ್ಲೆಯ ನಿವಾಸಿ ಕೆವಿನ್ ಕಿನಾರ್ಡ್ (Kevin Kinard) ಅವರಿಗೆ ಕಾರ್ಮಿಕರ ದಿನದಂದು ಕ್ರೇಟರ್ ಆಫ್ ಡೈಮಂಡ್ಸ್ ಸ್ಟೇಟ್ ಪಾರ್ಕ್‌ನ 48 ವರ್ಷಗಳ ಇತಿಹಾಸ ಇರುವ ಎರಡನೇ ಅತಿದೊಡ್ಡ ವಜ್ರ ಸಿಕ್ಕಿದೆ.
ನನ್ನ ಕಾಲ ಬಳಿ ಬಂದು ಬಿದ್ದಿತ್ತು ವಜ್ರ:
ಕೆವಿನ್ ಕಿನಾರ್ಡ್ ಹೇಳುವಂತೆ ಮರ್ಫ್ರೀಸ್ಬೊರೊ (Murfreesboro)ದಲ್ಲಿನ ರಾಜ್ಯ ಉದ್ಯಾನವನಕ್ಕೆ ಕೆವಿನ್ ಮತ್ತು ಅವನ ಸ್ನೇಹಿತರು ಉಪಕರಣಗಳನ್ನು ಸಾಗಿಸುತ್ತಿದ್ದರು. ಈ ವೇಳೆ ಕೆವಿನ್ ಕ್ರೇಟರ್ ಆಫ್ ಡೈಮಂಡ್ಸ್‌ಗೆ (Crater of Diamonds) ಚಿಕ್ಕಂದಿನಿಂದಲೂ ಭೇಟಿ ನೀಡುತ್ತಿದ್ದರು. ಆದರೆ ಅದೇ ಜಾಗದಲ್ಲಿ ಅತ್ಯಂತ ಬೆಲೆ ಬಾಳುವ ವಜ್ರ ಅವರ ಪಾದದಡಿ ಸಿಗುತ್ತೇ ಎಂದು ನಾನೆಂದೂ ಭಾವಿಸಿರಲಿಲ್ಲ. ಸೆಪ್ಟೆಂಬರ್ 7 ರಂದು ವಜ್ರ ನನ್ನ ಕಾಲ ಬಳಿ ಸಿಕ್ಕಿದೆ ಎಂದು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.
ಆಗಸ್ಟ್ 20 ರಂದು ಪಾರ್ಕ್ ಸಿಬ್ಬಂದಿ ಶೋಧನೆಗಾಗಿ ಇಲ್ಲಿನ ಪ್ರದೇಶವನ್ನು ಅಗೆದಿದ್ದರು. ಈ ವೇಳೆ ಜೋರಾದ ಮಳೆ ಬಂದು ಶೋಧಕ್ಕೆ ಅಡ್ಡಿ ಉಂಟು ಮಾಡಿತ್ತು. ಅಗೆದ ಮಣ್ಣೆಲ್ಲ ಹರಿದು ಹೋಗಿತ್ತು. ಈ ಪರಿಣಾಮ ಪಾರ್ಕ್ ಬಳಿ ಅನೇಕರಿಗೆ ವಜ್ರ ಸಿಕ್ಕಿದೆ. ಈವರೆಗೆ ಒಟ್ಟು 59.25 ಕ್ಯಾರೆಟ್ ತೂಕದ 264 ವಜ್ರಗಳನ್ನು ಈ ವರ್ಷದ ಕ್ರೇಟರ್ ಆಫ್ ಡೈಮಂಡ್ಸ್ ಸ್ಟೇಟ್ ಪಾರ್ಕ್‌ನಲ್ಲಿ ನೋಂದಾಯಿಸಲಾಗಿದೆ.. ಜನರು ಉದ್ಯಾನದಲ್ಲಿ ಪ್ರತಿದಿನ ಒಂದು ಅಥವಾ ಎರಡು ವಜ್ರಗಳನ್ನು ಕಂಡುಕೊಳ್ಳುತ್ತಿದ್ದಾರಂತೆ. !