ಇಂದು ಅಲ್ಪಸಂಖ್ಯಾತರ ದಿನ: ಏನಿದರ ಹಿನ್ನೆಲೆ?

|

Updated on: Dec 18, 2020 | 6:12 PM

ದೇಶದಲ್ಲಿರುವ ಪ್ರತಿಯೊಬ್ಬ ಪ್ರಜೆಗೂ ಸಮಾನ ಹಕ್ಕು ಇದೆ. ಧಾರ್ಮಿಕ, ಭಾಷೆ ಅಥವಾ ಜನಾಂಗೀಯ ವೈವಿಧ್ಯತೆಗಳಿದ್ದರೂ ಎಲ್ಲ ಪ್ರಜೆಗಳ ಹಕ್ಕುಗಳನ್ನು ನಮ್ಮ ಸಂವಿಧಾನ ಖಾತ್ರಿಪಡಿಸುತ್ತದೆ.

ಇಂದು ಅಲ್ಪಸಂಖ್ಯಾತರ ದಿನ: ಏನಿದರ ಹಿನ್ನೆಲೆ?
ಪ್ರಾತಿನಿಧಿಕ ಚಿತ್ರ
Follow us on

ಜಗತ್ತಿನಲ್ಲಿರುವ ಪ್ರತಿಯೊಂದು ದೇಶದಲ್ಲಿಯೂ ಭಾಷೆ, ಸಂಸ್ಕೃತಿ ಅಥವಾ ಜನಾಂಗೀಯ ಅಲ್ಪಸಂಖ್ಯಾತರು ಇರುತ್ತಾರೆ. ಈ ಅಲ್ಪಸಂಖ್ಯಾತರ ಹಕ್ಕುಗಳನ್ನು ಕಾಪಾಡುವುದು ಪ್ರತಿಯೊಂದು ಸರ್ಕಾರಕ್ಕೂ ಸವಾಲಿನ ವಿಷಯವೇ ಆಗಿರುತ್ತದೆ. ನಮ್ಮ ದೇಶದಲ್ಲಿ ಪ್ರತಿವರ್ಷವು ಡಿ.18ರಂದು ಅಲ್ಪಸಂಖ್ಯಾತರ ದಿನಾಚರಣೆ ನಡೆಯುತ್ತದೆ. ಅಲ್ಪಸಂಖ್ಯಾತರ ಹಕ್ಕುಗಳ ಬಗ್ಗೆ ಜಾಗೃತಿ ಮೂಡಿಸುವುದೇ ಈ ದಿನದ ಉದ್ದೇಶ.

ದೇಶದಲ್ಲಿರುವ ಪ್ರತಿಯೊಬ್ಬ ಪ್ರಜೆಗೂ ಸಮಾನ ಹಕ್ಕು ಇದೆ. ಧಾರ್ಮಿಕ, ಭಾಷೆ ಅಥವಾ ಜನಾಂಗೀಯ ವೈವಿಧ್ಯತೆಗಳಿದ್ದರೂ ಎಲ್ಲ ಪ್ರಜೆಗಳ ಹಕ್ಕುಗಳನ್ನು ನಮ್ಮ ಸಂವಿಧಾನ ಖಾತ್ರಿಪಡಿಸುತ್ತದೆ.

ಹಿನ್ನೆಲೆ ಏನು?
ಡಿ.18, 2013ರಂದು ಭಾರತದಲ್ಲಿ ಮೊದಲ ಬಾರಿ ಅಲ್ಪಸಂಖ್ಯಾತರ ಹಕ್ಕುಗಳ ದಿನಾಚರಣೆ ನಡೆಯಿತು. ಡಿ.18, 1992ರಂದು ವಿಶ್ವಸಂಸ್ಥೆಯು ಧಾರ್ಮಿಕ, ಭಾಷೆ, ರಾಷ್ಟ್ರೀಯ ಅಥವಾ ಜನಾಂಗೀಯ ಅಲ್ಪಸಂಖ್ಯಾತರಿಗೆ ಸೇರಿದ ವೈಯಕ್ತಿಕ ಹಕ್ಕುಗಳ ಹೇಳಿಕೆಯನ್ನು ಘೋಷಿಸಿತ್ತು. ಅಲ್ಪಸಂಖ್ಯಾತರ ಹಕ್ಕುಗಳನ್ನು ಸರ್ಕಾರಗಳು ಮತ್ತು ವೈಯಕ್ತಿಕ ನೆಲೆಗಟ್ಟಿನಲ್ಲಿ ಗೌರವಿಸಬೇಕು ಮತ್ತು ಸಂರಕ್ಷಿಸಬೇಕು ಎಂದು ವಿಶ್ವಸಂಸ್ಥೆಯು ಒತ್ತಿ ಹೇಳಿತ್ತು.

ಅಲ್ಪಸಂಖ್ಯಾತರ ವ್ಯವಹಾರಗಳ ಸಚಿವಾಲಯ
2006ರಲ್ಲಿ ದೇಶದಲ್ಲಿ ಅಲ್ಪಸಂಖ್ಯಾತರ ವ್ಯವಹಾರಗಳ ಸಚಿವಾಲಯವನ್ನು ಸ್ಥಾಪಿಸಲಾಯಿತು. ಈ ಸಚಿವಾಲಯವು ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯದಿಂದ ರೂಪಿಸಲ್ಪಟ್ಟಿತ್ತು. ಭಾರತದಲ್ಲಿ ಅಲ್ಪಸಂಖ್ಯಾತರು ಎಂದು ಪರಿಗಣಿಸಿರುವ ಸಮುದಾಯಗಳು- ಕ್ರಿಶ್ಚಿಯನ್ನರು, ಮುಸ್ಲಿಮರು, ಸಿಖ್ಖರು, ಜೊರಾಸ್ಟ್ರಿಯನ್ನುರು (ಪಾರ್ಸಿಗಳು), ಜೈನರು ಮತ್ತು ಬೌದ್ಧರು. 2014ರ ನಂತರ ಜೈನರನ್ನೂ ಅಲ್ಪಸಂಖ್ಯಾತ ಸಮುದಾಯ ಎಂದು ಗುರುತಿಸಲಾಗಿದೆ.

2011ರ ಜನಗಣತಿ ಪ್ರಕಾರ ಭಾರತದಲ್ಲಿ ಶೇ 19.30 (23.37 ಕೋಟಿ) ಅಲ್ಪಸಂಖ್ಯಾತರಿದ್ದಾರೆ. ಇದರಲ್ಲಿ ಮುಸ್ಲಿಂ (ಶೇ 14.2), ಕ್ರೈಸ್ತರು (ಶೇ 2.3), ಸಿಖ್ (ಶೇ 1.3), ಬೌದ್ಧರು (ಶೇ 0.7), ಜೈನರು ಮತ್ತು ಪಾರ್ಸಿಗಳು ಶೇ 0.4ರಷ್ಟು ಇದ್ದಾರೆ.

ಅಂಜಲಿ ರಾಮಣ್ಣ ಬರಹ | ಲೈಂಗಿಕ ಅಲ್ಪಸಂಖ್ಯಾತರಿಗೆ ಅವರ ಹಕ್ಕು ಸಿಗುವಂತಾಗಲು ಪೊಲೀಸರು ಬದಲಾಗಬೇಕು

Published On - 6:07 pm, Fri, 18 December 20