National Son and Daughter Day 2022: ಇಂದು ‘ರಾಷ್ಟ್ರೀಯ ಮಗ ಮತ್ತು ಮಗಳ ದಿನ’; ಇತಿಹಾಸ, ಮಹತ್ವ ಇಲ್ಲಿದೆ

| Updated By: Rakesh Nayak Manchi

Updated on: Aug 11, 2022 | 10:25 AM

ಮಕ್ಕಳ ಮಹತ್ವಗಳನ್ನು ಪೋಷಕರಿಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಪ್ರತಿ ವರ್ಷ ಆ.11ರಂದು ರಾಷ್ಟ್ರೀಯ ಮಗ ಮತ್ತು ಮಗಳ ದಿನವನ್ನು ಆಚರಿಸಲಾಗುತ್ತದೆ. ಯುನೈಟೆಡ್ ಸ್ಟೇಟ್ಸ್​ನಲ್ಲಿ ಆ.11 ರಜಾ ದಿನವಾಗಿದೆ.

National Son and Daughter Day 2022: ಇಂದು ರಾಷ್ಟ್ರೀಯ ಮಗ ಮತ್ತು ಮಗಳ ದಿನ; ಇತಿಹಾಸ, ಮಹತ್ವ ಇಲ್ಲಿದೆ
ಸಾಂಕೇತಿಕ ಚಿತ್ರ
Follow us on

ವಿಶ್ವದಲ್ಲಿ ಪೋಷಕರು ಮತ್ತು ಮಕ್ಕಳ ಸಂಬಂಧವೇ ಅತ್ಯಂತ ಅಮೂಲ್ಯವಾದ ಸಂಬಂಧವಾಗಿದೆ. ಇತಿಹಾಸದುದ್ದಕ್ಕೂ ಕುಟುಂಬಗಳ ನಡುವಿನ ಬಂಧಗಳನ್ನು ವಿಶೇಷವಾಗಿ ಪೋಷಕರು ಮತ್ತು ಮಕ್ಕಳ ನಡುವಿನ ಬಂಧಗಳನ್ನು ಯಾವಾಗಲೂ ಅತ್ಯಂತ ಕಾಳಜಿ ಮತ್ತು ಗೌರವದಿಂದ ಪರಿಗಣಿಸಲಾಗುತ್ತದೆ. ನಿಮಗೆ ತಿಳಿದಿಲ್ಲದಿದ್ದರೆ, ನಿಮ್ಮ ಮಕ್ಕಳನ್ನು ಆಚರಿಸಲು ಕೂಡ ಒಂದು ದಿನವಿದೆ. ಪ್ರತೀ ವರ್ಷ ಆ.11ರಂದು ಈ ದಿನವನ್ನು ಆಚರಿಸಲಾಗುತ್ತದೆ. ಇದನ್ನು ರಾಷ್ಟ್ರೀಯ ಮಗ ಮತ್ತು ಮಗಳ ದಿನ ಎಂದು ಕರೆಯಲಾಗುತ್ತದೆ. ನೀವು ಪ್ರತಿದಿನ ಅವರಿಗೆ ಪ್ರೀತಿಯನ್ನು ತೋರಿಸುತ್ತಿದ್ದರೂ ನಿಮ್ಮ ಮಗನಿಗೆ ಸ್ವಲ್ಪ ವಿಶೇಷವಾದದ್ದನ್ನು ಮಾಡಲು ಅಥವಾ ನಿಮ್ಮ ಮಗಳ ಜಗತ್ತನ್ನು ಬೆಳಗಿಸಲು ಇದು ನಿಮಗಿರುವ ಮತ್ತೊಂದು ಅವಕಾಶವಾಗಿದೆ.

ಯುನೈಟೆಡ್ ಸ್ಟೇಟ್ಸ್ ರಾಷ್ಟ್ರೀಯ ಮಗ ಮತ್ತು ಮಗಳ ದಿನವನ್ನು ವಾರ್ಷಿಕವಾಗಿ ಆಗಸ್ಟ್ 11 ರಂದು ಆಚರಿಸುತ್ತದೆ. ಇದು ಅಲ್ಲಿ ರಜಾ ದಿನವೂ ಆಗಿದೆ. ಈ ದಿನದಂದು ಪೋಷಕರು ತಮ್ಮ ಪುತ್ರರು ಮತ್ತು ಪುತ್ರಿಯರೊಂದಿಗೆ ಹೊಂದಿರುವ ಬಂಧಗಳ ಬಗ್ಗೆ ಮಾತನಾಡಲಾಗುತ್ತದೆ. ಹಾಗಿದ್ದರೆ ಈ ದಿನ ಹುಟ್ಟಿಕೊಂಡಿದ್ದು ಹೇಗೆ? ಇಲ್ಲಿದೆ ನೋಡಿ ಇತಿಹಾಸ

ರಾಷ್ಟ್ರೀಯ ಮಗ ಮತ್ತು ಮಗಳ ದಿನದ ಇತಿಹಾಸ

ರಾಷ್ಟ್ರೀಯ ಮಗ ಮತ್ತು ಮಗಳ ದಿನವು 1930ರ ದಶಕದ ಹಿಂದಿನದು. ಯುನೈಟೆಡ್ ಸ್ಟೇಟ್ಸ್​ನ ಸೇಂಟ್ ಜೋಸೆಫ್‌ನಲ್ಲಿ ಒಬ್ಬ ಚಿಕ್ಕ ಹುಡುಗ ತನ್ನ ತಾಯಿ ಮತ್ತು ತಂದೆಗೆ ಒಂದು ದಿನವಿದೆಯಂತೆ, ಅದೇ ರೀತಿ ತನ್ನದೇ ಆದ ದಿನ ಯಾಕೆ ಇಲ್ಲ ಎಂಬ ಭಾವನೆ ವ್ಯಕ್ತಪಡಿಸಿದ್ದಾನೆ. ಇದರ ಬಗ್ಗೆ ವ್ಯಕ್ತಿಯೊಬ್ಬರು ಲೇಖನವನ್ನೂ ಪ್ರಕಟಿಸಿದರು. ಕಾಲಾನಂತರದಲ್ಲಿ ಯುನೈಟೆಡ್ ಸ್ಟೇಟ್ಸ್​ನಲ್ಲಿ ಇದು ಮುನ್ನೆಲೆಗೆ ಬಂದು ಆಚರಣೆಗೂ ಬಂತು. ಅದರಂತೆ ರಾಷ್ಟ್ರೀಯ ಮಗ ಮತ್ತು ಮಗಳ ದಿನವನ್ನು ಆಗಸ್ಟ್ 11 ರಂದು ಗುರುತಿಸಲಾಯಿತು.

ರಾಷ್ಟ್ರೀಯ ಮಗ ಮತ್ತು ಮಗಳ ದಿನದ ಮಹತ್ವ

ತಮ್ಮ ಬಿಡುವಿಲ್ಲದ ಜೀವನದಲ್ಲಿ ತಮ್ಮ ಮಕ್ಕಳನ್ನು ಮರೆಯಬಾರದು ಮತ್ತು ಅವರ ಉತ್ತಮ ಭವಿಷ್ಯಕ್ಕಾಗಿ ಅವರೊಂದಿಗೆ ಪ್ರೀತಿ ಮತ್ತು ಕಾಳಜಿಯ ಕೆಲವು ಕ್ಷಣಗಳನ್ನು ನಿರ್ಮಿಸಲು ಎಲ್ಲಾ ಪೋಷಕರಿಗೆ ಜ್ಞಾಪನೆಯಾಗಿ ಕೆಲಸ ಮಾಡುವ ಉದ್ದೇಶದಿಂದ ಈ ದಿನವನ್ನು ಆಚರಿಸಲಾಗುತ್ತದೆ.

ನಿಮಗೆ ತಿಳಿದಿರುವಂತೆ ಒಂದು ದಿನ ನಿಮ್ಮ ಮಕ್ಕಳು ಬೆಳೆಯುತ್ತಾರೆ. ಅವರು ತಮ್ಮ ಜೀವನದಲ್ಲಿ ಹೇಗೆ ಸಾಗುತ್ತಾರೆ ಎಂಬುದು ಹೆಚ್ಚಾಗಿ ಪೋಷಕರಾಗಿ ನೀವು ಅವರ ಜೀವನಕ್ಕಾಗಿ ಏನು ಯೋಚಿಸಿದ್ದೀರಿ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ. ಆದರೆ ನೀವು ಯೋಚಿಸಿದ ಯಾವುದನ್ನಾದರೂ ನೀವು ನೆನಪಿಟ್ಟುಕೊಳ್ಳಲು ಸಾಧ್ಯವಾಗದಿದ್ದರೆ ನೀವು ಅವರೊಂದಿಗೆ ಸಾಕಷ್ಟು ಸಮಯವನ್ನು ಕಳೆದಿಲ್ಲ ಎಂದು ಅದು ಹೇಳುತ್ತದೆ.

ನಿಮ್ಮ ಮಗ ಮತ್ತು ಮಗಳೊಂದಿಗೆ ಸಮಯ ಕಳೆಯುವುದು ಬಹಳ ಮುಖ್ಯ, ಇದು ವಿಶೇಷವಾಗಿ ಅವರು ಚಿಕ್ಕ ವಯಸ್ಸಿನಲ್ಲಿದ್ದಾಗ ಅವರ ಮಾನಸಿಕ ಸಾಮರ್ಥ್ಯವನ್ನು ಅಭಿವೃದ್ಧಿಪಡಿಸಲು ಸಹಾಯ ಮಾಡುತ್ತದೆ. ಇದರೊಂದಿಗೆ ಮಕ್ಕಳು ಸಂತೋಷದ ಬಾಲ್ಯವನ್ನು ಸಹ ಅನುಭವಿಸುತ್ತಾರೆ. ಹೆಚ್ಚಿನ ಪೋಷಕರು ತಮ್ಮ ಕೆಲಸದಲ್ಲಿ ನಿರತರಾಗಿರುತ್ತಾರೆ. ಇಂತಹ ಸಮಯದಲ್ಲಿ ಕುಟುಂಬದೊಂದಿಗೆ ಕಳೆಯಲು ಸಮಯ ಸಿಗುವುದಿಲ್ಲ. ಇದರ ಮಹತ್ವವನ್ನು ಅವರಿಗೆ ನೆನಪಿಸಲು ರಾಷ್ಟ್ರೀಯ ಮಗ ಮತ್ತು ಮಗಳ ದಿನವನ್ನು ಆಚರಿಸಲಾಗುತ್ತದೆ.