ಶಬ್ ಎ ಬರಾತ್ 2021; ಕ್ಷಮೆಯ ರಾತ್ರಿ.. ತಿಳಿಯಿರಿ ಮುಸ್ಲಿಮರು ಆಚರಿಸುವ ಪ್ರವಿತ್ರ ರಾತ್ರಿಯ ಮಹತ್ವ

|

Updated on: Mar 28, 2021 | 12:07 PM

ಅನೇಕ ಕಡೆಗಳಲ್ಲಿ, ಶಾಬ್-ಎ-ಬರಾತ್​ನಂದು ಅನೇಕ ಮುಸ್ಲಿಮರು ಕ್ಷಮೆಯ ರಾತ್ರಿ ಎಂದು ಪೂಜಿಸುತ್ತಾರೆ. ಇಡೀ ರಾತ್ರಿ ಅಲ್ಲಾಹ್​ನನ್ನು ಅವರ ಆಶೀರ್ವಾದವನ್ನು ದಯಪಾಲಿಸುವಂತೆ ಕೇಳಿಕೊಳ್ಳುತ್ತಾರೆ. ಹಾಗೂ ತಮ್ಮ ಪೂರ್ವಜರನ್ನು ಕ್ಷಮಿಸುವಂತೆ ಅಲ್ಲಾಹ್​ನನ್ನು ಕೇಳಿಕೊಳ್ಳುತ್ತ ಪ್ರಾರ್ಥನೆಗಳನ್ನು ಮಾಡುತ್ತಾರೆ.

ಶಬ್ ಎ ಬರಾತ್ 2021; ಕ್ಷಮೆಯ ರಾತ್ರಿ.. ತಿಳಿಯಿರಿ ಮುಸ್ಲಿಮರು ಆಚರಿಸುವ ಪ್ರವಿತ್ರ ರಾತ್ರಿಯ ಮಹತ್ವ
Follow us on

ಶಾಬ್-ಎ-ಬರಾತ್.. ಇದು ಬಂದು ಪ್ರಮುಖ ರಾತ್ರಿ. ಮತ್ತು ಇದನ್ನು ಶಾಬಾನ್​ನ ಮಧ್ಯದಲ್ಲಿ ಆಚರಿಸಲಾಗುತ್ತದೆ. 2021 ರ ಮಾರ್ಚ್ 28 ರ ಭಾನುವಾರದಂದು ಸೂರ್ಯ ಮುಳುಗಿದ ನಂತರ 15 ನೇ ಶಬಾನ್ ಪ್ರಾರಂಭವಾಗಲಿದೆ. ಮುಂದಿನ ಸೂರ್ಯಾಸ್ತದವರೆಗೆ ಶಾಬ್-ಎ-ಬರಾತ್ ಆಚರಿಸಲಾಗುವುದು, ಅಂದರೆ 2021 ರ ಮಾರ್ಚ್ 29 ರ ಸೋಮವಾರ ಸಂಜೆ.

ವಿವಿಧ ದೇಶಗಳಲ್ಲಿ ಈ ದಿನವನ್ನು ಆಚರಿಸಲು ವಿಭಿನ್ನ ಮಾರ್ಗಗಳಿನ್ನು ಹೊಂದಿದ್ದಾರೆ. ಹಾಗೂ ಈ ಹಬ್ಬಕ್ಕೆ ವಿವಿಧ ಹೆಸರುಗಳಿಂದ ಗುರುತಿಸಲಾಗುತ್ತೆ. ಶಬ್-ಎ-ಬರಾತ್ ಹಬ್ಬವನ್ನು ಮುಖ್ಯವಾಗಿ ದಕ್ಷಿಣ ಏಷ್ಯಾದಲ್ಲಿ ಮುಸ್ಲಿಮರು ಆಡಂಬರ ಮತ್ತು ಉತ್ಸಾಹದಿಂದ ಆಚರಿಸುತ್ತಾರೆ. ಕೆಲವು ಸುನ್ನಿ ಇಸ್ಲಾಂ ಸಂಪ್ರದಾಯಗಳ ಪ್ರಕಾರ, ಈ ರಾತ್ರಿಯನ್ನು ಶಾಬ್-ಎ-ಬರಾತ್ (ಸ್ವಾತಂತ್ರ್ಯದ ರಾತ್ರಿ) ಎಂದು ಕರೆಯಲಾಗುತ್ತದೆ. ಏಕೆಂದರೆ ಈ ದಿನ ಅಲ್ಲಾಹನು ನರಕಕ್ಕೆ ಗುರಿಯಾಗಿದ್ದ ತನ್ನ ಸೇವಕರನ್ನು ಮುಕ್ತಗೊಳಿಸುತ್ತಾನೆ. ಮುಂಬರುವ ವರ್ಷದಲ್ಲಿ ಆ ವ್ಯಕ್ತಿಯ ಜೀವನ, ಅವನ ಪೋಷಣೆ ಮತ್ತು ಹಜ್ (ತೀರ್ಥಯಾತ್ರೆ) ಮಾಡಲು ಅವರಿಗೆ ಅವಕಾಶವಿದೆಯೇ ಎಂದು ಈ ರಾತ್ರಿ ನಿರ್ಧರಿಸಲಾಗುತ್ತದೆ. ಮುಸ್ಲಿಂ ಸಮುದಾಯದ ಸದಸ್ಯರು ಈ ದಿನ ಮಸೀದಿಗಳು ಮತ್ತು ಸ್ಮಶಾನಗಳಿಗೆ ಭೇಟಿ ನೀಡಿ ಪ್ರಾರ್ಧಿಸುವ ಸಂಪ್ರದಾಯವಿದೆ.

ಇನ್ನು ಶಾಬಾನ್ ಇಸ್ಲಾಮಿಕ್ ಕ್ಯಾಲೆಂಡರ್​ನ 8ನೇ ತಿಂಗಳು. ಈ ತಿಂಗಳ 14 ಮತ್ತು 15 ರ ನಡುವಿನ ರಾತ್ರಿಯನ್ನು ವಿಶ್ವದಾದ್ಯಂತ ಶಾಬ್-ಎ-ಬರಾತ್ ಎಂದು ಆಚರಿಸಲಾಗುತ್ತದೆ. ಪವಿತ್ರ ರಂಜಾನ್ ಮಾಸಕ್ಕೆ 15 ದಿನಗಳ ಮೊದಲು ಈ ದಿನ ಆಚರಿಸಲಾಗುತ್ತೆ. ಹಾಗೂ ಶಾಬಾನ್​ನ 15ನೇ ದಿನದಂದು ಉಪವಾಸ ಸಹ ಮಾಡಲಾಗುತ್ತೆ. ಅನೇಕ ಕಡೆಗಳಲ್ಲಿ, ಶಾಬ್-ಎ-ಬರಾತ್​ನಂದು ಅನೇಕ ಮುಸ್ಲಿಮರು ಕ್ಷಮೆಯ ರಾತ್ರಿ ಎಂದು ಪೂಜಿಸುತ್ತಾರೆ. ಇಡೀ ರಾತ್ರಿ ಅಲ್ಲಾಹ್​ನನ್ನು ಅವರ ಆಶೀರ್ವಾದವನ್ನು ದಯಪಾಲಿಸುವಂತೆ ಕೇಳಿಕೊಳ್ಳುತ್ತಾರೆ. ಹಾಗೂ ತಮ್ಮ ಪೂರ್ವಜರನ್ನು ಕ್ಷಮಿಸುವಂತೆ ಅಲ್ಲಾಹ್​ನನ್ನು ಕೇಳಿಕೊಳ್ಳುತ್ತ ಪ್ರಾರ್ಥನೆಗಳನ್ನು ಮಾಡುತ್ತಾರೆ. ಈ ರಾತ್ರಿ ಅಲ್ಲಾಹ್​ನು ಎಲ್ಲಾ ಪಾಪಗಳನ್ನು ಕ್ಷಮಿಸುತ್ತಾನೆ ಮತ್ತು ಮುಂದಿನ ವರ್ಷಕ್ಕೆ ಜನರ ಭಾಗ್ಯವನ್ನು ಸಹ ನಿರ್ಧರಿಸುತ್ತಾನೆ ಎಂಬ ನಂಬಿಕೆ ಇದೆ. ಈ ದಿನವನ್ನು ಶಾಬ್-ಎ-ರಾತ್, ಬರಾ ನೈಟ್ ಮತ್ತು ಮಿಡ್-ಶಾಬಾನ್ ಎಂದೂ ಸಹ ಕರೆಯುತ್ತಾರೆ. ಹೆಚ್ಚುವರಿಯಾಗಿ, ಟ್ವೆಲ್ವರ್ ಶಿಯಾ ಮುಸ್ಲಿಮರು ಈ ದಿನದಂದು ಮುಹಮ್ಮದ್ ಅಲ್-ಮಹ್ದಿ (Muhammad al-mahdi)ಅವರ ಜನ್ಮದಿನವಾಗಿಯೂ ಆಚರಿಸುತ್ತಾರೆ.

ಹದೀಸ್ ಪ್ರಕಾರ ಶಾಬ್-ಎ-ಬರಾತ್ ಏನು?
ಕುರಾನ್​ನಲ್ಲಿ ಈ ಹಬ್ಬದ ರಾತ್ರಿಯ ಮಹತ್ವದ ಬಗ್ಗೆ ಸ್ಪಷ್ಟ ಮಾಹಿತಿ ಅಥವಾ ಹೇಳಿಕೆ ನೀಡುವಂತಹ ಯಾವುದೇ ಸಹೀಹ್ ಹದೀಸ್, ಪ್ರವಚನಗಳಿಲ್ಲ. ಆದ್ರೆ ದಕ್ಷಿಣ ಏಷ್ಯಾದಲ್ಲಿ, ಅನೇಕ ಜನರು ಈ ರಾತ್ರಿಯನ್ನು ಆಚರಿಸುತ್ತಾರೆ. ಅಲ್ಲಾಹ್​ನ ಆರಾಧನೆಯಲ್ಲಿ ರಾತ್ರಿಯನ್ನು ಕಳೆಯುತ್ತಾರೆ. ಆದ್ರೆ ಈ ಹಬ್ಬದ ರಾತ್ರಿಯ ಮಹತ್ವ ಮತ್ತು ಮಹಿಮೆ ತಿಳಿಸುವ ಉಲ್ಲೇಖಗಳನ್ನು ಕೆಲ ದೈಫ್​ ಹದೀಸ್​ಗಳಲ್ಲಿ ಕಾಣಬಹುದು.

ಸದ್ಯ ರಾಜ್ಯದಲ್ಲಿ ಕೊರೊನಾ ಎರಡನೇ ಅಲೆಯ ಭೀತಿ ಎದುರಾಗಿದ್ದು ರಾಜ್ಯ ಸರ್ಕಾರ ಮಾರ್ಗಸೂಚಿಯನ್ನು ಹೊರಡಿಸಿದೆ. ಹಬ್ಬದ ಸಮಯದಲ್ಲಿ ಗುಂಪುಗೂಡದಂತೆ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಆಚರಣೆ ನಿರ್ಬಂಧಿಸಿ ಆದೇಶ ಹೊರಡಿಸಿದೆ. ಯುಗಾದಿ, ಹೋಳಿ, ಶಬ್ ಎ ಬರತ್, ಗುಡ್ ಫ್ರೈಡೇ ಮುಂತಾದ ಎಲ್ಲಾ ಹಬ್ಬ ಹರಿದಿನಗಳಲ್ಲಿ ಗುಂಪುಗೂಡದಂತೆ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಆಚರಣೆ ನಿರ್ಬಂಧಿಸಿ ಆದೇಶಿಸಿದೆ. ಸಾರ್ವಜನಿಕ ಸ್ಥಳ, ಮೈದಾನ, ಪಾರ್ಕ್​, ಮಾರ್ಕೆಟ್​ ಹಾಗೂ ಪ್ರಾರ್ಥನಾ ಮಂದಿರಗಳಲ್ಲಿ ಆಚರಿಸುವುದಕ್ಕೆ ನಿಷೇಧ ಹೇರಲಾಗಿದೆ. ಇದಲ್ಲದೆ, ಆದೇಶ ಉಲ್ಲಂಘಿಸಿದರೆ ಎನ್​ಡಿಎಂಎ ಕಾಯ್ದೆಯಡಿ ಕ್ರಮ ಜರುಗಿಸಲಾಗುವುದು ಎಂದು ಕ್ರಮಕೈಗೊಳ್ಳುವುದಾಗಿ ರಾಜ್ಯ ಸರ್ಕಾರದಿಂದ ಎಚ್ಚರಿಕೆ ನೀಡಲಾಗಿದೆ.

ಇದನ್ನೂ ಓದಿ: Shab-e-Miraj 2021: ಶಬ್-ಎ-ಮಿರಾಜ್, ತಿಳಿಯಿರಿ ರಜಬ್ ತಿಂಗಳ ಈ ಪವಿತ್ರ ದಿನದ ಪ್ರಾಮುಖ್ಯತೆ