ತ್ರಿಪುರ: ಈಗ ಎಲ್ಲಿ ನೋಡಿದ್ರೂ ಪ್ಲಾಸ್ಟಿಕ್ ವಸ್ತುಗಳನ್ನ ನಿಷೇಧಿಸಿ ಎನ್ನುವ ಮಾತು ಕೇಳಿ ಬರುತ್ತಿವೆ. ಹಾಗೇನೆ ಆರ್ಗಾನಿಕ್ ವಸ್ತುಗಳಿಗೆ ಬೇಡಿಕೆ ಹೆಚ್ಚಾಗುತ್ತಿದೆ. ಹೀಗಾಗಿ ಈ ಟ್ರೆಂಡ್ ಅನ್ನು ಸದುಪಯೋಗಪಡಿಸಿಕೊಳ್ಳಲು ತ್ರಿಪುರ ಸರ್ಕಾರ ಮುಂದಾಗಿದೆ.
ಹೌದು ಈಶಾನ್ಯ ರಾಜ್ಯಗಳ ನೈಸರ್ಗಿಕ ಸಂಪದ್ಭರಿತ ರಾಜ್ಯಗಳಲ್ಲಿ ಒಂದಾಗಿರುವ ತ್ರಿಪುರ, ತನ್ನಲ್ಲಿರುವ ಅಪಾರ ನೈಸರ್ಗಿಕ ಸಂಪತ್ತನ್ನು ಹಾಳು ಮಾಡದೆ ಸದ್ವಿನಿಯೋಗಿಸಲು ಮುಂದಾಗಿದೆ. ರಾಜ್ಯದಲ್ಲಿ ಅಪಾರ ಪ್ರಮಾಣದಲ್ಲಿರುವ ಬಿದಿರು ಬಂಬೂಗಳನ್ನು ಹಾಳಾಗಲು ಬಿಡದೆ ಅವುಗಳಿಂದ ವಿವಿಧ ವಸ್ತುಗಳನ್ನ ತಯಾರಿಸಲು ಮುಂದಾಗಿದೆ. ಈ ಸಂಬಂಧ ತ್ರಿಪುರದ ಬಂಬೂ ಮತ್ತು ಕರಕುಶಲ ವಸ್ತುಗಳ ಅಭಿವೃದ್ಧಿ ಸಂಸ್ಥೆ ಬಿದಿರು ಬಂಬೂಗಳಿಂದ ಬಗೆ ಬಗೆಯ ನೀರಿನ ಬಾಟಲ್‌ಗಳನ್ನು ತಯಾರಿಸುತ್ತಿದೆ.
ಬಿದಿರು ಬಂಬೂವಿನಿಂದ ಬಗೆ ಬಗೆಯ ವಾಟರ್ ಬಾಟಲ್
ಈ ಬಂಬೂಗಳಿಂದ ತಯಾರಾಗಿರುವ ವಾಟರ್ ಬಾಟಲ್‌ಗಳು ನೈಸರ್ಗಿಕ ಮತ್ತು ನೀರನ್ನು ಅದರ ಸಹಜ ಉಷ್ಣತೆಯಲ್ಲಿಯೇ ಇಡುತ್ತವೆ. ಚಳಿಗೆ ತಂಪಾಗುವುದಿಲ್ಲ, ಬಿಸಿಲಿಸಿಗೆ ಬಿಸಿಯಾಗುವುದಿಲ್ಲ. ಹೆಚ್ಚಿನ ಭಾರವಿಲ್ಲ. ಹಾಗೇನೆ ಯಾವುದೇ ರೀತಿಯ ಕೆಮಿಕಲ್ಸ್ ಕೂಡಾ ಇಲ್ಲ.
ಸ್ಥಳೀಯ ಕರಕುಶಲ ಕರ್ಮಿಗಳಿಗೆ ಉದ್ಯೋಗ
ಹೀಗೆ ಸಜಜವಾಗಿಯೇ ಲಭ್ಯವಿರುವ ಬಂಬೂವಿನಿಂದ ಅಗತ್ಯವಿರುವ ವಸ್ತುಗಳನ್ನ ನೈಸರ್ಗಿಕವಾಗಿ ತಯಾರಿಸುವ ಮೂಲಕ ತ್ರಿಪುರ ಸರ್ಕಾರ ತನ್ನ ಜನರಿಗೆ ಉದ್ಯೋಗವನ್ನು ನೀಡಿದೆ. ಹಾಗೇನೆ ರಾಜ್ಯದ ಬೊಕ್ಕಸಕ್ಕೆ ಆದಾಯವೂ ಸಿಗುತ್ತದೆ. ಜೊತೆಗೆ ಪ್ರತಿಯೊಬ್ಬರಿಗೂ ಅವಶ್ಯವಿರುವ, ಅದ್ರಲ್ಲೂ ಕೊರೊನಾದಂಥ ಸಮಯದಲ್ಲಿ ಪ್ರತಿಯೊಬ್ಬರು ವೈಯಕ್ತಿಕವಾಗಿ ಹೊಂದಲೇ ಬೇಕಾದ ನೀರಿನ ಬಾಟಲ್‌ಗಳನ್ನ ತಯಾರಿಸುವ ಮೂಲಕ ಸಮಯ ಮತ್ತು ತನ್ನಲ್ಲಿರುವ ಸಂಪತ್ತನ್ನು ಸಕಾಲದಲ್ಲಿ ಸದ್ವಿನಿಯೋಗ ಪಡಿಸಿಕೊಳ್ಳುತ್ತಿದೆ.
Tripura: Locals are making hand-crafted bamboo water bottles in Agartala. Avinab Kanth,In-charge at Bamboo&Crafts Development Institute says,"Presently, this is a product that has great market & demand. People are willing to buy these bottles as they are eco-friendly." (14.07.20) pic.twitter.com/ZYFz2XpmF4
— ANI (@ANI) July 15, 2020
Published On - 5:28 pm, Wed, 15 July 20