ಈ ಬ್ರೆಡ್​ ತಯಾರಿಸೋಕೆ ಮಹಿಳೆಯರ ಮೂತ್ರವೇ ಶ್ರೇಷ್ಠವಂತೆ! ಏಕೆ?

ಇಲ್ಲಿ ಮೂತ್ರ ವಿಸರ್ಜನೆ ಮಾಡಬಾರದು ಅಂತಾ ಎಲ್ಲಾ ಕಡೆ ಸೂಚನಾ ಫಲಕಗಳನ್ನ ಹಾಕಿರೋದು ನಾವು ನೋಡೇ ಇರ್ತೀವಿ. ಅಂತೆಯೇ ಅದೇ ಬೋರ್ಡ್​ ಮುಂದೆ ಜನ ಮೂತ್ರ ವಿಸರ್ಜನೆ ಮಾಡೋದನ್ನ ನೋಡಿದ್ದೀವಿ. ಜೊತೆಗೆ, ಅಬ್ಬಬ್ಬಾ ಅಂತಾ ಅದರ ದುರ್ವಾಸನೆ ತಡಿಯೋಕಾಗದೆ ಮೂಗು ಮುಚ್ಚಿಕೊಂಡು ಓಡಾಡಿದ್ದು ಸಹ ಉಂಟು. ಆದರೆ, ಅದೇ ಮೂತ್ರವನ್ನ ಬಳಸಿ ಬ್ರೆಡ್​ಗೆ ತಯಾರಿಸಲು ಉಪಯೋಗಿಸುವ ಗೋಧಿ ಬೆಳೆಸುತ್ತಾರೆ ಅಂತಾ ಹೇಳಿದ್ರೆ ನಂಬ್ತೀರಾ? ಹೌದು, ಇದು ಕೇಳಲು ಕೊಂಚ ವಿಚಿತ್ರ ಮತ್ತು ಅಸಹ್ಯ ಅನ್ನಿಸಿದರೂ ಇದು ನಿಜ […]

ಈ ಬ್ರೆಡ್​ ತಯಾರಿಸೋಕೆ ಮಹಿಳೆಯರ ಮೂತ್ರವೇ ಶ್ರೇಷ್ಠವಂತೆ! ಏಕೆ?
Follow us
KUSHAL V
| Updated By: ಸಾಧು ಶ್ರೀನಾಥ್​

Updated on: Jul 15, 2020 | 11:48 AM

ಇಲ್ಲಿ ಮೂತ್ರ ವಿಸರ್ಜನೆ ಮಾಡಬಾರದು ಅಂತಾ ಎಲ್ಲಾ ಕಡೆ ಸೂಚನಾ ಫಲಕಗಳನ್ನ ಹಾಕಿರೋದು ನಾವು ನೋಡೇ ಇರ್ತೀವಿ. ಅಂತೆಯೇ ಅದೇ ಬೋರ್ಡ್​ ಮುಂದೆ ಜನ ಮೂತ್ರ ವಿಸರ್ಜನೆ ಮಾಡೋದನ್ನ ನೋಡಿದ್ದೀವಿ. ಜೊತೆಗೆ, ಅಬ್ಬಬ್ಬಾ ಅಂತಾ ಅದರ ದುರ್ವಾಸನೆ ತಡಿಯೋಕಾಗದೆ ಮೂಗು ಮುಚ್ಚಿಕೊಂಡು ಓಡಾಡಿದ್ದು ಸಹ ಉಂಟು. ಆದರೆ, ಅದೇ ಮೂತ್ರವನ್ನ ಬಳಸಿ ಬ್ರೆಡ್​ಗೆ ತಯಾರಿಸಲು ಉಪಯೋಗಿಸುವ ಗೋಧಿ ಬೆಳೆಸುತ್ತಾರೆ ಅಂತಾ ಹೇಳಿದ್ರೆ ನಂಬ್ತೀರಾ? ಹೌದು, ಇದು ಕೇಳಲು ಕೊಂಚ ವಿಚಿತ್ರ ಮತ್ತು ಅಸಹ್ಯ ಅನ್ನಿಸಿದರೂ ಇದು ನಿಜ ಸಂಗತಿ.

ಅಂದ ಹಾಗೆ, ಇಂಥ ವಿಚಿತ್ರ ಹಾಗೂ ಕ್ರಿಯೇಟಿವ್ ಐಡಿಯಾಗೆ ಕೈಹಾಕಿರೋದು ಫ್ರಾನ್ಸ್ ದೇಶದ ರಾಜಧಾನಿ ಪ್ಯಾರಿಸ್​ನ ನಿವಾಸಿ ಲೂಯಿಸ್​ ರಗೇಟ್ (Louise Raguet). ತನ್ನ ಸ್ಪೆಷಲ್​ ರೆಸಿಪಿಯಾದ ಗೋಲ್ಡಿಲಾಕ್ಸ್​ ಬ್ರೆಡ್​ (Goldilocks Bread) ತಯಾರಿಕೆಯಲ್ಲಿ ಉಪಯೋಗಿಸುವ ಗೋಧಿಯನ್ನು ಮಹಿಳೆಯರ ಮೂತ್ರ ಬಳಸಿ ಬೆಳೆಸುತ್ತಿದ್ದಾರೆ.

‘ಮೂತ್ರದಲ್ಲಿ ಉತ್ತಮ ಪೋಷಕಾಂಶಗಳಿವೆ!’ ಇದಕ್ಕಾಗಿಯೇ, ಲೂಯಿಸ್ ಸಾರ್ವಜನಿಕ ಶೌಚಾಲಯಗಳಿಂದ ಮೂತ್ರವನ್ನ ಶೇಖರಿಸುತ್ತಾರಂತೆ. ಅವರ ಪ್ರಕಾರ ಮೂತ್ರದಲ್ಲಿ ಉತ್ತಮ ಪೋಷಕಾಂಶಗಳಿವೆ. ಹೀಗಾಗಿ ಗೋಧಿ ಬೆಳೆಸಲು ಇದನ್ನು ಗೊಬ್ಬರವಾಗಿ ಬಳಸಬಹುದಂತೆ. ಹಾಗಂತ ಲೂಯಿಸ್ ಮೂತ್ರವನ್ನ ಡೈರೆಕ್ಟ್ ಆಗಿ ಗೋಧಿ ಬೆಳೆಗೆ ಸಿಂಪಡಿಸೋದಿಲ್ಲವಂತೆ. ಅದನ್ನು ಸರಿಸುಮಾರು 20 ಬಾರಿ ಸಾರಗುಂದಿಸಿ ಬಳಸುತ್ತಾರಂತೆ. ಹಾಗಾಗಿ, ಇದರಿಂದ ದುರ್ನಾತ ಸೂಸದೆ, ಸತ್ವಯುತವಾಗಿಯೇ ಉಳಿಯುತ್ತದೆ ಎಂದು ತಿಳಿದುಬಂದಿದೆ.

ಮಾನಿನಿಯರ ಮೂತ್ರವೇ ಏಕೆ ಬಳಸುವುದು? ಅಂದ ಹಾಗೆ, ಲೂಯಿಸ್ ತಮ್ಮ ಗೋಲ್ಡಿಲಾಕ್ಸ್​ ಬ್ರೆಡ್​ಗಾಗಿ ಬೆಳೆಸುವ ಗೋಧಿಗೆ ಮಾನಿನಿಯರ ಮೂತ್ರವನ್ನೇ ಬಳಸುತ್ತಾರಂತೆ. ಇದರ ಹಿಂದಿನ ಗುಟ್ಟು; ಮಹಿಳಾ ಸಬಲೀಕರಣ. ಹೌದು, ನಾರಿಯರು ಸ್ವತಂತ್ರವಾಗಿ, ಸ್ವಾವಲಂಬಿಯಾಗಿ ಬಾಳ ಬೇಕು ಎಂಬುದು ಈ ಮಾನಿನಿಯ ಮಹದಾಸೆ.

ಹೀಗಾಗಿ ಈ ಸಂದೇಶವನ್ನು ಎಲ್ಲೆಡೆ ಸಾರಲು ಲೂಯಿಸ್​ ಈ ನಿದರ್ಶನಕ್ಕೆ ಮೊರೆ ಹೋಗಿದ್ದಾರಂತೆ. ಬಟ್​, ಇದರ ಹಿಂದೆ ವೈಜ್ಞಾನಿಕ ಸಂಶೋಧನೆ ಸಹ ಅಡಗಿದೆ. ಫ್ರಾನ್ಸ್​ನ ನಗರ ಯೋಜನಾ ಸಂಸ್ಥೆ ನಡೆಸಿರುವ ಅಧ್ಯಯನದ ಪ್ರಕಾರ ದೇಶದಲ್ಲಿ ಶೇಖರಿಸಿದ ಮೂತ್ರದಿಂದ ಪ್ರತಿನಿತ್ಯ ಬರೋಬ್ಬರಿ 30 ಮಿಲಿಯನ್​ ಬ್ರೆಡ್​ ತಯಾರಿಸಬಹುದಂತೆ.

ಜೊತೆಗೆ, ರಾಸಾಯನಿಕ ಗೊಬ್ಬರದ ಮೇಲಿರುವ ಅವಲಂಬನೆ ಸಹ ತಗ್ಗುತ್ತದೆ. ಒಟ್ನಲ್ಲಿ, ಸ್ತ್ರೀಶಕ್ತಿಯನ್ನ ಸಾರಲು ಲೂಯಿಸ್​ ಹಿಡಿದಿರುವ ಈ ಹಾದಿಯಲ್ಲಿ ನಾರಿಯರು ಮೂಗು ಮುಚ್ಚಿಕೊಂಡು ಅಲ್ಲ, ತಲೆ ಎತ್ತಿಕೊಂಡು ಓಡಾಡಬೇಕೆಂಬುದು ಅವರ ಮಹದಾಸೆಯಂತೆ!

ವೈಕುಂಠ ಏಕಾದಶಿ, ಚಿಕ್ಕತಿರುಪತಿಯ ವೆಂಕಟೇಶ್ವರನಿಗೆ ವಿಶೇಷ ಪೂಜೆ
ವೈಕುಂಠ ಏಕಾದಶಿ, ಚಿಕ್ಕತಿರುಪತಿಯ ವೆಂಕಟೇಶ್ವರನಿಗೆ ವಿಶೇಷ ಪೂಜೆ
Video: ರೈಲಿನಲ್ಲಿ ಕುಡುಕ ಪ್ರಯಾಣಿಕ ಹಾಗೂ ಟಿಟಿಇ ನಡುವೆ ಹೊಡೆದಾಟ
Video: ರೈಲಿನಲ್ಲಿ ಕುಡುಕ ಪ್ರಯಾಣಿಕ ಹಾಗೂ ಟಿಟಿಇ ನಡುವೆ ಹೊಡೆದಾಟ
‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?
‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್