AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹಗುರ, ಆಕರ್ಷಕ, ನೈಸರ್ಗಿಕ ನೀರಿನ ಬಾಟಲ್​ಗಳಿವು, ನೋಡ್ತಿದ್ರೆ ಮನ ಸೋತ ಬಿಡ್ತೀರ!

ತ್ರಿಪುರ: ಈಗ ಎಲ್ಲಿ ನೋಡಿದ್ರೂ ಪ್ಲಾಸ್ಟಿಕ್ ವಸ್ತುಗಳನ್ನ ನಿಷೇಧಿಸಿ ಎನ್ನುವ ಮಾತು ಕೇಳಿ ಬರುತ್ತಿವೆ. ಹಾಗೇನೆ ಆರ್ಗಾನಿಕ್ ವಸ್ತುಗಳಿಗೆ ಬೇಡಿಕೆ ಹೆಚ್ಚಾಗುತ್ತಿದೆ. ಹೀಗಾಗಿ ಈ ಟ್ರೆಂಡ್ ಅನ್ನು ಸದುಪಯೋಗಪಡಿಸಿಕೊಳ್ಳಲು ತ್ರಿಪುರ ಸರ್ಕಾರ ಮುಂದಾಗಿದೆ. ಹೌದು ಈಶಾನ್ಯ ರಾಜ್ಯಗಳ ನೈಸರ್ಗಿಕ ಸಂಪದ್ಭರಿತ ರಾಜ್ಯಗಳಲ್ಲಿ ಒಂದಾಗಿರುವ ತ್ರಿಪುರ, ತನ್ನಲ್ಲಿರುವ ಅಪಾರ ನೈಸರ್ಗಿಕ ಸಂಪತ್ತನ್ನು ಹಾಳು ಮಾಡದೆ ಸದ್ವಿನಿಯೋಗಿಸಲು ಮುಂದಾಗಿದೆ. ರಾಜ್ಯದಲ್ಲಿ ಅಪಾರ ಪ್ರಮಾಣದಲ್ಲಿರುವ ಬಿದಿರು ಬಂಬೂಗಳನ್ನು ಹಾಳಾಗಲು ಬಿಡದೆ ಅವುಗಳಿಂದ ವಿವಿಧ ವಸ್ತುಗಳನ್ನ ತಯಾರಿಸಲು ಮುಂದಾಗಿದೆ. ಈ ಸಂಬಂಧ ತ್ರಿಪುರದ […]

ಹಗುರ, ಆಕರ್ಷಕ, ನೈಸರ್ಗಿಕ ನೀರಿನ ಬಾಟಲ್​ಗಳಿವು, ನೋಡ್ತಿದ್ರೆ ಮನ ಸೋತ ಬಿಡ್ತೀರ!
Follow us
Guru
| Updated By: ಸಾಧು ಶ್ರೀನಾಥ್​

Updated on:Jul 15, 2020 | 5:30 PM

ತ್ರಿಪುರ: ಈಗ ಎಲ್ಲಿ ನೋಡಿದ್ರೂ ಪ್ಲಾಸ್ಟಿಕ್ ವಸ್ತುಗಳನ್ನ ನಿಷೇಧಿಸಿ ಎನ್ನುವ ಮಾತು ಕೇಳಿ ಬರುತ್ತಿವೆ. ಹಾಗೇನೆ ಆರ್ಗಾನಿಕ್ ವಸ್ತುಗಳಿಗೆ ಬೇಡಿಕೆ ಹೆಚ್ಚಾಗುತ್ತಿದೆ. ಹೀಗಾಗಿ ಈ ಟ್ರೆಂಡ್ ಅನ್ನು ಸದುಪಯೋಗಪಡಿಸಿಕೊಳ್ಳಲು ತ್ರಿಪುರ ಸರ್ಕಾರ ಮುಂದಾಗಿದೆ.

ಹೌದು ಈಶಾನ್ಯ ರಾಜ್ಯಗಳ ನೈಸರ್ಗಿಕ ಸಂಪದ್ಭರಿತ ರಾಜ್ಯಗಳಲ್ಲಿ ಒಂದಾಗಿರುವ ತ್ರಿಪುರ, ತನ್ನಲ್ಲಿರುವ ಅಪಾರ ನೈಸರ್ಗಿಕ ಸಂಪತ್ತನ್ನು ಹಾಳು ಮಾಡದೆ ಸದ್ವಿನಿಯೋಗಿಸಲು ಮುಂದಾಗಿದೆ. ರಾಜ್ಯದಲ್ಲಿ ಅಪಾರ ಪ್ರಮಾಣದಲ್ಲಿರುವ ಬಿದಿರು ಬಂಬೂಗಳನ್ನು ಹಾಳಾಗಲು ಬಿಡದೆ ಅವುಗಳಿಂದ ವಿವಿಧ ವಸ್ತುಗಳನ್ನ ತಯಾರಿಸಲು ಮುಂದಾಗಿದೆ. ಈ ಸಂಬಂಧ ತ್ರಿಪುರದ ಬಂಬೂ ಮತ್ತು ಕರಕುಶಲ ವಸ್ತುಗಳ ಅಭಿವೃದ್ಧಿ ಸಂಸ್ಥೆ ಬಿದಿರು ಬಂಬೂಗಳಿಂದ ಬಗೆ ಬಗೆಯ ನೀರಿನ ಬಾಟಲ್‌ಗಳನ್ನು ತಯಾರಿಸುತ್ತಿದೆ.

ಬಿದಿರು ಬಂಬೂವಿನಿಂದ ಬಗೆ ಬಗೆಯ ವಾಟರ್ ಬಾಟಲ್ ಈ ಬಂಬೂಗಳಿಂದ ತಯಾರಾಗಿರುವ ವಾಟರ್ ಬಾಟಲ್‌ಗಳು ನೈಸರ್ಗಿಕ ಮತ್ತು ನೀರನ್ನು ಅದರ ಸಹಜ ಉಷ್ಣತೆಯಲ್ಲಿಯೇ ಇಡುತ್ತವೆ. ಚಳಿಗೆ ತಂಪಾಗುವುದಿಲ್ಲ, ಬಿಸಿಲಿಸಿಗೆ ಬಿಸಿಯಾಗುವುದಿಲ್ಲ. ಹೆಚ್ಚಿನ ಭಾರವಿಲ್ಲ. ಹಾಗೇನೆ ಯಾವುದೇ ರೀತಿಯ ಕೆಮಿಕಲ್ಸ್ ಕೂಡಾ ಇಲ್ಲ. ಸಹಜ ಮತ್ತು ನೈಸರ್ಗಿಕವಾಗಿ ತಯಾರಾಗುವ ಈ ಬಂಬೂ ಬಾಟಲ್‌ಗಳು ವಿವಿಧ ಆಕಾರದಲ್ಲಿ ಮತ್ತು ನೋಡಲು ಸುಂದರವಾಗಿ ಕಾಣುವಂತೆ ಕರಕುಶಲಕರ್ಮಿಗಳು ತಯಾರಿಸಿದ್ದಾರೆ. ಯಾವುದೆ ಮಲ್ಟಿ ನ್ಯಾಷನಲ್ ಕಂಪನಿಗಳ ಉತ್ಪನ್ನಗಳಿಗೂ ಕಡಿಮೆಯಿಲ್ಲದಂತೆ ಸರಿಸಾಟಿಯಾಗಿ ತಯಾರಿಸಲಾಗಿದೆ.

ಸ್ಥಳೀಯ ಕರಕುಶಲ ಕರ್ಮಿಗಳಿಗೆ ಉದ್ಯೋಗ ಹೀಗೆ ಸಜಜವಾಗಿಯೇ ಲಭ್ಯವಿರುವ ಬಂಬೂವಿನಿಂದ ಅಗತ್ಯವಿರುವ ವಸ್ತುಗಳನ್ನ ನೈಸರ್ಗಿಕವಾಗಿ ತಯಾರಿಸುವ ಮೂಲಕ ತ್ರಿಪುರ ಸರ್ಕಾರ ತನ್ನ ಜನರಿಗೆ ಉದ್ಯೋಗವನ್ನು ನೀಡಿದೆ. ಹಾಗೇನೆ ರಾಜ್ಯದ ಬೊಕ್ಕಸಕ್ಕೆ ಆದಾಯವೂ ಸಿಗುತ್ತದೆ. ಜೊತೆಗೆ ಪ್ರತಿಯೊಬ್ಬರಿಗೂ ಅವಶ್ಯವಿರುವ, ಅದ್ರಲ್ಲೂ ಕೊರೊನಾದಂಥ ಸಮಯದಲ್ಲಿ ಪ್ರತಿಯೊಬ್ಬರು ವೈಯಕ್ತಿಕವಾಗಿ ಹೊಂದಲೇ ಬೇಕಾದ ನೀರಿನ ಬಾಟಲ್‌ಗಳನ್ನ ತಯಾರಿಸುವ ಮೂಲಕ ಸಮಯ ಮತ್ತು ತನ್ನಲ್ಲಿರುವ ಸಂಪತ್ತನ್ನು ಸಕಾಲದಲ್ಲಿ ಸದ್ವಿನಿಯೋಗ ಪಡಿಸಿಕೊಳ್ಳುತ್ತಿದೆ.

Published On - 5:28 pm, Wed, 15 July 20