ಚಳಿಗಾಲ ಶುರುವಾಯಿತೆಂದರೆ ಸಾಕು ಕೆಲವರಿಗೆ ಶೀತ, ಕೆಮ್ಮು, ಆಗಾಗ ಸೀನು ಬರುವಂತಹ ಸಮಸ್ಯೆಗಳು ಶುರುವಾಗುವುದು. ಈ ರೀತಿಯ ಅಲರ್ಜಿ ಸಮಸ್ಯೆ ಚಳಿಗಾಲ ಮುಗಿಯುವವರೆಗೆ ಇರುತ್ತದೆ. ಅಲರ್ಜಿ ಉಂಟಾದರೆ ಕೆಮ್ಮು, ಮೂಗು ಸೋರುವುದು, ಕಣ್ಣಿನಲ್ಲಿ ನೀರು ಬರುವುದು ಹೀಗೆ ನಾನಾ ಸಮಸ್ಯೆ ಕಂಡು ಬರುತ್ತದೆ. ಈ ಅಲರ್ಜಿ ಸಮಸ್ಯೆ ಹೊರಗಡೆಯಿಂದ ಬರುವುದಕ್ಕಿಂತ ಮನೆಯೊಳಗಡೆಯಿಂದಲೇ ಹೆಚ್ಚಾಗಿ ಉಂಟಾಗುವುದು.
ಮನೆಯಲ್ಲಿ ಶೀತ ಇರುವ ಸ್ಥಳ ಮನೆಯ ನೆಲ್ಲಿಯಲ್ಲಿ ಸೋರಿಕೆಯಿದ್ದರೆ, ಸಿಂಕ್, ಬಾತ್‌ರೂಂ ಸರಿಯಾಗಿ ಸ್ವಚ್ಛ ಮಾಡದಿದ್ದರೆ ಆ ಜಾಗದಲ್ಲಿ ಬ್ಯಾಕ್ಟಿರಿಯಾಗಳು ಉತ್ಪತ್ತಿಯಾಗಿ ಇದರಿಂದ ಅಲರ್ಜಿ ಉಂಟಾಗುವುದು. ಮನೆಯಲ್ಲಿ ಕತ್ತಲಿರುವ ಹಾಗೂ ತೇವಾಂಶವಿರುವ ಸ್ಥಳದಿಂದ ಕೂಡ ಅಲರ್ಜಿ ಸಮಸ್ಯೆ ಉಂಟಾಗುವುದು.
ಜಿರಳೆ ಅಲರ್ಜಿ ಮನೆಯ ಮೂಲೆಗಳಲ್ಲಿ ಹಾಗು ಕತ್ತಲೆ ಇರುವ ಜಾಗದಲ್ಲಿ ಜಿರಳೆಗಳು ಅವಿತು ಕುಳಿತುಕೊಂಡಿರುತ್ತದೆ. ಇದರಿಂದಾಗಿ ಅಲರ್ಜಿ ಸಮಸ್ಯೆ ಉಂಟಾಗುವುದು. ಮನೆಯಲ್ಲಿ ತಿಂದ ಆಹಾರವನ್ನು ಸ್ವಚ್ಛ ಮಾಡದೆ ಹಾಗೆ ಬಿಡುವುದು, ಮನೆ ಸ್ವಚ್ಛ ಮಾಡದೆ ಇರುವುದು ಇವುಗಳಿಂದ ಜಿರಳೆ ಸಮಸ್ಯೆ ಹೆಚ್ಚುವುದು.
ಅಲರ್ಜಿಯ ಲಕ್ಷಣಗಳು:
ಇನ್ನು ಅಲರ್ಜಿ ಹೆಚ್ಚಾದರೆ ಕಂಡು ಬರುವ ಲಕ್ಷಣಗಳೆಂದರೆ ಉಸಿರಾಟದ ತೊಂದರೆ, ಅಸ್ತಮಾ, ಸುಸ್ತು, ವೇಗವಾಗಿ ಉಸಿರಾಡುವುದು ಮತ್ತು ತುಂಬಾ ಸುಸ್ತಾಗುವುದು.
ಅಲರ್ಜಿ ಮತ್ತು ಶೀತ ಅಲರ್ಜಿ ಹಾಗೂ ಶೀತ:
ಶೀತ ವೈರಸ್‌ನಿಂದ ಹರಡುತ್ತದೆ. ಶೀತ ಒಬ್ಬರಿಂದ ಮತ್ತೊಬ್ಬರಿಗೆ ಹರಡುತ್ತದೆ. ನಮ್ಮ ದೇಹದ ಮೂಗಿನಲ್ಲಿ ಹಿಸ್ಟಾಮೈನ್ ಎಂಬ ಸಾವಯವ ಸಾರಜನಕ ಸಂಯುಕ್ತ ಬಿಡುಗಡೆಯಾಗುತ್ತದೆ, ಇದು ರೋಗ ನಿರೋಧಕ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ. ಅಲರ್ಜಿ ಉಂಟಾದಾಗ ಇದರ ಸಾಮರ್ಥ್ಯ ಕಡಿಮೆಯಾಗಿ ಕಾಯಿಲೆಗಳು ಕಾಣಿಸಿಕೊಳ್ಳುತ್ತವೆ.
ಶೀತದ ಲಕ್ಷಣಗಳು ತುಂಬಾ ದಿನದವರೆಗೆ ಇರುತ್ತದೆ . ಶೀತ ಯಾವಾಗ ಬೇಕಾದರೂ ಬರಬಹುದು, ಅದರೆ ಚಳಿಗಾಲದಲ್ಲಿ ಹೆಚ್ಚಾಗಿ ಕಂಡು ಬರುತ್ತದೆ. ಸೋಂಕು ಆದ ಕೆಲವು ದಿನದ ಬಳಿಕ ಆರೋಗ್ಯ ಸಮಸ್ಯೆ ಕಾಡುವುದು. ಮೈಕೈ ನೋವು, ಜ್ವರ ಬರುವುದು, ಕೆಮ್ಮು, ಮೂಗು ಸೊರುವುದು, ಗಂಟಲು ಕೆರೆತ ಉಂಟಾಗುವುದು. ಹಾಗೆಯೇ ಕಣ್ಣಿನಲ್ಲಿ ನೀರು ಬರುವುದು.
ಚಿಕಿತ್ಸೆ:
ವೈದ್ಯರ ಸಲಹೆ ಪಡೆದು ಮೂಗಿನ ಡ್ರಾಪ್ (Nasal Spray) ಬಳಸಬಹುದು. ಜಲನೇತಿ ಚಿಕಿತ್ಸೆ ಪಡೆಯಬಹುದು. ಈ ಚಿಕಿತ್ಸೆಯಲ್ಲಿ ಒಂದು ಮೂಗಿನ ಹೊಳ್ಳೆ ಮುಲಕ ಶುದ್ದ ನೀರನ್ನು ಹಾಕಿ ಮತ್ತೊಂದು ಮೂಗಿನ ಹೊಳ್ಳೆ ಮುಖಾಂತರ ಬಿಡುವುದು. ಈ ಚಿಕಿತ್ಸೆ ಮಾಡುವಾಗ ಪರಿಣಿತರ ಸಲಹೆ ಪಡೆದುಕೊಳ್ಳಿ. ಅಲರ್ಜಿ ಸಮಸ್ಯೆ ತುಂಬಾ ಸಮಯದಿಂದ ಕಾಡುತ್ತಿದ್ದರೆ ವೈದ್ಯರು ಬಳಿ ಚಿಕಿತ್ಸೆ ಪಡೆದು ಮಾತ್ರೆಗಳನ್ನು ತೆಗೆದುಕೊಳ್ಳಬಹುದು.
ಅಲರ್ಜಿ ತಡೆಗ್ಟಟುವುದು ಹೇಗೆ?
Published On - 10:05 pm, Thu, 14 November 19