ಮನೆ ಮದ್ದು ಎನ್ನುವುದು ಒಂದು ಸುಲಭ ಆರೈಕೆ ವಿಧಾನ. ಸಾಮಾನ್ಯವಾಗಿ ಬಹುತೇಕ ಅನಾರೋಗ್ಯಗಳಿಗೆ ಮನೆಮದ್ದನ್ನು ಬಳಸುವ ಮೂಲಕವೇ ಆರೈಕೆಯನ್ನು ಮಾಡಲಾಗುತ್ತದೆ. ಈ ವಿಧಾನವು ಪುರಾತನ ಕಾಲದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಅನುಸರಿಸುತ್ತಿದ್ದರು. ಮನೆ ಮದ್ದು ಎಂದರೆ ಸಾಮಾನ್ಯವಾಗಿ ನಾವು ಮನೆಯಲ್ಲಿ ಬಳಸುವ ಆಹಾರದ ಉತ್ಪನ್ನಗಳು, ತರಕಾರಿಗಳು, ಗಿಡಮೂಲಿಕೆಗಳು, ಹಣ್ಣು-ಹಂಪಲು ಹೀಗೆ ವಿವಿಧ ಆರೋಗ್ಯಕರ ಉತ್ಪನ್ನಗಳನ್ನು ಬಳಸುವುದರ ಮೂಲಕ ವಿವಿಧ ಔಷಧಗಳನ್ನು ತಯಾರಿಸಲಾಗುತ್ತದೆ. ಉದಾಹರಣೆಗೆ ಕಷಾಯ, ಲೇಪನ, ಎಣ್ಣೆ, ಚೂರ್ಣ ಹೀಗೆ ವಿವಿಧ ರೀತಿಯಲ್ಲಿ ಔಷಧಗಳನ್ನು ತಯಾರಿಸಿ ಸೇವಿಸುವ ವಿಧಾನ.
ಆದರೆ ಇತ್ತೀಚೆಗೆ ಕೆಲವರು ಮನೆಯಲ್ಲಿ ಸಿಗುವ ರಾಸಾಯನಿಕ ಉತ್ಪನ್ನಗಳನ್ನು ಹಾಗೂ ಔಷಧಿಯ ಉತ್ಪನ್ನಗಳನ್ನು ವಿವಿಧ ಉಪಯೋಗಕ್ಕೆ ಬಳಸುವುದರ ಮೂಲಕ ಮನೆ ಮದ್ದು ಎನ್ನುವ ಧೋರಣೆಯನ್ನು ಹೊಂದುತ್ತಿದ್ದಾರೆ. ಅಂತಹ ಕೆಲವು ಅನಾರೋಗ್ಯಕರವಾದ ಮನೆ ಮದ್ದು ಅಭ್ಯಾಸಗಳನ್ನು ಈ ಮುಂದೆ ವಿವರಿಸಲಾಗಿದೆ. ಅವುಗಳ ಬಳಕೆ ನಿಮಗೆ ಆರಂಭದಲ್ಲಿ ಉತ್ತಮ ಫಲಿತಾಂಶವನ್ನು ನೀಡುತ್ತವೆ ಎನ್ನುವ ಭಾವನೆಯನ್ನು ಮೂಡಿಸಬಹುದು. ಆದರೆ ಅವು ಸಾಕಷ್ಟು ದುಷ್ಪರಿಣಾಮಗಳನ್ನು ನಿಮ್ಮ ಮೇಲೆ ಉಂಟುಮಾಡುತ್ತವೆ ಎನ್ನುವುದನ್ನು ಮರೆಯಬಾರದು.
ಸಾಮಾನ್ಯವಾಗಿ ಮೊಟ್ಟೆಯ ಬಿಳಿಭಾಗವು ಸಾಕಷ್ಟು ಮನೆ ಮದ್ದುಗಳ ಬಳಕೆಗೆ ಬಳಸಲಾಗುತ್ತದೆ. ಇದು ಕೇಶರಾಶಿಗೆ ಹಾಗೂ ಚರ್ಮದ ಆರೋಗ್ಯಕ್ಕೆ ಅತ್ಯುತ್ತಮವಾಗಿ ಸಾತ್ ನೀಡುವುದು ಎನ್ನುವ ನಂಬಿಕೆ ಪುರಾತನ ಕಾಲದಿಂದಲೂ ಇದೆ. ಆದರೆ ಇದಕ್ಕೆ ವಿರುದ್ಧವಾಗಿ ಹೇಳುವುದೇನೆಂದರೆ ಇದು ಚರ್ಮದ ಆರೋಗ್ಯ ಸುಧಾರಣೆಗೆ ಸಹಾಯ ಮಾಡದು ಎಂದು. ವಾಸ್ತವವಾಗಿ ಮೊಟ್ಟೆಯ ಬಿಳಿ ಭಾಗವು ಸಾಲ್ಮೊನೆಲ್ಲಾ ಸೋಂಕಿನ ಅಪಾಯವನ್ನು ತರಬಹುದು. ಇದು ಅತಿಸಾರ, ಜ್ವರ ಮತ್ತು ಹೊಟ್ಟೆಯ ಸೆಳೆತಕ್ಕೆ ಕಾರಣವಾಗಬಹುದು.
Published On - 3:46 pm, Mon, 14 October 19