ಅತ್ಯಮೂಲ್ಯ ಜೀವಜಲಕ್ಕೂ ಇದೆ ಎಕ್ಸ್​ಪೈರಿ ಡೇಟ್!

| Updated By: ಆಯೇಷಾ ಬಾನು

Updated on: Nov 23, 2020 | 12:18 PM

ನಾವು ತಿನ್ನುವ ಅಹಾರ, ತೆಗೆದುಕೊಳ್ಳುವ ಮಾತ್ರೆ ಇವುಗಳಿಗೆಲ್ಲಾ ಎಕ್ಸ್‌ಪೆರಿ ಡೇಟ್ ಅನ್ನೋದು ಇದೆ. ಯಾವುದೇ ವಸ್ತುವೇ ಆಗಲಿ ಅವಧಿ ಮುಗಿದ ಬಳಿಕವೂ ತಿಂದರೆ ವಿಷವಾಗುತ್ತೆ. ಹಾಗೆ ನಾವು ಕುಡಿಯುವ ನೀರಿಗೆ ಎಕ್ಸ್‌ಪೆರಿ ಡೇಟ್‌ ಎಂಬುವುದು ಇದೆಯೇ? ನೀರನ್ನು ಸಂಗ್ರಹಿಸಿಟ್ಟು ಬಳಸುವುದಾದರೆ ಎಷ್ಟು ದಿನಗಳವರೆಗೆ ಆ ನೀರು ಕುಡಿಯಲು ಯೋಗ್ಯವಾಗಿರುತ್ತದೆ, ನಲ್ಲಿಯಲ್ಲಿ ಬರುವ ನೀರನ್ನು ಎಷ್ಟು ಸಮಯದವರೆಗೆ ಬಳಸಬಹುದು, ಬಾಟಲಿನಲ್ಲಿ ಸಂಗ್ರಹಿಸಿದ ಶುದ್ಧೀಕರಿಸಿದ ನೀರು ಎಷ್ಟು ಸಮಯದವರೆಗೆ ಕುಡಿಯಲು ಯೋಗ್ಯವಾಗಿರುತ್ತದೆ? ಇನ್ನು ನೀರನ್ನು ಕುಡಿಯಲು ಯೋಗ್ಯವಾಗಿರುವಂತೆ ಸಂಗ್ರಹಿಸುವುದು ಹೇಗೆಲ್ಲಾ […]

ಅತ್ಯಮೂಲ್ಯ ಜೀವಜಲಕ್ಕೂ ಇದೆ ಎಕ್ಸ್​ಪೈರಿ ಡೇಟ್!
Follow us on

ನಾವು ತಿನ್ನುವ ಅಹಾರ, ತೆಗೆದುಕೊಳ್ಳುವ ಮಾತ್ರೆ ಇವುಗಳಿಗೆಲ್ಲಾ ಎಕ್ಸ್‌ಪೆರಿ ಡೇಟ್ ಅನ್ನೋದು ಇದೆ. ಯಾವುದೇ ವಸ್ತುವೇ ಆಗಲಿ ಅವಧಿ ಮುಗಿದ ಬಳಿಕವೂ ತಿಂದರೆ ವಿಷವಾಗುತ್ತೆ. ಹಾಗೆ ನಾವು ಕುಡಿಯುವ ನೀರಿಗೆ ಎಕ್ಸ್‌ಪೆರಿ ಡೇಟ್‌ ಎಂಬುವುದು ಇದೆಯೇ? ನೀರನ್ನು ಸಂಗ್ರಹಿಸಿಟ್ಟು ಬಳಸುವುದಾದರೆ ಎಷ್ಟು ದಿನಗಳವರೆಗೆ ಆ ನೀರು ಕುಡಿಯಲು ಯೋಗ್ಯವಾಗಿರುತ್ತದೆ, ನಲ್ಲಿಯಲ್ಲಿ ಬರುವ ನೀರನ್ನು ಎಷ್ಟು ಸಮಯದವರೆಗೆ ಬಳಸಬಹುದು, ಬಾಟಲಿನಲ್ಲಿ ಸಂಗ್ರಹಿಸಿದ ಶುದ್ಧೀಕರಿಸಿದ ನೀರು ಎಷ್ಟು ಸಮಯದವರೆಗೆ ಕುಡಿಯಲು ಯೋಗ್ಯವಾಗಿರುತ್ತದೆ? ಇನ್ನು ನೀರನ್ನು ಕುಡಿಯಲು ಯೋಗ್ಯವಾಗಿರುವಂತೆ ಸಂಗ್ರಹಿಸುವುದು ಹೇಗೆಲ್ಲಾ ಹಲವಾರು ಪ್ರಶ್ನೆಗಳಿವೆ. ಅದಕ್ಕೆ ಉತ್ತರ ಇಲ್ಲಿವೆ.

ಸಂಗ್ರಹಿಸಿಟ್ಟ ನಲ್ಲಿ ನೀರು:
ನಲ್ಲಿಯಲ್ಲಿ ಬಂದಂತಹ ಕುಡಿಯಲು ಯೋಗ್ಯವಾದ ನೀರನ್ನು ಸಂಗ್ರಹಿಸಿಟ್ಟರೆ ಅದನ್ನು ಆರು ತಿಂಗಳವರೆಗೆ ಕುಡಿಯಬಹುದು. ಇದು ಸಂಶೋಧನೆಯಿಂದ ಕೂಡ ದೃಢಪಟ್ಟಿದೆ. ಆದರೆ, ನೀವೇನಾದ್ರೂ ಕಾರ್ಬೋನೇಟ್ ನಲ್ಲಿ ನೀರನ್ನು ಸ್ವಲ್ಪ ದಿನ ಇಟ್ಟರೆ ಅದರ ರುಚಿಯಲ್ಲಿ ಬದಲಾವಣೆ ಉಂಟಾಗುವುದು.

ಆದರೆ ಕಾರ್ಬೋನೇಟ್‌ನಿಂದಾಗಿ ರುಚಿಯಲ್ಲಿ ಸ್ವಲ್ಪ ವ್ಯತ್ಯಾಸ ಅನಿಸಿದರೂ ಈ ನೀರು ಆರು ತಿಂಗಳವರೆಗೆ ಕುಡಿಯಲು ಯೋಗ್ಯವಾಗಿರುತ್ತದೆ. ನೀರನ್ನು ದೀರ್ಘಕಾಲದವರೆಗೆ ಸಂಗ್ರಹಿಸಿಡಲು ಶುದ್ಧವಾದ ಡಬ್ಬ ಅಥವಾ ಡ್ರಮ್‌ನಲ್ಲಿ ಸಂಗ್ರಹಿಸಿಡಬೇಕು, ಹಾಗೂ ನೀರು ಸಂಗ್ರಹಿಸಿಟ್ಟ ಸ್ಥಳ ತಂಪಾಗಿರಬೇಕು, ಬೆಳಕು ಬೀಳುವಂತಿರಬಾರದು, ಹಾಗಿದ್ದರೆ ತುಂಬಾ ದಿನಗಳವರೆಗೆ ನಲ್ಲಿ ನೀರು ಕುಡಿಯಲು ಯೋಗ್ಯವಾಗಿರುತ್ತದೆ.

ಕುಡಿಯುವ ನೀರಿಗೆ ಎಕ್ಸ್ ಪರಿ ಡೇಟ್:
ಕುಡಿಯುವ ನೀರಿಗೆ ಎಕ್ಸ್ ಪರಿ ಡೇಟ್ ಹಾಕುವ ಪರಿಪಾಠ ಶುರುವಾಗಿದ್ದು 1987ರಲ್ಲಿ, ಅಮೆರಿಕದ ನ್ಯೂಜೆರ್ಸಿಯಲ್ಲಿ. ಆ ಪ್ರಕಾರ ಕುಡಿಯುವ ಬಾಟಲಿ ನೀರಿಗೂ ಎಕ್ಸ್ ಪೆರಿ ಡೇಟ್‌ ಹಾಕಲಾಯಿತು. ಸಾಮಾನ್ಯವಾಗಿ ನೀರನ್ನು ಗಾಜಿನ ಬಾಟಲಿನಲ್ಲಿ ಸಂಗ್ರಹಿಸಿಟ್ಟರೆ ಆ ನೀರನ್ನು ಎರಡು ವರ್ಷದವರೆಗೆ ಬಳಸಬಹುದಂತೆ.

ಆದರೆ ಪ್ಲಾಸ್ಟಿಕ್ ಬಾಟಲಿನ ನೀರನ್ನು ಆರು ತಿಂಗಳ ಬಳಿಕ ಬಳಸುವುದು ಅಷ್ಟೊಂದು ಆರೋಗ್ಯಕರವಲ್ಲ. ಏಕೆಂದರೆ ನೀರು ಕುಡಿಯಲು ಯೋಗ್ಯವಿಲ್ಲ ಎನ್ನುವುದಕ್ಕಿಂತ ಪ್ಲಾಸ್ಟಿಕ್‌ ಬಾಟಲಿನ ರಾಸಾಯನಿಕಗಳು ನೀರಿನ ಜೊತೆ ಬೆರೆಯುವ ಸಾಧ್ಯತೆ ಇರುವುದರಿಂದ ನೀರು ಕುಡಿಯಲು ಯೋಗ್ಯವಾಗುವುದಿಲ್ಲ. ಪ್ರತಿನಿತ್ಯ ಪ್ಲಾಸ್ಟಿಕ್ ಬಾಟಲ್ ನೀರು ಕುಡಿಯುವುದು ಆರೋಗ್ಯಕ್ಕೂ ಒಳ್ಳೆಯದಲ್ಲ.

ಬಾಟಲಿ ನೀರು:
ನಾವೆಲ್ಲಾ ಬಾಟಲಿನಲ್ಲಿ ಸಿಗುವ ನೀರು ಆರೋಗ್ಯಕರವೆಂದೇ ಭಾವಿಸುತ್ತೇವೆ. ಆದರೆ ಪ್ರತಿನಿತ್ಯ ಬಾಟಲಿ ನೀರು ಕುಡಿಯುವುದು ಆರೋಗ್ಯಕರವಲ್ಲ. ಬಾಟಲಿ ನೀರು ಕುಡಿಯುವುದರಿಂದ ದೇಹಕ್ಕೆ ರಾಸಾಯನಿಕಗಳು ಸೇರಿ ರೋಗ ಬರುತ್ತದೆ ಎಂದು ಬಾಬಾ ಅಟೋಮಿಕ್ ರಿಸರ್ಚ್‌ ಸೆಂಟರ್ ಹೇಳಿದೆ. ನಾವು ಶುದ್ಧ ನೀರೆಂದು ಪ್ರತಿದಿನ ಕುಡಿಯುವುದರಿಂದ ಆರೋಗ್ಯ ಹಾಳಾಗುವುದು.

ಏಕೆಂದರೆ ಬಾಟಲಿ ನೀರನ್ನು ಶುದ್ಧೀಕರಿಸುವ ವೇಳೆ ರಾಸಾಯನಿಕಗಳನ್ನು ಬೆರೆಸುತ್ತಾರೆ. ಆ ನೀರಿನಲ್ಲಿ ಆರೋಗ್ಯಕ್ಕಿಂತ ಅನಾರೋಗ್ಯಕರ ಅಂಶವೇ ಹೆಚ್ಚಿರುತ್ತದೆ. ನೀರಿಗಿಂತ ತಾಮ್ರದ ಬಾಟಲಿನಲ್ಲಿ ಅಥವಾ ಮಣ್ಣಿನ ಮಡಕೆಯಲ್ಲಿ ನೀರು ತುಂಬಿ ಕುಡಿಯುವುದು ಆರೋಗ್ಯಕರ. ನೀರು ಜೀವಜಲವಾಗಿರುವ ಕಾರಣ, ಅದನ್ನು ಬಳಸುವಾಗ ಬಹಳ ಎಚ್ಚರವಾಗಿರಬೇಕು. ನಾವು ಕುಡಿಯುವ ನೀರೇ ನಮ್ಮ ಜೀವಕ್ಕೆ ಮಾರಕವಾಗಬಾರದು. ನೀರು ಬಳಸುವಾಗಲೂ ಎಚ್ಚರ.

Published On - 4:19 pm, Wed, 5 February 20