ಮುಖದ ಮೇಲೆ ತುಂಬಾ ಸಣ್ಣ ಸಣ್ಣ ಮಚ್ಚೆಗಳು ಆವರಿಸಿಕೊಂಡು ಬಿಡುವುದನ್ನು ಫ್ರೆಕಲ್ಸ್ ಎಂದು ಕರೆಯಲಾಗುತ್ತದೆ. ಇದು ಕೆಲವೊಂದು ಜನರ ಮುಖದ ಮೇಲೆ ಕಾಣಿಸಿಕೊಳ್ಳುವುದು. ಹೆಚ್ಚಿನವರಿಗೆ ಇದು ಸೌಂದರ್ಯವನ್ನು ಕೆಡಿಸುವುದು ಎನ್ನುವಂತಹ ಭಾವನೆಯಿದೆ. ಆದರೆ ಅದನ್ನು ಸರಿಯಾಗಿ ಗಮನಿಸಿದರೆ ಕೆಲವೊಂದು ಸಂದರ್ಭದಲ್ಲಿ ಇದು ಸೌಂದರ್ಯವನ್ನು ಹೆಚ್ಚಿಸುವುದು. ಫ್ರೆಕಲ್ಸ್ ಎನ್ನುವುದು ಕೆಟ್ಟದಲ್ಲ. ಗುರುತಿಸುವವರಿದ್ದರೆ ಇದು ತುಂಬಾ ಸುಂದರ ಹಾಗೂ ಅದ್ಭುತವಾಗಿರುವುದು. ಮುಖದ ಮೇಲೆ ಹಾಗೂ ಗಲ್ಲದ ಮೂಳೆ ಮೇಲೆ ಸ್ವಲ್ಪ ಫ್ರೆಕಲ್ ಗಳು ಇದ್ದರೆ ಆಗ ಸೌಂದರ್ಯ ಮತ್ತಷ್ಟು ಎದ್ದು ಕಾಣುವುದು. ಇದರಿಂದ ಮುಖಕ್ಕೆ ಮತ್ತಷ್ಟು ಆಕರ್ಷಣೆ ಸಿಗುವುದು.
ನಕಲಿ ಫ್ರೆಕಲ್ಸ್ ಮೇಕಪ್ ನಿಂದ ಮುಖದ ಕಾಂತಿ ಹೆಚ್ಚಿಸಿಕೊಳ್ಳಿ
ಮನೆಯಲ್ಲಿಯೂ ನಕಲಿ ಫ್ರೆಕಲ್ಸ್ ಮಾಡಿಕೊಳ್ಳಬಹುದು
ಮಾಡುವ ವಿಧಾನ: ಮೊದಲಿಗೆ ಫೇಸ್ ವಾಶ್ ಅಥವಾ ಸೋಪ್ ಹಾಕಿಕೊಂಡು ಮುಖವನ್ನು ಸರಿಯಾಗಿ ತೊಳೆದುಕೊಳ್ಳಬೇಕು. ಇದರಿಂದ ಮುಖದ ಮೇಲೆ ಇರುವಂತಹ ಕಲೆ, ಧೂಳು ಅಥವಾ ಅತಿಯಾದ ಎಣ್ಣೆಯಂಶವನ್ನು ತೆಗೆಯಲು ನೆರವಾಗುವುದು. ಅದರಲ್ಲೂ ಮುಖ್ಯವಾಗಿ ಚರ್ಮದ ರಂಧ್ರಗಳಲ್ಲಿ ಇರುವಂತಹ ಕಲ್ಮಷವನ್ನು ಇದು ತೆಗೆದುಹಾಕುವುದು. ಹೀಗೆ ಮಾಡಿಕೊಂಡ ಬಳಿಕ ನೀವು ಮುಖಕ್ಕೆ ಮೊಶ್ಚಿರೈಸರ್ ನ್ನು ಹಚ್ಚಿಕೊಳ್ಳಬೇಕು. ನಿರಾಳತೆ ಕೊಡುವ ಹಾಗೂ ತೇವಾಂಶ ನೀಡುವಂತಹ ಮೊಶ್ಚಿರೈಶರ್ ನ್ನು ಹಚ್ಚಿಕೊಳ್ಳಿ. ಇದರಿಂದ ಮುಖ ಯಾವಾಗಲೂ ಪೋಷಣೆಯನ್ನು ಪಡೆಯುವುದು. ಮೊಶ್ಚಿರೈಸರ್ ಲೋಷನ್ ಅಥವಾ ಮೊಶ್ಚಿರೈಸರ್ ಟೋನರ್ ನ್ನು ನೀವು ಬಳಸಿಕೊಳ್ಳಬಹುದು.
ಇದರ ಬಳಿಕವೇ ಫ್ರೆಕಲ್ ಪೆನ್ಸಿಲ್ ತೆಗೆದುಕೊಳ್ಳಿ ಮತ್ತು ಮುಖದ ಮೇಲೆ ಫ್ರೆಕಲ್ಸ್ ಅನ್ನು ಮೂಡಿಸಿ. ತೆಳುವಾದ ಪೆನ್ಸಿಲ್ ಬ್ರಷ್ ನ್ನು ಬಳಸಿಕೊಂಡು ಕಂಚಿನ ಬಣ್ಣದ ಟ್ಯಾನರ್ ನ್ನು ನೀವು ಫ್ರೆಕಲ್ಸ್ ಮೂಡಿಸಲು ಬಳಸಬಹುದು. ಮುಖದ ಗಾತ್ರ, ವಿನ್ಯಾಸ ಮತ್ತು ಆದ್ಯತೆಗೆ ಅನುಗುಣವಾಗಿ ನಿಮಗೆ ಬೇಕಿದ್ದಷ್ಟು ಫ್ರೆಕಲ್ಸ್ ಗಳನ್ನು ಮೂಡಿಸಿಕೊಳ್ಳಿ. 15-20 ನಿಮಿಷ ಕಾಲ ಹಾಗೆ ಬಿಡಿ. ಒದ್ದೆಯಾಗಿರುವ ಮುಖದ ಬಟ್ಟೆ ತೆಗೆದುಕೊಂಡು ಫ್ರೆಕಲ್ಸ್ ಮೂಡಿಸಿದ ಭಾಗವನ್ನು ಒರೆಸಿಕೊಳ್ಳಿ. ಮುಖದ ಮೇಲೆ ಫ್ರೆಕಲ್ಸ್ ಹಾಗೆ ಉಳಿದುಕೊಳ್ಳಲು ನೀವು ಚರ್ಮಕ್ಕೆ ಹೆಚ್ಚಿನ ಮೇಕಪ್ ಉತ್ಪನ್ನವನ್ನು ಬಳಸಿಕೊಳ್ಳಬೇಡಿ.
ಇದರ ಬಳಿಕ ನೀವು ಸ್ವಲ್ಪ ಫೌಂಡೇಶನ್ ಹಾಕಿಕೊಳ್ಳಬೇಕು. ಒಂದು ನೆಲಗಡಲೆ ಗಾತ್ರದ ಲಘುವಾಗಿರುವಂತಹ ಮ್ಯಾಟ್ ಫಿನಿಶ್ ಫೌಂಡೇಶನ್ ತೆಗೆದುಕೊಳ್ಳಿ ಮತ್ತು ಇಷ್ಟೇ ಪ್ರಮಾಣದ ಮೊಶ್ಚಿರೈಸರ್ ತೆಗೆದುಕೊಳ್ಳಿ. ಇದೆರಡು ಮಿಶ್ರಣ ಮಾಡಿಕೊಳ್ಳಿ ಮತ್ತು ನಿಧಾನವಾಗಿ ಮುಖಕ್ಕೆ ಹಚ್ಚಿಕೊಳ್ಳಿ. ಕೈಬೆರಳನ್ನು ಬಳಸಿಕೊಂಡು ಇದನ್ನು ಸರಿಯಾಗಿ ಮಿಶ್ರಣ ಮಾಡಿಕೊಳ್ಳಿ.
ಒಂದು ಸಲ ನೀವು ಇದನ್ನು ಬಳಸಿಕೊಂಡ ಬಳಿಕ ಕನ್ಸಿಲರ್ ಬಳಸಿ. ಕನ್ಸಿಲರ್ ಎಲ್ಲಿ ಅಗತ್ಯವಿದೆಯೋ ಅಲ್ಲೆಲ್ಲಾ ಇದನ್ನು ಬಳಸಿಕೊಳ್ಳಿ. ಸಮಸ್ಯೆ ಇರುವಂತಹ ಭಾಗಕ್ಕೆ ಕನ್ಸಿಲರ್ ಹಚ್ಚಿಕೊಳ್ಳಿ. ಮಿತ ಪ್ರಮಾಣದಲ್ಲಿ ಇದನ್ನು ಬಳಸಿಕೊಳ್ಳಿ. ಅತಿಯಾಗುವುದು ಬೇಡಿ. ಕೆನ್ನೆ ಮೇಲೆ ಗುಲಾಬಿ ಬಣ್ಣದ ಬ್ಲಷ್ ಹಚ್ಚಿಕೊಳ್ಳಿ. ಆದರೆ ಇದನ್ನು ನೀವು ಅತಿಯಾಗಿ ಮಾಡಿಕೊಳ್ಳಬೇಡಿ. ಇದರಿಂದ ನೀವು ಮೂಡಿಸಿರುವಂತಹ ಫ್ರೆಕಲ್ಸ್ ಗೆ ಅಡ್ಡಿಯಾಗುವುದು. ಅಂತಿಮವಾಗಿ ನೀವು ಲಿಪ್ ಸ್ಟಿಕ್ ಅಥವಾ ಲಿಪ್ ಗ್ಲೊಸ್ ಬಳಸಿಕೊಳ್ಳಿ.
Published On - 4:46 pm, Wed, 16 October 19