ಚಳಿಗಾಲದಲ್ಲಿ ತ್ವಚೆ ಆರೈಕೆಗಾಗಿ ಪುದೀನಾವನ್ನು ಹೀಗೆ ಬಳಸಿ

|

Updated on: Dec 18, 2019 | 6:08 PM

ಪುದೀನಾ ಬಹುಪಯೋಗಿ ಸೊಪ್ಪು. ಅಡುಗೆಗೆ ಬಳಸಿದರೆ ಒಳ್ಳೆಯ ಫ್ಲೇವರ್, ಕೆಲವು ಕಾಯಿಲೆಗಳಿಗೆ ಪವರ್ ಫುಲ್ ಮನೆಮದ್ದು, ತ್ವಚೆಗೆ ಅತ್ಯುತ್ತಮ ಫೇಸ್ ಪ್ಯಾಕ್…ಹೀಗೆ ಪುದೀನಾ ಬಗ್ಗೆ ಹೇಳುತ್ತಾ ಹೋದರೆ ಪಟ್ಟಿಯೇ ಬೆಳೆಯುತ್ತದೆ. ಅಂದಹಾಗೆ ಪುದೀನಾವನ್ನು ವಿಶೇಷವಾಗಿ ಚಳಿಗಾಲದಲ್ಲಿ ಸ್ಕಿನ್ ಕೇರ್ ಆಗಿ ಬಳಸುತ್ತಾರೆ. ಹೌದು, ಪುದೀನಾವನ್ನು ಟೋನರ್ ಆಗಿ, ಕೈಗಳ ಶುಷ್ಕತೆ ತಡೆಯಲು, ಫೂಟ್ ಸ್ಕ್ರಬ್ ಆಗಿ, ಸೇರಂ ಆಗಿ, ಮೌತ್ ವಾಶ್ ಆಗಿ ಬಳಸಬಹುದು. ಪುದೀನಾವನ್ನು ತ್ವಚೆಗೆ ಯಾವ ರೀತಿ ಅಪ್ಲೈ ಮಾಡ್ಬೇಕು ಅಂತ ನಾವ ನಿಮ್ಗೆ […]

ಚಳಿಗಾಲದಲ್ಲಿ ತ್ವಚೆ ಆರೈಕೆಗಾಗಿ ಪುದೀನಾವನ್ನು ಹೀಗೆ ಬಳಸಿ
Follow us on

ಪುದೀನಾ ಬಹುಪಯೋಗಿ ಸೊಪ್ಪು. ಅಡುಗೆಗೆ ಬಳಸಿದರೆ ಒಳ್ಳೆಯ ಫ್ಲೇವರ್, ಕೆಲವು ಕಾಯಿಲೆಗಳಿಗೆ ಪವರ್ ಫುಲ್ ಮನೆಮದ್ದು, ತ್ವಚೆಗೆ ಅತ್ಯುತ್ತಮ ಫೇಸ್ ಪ್ಯಾಕ್…ಹೀಗೆ ಪುದೀನಾ ಬಗ್ಗೆ ಹೇಳುತ್ತಾ ಹೋದರೆ ಪಟ್ಟಿಯೇ ಬೆಳೆಯುತ್ತದೆ. ಅಂದಹಾಗೆ ಪುದೀನಾವನ್ನು ವಿಶೇಷವಾಗಿ ಚಳಿಗಾಲದಲ್ಲಿ ಸ್ಕಿನ್ ಕೇರ್ ಆಗಿ ಬಳಸುತ್ತಾರೆ. ಹೌದು, ಪುದೀನಾವನ್ನು ಟೋನರ್ ಆಗಿ, ಕೈಗಳ ಶುಷ್ಕತೆ ತಡೆಯಲು, ಫೂಟ್ ಸ್ಕ್ರಬ್ ಆಗಿ, ಸೇರಂ ಆಗಿ, ಮೌತ್ ವಾಶ್ ಆಗಿ ಬಳಸಬಹುದು. ಪುದೀನಾವನ್ನು ತ್ವಚೆಗೆ ಯಾವ ರೀತಿ ಅಪ್ಲೈ ಮಾಡ್ಬೇಕು ಅಂತ ನಾವ ನಿಮ್ಗೆ ತಿಳಿಸ್ತೀವಿ.

ಮೊದಲಿಗೆ ಪುದೀನಾ ಎಲೆಗಳನ್ನು ಸಣ್ಣಗೆ ಹೆಚ್ಚಿಟ್ಟುಕೊಳ್ಳಿ. ನಂತರ 1 ಕಪ್ ಅಥವಾ 1.1 / 2 ಕಪ್ ನೀರಿನಲ್ಲಿ ಎಲೆಗಳನ್ನು ಹಾಕಿ ಕುದಿಸಿ. ಸ್ಟೌವ್ ಆಫ್ ಮಾಡಿ, ಅದು ತಣ್ಣಗಾಗುವವರೆಗೆ ಕಾಯಿರಿ. 30-40 ನಿಮಿಷಗಳ ನಂತರ ಅದನ್ನು ಸೋಸಿ ಸ್ವಚ್ಛವಾದ ಒಣ ಬಾಟಲಿಯಲ್ಲಿ ಹಾಕಿ ರೆಫ್ರಿ ಜರೇಟರ್‌ನಲ್ಲಿ ಸಂಗ್ರಹಿಸಿ.

ಟೋನಿಂಗ್‌ಗೆ ಬೇಕಾದಾಗ ಮತ್ತು ಯಾವಾಗ ಬೇಕಾದರೂ ಬಳಸಿ ಮತ್ತು ಬಿಸಿಲಿನ ಚರ್ಮ ಹಾಳಾಗಿದ್ದಾಗ ಇದನ್ನು ಬಳಸಿದರೆ ತುಂಬಾ ಒಳ್ಳೆಯದು. ಪುದೀನಾ ಎಣ್ಣೆಯನ್ನು ಬಳಸುವ ಇನ್ನೊಂದು ವಿಧಾನವೆಂದರೆ ಅರ್ಧ ಕಪ್ ಫಿಲ್ಟರ್ ಮಾಡಿದ ನೀರನ್ನು ತೆಗೆದುಕೊಳ್ಳಿ. ಇದಕ್ಕೆ 1/4 ಕಪ್ ಆಪಲ್ ಸೈಡರ್ ವಿನೆಗರ್ ಮಿಶ್ರಣ ಮಾಡಿ. ನಂತರ ಚರ್ಮದ ಸೂಕ್ಷ್ಮತೆಗೆ ಅನುಗುಣವಾಗಿ 10-20 ಹನಿ ಪುದೀನಾ ಎಣ್ಣೆಯನ್ನು ಸೇರಿಸಿ ಮುಖಕ್ಕೆ ಹಚ್ಚಿ. ದಿನದಲ್ಲಿ ಯಾವುದೇ ಸಮಯದಲ್ಲಿಯಾದರೂ ಇದನ್ನು ಹಚ್ಚಬಹುದು.

ಎರಡು ಚಮಚ ಕರಗಿದ ಶಿಯಾ ಬೆಣ್ಣೆಯನ್ನು ತೆಗೆದುಕೊಳ್ಳಿ. ಇದಕ್ಕೆ ಅರ್ಧ ಟೀ ಚಮಚ ವಿಟಮಿನ್ ‘ಇ’ಎಣ್ಣೆ, 10 ಹನಿ ಪುದೀನಾ ಎಣ್ಣೆಯನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಇದನ್ನು ನಿಮ್ಮ ಅಂಗೈಗಳ ಮೇಲೆ, ಹಿಂಭಾಗದಲ್ಲಿ ಮಣಿಕಟ್ಟಿನವರೆಗೆ ಉಜ್ಜಿಕೊಳ್ಳಿ.

ಪುದೀನಾ ಎಣ್ಣೆಯನ್ನು ನೆತ್ತಿಯ ಮೇಲೆ ಮಸಾಜ್ ಮಾಡಿದಾಗ ಜುಮ್ ಎನ್ನುವ ಅನುಭವ ನೀಡುತ್ತದೆ. ಅಂದರೆ ಎಣ್ಣೆಯು ಪಿಎಚ್ ಮಟ್ಟವನ್ನು ಸಮತೋಲನಗೊಳಿಸುತ್ತಿದೆ ಎಂದರ್ಥ. ಅತಿಯಾದ ತೈಲ ಉತ್ಪಾದನೆಯನ್ನು ತಟಸ್ಥಗೊಳಿಸಲು ಪುದೀನಾ ಎಣ್ಣೆ ಸಹಾಯ ಮಾಡುತ್ತದೆ. ಇದರಿಂದ ಕೂದಲಿನ ಜಿಡ್ಡು ಕಡಿಮೆಯಾಗುತ್ತದೆ. ಅಷ್ಟೇ ಅಲ್ಲ, ಕೂದಲಿನ ಕಿರುಚೀಲಗಳನ್ನು ಉತ್ತೇಜಿಸಿ ನೆತ್ತಿಯಲ್ಲಿ ರಕ್ತ ಪರಿಚಲನೆ ಹೆಚ್ಚಿಸುತ್ತದೆ. ಕೂದಲಿನ ಬೆಳವಣಿಗೆಯನ್ನೂ ಹೆಚ್ಚಿಸುತ್ತದೆ. ಪುದೀನಾ ಎಣ್ಣೆಯನ್ನು ಕೂದಲಿಗೆ ಬಳಸುವ ಇನ್ನೊಂದು ವಿಧಾನವೆಂದರೆ ಎರಡು ದಾಸವಾಳದ ಹೂವುಗಳನ್ನು ತೆಗೆದುಕೊಂಡು, ದಳಗಳಿಂದ ಬೇರ್ಪಡಿಸಿ.

ಒಂದು ಪಾತ್ರೆಗೆ ಒಂದು ಕಪ್ ನೀರು ಹಾಕಿ ನೀರು ಕಾಯುತ್ತಿದ್ದಂತೆ ಹೂವುಗಳನ್ನು ಹಾಕಿ. ಎರಡು-ಮೂರು ನಿಮಿಷಗಳ ಕಾಲ ಕುದಿಸಿ. ಅದನ್ನು ತಣ್ಣಗಾಗಲು ಬಿಡಿ. ಇದಕ್ಕೆ ಒಂದು ಟೀಸ್ಪೂನ್ ಅಲೋವೆರಾ ಜೆಲ್, ಕಾಲು ಟೀಸ್ಪೂನ್, ವಿಟಮಿನ್ ಇ ಎಣ್ಣೆ ಸೇರಿಸಿ. ಈ ಮಿಶ್ರಣಕ್ಕೆ 10 ಹನಿ ಪುದೀನಾ ಎಣ್ಣೆಯನ್ನು ಹಾಕಿ. ಚೆನ್ನಾಗಿ ಮಿಶ್ರಣ ಮಾಡಿ. ಸ್ಪ್ರೇ ಬಾಟಲಿಯಲ್ಲಿ ಸಂಗ್ರಹಿಸಿಡಿ. ಬೇಕಾದಾಗ ತಲೆಗೆ ಹಚ್ಚಿಕೊಳ್ಳಿ.

ಅರ್ಧ ಕಪ್ ಬ್ರೌನ್ ಶುಗರ್ ತೆಗೆದುಕೊಳ್ಳಿ. ಇದಕ್ಕೆ ಎರಡು ಟೇಬಲ್ ಸ್ಪೂನ್ ಕೊಬ್ಬರಿ ಎಣ್ಣೆ ಮತ್ತು ಒಂದು ಟೇಬಲ್ ಸ್ಪೂನ್ ಜೇನುತುಪ್ಪವನ್ನು ಮಿಶ್ರಣ ಮಾಡಿ. ಮೂರು-ಐದು ಪುದೀನಾ ಎಣ್ಣೆಯ ಹನಿಗಳನ್ನು ಸೇರಿಸಿ. ಈ ಮಿಶ್ರಣವನ್ನು ವೃತ್ತಾಕಾರವಾಗಿ ನಿಮ್ಮ ಕಾಲುಗಳ ಮೇಲೆ ಹಚ್ಚುತ್ತಾ ಸ್ಕ್ರಬ್ ಮಾಡಿ.

ಮೊದಲಿಗೆ ಅರ್ಧ ಕಪ್ ಫಿಲ್ಟರ್ ಮಾಡಿದ ನೀರನ್ನು ತೆಗೆದುಕೊಳ್ಳಿ. ಇದಕ್ಕೆ ಎರಡು ಟೀ ಚಮಚ ಅಡುಗೆ ಸೋಡಾ ಮಿಶ್ರಣ ಮಾಡಿ. ನಂತರ ಎರಡು ಹನಿ ಟೀ ಟ್ರೀ ಎಣ್ಣೆ, ಎರಡು ಹನಿ ಪುದೀನಾ ಎಣ್ಣೆಯನ್ನು ಸೇರಿಸಿ. ಈ ಎಲ್ಲಾ ಪದಾರ್ಥಗಳನ್ನು ಮಿಶ್ರಣ ಮಾಡಿ. ಚೆನ್ನಾಗಿ ಕಲಕಿ. 30 ರಿಂದ 60 ಸೆಕೆಂಡುಗಳ ಕಾಲ ಬಾಯಿಯಲ್ಲಿಟ್ಟುಕೊಂಡು ಮುಕ್ಕಳಿಸಿ.

Published On - 6:08 pm, Wed, 18 December 19