LED Bulb ಕೈಕೊಟ್ರೆ ಬೀದಿಗೆ ಎಸೆಯುತ್ತೀರಾ..!?

|

Updated on: Oct 14, 2019 | 2:11 PM

ಮಾಡ್ರನ್ ಲೈಫ್ ಸ್ಟೈಲ್ ನಮ್ಮನ್ನು ಸಾಕಷ್ಟು ಬದಲಾಯಿಸಿದೆ. ನಾವು ಎಲ್ಲದರಲ್ಲೂ ಹೊಸತನಕ್ಕಾಗಿ ಹಪಹಪಿಸ್ತಾ ಇರ್ತೇವೆ. ಆದ್ರೆ, ಕೆಲವು ಜಾಣರು ಹೊಸತನದ ಜೊತೆಗೆ ಸಿಂಪಲ್ ಆಗಿಜೀವನ ನಡೆಸ್ತಾರೆ. ಹೊಸತನವೂ ಬೇಕು ವ್ಯರ್ಥ ಖರ್ಚೂ ಆಗಬಾರದು ಅನ್ನುವ ಕೆಲವರು ದೈನಂದಿನ ಜೀವನದಲ್ಲಿ ಖರ್ಚು ಉಳಿಸುವ ಬಗ್ಗೆಯೂ ಆಲೋಚನೆ ಮಾಡ್ತಾರೆ. ಹಾಗಾದ್ರೆ, ನಮ್ಮ ದಿನನಿತ್ಯದ ಖರ್ಚು ವೆಚ್ಚಗಳತ್ತ ಒಮ್ಮೆ ಕಣ್ಣು ಹಾಯಿಸಿ. ಅದ್ರಲ್ಲಿ ಒಂದು ಅಂಶ ಕರೆಂಟ್ ಬಿಲ್. ಯೆಸ್ ನಮ್ಮ ಅಗತ್ಯತೆಗೆ ತಕ್ಕಂತೆ ವಿದ್ಯುತ್ ಬಿಲ್ ವ್ಯತ್ಯಾಸವಾಗುತ್ತೆ. ಅದಕ್ಕಾಗಿ ನಾವು […]

LED Bulb ಕೈಕೊಟ್ರೆ ಬೀದಿಗೆ ಎಸೆಯುತ್ತೀರಾ..!?
Follow us on

ಮಾಡ್ರನ್ ಲೈಫ್ ಸ್ಟೈಲ್ ನಮ್ಮನ್ನು ಸಾಕಷ್ಟು ಬದಲಾಯಿಸಿದೆ. ನಾವು ಎಲ್ಲದರಲ್ಲೂ ಹೊಸತನಕ್ಕಾಗಿ ಹಪಹಪಿಸ್ತಾ ಇರ್ತೇವೆ. ಆದ್ರೆ, ಕೆಲವು ಜಾಣರು ಹೊಸತನದ ಜೊತೆಗೆ ಸಿಂಪಲ್ ಆಗಿಜೀವನ ನಡೆಸ್ತಾರೆ. ಹೊಸತನವೂ ಬೇಕು ವ್ಯರ್ಥ ಖರ್ಚೂ ಆಗಬಾರದು ಅನ್ನುವ ಕೆಲವರು ದೈನಂದಿನ ಜೀವನದಲ್ಲಿ ಖರ್ಚು ಉಳಿಸುವ ಬಗ್ಗೆಯೂ ಆಲೋಚನೆ ಮಾಡ್ತಾರೆ.

ಹಾಗಾದ್ರೆ, ನಮ್ಮ ದಿನನಿತ್ಯದ ಖರ್ಚು ವೆಚ್ಚಗಳತ್ತ ಒಮ್ಮೆ ಕಣ್ಣು ಹಾಯಿಸಿ. ಅದ್ರಲ್ಲಿ ಒಂದು ಅಂಶ ಕರೆಂಟ್ ಬಿಲ್. ಯೆಸ್ ನಮ್ಮ ಅಗತ್ಯತೆಗೆ ತಕ್ಕಂತೆ ವಿದ್ಯುತ್ ಬಿಲ್ ವ್ಯತ್ಯಾಸವಾಗುತ್ತೆ. ಅದಕ್ಕಾಗಿ ನಾವು ಸಾಕಷ್ಟು ಪರಿಹಾರೋಪಾಯಗಳನ್ನು ಕೂಡಾ ಕಂಡುಕೊಂಡಿದ್ದೇವೆ. ಅದ್ರಂತೆ ಈಗಾಗಲೇ ನಾವು ಹೆಚ್ಚು ಬಿಲ್ ಬರಿಸುವ ಬಲ್ಬ್ ಗಳನ್ನು ಮೂಲೆಗೆ ಹಾಕಿದ್ದೇವೆ. ಹಾಗಾಗಿ, ಮನೆ ಮನೆಗೆ ಎಲ್ ಇಡಿ ಬಲ್ಬ್ ಗಳು ಬಂದಾಗಿದೆ. ಈ ಬಲ್ಬ್ ಗಳು ಬಿಲ್ ಕಡಿಮೆ ಮಾಡುತ್ತೆ ಅಂತ ನಾವು ನಂಬುತ್ತೇವೆ. ಪಕ್ಕಾ ಅದರಂತೆ ಬಿಲ್ ನಲ್ಲಿ ಶೇಕಡಾ 30 ರಷ್ಟು ಕಡಿತ ಕೂಡಾ ಕಂಡಿದ್ದೇವೆ. ನೂರು ರೂಪಾಯಿ ಬಿಲ್ ಕಟ್ಟುವಲ್ಲಿ 70 ರೂಪಾಯಿ ಬಿಲ್ ಕಟ್ಟಿದ್ರೆ ಖುಷಿ ತಾನೇ..? ಆದ್ರೆ, ಆ ಬಲ್ಬ್ ಗಳ ರೇಟ್ ಕೇಳಿದ್ರೆ ಒಂಚೂರು ದುಬಾರಿ ಅನಿಸದೇ ಇರಲ್ಲಾ.

ಎಲ್​ಇಡಿ ಬಲ್ಬ್ ದುಬಾರಿ ತಾನೇ..?
ನಿಜ ನೂರಕ್ಕೆ ನೂರು ಪರ್ಸೆಂಟ್ ಎಲ್ ಇಡಿ ಬಲ್ಬ್ ದುಬಾರಿನೇ. ಹಾಗಾದ್ರೆ, ಇತರೆ ಬಲ್ಬ್ ಗೆ ಹೋಲಿಸಿದ್ರೆ ಈ ಬಲ್ಬ್ ಕಾಸ್ಲಿ. ಅದನ್ನೂ ಒಮ್ಮೆ ತಾಳೆ ಹಾಕಿ ನೋಡಿ. ಹಳೆ ಟಂಗ್ ಸ್ಟನ್ ಬಲ್ಬ್ ಈಗ ಬಳಕೆಯಲ್ಲಿಲ್ಲ. ಆದ್ರೆ, ಫ್ಲೋರೋಸೆಂಟ್ , ಸಿಎಫ್ ಎಲ್ ಮೊದಲಾದುವು ಈಗಲೂ ಬಳಕೆಯಲ್ಲಿದೆ. ಸಿಂಪಲ್ ಆಗಿ ಹೇಳೋದಿದ್ರೆ ಅದ್ರ ಬೆಲೆಯ್ಲಿ ಅಜಗಂಜಾಂತರ ವ್ಯತ್ಯಾಸವಿದೆ. ಟಂಗ್ ಸ್ಟನ್ ಬಲ್ಬ್ 12 ರೂಪಾಯಿಗೆ ಸಿಕ್ರೆ, ಫ್ಲೋರೋಸೆಂಟ್ ಟ್ಯೂಬ್ ನ ಬೆಲೆ ಸರಿಸುಮಾರು 85 ರೂಪಾಯಿ ಇರುತ್ತೆ. ಹಾಗೆ ಸಿ ಎಫ್ ಎಲ್ ಬಲ್ಬಿಗೆ 200 ರೂಪಾಯಿ ಕೊಡಬೇಕಾಗುತ್ತೆ. ಆದ್ರೆ ಎಲ್ ಇಡಿ ಬಲ್ಬ್ ಗೆ ನೀವು 900 ರೂಪಾಯಿಯವರೆಗೆ ವ್ಯಯಿಸಬೇಕಾಗುತ್ತೆ. 12 ರೂಪಾಯಿ ಎಲ್ಲಿ 900 ರೂಪಾಯಿ ಎಲ್ಲಿ..? ಆದ್ರೆ, ಅದು ಎಷ್ಟು ಪವರ್ ಉಳಿಸುತ್ತೆ ಮತ್ತು ಬಿಲ್ ಕಡಿತಗೊಳಿಸುತ್ತೆ ಅನ್ನೋದು ಅಷ್ಟೇ ಸತ್ಯ.

ಈಗ ವಿಷಯಕ್ಕೆ ಬರೋಣ.. ಅಂತ ದುಬಾರಿ ಬಲ್ಬ್ ಒಂದು ವೇಳೆ ಕೈಕೊಟ್ರೆ ..? ದೊಡ್ಡ ಲಾಸ್ ತಾನೇ..? ಅದನ್ನು ರಿಪೇರಿ ಮಾಡೋಕಾಗುತ್ತಾ..?
ಎಲ್ ಇಡಿ ಬಲ್ಬ್ ರಿಪೇರಿಯಾಗುತ್ತೆ.. ಯೆಸ್ ಈ ಬಲ್ಬ್ ರಿಪೇರಿಯಾಗುತ್ತೆ. ಅದೂ ಬಹಳ ಕಡಿಮೆ ಖರ್ಚಿಗೆ ರಿಪೇರಿಯಾಗುತ್ತೆ. ಆ ಬಗ್ಗೆ ಯಾರಿಗೂ ಗೊತ್ತಿಲ್ಲ. ನಿಮ್ಮ 900 ರೂಪಾಯಿ ಬೆಲೆಯ ಎಲ್ ಇಡಿ ಬಲ್ಬ್ ಜಸ್ಟ್ ಒಂದೇ ಒಂದು ರೂಪಾಯಿಗೆ ರಿಪೇರಿಯಾಗುತ್ತೆ. ಅದು ಹೋಗೆ ಅಂತ ನಾವು ಹೇಳಿ ಕೊಡ್ತೀವಿ.

ಅದು ಎಷ್ಟು ವ್ಯಾಟಿನ ಬಲ್ಬೇ ಆಗಿರಲಿ ನೀವು ಅದನ್ನು ರಿಪೇರಿ ಮಾಡಬಹುದು. ಕೆಟ್ಟ ಬಲ್ಬನ್ನು ಎಸೆಯುವ ಮೊದಲು ಅದನ್ನೊಮ್ಮೆ ಚೆಕ್ ಮಾಡಿ. ಅದಕ್ಕಾಗಿ ಅದನ್ನು ತೆರೆಯಬೇಕು. ಅಂದ್ರೆ ಎಲ್ ಇಡಿ ಬಲ್ಬ್ನ ಮೇಲಿನ ಭಾಗವನ್ನು ಜಾಗ್ರತೆಯಾಗಿ ಕೈಯಲ್ಲಿ ಹಿಡಿದು ಒಂಚೂರು ಪ್ರೆಸ್ ಮಾಡ್ತಾ ಹೀಗೆ ಟ್ವಿಸ್ಟ್ ಮಾಡಬೇಕು. ಯೆಸ್ ಅದು ಖಂಡಿತವಾಗಿ ಓಪನ್ ಆಗುತ್ತೆ. ಓಪನ್ ಆದ್ರೆ ಅದರಲ್ಲಿ ಸರ್ಕಿಟ್ ಕಾಣಸಿಗುತ್ತೆ.
ಸುಲಭವಾಗಿ ಬಂದಿಲ್ಲ ಅಂದ್ರೆ ನೀವು ಯಾವುದಾದರೂ ಸ್ಕ್ರೂಡ್ರೈವರ್ ನಂಥ ವಸ್ತು ತಗೊಂಡು ನಿಧಾನಕ್ಕೆ ಹೊಡೆಯಿರಿ. ಅದು ಖಂಡಿತಾ ಓಪನ್ ಆಗುತ್ತೆ. ಆ ಬಳಿಕ ನಾವು ಈ ಸರ್ಕಿಟ್ ಚೆಕ್ ಮಾಡಲು ಒಂದು ಸೀರಿಸನ್ನು ಬಳಸಬೇಕು. ಅದು ಹ್ಯಾಂಡ್ ಮೇಡ್ ಸರ್ಕಿಟ್ ಆದ್ರೂ ನೋ ಪ್ರಾಬ್ಲಂ.

ಈಗ ನಾವು ಈ ಓಪನ್ ಮಾಡಿದ ಬಲ್ಬನ್ನು ಒಂದು ಹೋಲ್ಡರ್ ಗೆ ಸಿಕ್ಕಿಸಿ. ಈ ಹೋಲ್ಡರಿನಲ್ಲಿ ಸಣ್ಣ ಪ್ರಮಾಣದ ಕರೆಂಟ್ ಇರಬೇಕು. ಅದನ್ನು ಬೇರೆ ಬಲ್ಬ್ ಚೆಕ್ ಮಾಡಿ ನೋಡಬಹುದು. ಯೆಸ್ ಇದಾದ ಬಳಿಕ ನೀವು ಮತ್ತು ಚಿಮಟದಿಂದ ನೀವು ಮೊದಲು ಸರ್ಕಿಟ್ ಚೆಕ್ ಮಾಡಿ. ಅದಕ್ಕಾಗಿ ನೀವು ಪ್ಲಸ್ ಮತ್ತು ಮೈನಸ್ ಟಚ್ ಮಾಡಿ ನೋಡಿ. ಅದ್ರಲ್ಲಿ ಸ್ಪಾರ್ಕ್ ಬಂದ್ರೆ ಸರ್ಕಿಟ್ ಸರಿಯಿದೆಯೆಂದರ್ಥ. ಸ್ಪಾರ್ಕ್ ಬಂದ್ರೆ ಇಲ್ಲಿ ಸರ್ಕಿಟ್ ನಲ್ಲಿ ಯಾವುದೋ ಒಂದು ಎಲ್ ಇಡಿ ಅಂದ್ರೆ ಎಸ್ ಎಂ ಡಿ ಕೆಲಸ ಮಾಡ್ತಾ ಇಲ್ಲಾ ಎಂದರ್ಥ. ಅದನ್ನು ಕೂಡಾ ಚೆಕ್ ಮಾಡಬೇಕಾಗುತ್ತೆ. ಅದಕ್ಕಾಗಿ ಹೀಗೆ ಒಂದೊಂದೇ ಎಸ್ ಎಂಡಿಯನ್ನು ಪ್ಲಸ್ ಮೈನಸ್ ಚೆಕ್ ಮಾಡ್ತಾ ಹೋಗಿ. ಯಾವ ಎಸ್ ಎಂಡಿ ಸರಿಯಿಲ್ಲವೋ ಅದನ್ನು ಪ್ಲಸ್ ಮೈನಸ್ ಮಾಡಿದಾಗ ಬಲ್ಬ್ ಹೊತ್ತಿಕೊಳ್ಳುತ್ತೆ. ಹಾಗಾದ್ರೆ ದೋಷಪೂರಿತವಾಗಿರುವ ಎಸ್ ಎಂಡಿ ಪತ್ತೆಯಾಗಿದೆ. ಅದನ್ನು ಮಾರ್ಕ್ ಮಾಡ್ಕೊಳ್ಳಿ ಮತ್ತು ಅದನ್ನು ಕ್ಲೀನ್ ಮಾಡ್ಕೊಳ್ಳಿ. ಅದ್ರ ಮೇಲೆ ಬೆಸುಗೆ ಹಾಕಿ. ಬೆಸುಗೆಯಲ್ಲಿ ಪ್ಲಸ್ ಮೈನಸ್ ಶಾರ್ಟ್ ಆಗಬೇಕು. ಈಗ ನಿಮ್ಮ ಹಳೆ ಬರ್ನ್ ಆದ ಎಲ್ ಇಡಿ ಬಲ್ಬ್ ಮತ್ತೊಮ್ಮೆ ಉರಿಯಲು ರೆಡಿಯಾಗುತ್ತೆ.. ಇದು ಒಂದೇ ಒಂದು ರೂಪಾಯಿ ಖರ್ಚಿಲ್ಲದ ವಿಧಾನ.

ಇನ್ನು ನೀವು ಒಂದು ರೂಪಾಯಿ ಖರ್ಚು ಮಾಡ್ತೀರಿ ಅಂದ್ರೆ ಅದಕ್ಕೊಂದು ಉಪಾಯವಿದೆ. ನೀವು ಮಾರ್ಕೆಟಿನಲ್ಲಿ ಜಸ್ಟ್ ಒಂದು ರೂಪಾಯಿಗೆ ಪುಟ್ಟ ಬಲ್ಬ್ ಸಿಗುತ್ತೆ. ನೀವು ಅದರ ಪ್ಲಸ್ ಮತ್ತು ಮೈನಸ್ ನೋಡ್ಕೋಬೇಕು. ಅದಕ್ಕಾಗಿ ಅದನ್ನು ಬ್ಯಾಟರಿಯ ಪಾಯಿಂಟ್ ಗೆ ತಾಕಿಸಿ. ಅದು ಉರಿಯದೇ ಇದ್ರೆ ಪ್ಲಸ್ ಮೈನಸ್ ಸರಿಯಿಲ್ಲವೆಂದರ್ಥ. ಉರಿದ್ರೆ ಪ್ಲಸ್ ಮೈನಸ್ ಸರಿಯಿದೆ ಎಂದರ್ಥ. ಅದನ್ನು ಮಾರ್ಕ್ ಮಾಡ್ಕೊಳ್ಳಿ. ನೀವೀಗ ಅದನ್ನು ಸರ್ಕಿಟ್ ಗೆ ಫಿಕ್ಸ್ ಮಾಡಬಹುದು. ಆದ್ರೆ, ಪ್ಲಸ್ ಮೈನಸ್ ನೋಡಿಕೊಳ್ಳಿ ಮತ್ತು ಅದ್ರ ಸೋಲ್ಡರಿಂಗ್ ಅದ್ರ ಮೆಟಾಲಿಕ್ ಬಾಡಿಗೆ ತಾಕಲೇಬಾರದು. ಇದಾದ ಬಳಿಕ ಅದನ್ನು ಕ್ಲೋಸ್ ಮಾಡ್ಕೊಳ್ಳಿ. ಅಂಟಿಸಿ ಒಮ್ಮೆ ಚೆಕ್ ಮಾಡಿ. ಯೆಸ್ ಬಲ್ಬ್ ಈಗ ಉರೀತಾ ಇದೆ. ಹಾಗಾಗಿ, ನೀವು ಕೆಟ್ಟ ಬಲ್ಬನ್ನು ರಿಪೇರಿ ಮಾಡಬಹುದು. ಆದ್ರೆ, ರಿಪೇರಿ ಮಾಡುವಾಗ ಯಾವುದೇ ಕಾರಣಕ್ಕೂ ಕರೆಂಟ್ ಡೈರೆಕ್ಟ್ ಮಾಡಲೇ ಬಾರದು.

Published On - 9:01 am, Thu, 10 October 19