ಡೆನಿಮ್ ಫ್ಯಾಷನ್​: ವೆರೈಟಿಯೂ ಇದೆ, ತೊಡೋ ಸ್ಟೈಲ್​ ಕೂಡ ಚೇಂಜ್ ಆಗಿದೆ!

ಡೆನಿಮ್​ ಟ್ರೆಂಡ್​ ಹಳೆಯದೆ ಆದ್ರೂ ಇಂದಿಗೂ ಮಹಿಳೆಯರಿಗೆ ಸಖತ್​ ಫ್ಯಾಷೆನೇಬಲ್​ ಎನಿಸಿಕೊಂಡಿದೆ. ಸಾಕಷ್ಟು ವೆರೈಟಿ ಡೆನಿಮ್ ಡ್ರೆಸ್​​ಗಳು​ ಫ್ಯಾಷನ್​ ಲೋಕಕ್ಕೆ ಬಂದಿದೆ. ಹಾಗೆ ಡೆನಿಮ್​ ತೊಡೋ ಸ್ಟೈಲ್​ ಕೂಡ ಚೇಂಜ್ ಆಗ್ತಾನೆ ಇದೆ. ಸೆನ್ಸೆಷನಲ್ ಆ್ಯಂಡ್​ ಕ್ಲಾಸಿ ಎನಿಸೋ ಸ್ಟೈಲಿಶ್​ ಡ್ರೆಸ್​ ಗಳಿವು ಅದರಲ್ಲೂ ಬ್ಲೂ ಶೇಡ್​ ಸ್ಕಿನ್ ಫಿಟ್ ಡೆನಿಮ್ ಸ್ಕರ್ಟ್​ ಜೊತೆ ವೈಟ್​ ಶೇಡ್ ಆಫ್​ ಶೋಲ್ಡರ್​ ಟಾಪ್​. ಜೊತೆಗೆ ಮ್ಯಾಚಿಂಗ್ ಹೈ ಹೀಲ್ಡ್​ ಹಾಗೂ ಹೆಗಲಿಗೊಂದು ಸ್ಲಿಂಗ್ ಬ್ಯಾಗ್​. ಡಿಫರೆಂಟ್ ಲುಕ್ ಪಡೆಯಲು […]

ಡೆನಿಮ್ ಫ್ಯಾಷನ್​: ವೆರೈಟಿಯೂ ಇದೆ, ತೊಡೋ ಸ್ಟೈಲ್​ ಕೂಡ ಚೇಂಜ್ ಆಗಿದೆ!
sadhu srinath

|

Nov 04, 2019 | 2:54 PM

ಡೆನಿಮ್​ ಟ್ರೆಂಡ್​ ಹಳೆಯದೆ ಆದ್ರೂ ಇಂದಿಗೂ ಮಹಿಳೆಯರಿಗೆ ಸಖತ್​ ಫ್ಯಾಷೆನೇಬಲ್​ ಎನಿಸಿಕೊಂಡಿದೆ. ಸಾಕಷ್ಟು ವೆರೈಟಿ ಡೆನಿಮ್ ಡ್ರೆಸ್​​ಗಳು​ ಫ್ಯಾಷನ್​ ಲೋಕಕ್ಕೆ ಬಂದಿದೆ. ಹಾಗೆ ಡೆನಿಮ್​ ತೊಡೋ ಸ್ಟೈಲ್​ ಕೂಡ ಚೇಂಜ್ ಆಗ್ತಾನೆ ಇದೆ.

ಸೆನ್ಸೆಷನಲ್ ಆ್ಯಂಡ್​ ಕ್ಲಾಸಿ ಎನಿಸೋ ಸ್ಟೈಲಿಶ್​ ಡ್ರೆಸ್​ ಗಳಿವು ಅದರಲ್ಲೂ ಬ್ಲೂ ಶೇಡ್​ ಸ್ಕಿನ್ ಫಿಟ್ ಡೆನಿಮ್ ಸ್ಕರ್ಟ್​ ಜೊತೆ ವೈಟ್​ ಶೇಡ್ ಆಫ್​ ಶೋಲ್ಡರ್​ ಟಾಪ್​. ಜೊತೆಗೆ ಮ್ಯಾಚಿಂಗ್ ಹೈ ಹೀಲ್ಡ್​ ಹಾಗೂ ಹೆಗಲಿಗೊಂದು ಸ್ಲಿಂಗ್ ಬ್ಯಾಗ್​.

ಡಿಫರೆಂಟ್ ಲುಕ್ ಪಡೆಯಲು ಓವರ್ ಸೈಜ್ ಬ್ರೀಜಿ ಟಾಪ್ ಜೊತೆ ಡೆನಿಮ್ ಶಾರ್ಟ್ಸ್ ಟ್ರೈ ಮಾಡಿ ನೋಡಿ. ಜೊತೆಗೆ ಕೂಲ್​ ಶೇಡ್ಸ್ ಹಾಗೂ ಹೈ ಹೀಲ್ಡ್​ ಶೂಸ್​ ಇರಲಿ​. ಲೇಯರ್ ಲುಕ್ ಪಡೆಯಲು ಮೇಲೊಂದು ಡೆನಿಮ್ ಜ್ಯಾಕೆಟ್ ಕೂಡ ಟ್ರೈ ಮಾಡಬಹುದು.

ಇನ್ನು ನೀವು ಪಾರ್ಟಿವೇರ್ ಟ್ರೈ ಮಾಡೋದಾದ್ರೆ ಈ ಸ್ಟೈಲಿಶ್ ಆದ ಲೇಸ್​ ಅಪ್ ಡ್ರೆಸ್ ಟ್ರೈ ಮಾಡಿ. ಈ ಡ್ರೆಸ್​​ಗೆ ಮ್ಯಾಚ್ ಆಗುವಂತಹ ಹೈ ಹೀಲ್ಸ್​ ಇರಲಿ. ಈ ರೀತಿಯ ಡ್ರೆಸ್​ಗೆ ಸಿಂಪಲ್ ಆ್ಯಕ್ಸಸರೀಸ್ ಕೂಡ ಇರಲಿ. ಹಾಗೆ ಮೇಲೊಂದು ಡೆನಿಮ್ ಜ್ಯಾಕೆಟ್ ಧರಿಸಿ.

ಇವ್ನಿಂಗ್ ಪಾರ್ಟಿಗೆ ಹೋಗಲು ನೀವು ಬ್ಲಾಕ್ ಕಲರ್​ನ ಶಾರ್ಟ್​ ಡ್ರೆಸ್​ ಟ್ರೈ ಮಾಡ್ಲೇಬೇಕು. ಈ ಡ್ರೆಸ್​ನ ಹೈಲೈಟ್​ ಇರೋದೆ ಬೆಲ್ಟ್​​ನಲ್ಲಿ. ಹಾಗೆ ಆಫ್ ಶೋಲ್ಡರ್​ ಆಗಿರೋದ್ರಿಂದ ಗ್ಲಾಮರಸ್ ಲುಕ್ ನಿಮ್ಮದಾಗುತ್ತೆ. ಡ್ರೆಸ್​ಗೆ ಮ್ಯಾಚ್ ಆಗುವ ಇಯರಿಂಗ್ಸ್​ ಹಾಗೂ ಹೈ ಹೀಲ್ಸ್​ ಧರಿಸಿ. ನೀವೂ ಈ ಸ್ಟೈಲ್​ಗಳನ್ನ ಫಾಲೋ ಮಾಡಿ ಸ್ಟೈಲಿಶ್ ಲುಕ್ ಪಡೆಯಿರಿ.

ತಾಜಾ ಸುದ್ದಿ

Follow us on

Most Read Stories

Click on your DTH Provider to Add TV9 Kannada