ಇಪ್ಪತ್ತೂಂದನೆಯ ಶತಮಾನದ ಅತಿ ಗಂಭೀರ ಸಾರ್ವಜನಿಕ ಆರೋಗ್ಯ ಸವಾಲುಗಳಲ್ಲಿ ಒಂದು ಮಕ್ಕಳು ಬಾಲ್ಯದಲ್ಲಿಯೇ ಬೊಜ್ಜು ಬೆಳೆಸಿಕೊಳ್ಳುವುದು. ಈ ಸಮಸ್ಯೆ ಜಾಗತಿಕವಾದುದು ಹಾಗೂ ಕೆಳ ಮತ್ತು ಮಧ್ಯಮ ಆದಾಯ ದೇಶಗಳಲ್ಲಿ ಅದರಲ್ಲೂ ನಗರ ಪ್ರದೇಶಗಳಲ್ಲಿ ವ್ಯಾಪಕವಾಗಿದೆ.
ಬೊಜ್ಜು ಆರೋಗ್ಯ ಸಮಸ್ಯೆಯಾಗಿ ಪರಿಗಣಿತವಾಗಿರುವುದು ಯಾಕೆ?
ಬಾಲ್ಯದಲ್ಲಿ ಬೊಜ್ಜು ಅಥವಾ ಅಧಿಕ ದೇಹತೂಕ ಉಂಟಾದರೆ ಅದು ಅನೇಕ ರೀತಿಗಳಲ್ಲಿ ದೇಹದ ಮೇಲೆ ಪ್ರತಿಕೂಲ ಪರಿಣಾಮವನ್ನು ಬೀರುತ್ತದೆ. ಬೊಜ್ಜು ಹೊಂದಿರುವ ಮಕ್ಕಳು ಈ ಸಮಸ್ಯೆಗಳಿಗೆ ತುತ್ತಾಗುವ ಸಾಧ್ಯತೆ ಅಧಿಕ.
ಹೆತ್ತವರ ಉದ್ಯೋಗ ಜೀವನದ ಇಡುಕಿರದ ಕಾರ್ಯಭಾರದಿಂದಾಗಿ ಅವರಿಗೆ ಮಕ್ಕಳಿಗಾಗಿ ಸಮಯ ನೀಡಲು ಆಗುವುದಿಲ್ಲ. ಇದರಿಂದ ಮಕ್ಕಳಿಗೆ ಹೆತ್ತವರ ಮಾರ್ಗದರ್ಶನದ ಕೊರತೆ ಉಂಟಾಗುತ್ತದೆ. ಹೀಗಾಗಿ ಸರಿಯಾದ ಪೌಷ್ಟಿಕಾಂಶ ಸೇವನೆಯ ಬಗ್ಗೆ ಮಕ್ಕಳಿಗೆ ಹೇಳಿಕೊಡುವುದಕ್ಕೆ ಹೆತ್ತವರ ಬಳಿ ಸಮಯವಿರುವುದಿಲ್ಲ. ಹೆತ್ತವರ ಕಾರ್ಯಭಾರದಿಂದಾಗಿ ಅನೇಕ ಮಕ್ಕಳು ಮನೆಯೂಟ ಬದಲಾಗಿ ಯಾವುದೋ ಫಾಸ್ಟ್‌ಫುಡ್ ರೆಸ್ಟೋರೆಂಟ್‌ಗಳಲ್ಲಿ ಊಟ-ಉಪಾಹಾರಗಳನ್ನು ಪೂರೈಸಿಕೊಳ್ಳಬೇಕಾಗುತ್ತದೆ.
ಮಕ್ಕಳ ದೇಹತೂಕದಲ್ಲಿ ವಂಶವಾಹಿಗಳೂ ಪಾತ್ರ ವಹಿಸುತ್ತವೆ. ನಮ್ಮ ದೇಹವಿಧ ಮತ್ತು ದೇಹವು ಎಷ್ಟು ಮತ್ತು ಹೇಗೆ ಕೊಬ್ಬನ್ನು ದಹಿಸಬೇಕು ಮತ್ತು ಶೇಖರಿಸಿಟ್ಟುಕೊಳ್ಳಬೇಕು ಎಂಬುದನ್ನು ನಿರ್ಧರಿಸುವಲ್ಲಿ ವಂಶವಾಹಿಗಳು ಸಹಾಯ ಮಾಡುತ್ತವೆ. ಹೆತ್ತವರು ಅಧಿಕ ದೇಹತೂಕ ಅಥವಾ ಬೊಜ್ಜು ಹೊಂದಿದವರಾಗಿದ್ದರೆ ಮಗು ಕೂಡ ಈ ಸಮಸ್ಯೆಗೆ ತುತ್ತಾಗುವ ಸಾಧ್ಯತೆಗಳು ಅಧಿಕ.
ಮಗುವಿಗೆ ಹೆಚ್ಚು ಕಾಲ ಎದೆಹಾಲು ಉಣಿಸಿದರೆ ಮಗು ಬೆಳೆದಂತೆ ಅಧಿಕ ದೇಹತೂಕ, ಬೊಜ್ಜು ಉಂಟಾಗುವ ಸಾಧ್ಯತೆ ಕಡಿಮೆಯಾಗುತ್ತದೆ.
Published On - 3:09 pm, Sun, 19 January 20