ಕಣ್ಣು ದೇಹದ ಅತೀ ಸೂಕ್ಷ್ಮ ಅಂಗ. ಅದನ್ನು ಅನವರತ ರಕ್ಷಿಸಿಕೊಳ್ಳಬೇಕು. ಕಣ್ಣಿನ ಬಗ್ಗೆ ಕಾಳಜಿ ಇಲ್ಲದೇ ಅನೇಕ ಜನ ಕಣ್ಣಿನ ದೃಷ್ಟಿಯನ್ನು ಕಳೆದುಕೊಳ್ಳುತ್ತಾರೆ. ಅದಕ್ಕೆ ಈಗಿನ ಕಲುಷಿತ ವಾತಾವರಣ ಒಂದು ರೀತಿಯಲ್ಲಿ ಕಾರಣವಾದ್ರೆ, ಆಹಾರ ಸೇವನೆಯಲ್ಲಿ ಅಗತ್ಯ ಪೋಷಕಾಂಶಗಳ ಕೊರತೆಯಿಂದ ಕಣ್ಣಿನ ಕಾಂತಿ ಕಳೆದುಕೊಳ್ಳುವ ಭೀತಿಯೂ ಇದೆ. ಹಾಗಾಗಿ, ಕಣ್ಣಿನ ಆರೋಗ್ಯಕ್ಕೆ ಅಗತ್ಯವಾಗಿರುವ ಆಹಾರ ಸೇವನೆ ಬಗ್ಗೆ ತಿಳಿದುಕೊಳ್ಳುವುದು ತುಂಬಾ ಮುಖ್ಯವಾಗಿರುತ್ತೆ.
ಮೀನು:
ಕ್ಯಾರೆಟ್:
ವಿಟಮಿನ್ ಸಿ:
ಸಿಟ್ರಸ್ ಹಣ್ಣುಗಳಲ್ಲಿ ವಿಟಮಿನ್ ಸಿ ಅಂಶ ಹೆಚ್ಚಿದ್ದು, ಇದು ಕಣ್ಣಿಗೆ ಅತ್ಯುತ್ತಮ ಆ್ಯಂಟಿಆಕ್ಸಿಡೆಂಟ್ ಆಗಿದೆ. ವಿಟಮಿನ್ ಇ ನಂತೆ ವಿಟಮಿನ್ ಸಿ ಸಹ ವಯೋಸಹಜ ಕಣ್ಣಿನ ಸಮಸ್ಯೆಗಳಿಗೆ ಎದುರಾಗುವುದನ್ನು ತಪ್ಪಿಸುತ್ತದೆ. ಉದಾಹರಣೆಗೆ: ಲಿಂಬೆಹಣ್ಣು, ಆರೆಂಜ್, ದ್ರಾಕ್ಷಿ..
ಹಸಿರು ತರಕಾರಿ:
ಹಸಿರು ತರಕಾರಿಗಳಲ್ಲಿ ಕಣ್ಣಿಗೆ ಅಗತ್ಯವಾದ ವಿಟಮಿನ್ ಸಿ ಜತೆಗೆ ಲುಟೇನ್ ಮತ್ತು ಜೆಂಕ್ಷಾಂತೀನ್ ಎಂಬ ನಯನಸ್ನೇಹಿ ಅಂಶಗಳನ್ನು ಒಳಗೊಂಡಿದೆ. ಹಸಿರು ಬಣ್ಣದ ಸೊಪ್ಪು ಅಥವಾ ತರಕಾರಿಗಳು ಮೇಲಿನ ಅಂಶಗಳು ಅಧಿಕವಿರುವ ಕಾರಣ ಕಣ್ಣಿನ ಸಮಸ್ಯೆ ಎದುರಾದವರು ಅಥವಾ ಮುಂಜಾಗ್ರತಾ ಕ್ರಮವಾಗಿ ಹಸಿರು ಸೊಪ್ಪು, ತರಕಾರಿಗಳನ್ನು ಸೇವಿಸಿ.
ಕ್ಯಾರೆಟ್ ನಂತೆಯೇ ಸಿಹಿಗೆಣಸಿನಲ್ಲಿ ಸಹ ಬೆಟಾ ಕೆರೋಟಿನ್ ಅಂಶ ಹೆಚ್ಚಿದ್ದು, ಇದರಲ್ಲೂ ಆ್ಯಂಟಿಆಕ್ಸಿಡೆಂಟ್ ವಿಟಮಿನ್ ಇ ಇದೆ. ಇದು ಕಣ್ಣಿನ ದೃಷ್ಟಿ ಸುಧಾರಿಸುವಲ್ಲಿ ಗಣನೀಯ ಪಾತ್ರ ವಹಿಸುತ್ತದೆ.
ಡ್ರೈ ಫ್ರೂಟ್ಸ್:
ಧಾನ್ಯಗಳು ಸಹ ಡ್ರೈ ಫ್ರೂಟ್ಸ್ ನಂತೆ ಒಮೆಗಾ-3 ಕೊಬ್ಬಿನಾಮ್ಲ ಹಾಗೂ ವಿಟಮಿನ್ ಇ ಇರುತ್ತದೆ. ಇದು ಸಹ ಕಣ್ಣಿಗೆ ಅಗತ್ಯ ಪೋಷಕಾಂಶಗಳನ್ನು ಒದಗಿಸುವಲ್ಲಿ ಪರಿಣಾಮಕಾರಿ.
ಮೊಟ್ಟೆ:
ನೀರು:
ನಿಮಗೆ ಅಚ್ಚರಿಯಾಗಬಹುದು ನೀರು ಹೇಗೆ ಕಣ್ಣಿಗೆ ಪೋಷಕಾಂಶಗಳನ್ನು ಒದಗಿಸುತ್ತದೆ, ಹೇಗೆ ಸಹಕಾರಿ ಎಂದು. ನಿತ್ಯ ಅಧಿಕ ಪ್ರಮಾಣದ ನೀರು ಸೇವಿಸುವುದರಿಂದ ದೇಹದ ನಿರ್ಜಲೀಕರಣವನ್ನು ನಿವಾರಿಸುತ್ತದೆ. ಇದರಿಂದ ಕಣ್ಣು ಒಣಗುವುದನ್ನು ಸಹ ಇದು ತಪ್ಪಿಸುತ್ತದೆ.
ವಿಟಮಿನ್ ಎ ಮತ್ತು ಜಿಂಕ್ ಅಂಶವನ್ನು ಹೊಂದಿರುವ ಹಾಲು, ಮೊಸರು ಕಣ್ಣಿನ ದೃಷ್ಟಿ ಸುಧಾರಿಸಲು ಉತ್ತಮ ಆಹಾರ. ವಿಟಮಿನ್ ಎ ಕಾರ್ನಿಯಾವನ್ನು ರಕ್ಷಿಸಿದರೆ ಜಿಂಕ್ ಕಣ್ಣಿನ ಮೂಲಕ ಯಕೃತ್‌ಗೆ ವಿಟಮಿನ್ ಅನ್ನು ಪೂರೈಸುತ್ತದೆ. ಈ ಎರಡೂ ಪೋಷಕಾಂಶಗಳು ರಾತ್ರಿಯ ದೃಷ್ಟಿ ಹಾಗೂ ಕಣ್ಣಿನ ಪೊರೆಯ ರಕ್ಷಣೆಗೆ ಸಾಕಷ್ಟು ಉಪಕಾರಿಯಾಗಿದೆ.
Published On - 12:00 pm, Sat, 1 February 20