ಹಿಂದೂ ಪೂಜೆಯಲ್ಲಿ ಹೂವುಗಳಿಗೆ ವಿಶೇಷ ಮಹತ್ವವಿದೆ. ದೇವರಿಗೆ ಹೂವುಗಳನ್ನು ಅರ್ಪಿಸದೇ ಪೂಜೆ ಸಂಪನ್ನಗೊಳ್ಳೋದೇ ಇಲ್ಲ. ಆದರೆ ಯಾವ ದೇವರಿಗೆ ಯಾವ ಹೂವು ಇಷ್ಟ ಎಂಬುದನ್ನು ಮೊದಲೇ ಅರಿತು ಪೂಜೆ ಸಲ್ಲಿಸಬೇಕು.
ಹಾಗೆ ಮಾಡಿದಾಗ ಮಾತ್ರ ನಾವು ದೇವರ ಅನುಗ್ರಹಕ್ಕೆ ಬಹಳ ಬೇಗ ಪಾತ್ರರಾಗಬಹುದು ಎನ್ನಲಾಗುತ್ತೆ. ಅಷ್ಟೇ ಅಲ್ಲದೇ, ನಾವು ದೇವರ ಪೂಜೆಗೆ ಸಲ್ಲಿಸುವ ಹೂವುಗಳ ಮಹತ್ವವನ್ನು ಮೊದಲು ತಿಳಿದುಕೊಳ್ಳಬೇಕು. ನಂತರ ಹೂವನ್ನು ಅರ್ಪಿಸಿ ಪೂಜಿಸಿದ್ರೆ ಭಗವಂತ ಪ್ರಸನ್ನನಾಗಿ ನಮ್ಮ ಬೇಡಿಕೆಗಳನ್ನು ಈಡೇರಿಸುತ್ತಾನೆ ಎಂಬ ನಂಬಿಕೆ ಇದೆ.
ಹಿಂದೂ ಧರ್ಮದಲ್ಲಿ ಮುಕ್ಕೋಟಿ ದೇವರುಗಳು ಇದ್ದಾರೆ ಎನ್ನಲಾಗುತ್ತೆ. ಪ್ರತಿಯೊಬ್ಬರೂ ಒಂದೊಂದು ದೇವತೆ ಅಥವಾ ದೇವರುಗಳನ್ನು ಪೂಜಿಸುತ್ತಾರೆ. ಹಾಗೆಯೇ ಪ್ರತಿಯೊಂದು ದೇವರಿಗೂ ಪ್ರತ್ಯೇಕ ಹೂವಿನಿಂದ ಪೂಜೆ ಸಲ್ಲಿಸುವ ಪದ್ಧತಿ ನಮ್ಮಲ್ಲಿದೆ. ಈ ಆಚರಣೆಯ ಹಿಂದೆ ವೈಜ್ಞಾನಿಕ ಸತ್ಯ ಅಡಗಿದೆ. ಪ್ರತಿಯೊಂದು ಹೂವು ಕೂಡ ತನ್ನದೇ ಆದ ಸುವಾಸನೆ ಮತ್ತು ಬಣ್ಣವನ್ನು ಒಳಗೊಂಡಿದೆ. ಪ್ರತಿಯೊಂದು ಹೂವಿನ ಶಕ್ತಿ ವಿಭಿನ್ನವಾಗಿರುತ್ತೆ.
ನಿರ್ದಿಷ್ಟ ದೇವರುಗಳ ದೈವೀಕ ಶಕ್ತಿಯನ್ನು ನಿರ್ದಿಷ್ಟ ಹೂವುಗಳು ಹೀರಿಕೊಳ್ಳುವುದರಿಂದ ದೇವರು ಪ್ರಸನ್ನನಾಗುತ್ತಾನೆ ಎಂಬ ನಂಬಿಕೆ ಇದೆ. ಹೂವುಗಳನ್ನು ದೇವರ ಪೂಜೆಗೆ ಬಳಸುವಾಗ ಕೆಲವೊಂದು ನಿಯಮಗಳನ್ನು ಪಾಲಿಸಬೇಕು.
ದೇವರ ಪೂಜೆಗೆ ಹೂವು ಬಳಸೋ ನಿಯಮಗಳು
-ಹೂವನ್ನು ಎಡಗೈಯಲ್ಲಿ ಸ್ಪರ್ಶಿಸಬಾರದು
-ಖಾಲಿ ನೆಲದ ಮೇಲೆ ಹೂವನ್ನು ಇಡಬಾರದು
-ದೇವರ ಪೂಜೆಗೆ ಬಳಸೋ ಹೂವಿನ ಸುವಾಸನೆಯನ್ನು ತೆಗೆದುಕೊಳ್ಳಬಾರದು.
-ಸುವಾಸನೆ ರಹಿತ ಹೂವುಗಳನ್ನು ಪೂಜೆಗೆ ಬಳಸಬಾರದು
-ಸರಿಯಾಗಿ ಅರಳಿರದ ಹೂವನ್ನು ದೇವರಿಗೆ ಅರ್ಪಿಸಬಾರದು
-ಮೊಗ್ಗನ್ನು ಪೂಜೆಗೆ ಬಳಸುವ ಹಾಗಿಲ್ಲ
-ಕದ್ದು ತಂದ ಹೂವುಗಳನ್ನು ಪೂಜೆಗೆ ಬಳಸಬಾರದು
-ನೀರಿನಲ್ಲಿ ಅದ್ದಿದ, ತೊಳೆದ ಹೂವುಗಳನ್ನು ಬಳಸಬಾರದು
Published On - 3:06 pm, Wed, 23 October 19