AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮನೆಬಾಗಿಲಿಗೆ ಅರಿಶಿನ, ಕುಂಕುಮ ಹಚ್ಚೋದೇಕೆ, ಅದರಿಂದ ಏನು ಲಾಭ?

ಸೂರ್ಯೋದಯಕ್ಕೂ ಮುನ್ನ ಎದ್ದು ಗೃಹಿಣಿಯರು ಮನೆ ಅಂಗಳದ ಕಸ ಗುಡಿಸಿ, ಸಗಣಿಯಿಂದ ಸಾರಿಸೋದು. ಹೊಸ್ತಿಲನ್ನು ನೀರಿನಿಂದ ಸ್ವಚ್ಛಗೊಳಿಸಿ ಅರಿಶಿನ, ಕುಂಕುಮ ಹಚ್ಚಿ ಹೂಗಳನ್ನಿಡೋದು. ಇದೆಲ್ಲಾ ಹಿಂದೂ ಧರ್ಮದಲ್ಲಿ ಅನಾದಿಕಾಲದಿಂದಲೂ ನಡೆಸಿಕೊಂಡು ಬಂದಿರೋ ಸಂಪ್ರದಾಯ. ಆದ್ರೆ ಇತ್ತೀಚಿನ ದಿನಗಳಲ್ಲಿ ಯಾರು ಅಷ್ಟು ಬೇಗ ಎದ್ದು ಇದೆಲ್ಲಾ ಮಾಡ್ತಾರೆ ಅಂತಾ ಶಾಶ್ವತವಾಗಿ ಹೊಸ್ತಿಲಿಗೆ ಹಳದಿ ಪೇಂಟ್ ಬಳಿಸ್ತಾರೆ. ಅದರ ಮೇಲೆ ಬಿಳಿ ಪೇಂಟ್​ನಿಂದ ರಂಗೋಲಿ ಗೆರೆಗಳನ್ನು ಹಾಕಿಸ್ತಾರೆ. ಕೆಂಪು, ಹಳದಿ ಪೇಂಟ್​ನಿಂದ ಅರಿಶಿನ, ಕುಂಕುಮ ಇಡುವಂತೆ ವೃತ್ತಾಕಾರದ ಚುಕ್ಕೆಗಳನ್ನು ಇಡಲಾಗಿರುತ್ತೆ. […]

ಮನೆಬಾಗಿಲಿಗೆ ಅರಿಶಿನ, ಕುಂಕುಮ ಹಚ್ಚೋದೇಕೆ, ಅದರಿಂದ ಏನು ಲಾಭ?
ಸಾಧು ಶ್ರೀನಾಥ್​
ಸಾಧು ಶ್ರೀನಾಥ್​|

Updated on:Nov 25, 2019 | 10:11 AM

Share

ಸೂರ್ಯೋದಯಕ್ಕೂ ಮುನ್ನ ಎದ್ದು ಗೃಹಿಣಿಯರು ಮನೆ ಅಂಗಳದ ಕಸ ಗುಡಿಸಿ, ಸಗಣಿಯಿಂದ ಸಾರಿಸೋದು. ಹೊಸ್ತಿಲನ್ನು ನೀರಿನಿಂದ ಸ್ವಚ್ಛಗೊಳಿಸಿ ಅರಿಶಿನ, ಕುಂಕುಮ ಹಚ್ಚಿ ಹೂಗಳನ್ನಿಡೋದು. ಇದೆಲ್ಲಾ ಹಿಂದೂ ಧರ್ಮದಲ್ಲಿ ಅನಾದಿಕಾಲದಿಂದಲೂ ನಡೆಸಿಕೊಂಡು ಬಂದಿರೋ ಸಂಪ್ರದಾಯ. ಆದ್ರೆ ಇತ್ತೀಚಿನ ದಿನಗಳಲ್ಲಿ ಯಾರು ಅಷ್ಟು ಬೇಗ ಎದ್ದು ಇದೆಲ್ಲಾ ಮಾಡ್ತಾರೆ ಅಂತಾ ಶಾಶ್ವತವಾಗಿ ಹೊಸ್ತಿಲಿಗೆ ಹಳದಿ ಪೇಂಟ್ ಬಳಿಸ್ತಾರೆ. ಅದರ ಮೇಲೆ ಬಿಳಿ ಪೇಂಟ್​ನಿಂದ ರಂಗೋಲಿ ಗೆರೆಗಳನ್ನು ಹಾಕಿಸ್ತಾರೆ.

ಕೆಂಪು, ಹಳದಿ ಪೇಂಟ್​ನಿಂದ ಅರಿಶಿನ, ಕುಂಕುಮ ಇಡುವಂತೆ ವೃತ್ತಾಕಾರದ ಚುಕ್ಕೆಗಳನ್ನು ಇಡಲಾಗಿರುತ್ತೆ. ಹೀಗೆ ಮಾಡೋದು ಶುದ್ಧ ತಪ್ಪು. ಮನೆ ಬಾಗಿಲಿಗೆ ಅರಿಶಿನ, ಕುಂಕುಮ ಹಚ್ಚುವುದರಿಂದ ಆಗುವ ಲಾಭಗಳ ಬಗ್ಗೆ ನಿಮಗೆ ಗೊತ್ತಾದ್ರೆ ಪ್ರತಿನಿತ್ಯ ನೀವೂ ಈ ಆಚರಣೆಯನ್ನು ಪಾಲಿಸೋಕೆ ಆರಂಭಿಸ್ತೀರಾ. ನಿಮಗೆ ಗೊತ್ತಾ? ಮನೆಯ ಬಾಗಿಲು ಆಕರ್ಷಕವಾಗಿದ್ರೆ ಪಾಸಿಟಿವ್ ಎನರ್ಜಿಯ ಅನುಭವವಾಗುತ್ತೆ. ಮನೆಯ ಮುಂಬಾಗಿಲು ಆಕರ್ಷಕವಾಗಿದ್ರೆ ಮನೆಗೆ ಶುಭವಾಗುತ್ತೆ ಅಂತಾ ನಮ್ಮ ಶಾಸ್ತ್ರಗಳಲ್ಲಿ ಉಲ್ಲೇಖವಿದೆ.

ಮನೆಯ ಮುಂಬಾಗಿಲು ನಿಮ್ಮ ವ್ಯಕ್ತಿತ್ವವನ್ನು ಹೇಳುತ್ತೆ. ಹೀಗಾಗೇ ಮನೆಯ ಮುಂದೆ ಹಾಗೂ ಹೊಸ್ತಿಲ ಮೇಲೆ ರಂಗೋಲಿ ಬಿಡೋದು. ಅರಿಶಿನ, ಕುಂಕುಮ ಹಚ್ಚೋದು ಶುಭದ ಸಂಕೇತ. ಹೊಸ್ತಿಲು ಬರಿದಾಗಿದ್ರೆ ಅದು ಅಶುಭ ಎಂಬ ನಂಬಿಕೆ ಇದೆ. ಮನೆಯ ಹೊಸ್ತಿಲು ಸಾಕ್ಷಾತ್ ಮಹಾಲಕ್ಷ್ಮೀ ಸ್ವರೂಪ ಎನ್ನಲಾಗುತ್ತೆ. ಮನೆಯ ಮುಖ್ಯದ್ವಾರದ ಹೊಸ್ತಿಲಲ್ಲಿ ಸಾಕ್ಷಾತ್ ಲಕ್ಷ್ಮೀ ಇರ್ತಾಳೆ. ಇನ್ನು ಹೊಸ್ತಿಲ ಮೇಲ್ಭಾಗದಲ್ಲಿ ಗೌರಿ ನೆಲೆಸಿರ್ತಾಳೆ. ರಂಗೋಲಿ, ಅರಿಶಿನ-ಕುಂಕುಮ ಇಲ್ಲದ ಮನೆಗೆ ದೇವತೆಗಳ ಪ್ರವೇಶಿಸೋದಿಲ್ಲ ಅಂತಾ ನಮ್ಮ ಧರ್ಮಶಾಸ್ತ್ರಗಳಲ್ಲಿ ಉಲ್ಲೇಖವಿದೆ.

ಮನೆ ಬಾಗಿಲಿಗೆ ಏಕೆ ಮಂಗಳದ್ರವ್ಯಗಳನ್ನು ಹಚ್ಚಬೇಕು? -ಇದು ಭಾರತದ ಸಂಸ್ಕೃತಿಯನ್ನು ಪ್ರತಿನಿಧಿಸುತ್ತೆ -ಮನೆಯ ಶುಚಿತ್ವ ಕಾಪಾಡುತ್ತೆ -ಹೊಸ್ತಿಲಲ್ಲಿ ಮಹಾಲಕ್ಷ್ಮೀ ನೆಲೆಸಿರುತ್ತಾಳೆ -ಅರಿಶಿನದಲ್ಲಿ ಆಂಟಿ ಆಕ್ಸಿಡೆಂಟುಗಳಿರೋದ್ರಿಂದ ಮನೆಯೊಳಗೆ ಕ್ರಿಮಿಕೀಟಗಳು ಪ್ರವೇಶಿಸಲ್ಲ -ಕೆಲಸ ಕಾರ್ಯದ ನಿಮಿತ್ತ ಹೊರಗಡೆ ಹೋಗುವವರಿಗೆ ಇದ್ರಿಂದ ಒಳಿತಾಗುತ್ತೆ -ಮನೆಯ ಬಾಗಿಲು ಸುಂದರವಾಗಿ ಕಾಣುತ್ತೆ -ಮನೆಯವರಲ್ಲಿ ನಕಾರಾತ್ಮಕ ಚಿಂತನೆಗಳು ಬಾರದಂತೆ ತಡೆಯುತ್ತೆ -ಮನೆಯಲ್ಲಿ ಸದಾ ಪಾಸಿಟಿವ್ ವೈಬ್ರೇಷನ್ ಉಂಟಾಗಲು ಸಹಕಾರಿಯಾಗುತ್ತೆ -ಮನೆಯಲ್ಲಿರುವವರ ಆಯಸ್ಸು ಹೆಚ್ಚುತ್ತೆ -ಮನೆಯಲ್ಲಿ ಆರೋಗ್ಯ, ನೆಮ್ಮದಿ ನೆಲೆಸುತ್ತೆ

ಮನೆ ಬಾಗಿಲಿಗೆ ಅರಿಶಿನ, ಕುಂಕುಮ ಹಚ್ಚೋದು ಮೂಢನಂಬಿಕೆಯಲ್ಲ. ಈ ಆಚರಣೆಯ ಹಿಂದೆ ವೈಜ್ಞಾನಿಕ ಕಾರಣವಿದೆ. ಪುರಾತನ ಕಾಲದ ನಮ್ಮ ಸಂಸ್ಕೃತಿ, ಸಂಪ್ರದಾಯಗಳು ನಮಗೆ ಆರೋಗ್ಯದ ರಕ್ಷಾಕವಚವಿದ್ದಂತೆ. ಇಂತಹ ಆಚರಣೆಗಳ ಬಗ್ಗೆ ಅರಿತು ಆಚರಿಸಿದ್ರೆ ಸುಂದರ, ಸ್ವಾಸ್ಥ್ಯ ಜೀವನ ನಮ್ಮದಾಗುತ್ತೆ.

Published On - 9:01 am, Mon, 25 November 19

Follow Us
ಸಾಧು ಶ್ರೀನಾಥ್​
ಸಾಧು ಶ್ರೀನಾಥ್​

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಫರೇಷನ್’
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಫರೇಷನ್’
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್
ಅಲ್ಪಸಂಖ್ಯಾತ ಮತದಾರರ ವೋಟ್ ಡಿಲಿಟ್, BJP ಮುಖಂಡರ ಮೇಲೆ FIR ದಾಖಲು
ಅಲ್ಪಸಂಖ್ಯಾತ ಮತದಾರರ ವೋಟ್ ಡಿಲಿಟ್, BJP ಮುಖಂಡರ ಮೇಲೆ FIR ದಾಖಲು
ದರ್ಶನ್ ಕೇಸ್: ಮಾಫಿ ಸಾಕ್ಷಿ ವಿಡಿಯೋ ವೈರಲ್ ಮಾಡಿದವರಿಗೆ ಕೋರ್ಟ್ ಶಾಕ್
ದರ್ಶನ್ ಕೇಸ್: ಮಾಫಿ ಸಾಕ್ಷಿ ವಿಡಿಯೋ ವೈರಲ್ ಮಾಡಿದವರಿಗೆ ಕೋರ್ಟ್ ಶಾಕ್
RSS ಕಚೇರಿಯಲ್ಲೇ ಫಾರ್ಮ್-7 ಮುದ್ರಣ: ತನ್ವೀರ್ ಸೇಠ್ ಆರೋಪ
RSS ಕಚೇರಿಯಲ್ಲೇ ಫಾರ್ಮ್-7 ಮುದ್ರಣ: ತನ್ವೀರ್ ಸೇಠ್ ಆರೋಪ