ಹಿಂದೂ ಧರ್ಮದಲ್ಲಿ ಗೋವಿಗೆ ಅನಾದಿಕಾಲದಿಂದಲೂ ಪವಿತ್ರ ಸ್ಥಾನವನ್ನು ನೀಡಲಾಗಿದೆ. ರೈತ ದೇಶದ ಬೆನ್ನೆಲುಬಾದರೆ, ಗೋವುಗಳು ರೈತನಿಗೆ ಬೆನ್ನೆಲುಬು. ಇಂತಹ ಗೋವುಗಳನ್ನು ಕೃಷಿ ಚಟುವಟಿಕೆ, ಹೈನುಗಾರಿಕೆಗೆ ಮಾತ್ರ ಸೀಮಿತವಾಗಿರಿಸದೇ ದೈವೀ ಸ್ಥಾನವನ್ನು ನೀಡಲಾಗಿದೆ. ಪರಿಣಾಮ ಭಾರತೀಯರು ಗೋವುಗಳನ್ನು ದೇವರೆಂದು ಪೂಜಿಸ್ತಾರೆ. ಯಾರ ಮನೆಯಲ್ಲಿ ಗೋವುಗಳ ಪೂಜೆಯನ್ನು ಭಯ ಭಕ್ತಿಯಿಂದ ಮಾಡ್ತಾರೋ ಆ ಮನೆಯಲ್ಲಿ ಸುಖ-ಸಮೃದ್ಧಿ, ಶಾಂತಿ, ಐಶ್ವರ್ಯ ನೆಲೆಸಿರುತ್ತೆ. ಅಲ್ಲದೇ ಆ ಮನೆಗೆ ಯಾವುದೇ ರೀತಿಯ ಕಷ್ಟಗಳು ಬರೋದಿಲ್ಲ ಎಂಬ ನಂಬಿಕೆ ಇದೆ.
ಗೋ ಮೂತ್ರದಲ್ಲಿ ಗಂಗೆ ನೆಲೆಸಿರುತ್ತಾಳೆ. ಗೋವಿನ ಸಗಣಿಯಿಂದ ಮಾಡಿದ ಧೂಪವನ್ನು ಪ್ರತಿದಿನ ಮನೆ, ಕಚೇರಿ, ದೇವಸ್ಥಾನದಲ್ಲಿ ಹಚ್ಚಿದ್ರೆ ಪರಿಸರ ಶುದ್ಧಗೊಳ್ಳುವುದರ ಜೊತೆಗೆ ಉಸಿರಾಟಕ್ಕೆ ಸಂಬಂಧಿಸಿದ ತೊಂದರೆಗಳು ನಿವಾರಣೆಯಾಗುತ್ತವೆ. ಎನ್ನಲಾಗುತ್ತೆ. ಜೊತೆಗೆ ನಕಾರಾತ್ಮಕ ಶಕ್ತಿಗಳು ಪ್ರವೇಶ ಮಾಡುವುದಿಲ್ಲ. ಗೋ ಪೂಜೆ ಎಲ್ಲಾ ದೇವರುಗಳ ಪೂಜೆಗಿಂತ ಮಿಗಿಲು. ಯಾಕಂದ್ರೆ ಎಲ್ಲಾ ದೇವರುಗಳು ಒಂದೇ ಕಡೆ ಸಿಗುವುದಿಲ್ಲ. ಒಂದೊಂದು ದೇವರಿಗೂ ಒಂದೊಂದು ದೇವಸ್ಥಾನಗಳಿರುತ್ತೆ.
ಇನ್ನು ಗ್ರಹದೋಷ ಉಳ್ಳವರು ಆಲಯದಲ್ಲಿ ನವಗ್ರಹ ಪ್ರದಕ್ಷಿಣೆ ಮಾಡುವ ಜೊತೆಗೆ ಆಯಾ ಗ್ರಹದೋಷ ಸಂಬಂಧಿತ ವಾರಗಳಂದು ಆಯಾ ಗ್ರಹಕ್ಕೆ ಪ್ರಿಯವಾದ ಧಾನ್ಯವನ್ನು ನೆನೆಸಿ ಅದರೊಂದಿಗೆ ಬೆಲ್ಲವನ್ನು ಸೇರಿಸಿ ಗೋಮಾತೆಗೆ ನೀಡಿದ್ರೆ ಶುಭಪ್ರದ. ನಂತರ ಗೋವಿಗೆ 3 ಪ್ರದಕ್ಷಿಣೆ ಹಾಕಿ, ಗೋವಿನ ಬಾಲಕ್ಕೆ ನಮಸ್ಕರಿಸಿದರೆ ಗ್ರಹಬಾಧೆಗಳು ದೂರಾಗುತ್ತವೆ ಅಂತಾ ಶಾಸ್ತ್ರಗಳಲ್ಲಿ ಉಲ್ಲೇಖವಿದೆ.