Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹಾಲು ಒಡೆಯಿತೇ? ಚಿಂತೆ ಬಿಡಿ ಬಹಳಷ್ಟು ಪ್ರಯೋಜನ ಪಡೆಯಿರಿ

ಹಾಲು ಒಡೆಯಿತೇ? ಎಸೆಯಬೇಡಿ, ಇದರ ಹಲವು ಪ್ರಯೋಜನಗಳನ್ನು ಪಡೆದುಕೊಳ್ಳಬಹುದು. ವಾತಾವರಣದಲ್ಲಿರುವ ಬ್ಯಾಕ್ಟೀರಿಯಾಗಳಲ್ಲಿ ಎಷ್ಟು ಒಳ್ಳೆಯ ಬ್ಯಾಕ್ಟೀರಿಯಾಗಳಿವೆಯೋ ಅಷ್ಟೇ ಕೆಟ್ಟ ಬ್ಯಾಕ್ಟೀರಿಯಾಗಳೂ ಇವೆ. ನಮ್ಮ ಹೊಲವನ್ನು ಕೊಳೆಸಿ ಫಲವತ್ತಾಗಿಸುವ ಬ್ಯಾಕ್ಟೀರಿಯಾಗಳಂತೆಯೇ ನಮ್ಮ ಆಹಾರವನ್ನು ಕೊಳೆಸಿ ಹಾಳು ಮಾಡುವ ಬ್ಯಾಕ್ಟೀರಿಯಾಗಳೂ ಇವೆ. ನಾವು ಸೇವಿಸುವ ಆಹಾರಗಳಲ್ಲಿ ಅತಿ ಸುಲಭವಾಗಿ ಹಾಳಾಗುವ ಆಹಾರವೆಂದರೆ ಹಾಲು. ವಾಸ್ತವವಾಗಿ ಹಾಲು ಒಡೆಯುವುದು ಅಂದರೆ ಹಾಲಿನಂಶ ಮತ್ತು ನೀರಿನಂಶವನ್ನು ಬೇರೆ ಮಾಡುವ ಪ್ರಕ್ರಿಯೆಯೇ ಆಗಿದೆಯೇ ಹೊರತು ಇದನ್ನು ಇತರ ಕಾರ್ಯಗಳಿಗೆ ಬಳಸಲಾಗದು ಎಂದೇನಿಲ್ಲ. ಹಣ್ಣು ತರಕಾರಿಗಳು […]

ಹಾಲು ಒಡೆಯಿತೇ? ಚಿಂತೆ ಬಿಡಿ ಬಹಳಷ್ಟು ಪ್ರಯೋಜನ ಪಡೆಯಿರಿ
Follow us
ಸಾಧು ಶ್ರೀನಾಥ್​
|

Updated on:Nov 11, 2019 | 1:14 PM

ಹಾಲು ಒಡೆಯಿತೇ? ಎಸೆಯಬೇಡಿ, ಇದರ ಹಲವು ಪ್ರಯೋಜನಗಳನ್ನು ಪಡೆದುಕೊಳ್ಳಬಹುದು. ವಾತಾವರಣದಲ್ಲಿರುವ ಬ್ಯಾಕ್ಟೀರಿಯಾಗಳಲ್ಲಿ ಎಷ್ಟು ಒಳ್ಳೆಯ ಬ್ಯಾಕ್ಟೀರಿಯಾಗಳಿವೆಯೋ ಅಷ್ಟೇ ಕೆಟ್ಟ ಬ್ಯಾಕ್ಟೀರಿಯಾಗಳೂ ಇವೆ. ನಮ್ಮ ಹೊಲವನ್ನು ಕೊಳೆಸಿ ಫಲವತ್ತಾಗಿಸುವ ಬ್ಯಾಕ್ಟೀರಿಯಾಗಳಂತೆಯೇ ನಮ್ಮ ಆಹಾರವನ್ನು ಕೊಳೆಸಿ ಹಾಳು ಮಾಡುವ ಬ್ಯಾಕ್ಟೀರಿಯಾಗಳೂ ಇವೆ. ನಾವು ಸೇವಿಸುವ ಆಹಾರಗಳಲ್ಲಿ ಅತಿ ಸುಲಭವಾಗಿ ಹಾಳಾಗುವ ಆಹಾರವೆಂದರೆ ಹಾಲು.

ವಾಸ್ತವವಾಗಿ ಹಾಲು ಒಡೆಯುವುದು ಅಂದರೆ ಹಾಲಿನಂಶ ಮತ್ತು ನೀರಿನಂಶವನ್ನು ಬೇರೆ ಮಾಡುವ ಪ್ರಕ್ರಿಯೆಯೇ ಆಗಿದೆಯೇ ಹೊರತು ಇದನ್ನು ಇತರ ಕಾರ್ಯಗಳಿಗೆ ಬಳಸಲಾಗದು ಎಂದೇನಿಲ್ಲ. ಹಣ್ಣು ತರಕಾರಿಗಳು ಹಾಳಾದರೆ ಇವನ್ನು ಅನಿವಾರ್ಯವಾಗಿ ಎಸೆಯಲೇಬೇಕಾಗುತ್ತದೆ. ಒಡೆದ ಹಾಲನ್ನೂ ಕೆಲವು ಬಗೆಗಳಲ್ಲಿ ಉಪಯೋಗಿಸುವ ಮೂಲಕ ವ್ಯರ್ಥವಾಗುವುದನ್ನು ತಪ್ಪಿಸಬಹುದು. ಈ ಮೂಲಕ ಒಡೆದ ಹಾಲಿಗೆ ಅತ್ತು ಪ್ರಯೋಜನವಿಲ್ಲ ಎಂಬ ನಾಣ್ಣುಡಿಯನ್ನು ಕೊಂಚ ಬದಲಿಸಬೇಕಾಗಿ ಬರಬಹುದು.

ಒಡೆದ ಹಾಲು ಸಲಾಡ್ ಗೆ ಬಳಸಿ ನೋಡಿ: ಮುಂದಿನ ಬಾರಿ ಹಾಲು ಒಡೆದಾಗ ಹುಳಿ ಕ್ರೀಂ ಬದಲು ಈ ಹಾಲನ್ನು ನಿಮ್ಮ ಸಲಾಡ್ ಮೇಲೆ ಸುರಿದು ಅಲಂಕರಿಸಬಹುದು. ಆದರೆ ಇದಕ್ಕಾಗಿ ಪ್ಯಾಶ್ಚರೀಕರಿಸಿದ ಹಾಲು ಹಾಳಾದರೆ ಬಳಸಬಾರದು, ಕೇವಲ ಪ್ಯಾಶ್ಚರೀಕರಿಸದ ಹಾಲು ಹಾಳಾದರೆ ಮಾತ್ರವೇ ಅನುಸರಿಸಬಹುದು.

ಗಿಡಕ್ಕೆ ಗೊಬ್ಬರ: ಗಿಡಕ್ಕೆ ಗೊಬ್ಬರವಾಗಿ ಹಾಲನ್ನು ಒಡೆದ ಬ್ಯಾಕ್ಟೀರಿಯಾಗಳೇ ಮಣ್ಣನ್ನೂ ಒಡೆದು ಫಲವತ್ತಾಗಿಸುವ ಕ್ಷಮತ್ ಹೊಂದಿವೆ. ಹಾಗಾಗಿ ಒಡೆದ ಹಾಲನ್ನು ಹೂಕುಂಡಕ್ಕೆ ಸುರಿಯುವ ಮೂಲಕ ಗಿಡಗಳಿಗೆ ಉತ್ತಮ ಗೊಬ್ಬರ ದೊರಕಿದಂತಾಗುತ್ತದೆ ಮಾತ್ರವಲ್ಲದೇ ಪ್ರಾಣಿಗಳ ಜೀವಕೋಶಗಳಿಗೆ ಅಗತ್ಯವಿರುವ ಕ್ಯಾಲ್ಸಿಯಂ ಅಂಶವನ್ನು ಹೆಚ್ಚಾಗಿಯೇ ಒದಗಿಸಲು ಸಾಧ್ಯವಾಗುತ್ತದೆ.

ಸಾಕು ಪ್ರಾಣಿಗಳಿಗೆ ನೀಡಿ: ಒಡೆದ ಹಾಲನ್ನು ನಾವು ಜೀರ್ಣಿಸಿಕೊಳ್ಳಲಾರೆವಾದರೂ ನಮ್ಮ ಸಾಕುಪ್ರಾಣಿಗಳು ಸುಲಭವಾಗಿ ಜೀರ್ಣಿಸಿಕೊಳ್ಳಬಲ್ಲವು. ಹಾಗಾಗಿ ಇವುಗಳನ್ನು ಸುರಕ್ಷಿತವಾಗಿ ನಮ್ಮ ಸಾಕುಪ್ರಾಣಿಗಳಿಗೆ ಒದಗಿಸಬಹುದು. ಅಥವಾ ಇತರ ಆಹಾರಗಳಾದ ಬಿಸ್ಕತ್ ಮೊದಲಾದವುಗಳ ಜೊತೆಗೆ ಬೆರೆಸಿ ನೀಡಬಹುದು. ಇದರಿಂದ ಪ್ರಾಣಿಗಳಿಗೆ ಹೆಚ್ಚಿನ ಪ್ರೋಟೀನ್ ಮತ್ತು ಕ್ಯಾಲ್ಸಿಯಂ ದೊರಕುತ್ತದೆ.

ಮುಖಲೇಪದ ರೂಪದಲ್ಲಿ ಇದರಲ್ಲಿರುವ ಬ್ಯಾಕ್ಟೀರಿಯಾಗಳು ವಿಶೇಷವಾಗಿ ಚರ್ಮದಾಳದಲ್ಲಿರುವ ಕ್ರಿಮಿ ಮತ್ತು ಕೆಟ್ಟ ಬ್ಯಾಕ್ಟೀರಿಯಾಗಳನ್ನು ಕೊಂದು ನಿವಾರಿಸುವ ಕ್ಷಮತೆ ಪಡೆದಿವೆ. ಹಾಗಾಗಿ ಒಡೆದ ಹಾಲನ್ನು ಮುಖಲೇಪದ ರೂಪದಲ್ಲಿ ಬಳಸುವ ಮೂಲಕ ಮೊಡವೆಗಳಿರುವ ಚರ್ಮಕ್ಕೆ ಹೆಚ್ಚಿನ ಆರೈಕೆ ಒದಗಿಸಬಹುದು. ಒಡೆದ ಹಾಲನ್ನು ನೇರವಾಗಿ ಮುಖಕ್ಕೆ ಹಚ್ಚಿಕೊಳ್ಳುವ ಮೂಲಕ ಕೊಂಚ ಹೊತ್ತು ವಾಸನೆಯನ್ನು ಸಹಿಸಬೇಕಾಗಿ ಬಂದರೂ, ಬಳಿಕ ಇದು ನೀಡುವ ಪರಿಣಾಮ ಮಾತ್ರ ಸಿಹಿಯೇ ಆಗಿರುತ್ತದೆ.

ಚೀಸ್: ಹೆಚ್ಚಿನ ಜನರಿಗೆ ಈ ಮಾಹಿತಿಯ ಅರಿವಿಲ್ಲದಿರಬಹುದು, ಏನೆಂದರೆ ಚೀಸ್ ಅನ್ನು ಹುಳಿಬರಿಸಿದ ಮೊಸರಿನಿಂದ ತಯಾರಿಸಲಾಗುತ್ತದೆ. ಹಾಗಾಗಿ ಮುಂದಿನ ಬಾರಿ ಹಾಲು ಒಡೆದಾಗ ನಿಮ್ಮದೇ ಆದ ಚೀಸ್ ತಯಾರಿಗೆ ಇದನ್ನು ಬಳಸಬಹುದು. ನಿಮಗೆ ಸೂಕ್ತವೆನಿಸಿದ ಯಾವುದೇ ಪ್ರಕಾರವನ್ನು ಅನುಸರಿಸಿ ಚೀಸ್ ತಯಾರಿಸಿ. ಈ ಮೂಲಕ ಹಣದಲ್ಲಿಯೂ ಉಳಿತಾಯ ಸಾಧಿಸಬಹುದು.

ಬೇಕರಿ ಉತ್ಪನ್ನಗಳಿಗೆ: ನಿಮಗೆ ಮನೆಯಲ್ಲಿಯೇ ಬೇಕರಿ ಉತ್ಪನ್ನಗಳನ್ನು ಅಂದರೆ ಕೇಕ್, ಪಫ್ಸ್ ಮೊದಲಾದವುಗಳನ್ನು ಮಾಡುವ ಉತ್ಸಾಹವಿದ್ದರೆ , ಇಲ್ಲವೇ ಸರಳವಾಗಿ ದೋಸೆ ಮಾಡುವುದಾದರೆ ಇದರಲ್ಲಿ ಹುಳಿಬರಿಸುವ ಹುದುಗು ಪದಾರ್ಥವನ್ನಾಗಿ ಒಡೆದ ಹಾಲನ್ನು ಬಳಸಬಹುದು. ಅಚ್ಚರಿ ಎಂದರೆ, ಯಾವಾಗ ಒಡೆದ ಹಾಲನ್ನು ಈ ಖಾದ್ಯಗಳಲ್ಲಿ ಹುಳಿಕಾರಕವಾಗಿ ಬಳಸುತ್ತೇವೆಯೋ ಆಗ ಆ ಖಾದ್ಯ ಆಕರ್ಷಕವಾಗಿ ಉಬ್ಬುವ ಜೊತೆಗೇ ಹುಳಿಯೇ ಇರದೆ ಅತ್ಯುತ್ತಮ ರುಚಿಯನ್ನು ಹೊಂದುತ್ತದೆ.

Published On - 11:34 am, Sun, 10 November 19

ಕಡುಗೆಂಪಗಿರುವುದೆಲ್ಲ ತಿನ್ನಲು-ಯೋಗ್ಯ ಕಲ್ಲಂಗಡಿ ಹಣ್ಣಲ್ಲ!
ಕಡುಗೆಂಪಗಿರುವುದೆಲ್ಲ ತಿನ್ನಲು-ಯೋಗ್ಯ ಕಲ್ಲಂಗಡಿ ಹಣ್ಣಲ್ಲ!
ಮಾರ್ಚ್​ 22ರಂದು ಅಖಂಡ ಕರ್ನಾಟಕ ಬಂದ್​ಗೆ ಕರೆ: ಯಾರೆಲ್ಲಾ ಬೆಂಬಲ?
ಮಾರ್ಚ್​ 22ರಂದು ಅಖಂಡ ಕರ್ನಾಟಕ ಬಂದ್​ಗೆ ಕರೆ: ಯಾರೆಲ್ಲಾ ಬೆಂಬಲ?
ವಿಶ್ವವಿಖ್ಯಾತ ಹಂಪಿ ಉತ್ಸವ ಕಳೆದ ಸಲಕ್ಕಿಂತ ಅದ್ದೂರಿಯಾಗಿದೆ: ಜಮೀರ್ ಅಹ್ಮದ್
ವಿಶ್ವವಿಖ್ಯಾತ ಹಂಪಿ ಉತ್ಸವ ಕಳೆದ ಸಲಕ್ಕಿಂತ ಅದ್ದೂರಿಯಾಗಿದೆ: ಜಮೀರ್ ಅಹ್ಮದ್
ದೇವರ ಮೇಲಿರೋ ಹೂ ಕೊಡಿ; ತುಳುವಿನಲ್ಲಿ ಮುದ್ದಾಗಿ ಕೇಳಿದ ಶಿಲ್ಪಾ ಶೆಟ್ಟಿ
ದೇವರ ಮೇಲಿರೋ ಹೂ ಕೊಡಿ; ತುಳುವಿನಲ್ಲಿ ಮುದ್ದಾಗಿ ಕೇಳಿದ ಶಿಲ್ಪಾ ಶೆಟ್ಟಿ
ದುಬಾರಿ ಬೈಕ್​ಗಳು ಕಳ್ಳನ ಪ್ರಥಮ ಆದ್ಯತೆ, ಅವು ಸಿಗದಿದ್ದರೆ ಬೇರೆಯವೂ ಓಕೆ
ದುಬಾರಿ ಬೈಕ್​ಗಳು ಕಳ್ಳನ ಪ್ರಥಮ ಆದ್ಯತೆ, ಅವು ಸಿಗದಿದ್ದರೆ ಬೇರೆಯವೂ ಓಕೆ
ಚೀನಾ: ಕಾರ್ಯಕ್ರಮವೊಂದರಲ್ಲಿ ಜನರ ಮೇಲೆ ಎಐ ರೊಬೊಟ್​ನಿಂದ ಹಲ್ಲೆ
ಚೀನಾ: ಕಾರ್ಯಕ್ರಮವೊಂದರಲ್ಲಿ ಜನರ ಮೇಲೆ ಎಐ ರೊಬೊಟ್​ನಿಂದ ಹಲ್ಲೆ
ಶಾಲು ಹೊದಿಸಿದ ವಿಜಯೇಂದ್ರರ ಬೆನ್ನುತಟ್ಟಿದ ಮುಖ್ಯಮಂತ್ರಿ ಸಿದ್ದರಾಮಯ್ಯ
ಶಾಲು ಹೊದಿಸಿದ ವಿಜಯೇಂದ್ರರ ಬೆನ್ನುತಟ್ಟಿದ ಮುಖ್ಯಮಂತ್ರಿ ಸಿದ್ದರಾಮಯ್ಯ
Shilpa Shetty: ಕಟೀಲು ದೇವಾಲಯಕ್ಕೆ ಬಂದ ನಟಿ ಶಿಲ್ಪಾ ಶೆಟ್ಟಿ
Shilpa Shetty: ಕಟೀಲು ದೇವಾಲಯಕ್ಕೆ ಬಂದ ನಟಿ ಶಿಲ್ಪಾ ಶೆಟ್ಟಿ
ತಮ್ಮ ಹೇಳಿಕೆಯಲ್ಲಿ ಶ್ರೀರಾಮುಲು ಶಿಂಧೆಯನ್ನು ಹತ್ತಾರು ಬಾರಿ ನೆನೆಯುತ್ತಾರೆ
ತಮ್ಮ ಹೇಳಿಕೆಯಲ್ಲಿ ಶ್ರೀರಾಮುಲು ಶಿಂಧೆಯನ್ನು ಹತ್ತಾರು ಬಾರಿ ನೆನೆಯುತ್ತಾರೆ
ಕ್ರಿಕೆಟ್ ತಂಡದ ಜೊತೆ ಚಾಮುಂಡೇಶ್ವರಿ ಬೆಟ್ಟಕ್ಕೆ ಭೇಟಿ ನೀಡಿದ ಸುದೀಪ್
ಕ್ರಿಕೆಟ್ ತಂಡದ ಜೊತೆ ಚಾಮುಂಡೇಶ್ವರಿ ಬೆಟ್ಟಕ್ಕೆ ಭೇಟಿ ನೀಡಿದ ಸುದೀಪ್