ಶೀತಾಘಾತದಿಂದ ಎಚ್ಚರ! ಚಳಿಗಾಲದಲ್ಲಿ ಚರ್ಮದ ಮೇಲಿರಲಿ ಅಧಿಕ ಕಾಳಜಿ

ಶೀತಾಘಾತ ಎಂದರೆ ಹೊರಗಿನ ಶೀತಲ ಗಾಳಿಯ ಪ್ರಭಾವ ಹೆಚ್ಚು ಹೊತ್ತು ಚರ್ಮದ ಮೇಲೆ ಬಿದ್ದಾಗ ಎದುರಾಗುವ ಪರಿಣಾಮವಲ್ಲದೇ ಮತ್ತೆ ಸಾಮಾನ್ಯವಾಗಿ ಬಿಸಿಲಿನ ಹೊಡೆತಕ್ಕೆ ಚರ್ಮ ಸುಡುತ್ತದೆ ಎಂದೇ ನಾವು ಭಾವಿಸಿದ್ದೇವೆ. ಆದರೆ ಶೀತದಿಂದಲೂ ಚರ್ಮದ ಮೇಲೆ ಆಘಾತ ಎದುರಾಗುತ್ತದೆ. ಎರಡೂ ಬಗೆಯ ಆಘಾತಗಳೂ ತ್ವಚೆಗೆ ಹಾನಿಕಾರಕವಾಗಿವೆ. ಎಷ್ಟೋ ಸಲ ಗಾಳಿ ತಣ್ಣಗಿದ್ದು, ಮೋಡ ಕವಿದಿದ್ದರೂ ಶೀತಾಘಾತ ಎದುರಾಗಬಹುದು. ಇವು ಸಾಮಾನ್ಯವಾಗಿ ಬಿಸಿಲಿನ ಆಘಾತಕ್ಕೆ ಒಳಗಾದ ತ್ವಚೆಯ ಪರಿಣಾಮದಂತೆಯೇ ಇರುತ್ತದೆ. ವಿಶೇಷವಾಗಿ ಮುಖದ ತ್ವಚೆ ಕೆಂಪಗಾಗಿ ಮುಟ್ಟಲೂ ಆಗದಷ್ಟು […]

ಶೀತಾಘಾತದಿಂದ ಎಚ್ಚರ! ಚಳಿಗಾಲದಲ್ಲಿ  ಚರ್ಮದ ಮೇಲಿರಲಿ ಅಧಿಕ ಕಾಳಜಿ
Follow us
ಸಾಧು ಶ್ರೀನಾಥ್​
|

Updated on:Nov 11, 2019 | 1:12 PM

ಶೀತಾಘಾತ ಎಂದರೆ ಹೊರಗಿನ ಶೀತಲ ಗಾಳಿಯ ಪ್ರಭಾವ ಹೆಚ್ಚು ಹೊತ್ತು ಚರ್ಮದ ಮೇಲೆ ಬಿದ್ದಾಗ ಎದುರಾಗುವ ಪರಿಣಾಮವಲ್ಲದೇ ಮತ್ತೆ ಸಾಮಾನ್ಯವಾಗಿ ಬಿಸಿಲಿನ ಹೊಡೆತಕ್ಕೆ ಚರ್ಮ ಸುಡುತ್ತದೆ ಎಂದೇ ನಾವು ಭಾವಿಸಿದ್ದೇವೆ. ಆದರೆ ಶೀತದಿಂದಲೂ ಚರ್ಮದ ಮೇಲೆ ಆಘಾತ ಎದುರಾಗುತ್ತದೆ. ಎರಡೂ ಬಗೆಯ ಆಘಾತಗಳೂ ತ್ವಚೆಗೆ ಹಾನಿಕಾರಕವಾಗಿವೆ. ಎಷ್ಟೋ ಸಲ ಗಾಳಿ ತಣ್ಣಗಿದ್ದು, ಮೋಡ ಕವಿದಿದ್ದರೂ ಶೀತಾಘಾತ ಎದುರಾಗಬಹುದು.

ಇವು ಸಾಮಾನ್ಯವಾಗಿ ಬಿಸಿಲಿನ ಆಘಾತಕ್ಕೆ ಒಳಗಾದ ತ್ವಚೆಯ ಪರಿಣಾಮದಂತೆಯೇ ಇರುತ್ತದೆ. ವಿಶೇಷವಾಗಿ ಮುಖದ ತ್ವಚೆ ಕೆಂಪಗಾಗಿ ಮುಟ್ಟಲೂ ಆಗದಷ್ಟು ಸೂಕ್ಷ್ಮ ಸಂವೇದಿಯಾಗುತ್ತದೆ. ಅಲ್ಲದೇ ಚರ್ಮ ಉರಿಯುತ್ತಿರುವಂತೆ ಭಾಸವಾಗಬಹುದು. ಕೆಂಪಗಾಗಿರುವುದು ಇಳಿಯುತ್ತಿದ್ದಂತೆಯೇ ಹೊರಚರ್ಮ ಒಣಗಿ ಪಕಳೆಯೇಳಲು ತೊಡಗಬಹುದು.

ಈ ಲಕ್ಷಣಗಳು ಬಿಸಿಲಿನ ಆಘಾತದ ಲಕ್ಷಣಗಳನ್ನೇ ಹೋಲುತ್ತಿದ್ದರೂ ಅದಕ್ಕೂ ಹೆಚ್ಚು ಒಣಗುತ್ತದೆ ಮತ್ತು ಬಿಗಿಯಾಗಿರುತ್ತದೆ. ಕೆಲವು ಚರ್ಮತಜ್ಞರ ಪ್ರಕಾರ ಬಿಸಿಲಿಗೂ ಶೀತಕ್ಕೂ ಆಗುವ ಪರಿಣಾಮಗಳನ್ನು ವಿರುದ್ಧವಾಗಿ ಪರಿಗಣಿಸಬಹುದು. ತಜ್ಞರ ಪ್ರಕಾರ ಶೀತಲ ದಿನಗಳಲ್ಲೂ ಸೂರ್ಯನ ಕಿರಣಗಳು ಹಾನಿ ಎಸಗಬಹುದು.

ಸ್ಕಿನ್ ಕ್ಯಾನ್ಸರ್ ಫೌಂಡೇಶನ್ ಪ್ರಕಾರ: ಗಾಳಿಯು ಅತಿನೇರಳೆ ಕಿರಣಗಳ ವಿರುದ್ಧ ನಿಮ್ಮ ಚರ್ಮವು ಹೊಂದಿರುವ ನೈಸರ್ಗಿಕ ರಕ್ಷಣೆಯ ಪ್ರಮಾಣವನ್ನು ಕಡಿಮೆ ಮಾಡುತ್ತದೆ. ಪ್ರತಿಯಾಗಿ ಶೀತ, ಗಾಳಿಯ ದಿನದಲ್ಲಿ ನೀವು ಸೂರ್ಯನ ಕಿರಣಗಳ ಪ್ರಭಾವಕ್ಕೆ ಹೆಚ್ಚೇ ಒಳಗಾಗಬಹುದು. ಚರ್ಮದಲ್ಲಿ ಈಗಾಗಲೇ ಇರುವ ಪರಿಸ್ಥಿತಿಗಳು ನಿಮ್ಮ ಶೀತಾಘಾತದ ಅಪಾಯವನ್ನು ಹೆಚ್ಚಿಸಬಹುದು. ಇವುಗಳಲ್ಲಿ ರೊಸಾಸಿಯಾ ಮತ್ತು ಎಕ್ಸಿಮಾ ಸೇರಿವೆ.

ಡರ್ಮಬ್ರೇಶನ್ ಅಥವಾ ರಾಸಾಯನಿಕವಾಗಿ ಹೊರಚರ್ಮವನ್ನು ನಿವಾರಿಸುವ ಚರ್ಮರೋಗ ಪ್ರಕ್ರಿಯೆಯನ್ನು ನೀವು ಮಾಡಿಸಿಕೊಂಡಿದ್ದರೆ ನಿಮ್ಮ ಚರ್ಮವು ಗಾಳಿಗೆ ಸಹ ಹೆಚ್ಚು ಸೂಕ್ಷ್ಮವಾಗಿರಬಹುದು. ಏಕೆಂದರೆ ಇಂತಹ ಕಾರ್ಯವಿಧಾನಗಳು ನಿಮ್ಮ ಚರ್ಮದ ಹೊರ ಪದರವನ್ನು ತೆಗೆದುಹಾಕುತ್ತವೆ.

ಪರಿಹಾರಗಳನ್ನು ಮಾಡಿ ನೋಡಿ: ಶೀತಾಘಾತಕ್ಕೆ ಚಿಕಿತ್ಸೆಯು ನಿಮ್ಮ ಚರ್ಮದ ತೇವಾಂಶವನ್ನು ಪುನಃ ತುಂಬಿಸುವುದರ ಜೊತೆಗೆ ಈಗಾಗಲೇ ಇರುವ ಯಾವುದೇ ನೋವನ್ನೂ ಇಲ್ಲವಾಗಿಸುತ್ತದೆ. ಐಬುಪ್ರೊಫೇನ್ ನಂತಹ ಅತಿಯಾದ ನೋವು ನಿವಾರಕವು ಸೌಮ್ಯ ನೋವು ಮತ್ತು ಊತವನ್ನು ಕಡಿಮೆ ಮಾಡುತ್ತದೆ. ಉಗುರುಬೆಚ್ಚನೆಯ ನೀರು ಸಹ ಸುಡುವಿಕೆಯನ್ನು ಕಡಿಮೆ ಮಾಡುತ್ತದೆ. ನೀವು ಶೀತಾಘಾತದಿಂದ ಚೇತರಿಸಿಕೊಳ್ಳುತ್ತಿರುವಾಗ ಬಿಸಿನೀರನ್ನು ಬಳಸದಿರಿ. ಇದು ಚರ್ಮದಿಂದ ಇನ್ನಷ್ಟು ತೇವಾಂಶವನ್ನು ತೆಗೆದುಹಾಕುತ್ತದೆ ಮತ್ತು ನಿಮ್ಮ ಚೇತರಿಕೆಯ ಸಮಯವನ್ನು ಇನ್ನಷ್ಟು ವಿಸ್ತರಿಸುತ್ತದೆ.

ತುಟಿಗಳ ಮೇಲೆ ಶೀತಾಘಾತ: ಬಾಯಿಯನ್ನು ತೆರೆಯುವಾಗ ಅತಿ ಹೆಚ್ಚು ವಿಸ್ತಾರಗೊಳ್ಳಬೇಕಾದ ಅವಶ್ಯಕತೆ ಇರುವ ಕಾರಣ ತುಟಿಯ ಹೊರಚರ್ಮ ಅತಿ ಹೆಚ್ಚು ವಿಸ್ತಾರ ಹೊಂದಿದ್ದು ಸಾಮಾನ್ಯ ಸ್ಥಿತಿಯಲ್ಲಿ ನೆರಿಗೆಯಾಗಿರುತ್ತದೆ ಹಾಗೂ ಅತಿ ತೆಳುವೂ ಆಗಿರುತ್ತದೆ. ಅಲ್ಲದೇ ತುಟಿಗಳನ್ನು ಮುಚ್ಚಿಕೊಳ್ಳುವುದು ಹೆಚ್ಚೂ ಕಡಿಮೆ ಅಸಾಧ್ಯವಾದುದರಿಂದ ಶೀತಾಘಾತದ ಪ್ರಭಾವಕ್ಕೆ ಅತಿ ಸುಲಭವಾಗಿ ಒಳಗಾಗುತ್ತದೆ. ತುಟಿಗಳಿಗೆ ಹೆಚ್ಚು ಆಘಾತ ಎದುರಾಗಿದ್ದರೆ ಹೀಗೆ ಮಾಡಿ: * ಅತಿ ಹೆಚ್ಚು ನೀರು ಕುಡಿಯಿರಿ * ಬಿಸಿ ಆಹಾರ/ ಪಾನೀಯಗಳನ್ನು ಸೇವಿಸದಿರಿ * ಖಾರದ ಆಹಾರಗಳನ್ನೂ ಸೇವಿಸದಿರಿ * ಒಂದು ವೇಳೆ ತುಟಿಗಳ ಚರ್ಮ ಪಕಳೆಯೇಳುತ್ತಿದ್ದರೆ, ಇದನ್ನು ಸರ್ವಥಾ ಕೀಳಲು ಯತ್ನಿಸದಿರಿ. * ನಿಮ್ಮ ಲಿಪ್ ಬಾಮ್ 15 ಎಸ್‌ಪಿಎಫ್ ಹೊಂದಿದೆಯೇ ಎಂದು ಖಚಿತಪಡಿಸಿಕೊಳ್ಳಿ.

ಗುಣವಾಗಲು ಎಷ್ಟು ಸಮಯ ಬೇಕು? ಶೀತಾಘಾತದಿಂದ ಗುಣವಾಗಲು ತೆಗೆದುಕೊಳ್ಳುವ ಸಮಯವು ಚರ್ಮಕ್ಕೆ ಎದುರಾಗಿರುವ ತೀವ್ರತೆಯನ್ನು ಅವಲಂಬಿಸಿರುತ್ತದೆ. ಬಿಸಿಲಿನ ಬೇಗೆಯಂತೆಯೇ, ಒಂದೆರಡು ದಿನಗಳ ನಂತರ ನಿಮಗೆ ನೋವು ಮತ್ತು ಊತ ಕಡಿಮೆಯಾಗಲು ಪ್ರಾರಂಭಿಸುತ್ತದೆ. ಕೆಲವು ದಿನಗಳ ನಂತರ ಕೆಂಪು ಬಣ್ಣವು ಹೋಗುತ್ತದೆ, ಮತ್ತು ನಂತರದ ದಿನಗಳಲ್ಲಿ ನಿಮ್ಮ ಚರ್ಮದ ಹೊರಪದರ ಸಿಪ್ಪೆಯೇಳತೊಡಗುತ್ತದೆ. ಹೆಚ್ಚು ತೀವ್ರವಾದ ಪ್ರಕರಣಗಳಲ್ಲಿ ಗುಳ್ಳೆಗಳು ದೊಡ್ಡದಾಗಿದ್ದು ಗುಣವಾಗಲು ಹೆಚ್ಚು ಸಮಯ ತೆಗೆದುಕೊಳ್ಳಬಹುದು.

ಶೀತಾಘಾತ ತಡೆಯಲು ಅತ್ಯುತ್ತಮ ಮಾರ್ಗ: * ನಿಮ್ಮ ಮುಖವನ್ನು ಸ್ಕಾರ್ಫ್ ನಿಂದ ಮುಚ್ಚಿಕೊಳ್ಳಿ * ತಂಪು ಕನ್ನಡಕ ಧರಿಸಿ * ಟೋಪಿ ಮತ್ತು ಕೈಗವಸುಗಳನ್ನು ಬಳಸಿ * ಉದ್ದನೆಯ ತೋಳಿರುವ ಅಂಗಿ ಮತ್ತು ಪ್ಯಾಂಟ್ ಧರಿಸಿ * ಎರಡು ಅಥವಾ ಹೆಚ್ಚಿನ ಉಡುಪುಗಳನ್ನು ತೊಟ್ಟು ಬೆಚ್ಚಗಿರಿ * ಶೀತಾಘಾತ ಉಂಟಾಗುವ ಸ್ಥಿತಿಯೇ ಅಥವಾ ಇಲ್ಲವೇ ಎಂಬುದನ್ನು ಲೆಕ್ಕಿಸದೆ, ನೀವು ಯಾವಾಗಲೂ ಸನ್‌ಸ್ಕ್ರೀನ್ ಧರಿಸಬೇಕು. * ಕನಿಷ್ಠ 30 ಎಸ್‌ಪಿಎಫ್ ಹೊಂದಿರುವ ವಿಶಾಲ-ಸ್ಪೆಕ್ಟ್ರಮ್ ಇರುವ ಉತ್ಪನ್ನವನ್ನೇ ಆಯ್ದುಕೊಳ್ಳಿ.

ಶೀತಾಘಾತದ ಹಿಂದಿನ ವಿದ್ಯಮಾನಗಳು ಸುಮಾರು ಒಂದು ಶತಮಾನದಿಂದ ಚರ್ಮದ ತಜ್ಞರ ನಡುವೆ ಚರ್ಚೆಗೆ ಕಾರಣವಾಗಿವೆ, ಆದರೆ ಒಂದು ವಿಷಯ ಖಚಿತವಾಗಿದೆ: ಶೀತ ಮತ್ತು ಶುಷ್ಕ ದಿನದಂದು ಸಹ ಹೊರಗಡೆ ಇರುವುದು ನಿಮ್ಮ ಚರ್ಮವನ್ನು ಸುಡಲು ಕಾರಣವಾಗಬಹುದು. ಪ್ರತಿದಿನ ನಿಮ್ಮ ಚರ್ಮವನ್ನು ಸೂರ್ಯ ಮತ್ತು ಇತರ ಅಂಶಗಳಿಂದ ರಕ್ಷಿಸುವುದು ಮುಖ್ಯ. ಕೆಲವು ದಿನಗಳ ನಂತರ ಶೀತಾಘಾತ ಅಥವಾ ಬಿಸಿಲಿನ ಲಕ್ಷಣಗಳು ಮುಂದುವರಿದರೆ ಅಥವಾ ಅವು ಉಲ್ಬಣಗೊಂಡರೆ ನಿಮ್ಮ ವೈದ್ಯರನ್ನು ಭೇಟಿ ಮಾಡಿ.

Published On - 7:15 am, Mon, 11 November 19

ಬಟ್ಟೆ ಕದಿಯಲು ರಜತ್ ಪ್ಲ್ಯಾನ್; ಬಾತ್ ರೂಮ್​ನಲ್ಲಿ ಕಣ್ಣೀರು ಹಾಕಿದ ಗೌತಮಿ
ಬಟ್ಟೆ ಕದಿಯಲು ರಜತ್ ಪ್ಲ್ಯಾನ್; ಬಾತ್ ರೂಮ್​ನಲ್ಲಿ ಕಣ್ಣೀರು ಹಾಕಿದ ಗೌತಮಿ
ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್ ಕೊಟ್ಟ ಖರ್ಗೆ ಆಪ್ತ
ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್ ಕೊಟ್ಟ ಖರ್ಗೆ ಆಪ್ತ
‘ನಾನು ಶಿಸ್ತುಬದ್ಧವಾಗಿ ಆಡಲಿಲ್ಲ’; ಆಸೀಸ್ ಪ್ರವಾಸದ ಬಗ್ಗೆ ಕೊಹ್ಲಿ ಮಾತು
‘ನಾನು ಶಿಸ್ತುಬದ್ಧವಾಗಿ ಆಡಲಿಲ್ಲ’; ಆಸೀಸ್ ಪ್ರವಾಸದ ಬಗ್ಗೆ ಕೊಹ್ಲಿ ಮಾತು
ಚೈತ್ರಾ ಕುಂದಾಪುರ ಯಾವುದಕ್ಕೂ ಲಾಯಕ್ಕಿಲ್ಲ: ಸಾಕ್ಷಿ ಸಮೇತ ವಿವರಿಸಿದ ರಜತ್
ಚೈತ್ರಾ ಕುಂದಾಪುರ ಯಾವುದಕ್ಕೂ ಲಾಯಕ್ಕಿಲ್ಲ: ಸಾಕ್ಷಿ ಸಮೇತ ವಿವರಿಸಿದ ರಜತ್
ಪ್ರತಾಪ್​ ಸಿಂಹ ಬಕೆಟ್​​ ಹಿಡಿಯುವುದನ್ನು ನಿಲ್ಲಿಸಲಿ: ಬಿಜೆಪಿ ಮುಖಂಡ ಕಿಡಿ
ಪ್ರತಾಪ್​ ಸಿಂಹ ಬಕೆಟ್​​ ಹಿಡಿಯುವುದನ್ನು ನಿಲ್ಲಿಸಲಿ: ಬಿಜೆಪಿ ಮುಖಂಡ ಕಿಡಿ
ಕೊಹ್ಲಿ ಜೊತೆಗಿನ ಭುಜಬಲದ ಕಾಳಗದ ಬಗ್ಗೆ ಮೌನ ಮುರಿದ ಕೊನ್​ಸ್ಟಾಸ್
ಕೊಹ್ಲಿ ಜೊತೆಗಿನ ಭುಜಬಲದ ಕಾಳಗದ ಬಗ್ಗೆ ಮೌನ ಮುರಿದ ಕೊನ್​ಸ್ಟಾಸ್
'ಹರೇ ರಾಮ, ಹರೇ ಕೃಷ್ಣ' ಮಂತ್ರ ಜಪಿಸಿದ ಸಾಂತಾಕ್ಲಾಸ್
'ಹರೇ ರಾಮ, ಹರೇ ಕೃಷ್ಣ' ಮಂತ್ರ ಜಪಿಸಿದ ಸಾಂತಾಕ್ಲಾಸ್
ಆಧುನಿಕ ಗಾಂಧಿಗಳ ಕಟೌಟ್! ಕಾಂಗ್ರೆಸ್ ಅಧಿವೇಶನ ಬಗ್ಗೆ ಕುಮಾರಸ್ವಾಮಿ ವ್ಯಂಗ್ಯ
ಆಧುನಿಕ ಗಾಂಧಿಗಳ ಕಟೌಟ್! ಕಾಂಗ್ರೆಸ್ ಅಧಿವೇಶನ ಬಗ್ಗೆ ಕುಮಾರಸ್ವಾಮಿ ವ್ಯಂಗ್ಯ
ಉಗ್ರಂ ಮಂಜು ತಲೆ ಮೇಲೆ ಬಾಟಲಿ ಹೊಡೆದ ಮೋಕ್ಷಿತಾ
ಉಗ್ರಂ ಮಂಜು ತಲೆ ಮೇಲೆ ಬಾಟಲಿ ಹೊಡೆದ ಮೋಕ್ಷಿತಾ
ವಾಟ್ ಎ ಬಾಲ್... ಡೇಂಜರಸ್ ಟ್ರಾವಿಸ್ ಹೆಡ್ ಕ್ಲೀನ್ ಬೌಲ್ಡ್
ವಾಟ್ ಎ ಬಾಲ್... ಡೇಂಜರಸ್ ಟ್ರಾವಿಸ್ ಹೆಡ್ ಕ್ಲೀನ್ ಬೌಲ್ಡ್