Rose Day ಒಂದೊಂದು ಬಣ್ಣದ ಗುಲಾಬಿಗೂ ಒಂದೊಂದು ಅರ್ಥ; ರೋಸ್​ ಡೇ ಪ್ರೇಮಿಗಳಿಗಷ್ಟೇ ಸೀಮಿತವಲ್ಲ !

ಒಮ್ಮೆ ಯಾರಾದರೂ ಪ್ರೇಮಿಗಳು ಸಣ್ಣಪುಟ್ಟ ಜಗಳ, ಮುನಿಸು ಮಾಡಿಕೊಂಡಿದ್ದರೆ ಗುಲಾಬಿ ಹೂವಿನೊಂದಿಗೆ ರಾಜಿ ಮಾಡಿಕೊಂಡುಬಿಡಿ. ಮೊಬೈಲ್​ನಲ್ಲಿ ರೋಸ್ ಡೇ ವಿಶ್ (Happy Rose Day Wish)​ ಇರುವ ಫೋಟೋವನ್ನು ಕಳಿಸಿ..

Rose Day ಒಂದೊಂದು ಬಣ್ಣದ ಗುಲಾಬಿಗೂ ಒಂದೊಂದು ಅರ್ಥ; ರೋಸ್​ ಡೇ ಪ್ರೇಮಿಗಳಿಗಷ್ಟೇ ಸೀಮಿತವಲ್ಲ !
ರೋಸ್​ ಡೇ ಪ್ರಾತಿನಿಧಿಕ ಚಿತ್ರ

Updated on: Feb 07, 2021 | 2:17 PM

ಇಂದು (ಫೆ.7) ರೋಸ್ ಡೇ..ವ್ಯಾಲೆಂಟೈನ್​ ವಾರದ ಮೊದಲ ದಿನ. ಬಹುಶಃ ಇಷ್ಟೊತ್ತಿಗೆ ಹಲವರು ತಮ್ಮ ಪ್ರೀತಿ ಪಾತ್ರರಿಗೆ ಗುಲಾಬಿ ಹೂವು ಕೊಟ್ಟು, ಪ್ರೀತಿಯ ಮಾತುಗಳನ್ನಾಡಿರುತ್ತೀರಿ. ಇನ್ನೂ ಪ್ಲ್ಯಾನ್​ ಮಾಡ್ತಾ ಇರೋರು ತಡ ಯಾಕೆ? ಬೇಗ ಹೂವು ಕೊಂಡು ನಿಮ್ಮ ವ್ಯಾಲೆಂಟೈನ್ ಬಳಿ ಹೋಗಿ! ಒಮ್ಮೆ ಯಾರಾದರೂ ಪ್ರೇಮಿಗಳು ಸಣ್ಣಪುಟ್ಟ ಜಗಳ, ಮುನಿಸು ಮಾಡಿಕೊಂಡಿದ್ದರೆ ಗುಲಾಬಿ ಹೂವಿನೊಂದಿಗೆ ರಾಜಿ ಮಾಡಿಕೊಂಡುಬಿಡಿ. ಹಾಗೇ, ಬರೀ ಹೂವು ಕೊಡುವ ಬದಲು ಚೆಂದವಾಗಿ ವಿಶ್​ ಮಾಡಿ. ಗ್ರೀಟಿಂಗ್ಸ್ ಕಾರ್ಡ್ ಇಡಿ. ಇನ್ನು ಮೊಬೈಲ್​ನಲ್ಲಿ ರೋಸ್ ಡೇ ವಿಶ್ (Happy Rose Day Wish)​ ಇರುವ ಫೋಟೋವನ್ನು ಕಳಿಸಿ..

ಇನ್ನೊಂದು ಪ್ರಮುಖ ಅಂಶವೆಂದರೆ ರೋಸ್​ ಡೇ ಎಂದರೆ ಸಾಮಾನ್ಯವಾಗಿ ಕೆಂಪು ಗುಲಾಬಿಯೇ ಮನಸಲ್ಲಿ ಮೂಡುತ್ತದೆ. ಕೆಂಪು ಗುಲಾಬಿ ಪ್ರೀತಿಯ ಸಂಕೇತ ಎಂಬುದು ಬಹುತೇಕರಿಗೆ ಗೊತ್ತೇ ಇರುತ್ತದೆ. ಇನ್ನು ರೋಸ್​ ಡೇ ಎಂದಾಕ್ಷಣ ಪ್ರೀತಿಪಾತ್ರರಿಗೆ ಮಾತ್ರ ಹೂವು ಕೊಡಬೇಕು ಎಂದಿಲ್ಲ. ನಿಮ್ಮ ಸ್ನೇಹಿತರು, ಆತ್ಮೀಯರಿಗೂ ಹೂವು ಕೊಟ್ಟು ವಿಶ್​ ಮಾಡಬಹದು. ಆದರೆ ಈ ದಿನ ನೀವು ಕೊಡುವ ಹೂವಿನ ಬಣ್ಣದ ಬಗ್ಗೆ ಎಚ್ಚರಿಕೆ ಇರಬೇಕು. ಹಾಗಿದ್ದರೆ, ಯಾವ ಬಣ್ಣದ ಹೂವು ಏನರ್ಥ ಸೂಚಿಸುತ್ತದೆ? ಇಲ್ಲಿದೆ ಮಾಹಿತಿ..

ಕೆಂಪು ಗುಲಾಬಿ (Red Rose): ಇದು ಪ್ರೀತಿಯ ಸಂಕೇತ. ಇಂದು ಪ್ರೇಮಿಗಳು ಪರಸ್ಪರ ಇದೇ ಗುಲಾಬಿ ಹೂವು ಕೊಟ್ಟು ವಿಶ್​ ಮಾಡಿಕೊಳ್ಳುತ್ತಾರೆ. ತಮ್ಮ ಮನದ ಪ್ರೀತಿಯನ್ನು ಹೇಳಿಕೊಳ್ಳುತ್ತಾರೆ. ಇಂದು ಪಿಯಕರ/ಪ್ರಿಯತಮೆಗಾಗಿ ಹೂವು ಕೊಡುವವರು ಕೆಂಪು ಗುಲಾಬಿಯನ್ನೇ ಆಯ್ಕೆ ಮಾಡಿಕೊಳ್ಳಬೇಕು.

ಪಿಂಕ್​ ಗುಲಾಬಿ: ಗುಲಾಬಿ ಬಣ್ಣದ (ಪಿಂಕ್​) ಗುಲಾಬಿ ಹೂವು ಮೆಚ್ಚುಗೆ ಮತ್ತು ಪ್ರಶಂಸೆಯ ಸಂಕೇತ. ಇದನ್ನು ನೀವು ನಿಮ್ಮ ಸ್ನೇಹಿತರಿಗೆ, ಅವರ ಸ್ನೇಹಕ್ಕೆ ಕೃತಜ್ಞತೆ ಸಲ್ಲಿಸಬೇಕು ಎಂದರೆ ಪಿಂಕ್​ ಗುಲಾಬಿ ಬೆಸ್ಟ್​.

ಕಿತ್ತಳೆ ಬಣ್ಣದ ಗುಲಾಬಿ: ಈ ಗುಲಾಬಿ ಉತ್ಸಾಹದ ಸಂಕೇತ. ನಿಮಗೆ ಯಾರ ಬಗ್ಗೆಯಾದರೂ ತುಂಬ ಹೆಮ್ಮೆಯಿದೆ ಎಂದರೆ ಅವರಿಗೆ ಇಂದು ಕಿತ್ತಳೆ ಬಣ್ಣದ ಹೂವನ್ನು ಕೊಟ್ಟು ಅದನ್ನು ತಿಳಿಸಬಹುದು.

ಬಿಳಿ ಗುಲಾಬಿ: ಬಿಳಿ ಬಣ್ಣದ ಗುಲಾಬಿ ಹೂವು ಶಾಂತಿ ಮತ್ತು ಸಾಮರಸ್ಯದ ಸಂಕೇತ. ಹಾಗೇ ಶುಭ್ರತೆ ಪಾವಿತ್ರ್ಯತೆಯನ್ನೂ ಸೂಚಿಸುತ್ತದೆ. ನೀವು ಯಾರ ಬಗ್ಗೆ ತುಂಬ ಯೋಚಿಸುತ್ತೀರೋ ಅವರಿಗೆ ಬಿಳಿ ಬಣ್ಣದ ಹೂವನ್ನು ಕೊಡಬಹುದಂತೆ. ಇನ್ನು ಯಾರಿಗಾದರೂ ನೀವು ನೋವು ಕೊಟ್ಟಿದ್ದರೆ, ಬಿಳಿ ಗುಲಾಬಿ ಹೂವು ಕೊಡುವ ಮೂಲಕ, ನಾನು ನಿಮ್ಮ ಬಳಿ ಕ್ಷಮೆ ಕೋರುತ್ತಿದ್ದೇನೆ ಎಂಬ ಭಾವವನ್ನು ವ್ಯಕ್ತಪಡಿಸಬಹುದು.

ಹಳದಿ ಬಣ್ಣದ ಗುಲಾಬಿ: ಹಳದಿ ಬಣ್ಣದ ಗುಲಾಬಿ ಹೂವು ಸ್ನೇಹದ ಸಂಕೇತ. ಹಾಗೇ ಪಾಸಿಟಿವಿಟಿ ಮತ್ತು ಸಂತೋಷವನ್ನೂ ಸೂಸುತ್ತದೆ. ಯಾರೊಂದಿಗಾದರೂ ನಿಮಗೆ ಸ್ನೇಹ ಮಾಡಬೇಕು ಎನ್ನಿಸುತ್ತಿದ್ದರೆ ಸೀದಾ ಹೋಗಿ ಇಂದು ಹಳದಿ ಬಣ್ಣದ ಗುಲಾಬಿ ಹೂವನ್ನು ಕೊಟ್ಟುಬಿಡಿ.

ಇನ್ನು ರಾತ್ರಿವರೆಗೂ ಟೈಂ ಇದೆ. ವ್ಯಾಲೆಂಟೈನ್​ ವೀಕ್​ನ ಮೊದಲ ದಿನವನ್ನು ಫುಲ್​ ಖುಷಿಯಾಗಿ ಕಳೀರಿ..ನಾಳಿನ ಪ್ರಪೋಸ್​ ಡೇ ಗೆ ಸಿದ್ಧರಾಗಿ.

Rose Day ನಾಳೆಯ ರೋಸ್​ ಡೇಗೆ ಗುಲಾಬಿ ಹೂವು ಕೊಟ್ಟರೆ ಸಾಕು ಎಂದುಕೊಳ್ಳಬೇಡಿ.. ಹೇಗೆಲ್ಲ ಪ್ಲ್ಯಾನ್​ ಮಾಡಬಹುದು ನೋಡಿ !

Published On - 1:40 pm, Sun, 7 February 21