ಬೆಂಗಳೂರಿನಲ್ಲಿ ಕದ್ದ ಮೊಬೈಲ್ ಫೋನುಗಳು ಎಲ್ಲಿ ಹೋಗುತ್ತವೆ, ಇದರ ಜಾಲ ಹೇಗಿದೆ?: ಇಲ್ಲಿದೆ ಸ್ಟೋಲನ್ ಫೋನ್ ರಹಸ್ಯ

|

Updated on: May 23, 2024 | 3:04 PM

Secret of Stolen Phones: ನಾವು ಎಷ್ಟೇ ಜಾಗರೂಕರಾಗಿದ್ದರೂ ಕಳ್ಳರು ತಮ್ಮ ಕೈಚಳಕದಿಂದ ನಮ್ಮ ಮೊಬೈಲ್ ಎಗರಿಸುತ್ತಾರೆ. ಇದನ್ನು ಹುಡುಕುವುದೇ ಹರಸಾಹಸ. ಆದರೆ, ಈ ರೀತಿ ಕದ್ದ ಫೋನುಗಳು ಏನಾಗುತ್ತವೆ ಎಂದು ನೀವು ಯೋಚಿಸಿದ್ದೀರಾ?, ಕಳ್ಳತನವಾದ ಫೋನ್ ಎಲ್ಲಿಗೆ ಹೋಗುತ್ತದೆ, ಇದರ ಜಾಲ ಹೇಗಿದೆ?. ಈ ಕುರಿತ ಮಾಹಿತಿ ಇಲ್ಲಿದೆ.

ಬೆಂಗಳೂರಿನಲ್ಲಿ ಕದ್ದ ಮೊಬೈಲ್ ಫೋನುಗಳು ಎಲ್ಲಿ ಹೋಗುತ್ತವೆ, ಇದರ ಜಾಲ ಹೇಗಿದೆ?: ಇಲ್ಲಿದೆ ಸ್ಟೋಲನ್ ಫೋನ್ ರಹಸ್ಯ
Mobile Theft
Follow us on

ಬೆಂಗಳೂರು ಮಹಾನಗರದಲ್ಲಿ ಮೊಬೈಲ್ ಕಳ್ಳತನ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿವೆ. ಪ್ರತಿ ದಿನ ಮೊಬೈಲ್ ಫೋನ್‌ಗಳು ಕಳ್ಳತನ/ಕಳೆದು ಹೋಗುತ್ತವೆ. ಬಸ್​ಗೆ ಹತ್ತುವಾಗ, ಮಾರ್ಕೆಟ್ ಜಾಗ, ಮೆಜೆಸ್ಟಿಕ್ ಬಸ್ ನಿಲ್ದಾಣ, ಜನ ಜಂಗುಳಿ ಇರುವಂತಹ ಜಾಗದಲ್ಲಿ ಹೆಚ್ಚಾಗಿ ಸ್ಮಾರ್ಟ್​ಫೋನ್​ಗಳ ಕಳ್ಳತನ ನಡೆಯುತ್ತಿವೆ. ಎಷ್ಟೇ ಜಾಗರೂಕರಾಗಿದ್ದರೂ ಕಳ್ಳರು ತಮ್ಮ ಕೈಚಳಕದಿಂದ ಮೊಬೈಲ್ ಎಗರಿಸುತ್ತಿದ್ದಾರೆ. ಇದನ್ನು ಹುಡುಕುವುದೇ ಹರಸಾಹಸ. ಕೆಲವರು ಪಟ್ಟು ಬಿಡದೆ ತಮ್ಮ ಫೋನನ್ನು ಹುಡುಕಿದರೆ, ಇನ್ನೂ ಕೆಲವರು ಇದಿನ್ನು ಸಿಗುವುದಿಲ್ಲ ಎಂದು ಹೊಸ ಫೋನಿನ ಮೊರೆ ಹೋಗುತ್ತಾರೆ. ಈ ರೀತಿ ಕದ್ದ ಫೋನುಗಳು ಏನಾಗುತ್ತವೆ ಎಂದು ನೀವು ಯೋಚಿಸಿದ್ದೀರಾ?, ಕಳ್ಳತನವಾದ ಫೋನ್ ಎಲ್ಲಿಗೆ ಹೋಗುತ್ತದೆ, ಇದರ ಜಾಲ ಹೇಗಿದೆ?. ಈ ಕುರಿತ ಮಾಹಿತಿ ಇಲ್ಲಿದೆ. ರಾಷ್ಟ್ರೀಯ ಪೋರ್ಟಲ್, ಸೆಂಟ್ರಲ್ ಇಕ್ವಿಪ್ಮೆಂಟ್ ಐಡೆಂಟಿಟಿ ರಿಜಿಸ್ಟರ್ (CEIR) ನ ಡ್ಯಾಶ್‌ಬೋರ್ಡ್ ಪ್ರಕಾರ, ಇಲ್ಲಿಯವರೆಗೆ ಭಾರತದಾದ್ಯಂತ, 1,487,034 ಫೋನ್‌ಗಳನ್ನು ನಿರ್ಬಂಧಿಸಲಾಗಿದೆ, 804,966 ಪತ್ತೆಹಚ್ಚಲಾಗಿದೆ ಮತ್ತು 112,648 ಮರುಪಡೆಯಲಾಗಿದೆ. 2022 ರಲ್ಲಿ ಬೆಂಗಳೂರಿನಲ್ಲಿ ಸೆಲ್ ಫೋನ್ ಕಳ್ಳತನವು 450% ಹೆಚ್ಚಾಗಿದೆ ಎಂದು ವರದಿಗಳು ಸೂಚಿಸುತ್ತವೆ. ಈಗ ಫೋನ್ ಕಳ್ಳತನವು ಸಾಮಾನ್ಯವಾದ ಅಪರಾಧವಾಗಿದ್ದು, ಇದನ್ನು ಗಂಭೀರವಾಗಿ ಪರಿಗಣಿಸಲಾಗುತ್ತಿಲ್ಲ ಎಂಬುದು ಸಾಮಾನ್ಯ ಜನರ ಅಭಿಪ್ರಾಯ. “ಫೋನ್ ಕಳ್ಳತನಕ್ಕೆ ಗುರಿಯಾಗುತ್ತಿರುವವರು ಸಾಮಾನ್ಯವಾಗಿ ಮಹಿಳೆಯರು ಮತ್ತು ವೃದ್ಧರು” ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳುತ್ತಾರೆ. ಜನರು ಬೆಳಗಿನ ಜಾವ ಅಥವಾ ರಾತ್ರಿ 10 ರ ನಂತರ ಸಂಚರಿಸುವಾಗ ಸಾಮಾನ್ಯವಾಗಿ ಈ ರೀತಿಯ ಘಟನೆಗಳು ಸಂಭವಿಸುತ್ತವೆ. ಬೆಂಗಳೂರಿನ ಹೊರವಲಯದಲ್ಲಿ ಮತ್ತು ವಿಶೇಷವಾಗಿ ಜನನಿಬಿಡ ಸ್ಥಳಗಳಲ್ಲಿ ಮೊಬೈಲ್ ಕಳ್ಳತನ ಹೆಚ್ಚಾಗಿ ಆಗುತ್ತದೆ ಎಂದು...

Published On - 3:03 pm, Thu, 23 May 24

ಪೂರ್ಣ ಸುದ್ದಿಯನ್ನು ಓದಲು Tv9 ಆ್ಯಪ್ ಡೌನ್​ಲೋಡ್ ಮಾಡಿ

ಎಕ್ಸ್​ಕ್ಲೂಸಿವ್ ಸುದ್ದಿಗಳ ಅನ್​ಲಿಮಿಟೆಡ್ ಆಕ್ಸೆಸ್ Tv9 ಆ್ಯಪ್​ನಲ್ಲಿ ಮುಂದುವರೆಯಿರಿ