ಕೋಳಿಯ ಈ ನಾಲ್ಕು ಗುಣಗಳನ್ನು ಅನುಸರಿಸಿದರೆ ನಾವು ಜೀವನದಲ್ಲಿ ಯಶಸ್ಸು ಸಾಧಿಸುವುದು ಗ್ಯಾರಂಟಿ

|

Updated on: Oct 10, 2024 | 9:19 AM

Chanakya Niti: ಆಚಾರ್ಯ ಚಾಣಕ್ಯ ಅಥವಾ ಕೌಟಿಲ್ಯ ತನ್ನ ನೀತಿ ಪಾಠಗಳಲ್ಲಿ ಜೀವನದಲ್ಲಿ ಯಶಸ್ಸಿಗೆ ಹುಂಜದ ನಾಲ್ಕು ಪ್ರಮುಖ ಗುಣಗಳನ್ನು ವಿವರಿಸಿದ್ದಾನೆ. ಹುಂಜದ ಈ ನಾಲ್ಕು ಗುಣಲಕ್ಷಣಗಳನ್ನು ಅನುಸರಿಸುವವರು ಯಶಸ್ವಿಯಾಗುತ್ತಾರೆ ಎಂದು ಹೇಳಲಾಗುತ್ತದೆ. ಸಆಚಾರ್ಯ ಚಾಣಕ್ಯ ಜಗತ್ತಿನ ಶ್ರೇಷ್ಠ ವಿಜ್ಞಾನಿಗಳಲ್ಲಿ ಒಬ್ಬರು. ಇಂದಿಗೂ, ಚಾಣಕ್ಯನ ನೀತಿಯು ಮಕ್ಕಳು, ವೃದ್ಧರು, ಯುವಕರು ಮತ್ತು ಮಹಿಳೆಯರ ಕಡೆಗೆ ಕೇಂದ್ರೀಕೃತವಾಗಿದೆ. ಚಾಣಕ್ಯ ಹೇಳುವಂತೆ ಜೀವನದಲ್ಲಿ ನೀವು ಯಾವುದೇ ಕಠಿಣ ಪರಿಸ್ಥಿತಿಯಲ್ಲಿದ್ದರೂ ನಿಮ್ಮ ಮನೋ ಸ್ಥೈರ್ಯದಿಂದ ಮಾತ್ರವೇ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಬಹುದು. ಆದ್ದರಿಂದ ಯಾವಾಗಲೂ ಸಕಾರಾತ್ಮಕವಾಗಿ ಆಲೋಚಿಸಿ.

1 / 6
ಧನಾತ್ಮಕವಾಗಿ ಯೋಚಿಸುವ ಜನರು ಕಷ್ಟದ ಕೆಲಸಗಳಲ್ಲಿಯೂ ಯಶಸ್ವಿಯಾಗುತ್ತಾರೆ. ಆಚಾರ್ಯ ಚಾಣಕ್ಯ ತನ್ನ ಶ್ಲೋಕಗಳಲ್ಲಿ ಯಶಸ್ಸಿಗೆ ಕೋಳಿಯ ನಾಲ್ಕು ಪ್ರಮುಖ ಗುಣಗಳನ್ನು ಉಲ್ಲೇಖಿಸುತ್ತಾರೆ. ಕೋಳಿಯ ಈ ನಾಲ್ಕು ಗುಣಗಳನ್ನು ಮನುಷ್ಯ ಜೀವನದಲ್ಲಿ ಅಳವಡಿಸಿಕೊಂಡರೆ ಯಶಸ್ಸು ಖಂಡಿತ ಎಂದಿದ್ದಾರೆ.

2 / 6
ಸೂರ್ಯೋದಯಕ್ಕೂ ಮುನ್ನ ಏಳುವುದು ಅಂದರೆ ಬ್ರಹ್ಮ ಮುಹೂರ್ತದಲ್ಲಿ ಏಳುವುದು ಆರೋಗ್ಯಕ್ಕೆ ಮಾತ್ರವಲ್ಲ, ನಿಮ್ಮ ಗುರಿಯನ್ನು ಸಾಧಿಸುವ ಮೊದಲ ಹೆಜ್ಜೆಯೂ ಹೌದು. ಪ್ರತಿದಿನ ಸೂರ್ಯೋದಯಕ್ಕೆ ಮುನ್ನ ಕೋಳಿ ಕೂಗುತ್ತದೆ. ಬೆಳಿಗ್ಗೆ ಸರಿಯಾದ ಸಮಯಕ್ಕೆ ಎದ್ದರೆ ನಿಮ್ಮ ಕೆಲಸವನ್ನು ಸಮಯಕ್ಕೆ ಸರಿಯಾಗಿ ಪೂರ್ಣಗೊಳಿಸಲು ಸಾಧ್ಯವಾಗುತ್ತದೆ. ಚಾಣಕ್ಯ ಹೇಳುವಂತೆ, ಬೇಗ ಏಳುವುದರಿಂದ ವ್ಯಕ್ತಿಯಲ್ಲಿ ಧನಾತ್ಮಕ ಶಕ್ತಿ ಹರಿಯುತ್ತದೆ, ಇದರಿಂದ ದಿನವಿಡೀ ತನ್ನ ಕೆಲಸವನ್ನು ಸಮರ್ಥವಾಗಿ ಮತ್ತು ಶಕ್ತಿಯುತವಾಗಿ ಮಾಡಬಹುದು.

3 / 6
ಧೈರ್ಯದಿಂದ ಹೋರಾಡಿ ಎನ್ನುತ್ತಾನೆ ಚಾಣಕ್ಯ. ನೀವು ಸಹ ಜೀವನದಲ್ಲಿ ಯಶಸ್ವಿಯಾಗಲು ಬಯಸಿದರೆ, ಯಾವಾಗಲೂ ಜಾಗರೂಕರಾಗಿರಿ ಮತ್ತು ಕಷ್ಟಗಳನ್ನು ಎದುರಿಸಲು ಸಿದ್ಧರಾಗಿರಿ. ಅವುಗಳನ್ನು ಜಯಿಸಲು, ನಿಮ್ಮ ದಾರಿಯಲ್ಲಿ ಬರುವ ಎಲ್ಲಾ ಅಡೆತಡೆಗಳನ್ನು ನೀವು ತಡೆದುಕೊಳ್ಳಬೇಕು.

4 / 6
ಕೋಳಿ/ ಹುಂಜ (ರೂಸ್ಟರ್) ಯಾವಾಗಲೂ ಎಚ್ಚರವಾಗಿರುತ್ತಾನೆ. ಅವನು ಶತ್ರುವನ್ನು ಗ್ರಹಿಸಿದಾಗ ತತಕ್ಷಣವೇ ಹೋರಾಡಲು ಸಿದ್ಧನಾಗಿರುತ್ತಾನೆ. ಅವನು ಎಂದಿಗೂ ಯುದ್ಧ ಬಿಟ್ಟುಕೊಡುವುದಿಲ್ಲ, ಸಮಸ್ಯೆಗಳಿಗೆ ಹೆದರುವುದಿಲ್ಲ. ಬಿಕ್ಕಟ್ಟು ಬಂದಾಗ ಅದನ್ನು ದೃಢಸಂಕಲ್ಪದಿಂದ ಎದುರಿಸುವವರು ಯಶಸ್ವಿಯಾಗುತ್ತಾರೆ.

5 / 6
ಪ್ರಾಮಾಣಿಕತೆ ಮತ್ತು ಕಠಿಣ ಪರಿಶ್ರಮದಿಂದ ಗಳಿಸಿದ ಹಣದಿಂದ ತೃಪ್ತರಾಗಬೇಕು. ಅದರಿಂದ ಜೀವನದಲ್ಲಿ ಸಂತೋಷ ಮತ್ತು ಶಾಂತಿಯನ್ನು ಕಂಡುಕೊಳ್ಳುತ್ತಾರೆ. ಕಠಿಣ ಪರಿಶ್ರಮದಿಂದ ಬರುವ ಆದಾಯವು ಕಡಿಮೆಯಾದರೂ, ಸಂತೋಷ ಮತ್ತು ಗೌರವವನ್ನು ತರುತ್ತದೆ.

6 / 6

ಇತರರನ್ನು ಅವಲಂಬಿಸಬೇಡಿ. ಹುಂಜಗಳು ಯಾವಾಗಲೂ ಹೊಟ್ಟೆ ತುಂಬಿಸಿಕೊಳ್ಳಲು ಕಷ್ಟಪಡುತ್ತವೆ. ಜೀವನದಲ್ಲಿ ಕಷ್ಟಪಟ್ಟು ಗಳಿಸಿದ ಯಶಸ್ಸಿನ ರುಚಿಯು ಸಿಹಿಯಾಗಿರುತ್ತದೆ ಎಂದು ಚಾಣಕ್ಯ ಹೇಳುತ್ತಾರೆ.

Published On - 2:02 am, Thu, 10 October 24