Dasara 2024: ದಸರಾ ಯಾವಾಗ? ಆಯುಧಪೂಜೆ, ರಾವಣ ದಹನ ಮುಹೂರ್ತ ಯಾವಾಗ? ಪಠಿಸಬೇಕಾದ ಮಂತ್ರಗಳು ಇವು

|

Updated on: Oct 11, 2024 | 3:00 AM

ದಸರಾ ಹಬ್ಬದ ಸಂಭ್ರಮ ನಾಡಿನಲ್ಲಿ ಎಲ್ಲ ಕಡೆ ಮನೆ ಮಾಡಿದೆ. ಇನ್ನು ದುರ್ಗಾ ದೇವಿಯು ಮಹಿಷಾಸುರನನ್ನು ಕೊಂದ ದಿನವನ್ನು ವಿಜಯ ದಶಮಿ ಎಂದು ಕರೆಯುತ್ತಾರೆ. ಆಶ್ವಯುಜ ಮಾಸದ ಶುಕ್ಲ ಪಕ್ಷದ ಹತ್ತನೇ ದಿನದಂದು ಪ್ರತಿ ವರ್ಷ ದಸರಾ ಹಬ್ಬವನ್ನು ಆಚರಿಸಲಾಗುತ್ತದೆ. ಈ ಹಬ್ಬವನ್ನು ಸದ್ಗುಣದ ಮತ್ತು ಕೆಡುಕಿನ ಮೇಲೆ ಒಳಿತಿನ ವಿಜಯವೆಂದು ಸಂಭ್ರಮದಿಂದ ಆಚರಿಸಲಾಗುತ್ತದೆ. ಈ ವರ್ಷ ವಿಜಯದಶಮಿ ಯಾವಾಗ ಬರುತ್ತದೆ? ರಾವಣನ ದಹನ ಯಾವಾಗ ನಡೆಯಲಿದೆ ಎಂದು ತಿಳಿಯೋಣ..

Dasara 2024: ದಸರಾ ಯಾವಾಗ? ಆಯುಧಪೂಜೆ, ರಾವಣ ದಹನ ಮುಹೂರ್ತ ಯಾವಾಗ? ಪಠಿಸಬೇಕಾದ ಮಂತ್ರಗಳು ಇವು
Spiritual Dasara 2024
Follow us on

Dasara 2024, Ravana Dahan: ದಸರಾ ಹಬ್ಬದ ಸಂಭ್ರಮ ನಾಡಿನಲ್ಲಿ ಎಲ್ಲ ಕಡೆ ಮನೆ ಮಾಡಿದೆ. ಇನ್ನು ದುರ್ಗಾ ದೇವಿಯು ಮಹಿಷಾಸುರನನ್ನು ಕೊಂದ ದಿನವನ್ನು ವಿಜಯ ದಶಮಿ ಎಂದು ಕರೆಯುತ್ತಾರೆ. ಆಶ್ವಯುಜ ಮಾಸದ ಶುಕ್ಲ ಪಕ್ಷದ ಹತ್ತನೇ ದಿನದಂದು ಪ್ರತಿ ವರ್ಷ ದಸರಾ ಹಬ್ಬವನ್ನು ಆಚರಿಸಲಾಗುತ್ತದೆ. ಈ ಹಬ್ಬವನ್ನು ಸದ್ಗುಣದ ಮತ್ತು ಕೆಡುಕಿನ ಮೇಲೆ ಒಳಿತಿನ ವಿಜಯವೆಂದು ಸಂಭ್ರಮದಿಂದ ಆಚರಿಸಲಾಗುತ್ತದೆ. ಈ ವರ್ಷ ವಿಜಯದಶಮಿ ಯಾವಾಗ ಬರುತ್ತದೆ? ರಾವಣನ ದಹನ ಯಾವಾಗ ನಡೆಯಲಿದೆ ಎಂದು ತಿಳಿಯೋಣ..

ಈ ವರ್ಷ ದಸರಾ ಯಾವಾಗ?
ಹಿಂದೂ ಕ್ಯಾಲೆಂಡರ್ ಪ್ರಕಾರ, ಈ ವರ್ಷ ಆಶ್ವಯುಜ ಮಾಸದ ದಶಮಿ ತಿಥಿ ಅಕ್ಟೋಬರ್ 12 ರಂದು ಬೆಳಿಗ್ಗೆ 10:58 ಕ್ಕೆ ಪ್ರಾರಂಭವಾಗುತ್ತದೆ. ಅಕ್ಟೋಬರ್ 13 ಬೆಳಿಗ್ಗೆ 9:08 ರವರೆಗೆ ಮುಂದುವರಿಯುತ್ತದೆ. ಈ ವರ್ಷದ ಉದಯ ತಿಥಿಯಂತೆ ಅಕ್ಟೋಬರ್ 12 ಶನಿವಾರದಂದು ದಸರಾ ಹಬ್ಬವನ್ನು ಆಚರಿಸಲಾಗುವುದು.

ಇದನ್ನೂ ಓದಿ:  Significance of Kalasha Pooja – ಕಲಶದೊಳಗೆ ಮಾವಿನ ಸೊಪ್ಪನ್ನು ಏಕೆ ಹಾಕುತ್ತೇವೆ? ಕುಂಭದ ಮೇಲೆ ತೆಂಗಿನ ಕಾಯಿ ಇಡುವ ಉದ್ದೇಶವೇನು ?

ರಾವಣ ದಹನ ಕಾರ್ಯಕ್ರಮ- ಅದು ಮಂಗಳಕರ ಸಮಯ
ಹಿಂದೂ ನಂಬಿಕೆಗಳ ಪ್ರಕಾರ ಪ್ರದೋಷ ಕಾಲದಲ್ಲಿ ರಾವಣನನ್ನು ದಹನ ಮಾಡಲಾಗುತ್ತದೆ. ಪಂಚಾಂಗದ ಪ್ರಕಾರ ಅಕ್ಟೋಬರ್ 12 ರಂದು ಸಂಜೆ 5:53 ರಿಂದ 7:27 ರವರೆಗೆ ರಾವಣ ದಹನಕ್ಕೆ ಶುಭ ಮುಹೂರ್ತ.

ದಸರಾ ಶಾಸ್ತ್ರ ಪೂಜೆ ಅಥವಾ ಆಯುಧಪೂಜೆ ಶುಭ ಮುಹೂರ್ತ
ಅಕ್ಟೋಬರ್ 12 ಶನಿವಾರದಂದು 2:03 PM ರಿಂದ 2:49 PM ವರೆಗೆ ದಸರಾ ದಿನದಂದು ಶಾಸ್ತ್ರಪೂಜೆ ಅಥವಾ ಆಯುಧ ಪೂಜೆಯನ್ನು ಮಾಡಲು ಮಂಗಳಕರ ಸಮಯ. ಈ ವರ್ಷದ ಪ್ರಕಾರ ಆಯುಧ ಪೂಜೆಗೆ 46 ನಿಮಿಷ ಸಮಯ ಸಿಗುತ್ತದೆ.

ದಸರಾ ದಿನದಂದು ಈ ಮಂತ್ರಗಳನ್ನು ಪಠಿಸಿ:

ರಾಮ ಧ್ಯಾನ ಮಂತ್ರ –
ಅಪದಾಮಪ ಹರ್ತಾರಂ ದಾತಾರಂ ಸರ್ವ ಸಂಪದ ಲೋಕಾಭಿರಾಮಂ ಶ್ರೀರಾಮ ಭೂಯೋ ಭೂಯೋ ನಮಾಮ್ಯಹಮ್ ॥

ಶ್ರೀ ರಾಮ ಗಾಯತ್ರಿ ಮಂತ್ರ –
ಓಂ ದಶರಥಾಯ ವಿದ್ಮಹೇ ಸೀತಾ ವಲ್ಲಭಾಯ ಧೀಮಹಿ

ಇದನ್ನೂ ಓದಿ: October 2024 festivals list – ಅಕ್ಟೋಬರ್ ತಿಂಗಳ ಪ್ರಮುಖ ಹಬ್ಬಗಳು, ಧಾರ್ಮಿಕ ಆಚರಣೆಗಳು, ರಾಷ್ಟ್ರೀಯ ದಿನಾಚರಣೆಗಳ ಸಂಪೂರ್ಣ ಪಟ್ಟಿ

ರಾಮ ಮೂಲ ಮಂತ್ರ –
ಓಂ ಹ್ರಾಂ ಹ್ರೀಂ ರಾಮ ರಾಮಾಯ ನಮಃ

ದಸರಾ ಮಹತ್ವ
ಹಿಂದೂ ಧರ್ಮದಲ್ಲಿ ದಸರಾಗೆ ವಿಶೇಷ ಮಹತ್ವವಿದೆ. ಈ ದಿನವನ್ನು ಅಸತ್ಯದ ಮೇಲೆ ಸತ್ಯದ ವಿಜಯವನ್ನು ಗುರುತಿಸಲು ಆಚರಿಸಲಾಗುತ್ತದೆ, ಅಂದರೆ ಕೆಟ್ಟದ್ದರ ಮೇಲೆ ಒಳ್ಳೆಯದ ವಿಜಯ. ಈ ದಿನ, ಹೊಸ ಉದ್ಯೋಗವನ್ನು ಪ್ರಾರಂಭಿಸುವುದು, ವಾಹನ, ಆಭರಣಗಳನ್ನು ಖರೀದಿಸುವುದು ಮುಂತಾದ ಶುಭ ಕಾರ್ಯಗಳನ್ನು ಮಂಗಳಕರವೆಂದು ಪರಿಗಣಿಸಲಾಗುತ್ತದೆ.

ಮತ್ತಷ್ಟು ಆಧ್ಯಾತ್ಮ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ

(ಗಮನಿಸಿ: ಈ ಲೇಖನವು ರೂಢಿಗತ, ಜನಪ್ರಿಯ ನಂಬಿಕೆಗಳನ್ನು ಆಧರಿಸಿದೆ. ಈ ಸುದ್ದಿಯಲ್ಲಿ ಒಳಗೊಂಡಿರುವ ಮಾಹಿತಿ ಮತ್ತು ಸತ್ಯಗಳ ನಿಖರತೆಗೆ ಟಿವಿ9 ಜವಾಬ್ದಾರರಾಗಿರುವುದಿಲ್ಲ)