AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Significance of Kalasha Pooja: ಕಲಶದೊಳಗೆ ಮಾವಿನ ಸೊಪ್ಪನ್ನು ಏಕೆ ಹಾಕುತ್ತೇವೆ? ಕುಂಭದ ಮೇಲೆ ತೆಂಗಿನ ಕಾಯಿ ಇಡುವ ಉದ್ದೇಶವೇನು ?

Kalasha Pooja: ಕಲಶ ಮತ್ತು ಕುಂಭದ ಸಂಪ್ರದಾಯವು ಪ್ರಾಚೀನವಾದುದು ಮತ್ತು ಇದು ವೈದಿಕ ಸಂಪ್ರದಾಯಗಳು ಮತ್ತು ಆಚರಣೆಗಳ ಮೂಲವಾಗಿದೆ. ಕಲಶ ಸ್ಥಾಪನೆ ಮಾಡದೆ ಅಥವಾ ಪೂಜೆಯ ಪ್ರದೇಶದಲ್ಲಿ ಕಲಶವನ್ನು ಸ್ಥಾಪಿಸದೆ ಯಾವುದೇ ವೈದಿಕ ಪೂಜೆಯನ್ನು ಮಾಡಲಾಗುವುದಿಲ್ಲ. ಋಗ್ವೇದದಲ್ಲಿ ಉಲ್ಲೇಖಿಸಲಾದ ಮಂತ್ರಗಳಲ್ಲಿ ಕಲಶ ಅಥವಾ ಕುಂಭವನ್ನು ವಿವರಿಸಲಾಗಿದೆ

ಸಾಧು ಶ್ರೀನಾಥ್​
|

Updated on: Sep 21, 2024 | 4:04 AM

Share
Kalasha Pooja: ಕಲಶ ಮತ್ತು ಕುಂಭದ ಸಂಪ್ರದಾಯವು ಪ್ರಾಚೀನವಾದುದು ಮತ್ತು ಇದು ವೈದಿಕ ಸಂಪ್ರದಾಯಗಳು ಮತ್ತು ಆಚರಣೆಗಳ ಮೂಲವಾಗಿದೆ. ಕಲಶ ಸ್ಥಾಪನೆ ಮಾಡದೆ ಅಥವಾ ಪೂಜೆಯ ಪ್ರದೇಶದಲ್ಲಿ ಕಲಶವನ್ನು ಸ್ಥಾಪಿಸದೆ ಯಾವುದೇ ವೈದಿಕ ಪೂಜೆಯನ್ನು ಮಾಡಲಾಗುವುದಿಲ್ಲ. ಋಗ್ವೇದದಲ್ಲಿ ಉಲ್ಲೇಖಿಸಲಾದ ಮಂತ್ರಗಳಲ್ಲಿ ಕಲಶ ಅಥವಾ ಕುಂಭವನ್ನು ವಿವರಿಸಲಾಗಿದೆ: 10:89:7; ಶುಕ್ಲ ಯಜುರ್ವೇದ: 19:87; ಅಥರ್ವ ವೇದ: 19.53.3; 4.34.7

1 / 9
ಕಲಶವು ಮಡಕೆಯನ್ನು ಒಳಗೊಂಡಿದೆ; ಇದು ಮಣ್ಣಿನ ಮಡಕೆಯಾಗಿರಬಹುದು ಅಥವಾ ಹಿತ್ತಾಳೆ, ಕಂಚು, ತಾಮ್ರ, ಬೆಳ್ಳಿ ಅಥವಾ ಚಿನ್ನದಂತಹ ಲೋಹಗಳಿಂದ ಮಾಡಲ್ಪಟ್ಟಿದೆ. ಈ ಮಡಕೆಯು ಪವಿತ್ರವಾದ ನೀರು ಮತ್ತು ಇತರ ಮಂಗಳಕರ, ಪವಿತ್ರ ಪದಾರ್ಥಗಳಾದ ಒಂದು ಚಿಟಿಕೆ ಅರಿಶಿನ ಪುಡಿ ಅಥವಾ ಬೇರು, ಕುಂಕುಮ, ಕೆಲವು ಹೂವುಗಳು, ಒಂದು ತೆಂಗಿನಕಾಯಿ, ಒಂದು ತಾಮ್ರದ ನಾಣ್ಯದಿಂದ ತುಂಬಿರುತ್ತದೆ ಮತ್ತು ಮಾವಿನ ಎಲೆಗಳ ಗೊಂಚಲಿನ ಕಿರೀಟದಿಂದ ಮೇಲಕ್ಕೆ ಇಡಲಾಗುತ್ತದೆ ಮತ್ತು ನಂತರ ಅದನ್ನು ಮೇಲಕ್ಕೆ ಇಡಲಾಗುತ್ತದೆ.

2 / 9
ತೆಂಗಿನಕಾಯಿಯ ಮೇಲೆ ಹೊಸ ತ್ರಿಕೋನ ಬಟ್ಟೆಯನ್ನು ಹಾಕಲಾಗುತ್ತದೆ. ಕಲಶದಲ್ಲಿನ ನೀರು ವಿಶೇಷ ಮಂತ್ರ ಪಠಣದಿಂದ ಶಕ್ತಿಯನ್ನು ಪಡೆಯುತ್ತದೆ, ಕಾಸ್ಮಿಕ್ ಶಕ್ತಿಯನ್ನು ಆಹ್ವಾನಿಸುತ್ತದೆ. ಇದನ್ನು ನಂತರ 'ಪೂರ್ಣ ಕಲಶಂ' ಅಥವಾ 'ಪೂರ್ಣ ಕುಂಭಂ' ಎಂದು ಕರೆಯಲಾಗುತ್ತದೆ. ಈ ಕಲಶವು ದೈವಿಕ ಶಕ್ತಿಯಿಂದ ತುಂಬಿದೆ.

3 / 9
ಕಲಶಗಳ ಕೆಳಗೆ ಅಕ್ಕಿಯನ್ನೇಕೆ ಹಾಕ ಬೇಕು?
ಅಕ್ಕಿಯು ಶಾಂತಿಯ ಸಂಕೇತ. ಏಕದಳ ಧಾನ್ಯವಾಗಿರುವ ಅಕ್ಕಿಯನ್ನು ಪೂಜೆ ಮಾಡುವ ಕಲಶಗಳ ಕೆಳಗೆ ಹಾಕುವುದು, ಪ್ರತಿದಿನ ನಮ್ಮ ಹಸಿವನ್ನು ನೀಗಿಸುವ ಧಾನ್ಯಕ್ಕೆ ಕೃತಜ್ಞತೆ ತೋರಿಸುವ ಉದ್ದೇಶಕ್ಕಾಗಿ, ಮನುಷ್ಯನಿಗೆ ಉಪಕಾರಿಯಾಗುವ ಎಲ್ಲ ವಸ್ತುಗಳು ದೈವ ರೂಪವೇ ಎಂದು ಅವುಗಳೆಲ್ಲವಕ್ಕೂ ದೇವರ ಸನ್ನಿಧಿಯಲ್ಲಿ ಸ್ಥಾನ ಕಲ್ಪಿಸಿದೆ ನಮ್ಮ ಧರ್ಮ.

ಕಲಶಗಳ ಕೆಳಗೆ ಅಕ್ಕಿಯನ್ನೇಕೆ ಹಾಕ ಬೇಕು? ಅಕ್ಕಿಯು ಶಾಂತಿಯ ಸಂಕೇತ. ಏಕದಳ ಧಾನ್ಯವಾಗಿರುವ ಅಕ್ಕಿಯನ್ನು ಪೂಜೆ ಮಾಡುವ ಕಲಶಗಳ ಕೆಳಗೆ ಹಾಕುವುದು, ಪ್ರತಿದಿನ ನಮ್ಮ ಹಸಿವನ್ನು ನೀಗಿಸುವ ಧಾನ್ಯಕ್ಕೆ ಕೃತಜ್ಞತೆ ತೋರಿಸುವ ಉದ್ದೇಶಕ್ಕಾಗಿ, ಮನುಷ್ಯನಿಗೆ ಉಪಕಾರಿಯಾಗುವ ಎಲ್ಲ ವಸ್ತುಗಳು ದೈವ ರೂಪವೇ ಎಂದು ಅವುಗಳೆಲ್ಲವಕ್ಕೂ ದೇವರ ಸನ್ನಿಧಿಯಲ್ಲಿ ಸ್ಥಾನ ಕಲ್ಪಿಸಿದೆ ನಮ್ಮ ಧರ್ಮ.

4 / 9
ನಾವು ತಾಮ್ರದ ಕಲಶವನ್ನೇ ಏಕೆ ಉಪಯೋಗಿಸುತ್ತೇವೆ?
ತಾಮ್ರವು ಲೋಹಗಳಲ್ಲೆಲ್ಲಾ  ಅತ್ಯುತ್ತಮವಾದದ್ದು. ಇದಕ್ಕೆ ವಿಶೇಷವಾದ ಗುಣಗಳು ಇರುವುದರಿಂದಲೇ ಇದಕ್ಕೆ ವಿಶೇಷವಾದ ಸ್ಥಾನವನ್ನು ಕೊಟ್ಟಿದ್ದಾರೆ. ತಾಮ್ರದೊಂದಿಗೆ ನೀರು ಬೆರೆತಾಗ ಅಲ್ಲಿ ರಾಸಾಯನಿಕ ಕ್ರಿಯೆ ಉಂಟಾಗಿ ವಿಶಿಷ್ಟವಾದ ದ್ರಾವಣ ಉತ್ಪತ್ತಿಯಾಗಿ ಅನೇಕ ತರಹದ ಚರ್ಮ ರೋಗಗಳು ಗುಣವಾಗುತ್ತವೆಂದು ವೈಜ್ಞಾನಿಕವಾಗಿ ಸಾಬೀತಾಗಿದೆ.

ನಾವು ತಾಮ್ರದ ಕಲಶವನ್ನೇ ಏಕೆ ಉಪಯೋಗಿಸುತ್ತೇವೆ? ತಾಮ್ರವು ಲೋಹಗಳಲ್ಲೆಲ್ಲಾ ಅತ್ಯುತ್ತಮವಾದದ್ದು. ಇದಕ್ಕೆ ವಿಶೇಷವಾದ ಗುಣಗಳು ಇರುವುದರಿಂದಲೇ ಇದಕ್ಕೆ ವಿಶೇಷವಾದ ಸ್ಥಾನವನ್ನು ಕೊಟ್ಟಿದ್ದಾರೆ. ತಾಮ್ರದೊಂದಿಗೆ ನೀರು ಬೆರೆತಾಗ ಅಲ್ಲಿ ರಾಸಾಯನಿಕ ಕ್ರಿಯೆ ಉಂಟಾಗಿ ವಿಶಿಷ್ಟವಾದ ದ್ರಾವಣ ಉತ್ಪತ್ತಿಯಾಗಿ ಅನೇಕ ತರಹದ ಚರ್ಮ ರೋಗಗಳು ಗುಣವಾಗುತ್ತವೆಂದು ವೈಜ್ಞಾನಿಕವಾಗಿ ಸಾಬೀತಾಗಿದೆ.

5 / 9
ನಾವು ಕಲಶದೊಳಗೆ ದರ್ಭೆಯ ಕೂರ್ಚವನ್ನೇಕೆ ಹಾಕುತ್ತೇವೆ?
ನಾವು ಮಂತ್ರವನ್ನು ಉಚ್ಛಾರ ಮಾಡುವಾಗ ಕೆಲವು ಏರುಪೇರುಗಳಾಗುವ ಸ್ವರಗಳನ್ನು ಛಂದೋಬದ್ಧವಾಗಿ ಹೇಳುವ ಮಂತ್ರಗಳು ಪ್ರಕೃತಿಯಲ್ಲಿನ ವಿದ್ಯುತ್ಕಾಂತೀಯ ಶಕ್ತಿಯನ್ನು  ಸಂಯೋಜಿಸಲ್ಪಟ್ಟು ಶಕ್ತಿಯು ಕಲಶದೊಳಗೆ ಇಟ್ಟಿರುವ ದರ್ಭೆಯಿಂದ ಆಕರ್ಷಿತಗೊಂಡು ಕಲಶದೊಳಗೆ ಸೇರುತ್ತದೆ. ಇದನ್ನೇ ಹಿಂದಿನ ಕಾಲದವರು ದೈವ ಸಾನ್ನಿಧ್ಯವೆನ್ನುತ್ತಿದ್ದರು ಎಂದು ಕಾಣುತ್ತದೆ. ಇಂತಹ ದೈವ ಸಾನ್ನಿಧ್ಯಕ್ಕಾಗಿ ದರ್ಭೆಯ ಕೂರ್ಚನ್ನು ಕಲಶದೊಳಗೆ ಹಾಕುತ್ತೇವೆ.

ನಾವು ಕಲಶದೊಳಗೆ ದರ್ಭೆಯ ಕೂರ್ಚವನ್ನೇಕೆ ಹಾಕುತ್ತೇವೆ? ನಾವು ಮಂತ್ರವನ್ನು ಉಚ್ಛಾರ ಮಾಡುವಾಗ ಕೆಲವು ಏರುಪೇರುಗಳಾಗುವ ಸ್ವರಗಳನ್ನು ಛಂದೋಬದ್ಧವಾಗಿ ಹೇಳುವ ಮಂತ್ರಗಳು ಪ್ರಕೃತಿಯಲ್ಲಿನ ವಿದ್ಯುತ್ಕಾಂತೀಯ ಶಕ್ತಿಯನ್ನು ಸಂಯೋಜಿಸಲ್ಪಟ್ಟು ಶಕ್ತಿಯು ಕಲಶದೊಳಗೆ ಇಟ್ಟಿರುವ ದರ್ಭೆಯಿಂದ ಆಕರ್ಷಿತಗೊಂಡು ಕಲಶದೊಳಗೆ ಸೇರುತ್ತದೆ. ಇದನ್ನೇ ಹಿಂದಿನ ಕಾಲದವರು ದೈವ ಸಾನ್ನಿಧ್ಯವೆನ್ನುತ್ತಿದ್ದರು ಎಂದು ಕಾಣುತ್ತದೆ. ಇಂತಹ ದೈವ ಸಾನ್ನಿಧ್ಯಕ್ಕಾಗಿ ದರ್ಭೆಯ ಕೂರ್ಚನ್ನು ಕಲಶದೊಳಗೆ ಹಾಕುತ್ತೇವೆ.

6 / 9
Significance of Kalasha Pooja: ಕಲಶದೊಳಗೆ ಮಾವಿನ ಸೊಪ್ಪನ್ನು ಏಕೆ ಹಾಕುತ್ತೇವೆ? ಕುಂಭದ ಮೇಲೆ ತೆಂಗಿನ ಕಾಯಿ ಇಡುವ ಉದ್ದೇಶವೇನು ?

7 / 9
ಕಲಶದೊಳಗೆ ಮಾವಿನ ಸೊಪ್ಪನ್ನು ಏಕೆ ಹಾಕುತ್ತೇವೆ?
ಮಾವಿನ ಎಲೆಗಳಲ್ಲಿ ಪತ್ರ ಹರಿತ್ತಿನ ಪ್ರಮಾಣ ಹೆಚ್ಚಾಗಿದ್ದು, ಹೆಚ್ಚು ಆಮ್ಲಜನಕವನ್ನು ಉತ್ಪಾದಿಸುತ್ತದೆ. ಇದು ತಿಳಿದಿರುವ ಸಂಗತಿಯಾಗಿದೆ. ಶುಭ ಕಾರ್ಯಗಳು ಮನೆಯಲ್ಲಿ ಜರುಗುವಾಗ ಬಹಳ ಜನ ಸೇರುವುದು ಸಾಮಾನ್ಯವಾಗಿದ್ದು ಹಾಗೆ ಬಹಳ ಜನ ಸೇರಿದಾಗ ಅಷ್ಟೂ ಜನಕ್ಕೆ ಸರಿ ಹೊಂದುವ ಆಮ್ಲಜನಕ ವಾತಾವರಣದಲ್ಲಿ ಸೇರಿಸುವ ಸಲುವಾಗಿ ಮಾವಿನ ಸೊಪ್ಪು ಮತ್ತು ಬಾಳೆ ಎಲೆಗಳನ್ನು ಉಪಯೋಗಿಸುತ್ತಾರೆ. ಮಾವಿನ ಎಲೆಗಳು ಮತ್ತು ಬಾಳೆ ಎಲೆಗಳು ದೀರ್ಘ ಕಾಲದವರೆಗೆ ಆಮ್ಲಜನಕವನ್ನು ಉತ್ಪಾದಿಸುತ್ತವೆ. ಅಲ್ಲದೆ ಮಾವಿನ ಎಲೆಗಳಲ್ಲಿ ಔಷಧೀಯ ಗುಣಗಳು ಹೇರಳವಾಗಿದ್ದು ಚರ್ಮ ರೋಗಗಳಿಗೆ ರಾಮಬಾಣವಾಗಿದೆ.

ಕಲಶದೊಳಗೆ ಮಾವಿನ ಸೊಪ್ಪನ್ನು ಏಕೆ ಹಾಕುತ್ತೇವೆ? ಮಾವಿನ ಎಲೆಗಳಲ್ಲಿ ಪತ್ರ ಹರಿತ್ತಿನ ಪ್ರಮಾಣ ಹೆಚ್ಚಾಗಿದ್ದು, ಹೆಚ್ಚು ಆಮ್ಲಜನಕವನ್ನು ಉತ್ಪಾದಿಸುತ್ತದೆ. ಇದು ತಿಳಿದಿರುವ ಸಂಗತಿಯಾಗಿದೆ. ಶುಭ ಕಾರ್ಯಗಳು ಮನೆಯಲ್ಲಿ ಜರುಗುವಾಗ ಬಹಳ ಜನ ಸೇರುವುದು ಸಾಮಾನ್ಯವಾಗಿದ್ದು ಹಾಗೆ ಬಹಳ ಜನ ಸೇರಿದಾಗ ಅಷ್ಟೂ ಜನಕ್ಕೆ ಸರಿ ಹೊಂದುವ ಆಮ್ಲಜನಕ ವಾತಾವರಣದಲ್ಲಿ ಸೇರಿಸುವ ಸಲುವಾಗಿ ಮಾವಿನ ಸೊಪ್ಪು ಮತ್ತು ಬಾಳೆ ಎಲೆಗಳನ್ನು ಉಪಯೋಗಿಸುತ್ತಾರೆ. ಮಾವಿನ ಎಲೆಗಳು ಮತ್ತು ಬಾಳೆ ಎಲೆಗಳು ದೀರ್ಘ ಕಾಲದವರೆಗೆ ಆಮ್ಲಜನಕವನ್ನು ಉತ್ಪಾದಿಸುತ್ತವೆ. ಅಲ್ಲದೆ ಮಾವಿನ ಎಲೆಗಳಲ್ಲಿ ಔಷಧೀಯ ಗುಣಗಳು ಹೇರಳವಾಗಿದ್ದು ಚರ್ಮ ರೋಗಗಳಿಗೆ ರಾಮಬಾಣವಾಗಿದೆ.

8 / 9
ಕಲಶದ ಮೇಲೆ ತೆಂಗಿನ ಕಾಯಿ ಇಡುವ ಉದ್ದೇಶವೇನು ?
ಪರಮಾತ್ಮನು ಜ್ಯೋತಿ ಸ್ವರೂಪನಾಗಿದ್ದಾನೆ. ಜ್ಯೋತಿ ಸ್ವರೂಪನಾದ ಭಗವಂತನನ್ನು ಕಲಶದಲ್ಲಿ ಆವಾಹನೆ ಮಾಡುತ್ತೇವೆ. ಕಲಶವೂ ಜ್ಯೋತಿ ಸ್ವರೂಪದಂತೆ ಕಾಣುತ್ತದೆ. ತೆಂಗಿನ ಬಗ್ಗೆ ಹೇಳ ಬೇಕಾದದ್ದೇನೂ ಇಲ್ಲ. ತೆಂಗಿನ ಮರದ ಯಾವುದೇ ಭಾಗವೂ ಕೆಲಸಕ್ಕೆ ಬಾರದೇ ಇಲ್ಲ. ತೆಂಗು ಯಾವುದೇ ಪ್ರಾಣಿ - ಪಕ್ಷಿಗಳ ಎಂಜಲಿನಿಂದ ಬೆಳೆದಿರುವುದಿಲ್ಲ. ಆದ್ದರಿಂದಲೇ ಅದಕ್ಕೂ ದೈವ ಸ್ಥಾನವನ್ನು ಕೊಟ್ಟು ಕಲ್ಪವೃಕ್ಷ ಎಂದಿದ್ದೇವೆ. ಅಂತಹ ಪವಿತ್ರವಾದ ಮರದಲ್ಲಿ ಹುಟ್ಟಿದ ತೆಂಗಿನ ಕಾಯಿಯನ್ನು ಪರಮಾತ್ಮನಿಗೆ ಅರ್ಪಣೆ ಮಾಡುವುದರಿಂದ ಧನ್ಯತೆಯನ್ನು ಪಡೆಯುವುದರ ಉದ್ದೇಶವನ್ನಿಟ್ಟು ಕೊಂಡು ತೆಂಗಿನ ಕಾಯಿಯನ್ನು ಪೂಜೆಯಲ್ಲಿ ಬಳಸುತ್ತೇವೆ.

ಕಲಶದ ಮೇಲೆ ತೆಂಗಿನ ಕಾಯಿ ಇಡುವ ಉದ್ದೇಶವೇನು ? ಪರಮಾತ್ಮನು ಜ್ಯೋತಿ ಸ್ವರೂಪನಾಗಿದ್ದಾನೆ. ಜ್ಯೋತಿ ಸ್ವರೂಪನಾದ ಭಗವಂತನನ್ನು ಕಲಶದಲ್ಲಿ ಆವಾಹನೆ ಮಾಡುತ್ತೇವೆ. ಕಲಶವೂ ಜ್ಯೋತಿ ಸ್ವರೂಪದಂತೆ ಕಾಣುತ್ತದೆ. ತೆಂಗಿನ ಬಗ್ಗೆ ಹೇಳ ಬೇಕಾದದ್ದೇನೂ ಇಲ್ಲ. ತೆಂಗಿನ ಮರದ ಯಾವುದೇ ಭಾಗವೂ ಕೆಲಸಕ್ಕೆ ಬಾರದೇ ಇಲ್ಲ. ತೆಂಗು ಯಾವುದೇ ಪ್ರಾಣಿ - ಪಕ್ಷಿಗಳ ಎಂಜಲಿನಿಂದ ಬೆಳೆದಿರುವುದಿಲ್ಲ. ಆದ್ದರಿಂದಲೇ ಅದಕ್ಕೂ ದೈವ ಸ್ಥಾನವನ್ನು ಕೊಟ್ಟು ಕಲ್ಪವೃಕ್ಷ ಎಂದಿದ್ದೇವೆ. ಅಂತಹ ಪವಿತ್ರವಾದ ಮರದಲ್ಲಿ ಹುಟ್ಟಿದ ತೆಂಗಿನ ಕಾಯಿಯನ್ನು ಪರಮಾತ್ಮನಿಗೆ ಅರ್ಪಣೆ ಮಾಡುವುದರಿಂದ ಧನ್ಯತೆಯನ್ನು ಪಡೆಯುವುದರ ಉದ್ದೇಶವನ್ನಿಟ್ಟು ಕೊಂಡು ತೆಂಗಿನ ಕಾಯಿಯನ್ನು ಪೂಜೆಯಲ್ಲಿ ಬಳಸುತ್ತೇವೆ.

9 / 9
ರಾಯಚೂರು: ಕಾಂಗ್ರೆಸ್ ನಾಯಕಿ ಮನೆ ರಸ್ತೆಗೇ ಇಲ್ಲ ಕಾಂಕ್ರೀಟ್ ಭಾಗ್ಯ!
ರಾಯಚೂರು: ಕಾಂಗ್ರೆಸ್ ನಾಯಕಿ ಮನೆ ರಸ್ತೆಗೇ ಇಲ್ಲ ಕಾಂಕ್ರೀಟ್ ಭಾಗ್ಯ!
ಆತ್ಮಹತ್ಯೆಗೆ ಯತ್ನ: ನದಿಯ ನಡುಗಡ್ಡೆಯಲ್ಲಿ ಸಿಲುಕಿದ್ದ ಯುವತಿ ರಕ್ಷಣೆ
ಆತ್ಮಹತ್ಯೆಗೆ ಯತ್ನ: ನದಿಯ ನಡುಗಡ್ಡೆಯಲ್ಲಿ ಸಿಲುಕಿದ್ದ ಯುವತಿ ರಕ್ಷಣೆ
ಕಳೆದ ಶುಕ್ರವಾರ ಹಲವಾರು ಸಮಸ್ಯೆಗಳನ್ನು ಭಕ್ತರು ಟಿವಿ9 ಗಮನಕ್ಕೆ ತಂದಿದ್ದರು
ಕಳೆದ ಶುಕ್ರವಾರ ಹಲವಾರು ಸಮಸ್ಯೆಗಳನ್ನು ಭಕ್ತರು ಟಿವಿ9 ಗಮನಕ್ಕೆ ತಂದಿದ್ದರು
ಮೋದಿ ಸ್ವಾಗತಕ್ಕೆಂದು ಏರ್​​ಪೋರ್ಟ್​ಗೆ ಈ ದೇಶದ ಸಚಿವ ಸಂಪುಟವೇ ಬಂದಿತ್ತು
ಮೋದಿ ಸ್ವಾಗತಕ್ಕೆಂದು ಏರ್​​ಪೋರ್ಟ್​ಗೆ ಈ ದೇಶದ ಸಚಿವ ಸಂಪುಟವೇ ಬಂದಿತ್ತು
ಪೋರ್ಟ್​ ಆಫ್​ ಸ್ಪೇನ್​​ನಲ್ಲಿ ಭೋಜ್ಪುರಿ ಗೀತೆಯೊಂದಿಗೆ ಮೋದಿಗೆ ಸ್ವಾಗತ
ಪೋರ್ಟ್​ ಆಫ್​ ಸ್ಪೇನ್​​ನಲ್ಲಿ ಭೋಜ್ಪುರಿ ಗೀತೆಯೊಂದಿಗೆ ಮೋದಿಗೆ ಸ್ವಾಗತ
ಆಷಾಢ ಶುಕ್ರವಾರ: ಮೈಸೂರು ಚಾಮುಂಡೇಶ್ವರಿ ದರ್ಶನಕ್ಕೆ ಬರುವ ಭಕ್ತರೇ ಗಮನಿಸಿ
ಆಷಾಢ ಶುಕ್ರವಾರ: ಮೈಸೂರು ಚಾಮುಂಡೇಶ್ವರಿ ದರ್ಶನಕ್ಕೆ ಬರುವ ಭಕ್ತರೇ ಗಮನಿಸಿ
ಕನ್ನಡದಲ್ಲೇ ಮಾತು ಆರಂಭಿಸಿದ ನೀರಜ್ ಚೋಪ್ರಾ ಬೆಂಗಳೂರಿನ ಬಗ್ಗೆ ಹೇಳಿದ್ದೇನು?
ಕನ್ನಡದಲ್ಲೇ ಮಾತು ಆರಂಭಿಸಿದ ನೀರಜ್ ಚೋಪ್ರಾ ಬೆಂಗಳೂರಿನ ಬಗ್ಗೆ ಹೇಳಿದ್ದೇನು?
ಪತ್ನಿಯೊಂದಿಗೆ ಚಾಮುಂಡೇಶ್ವರಿ ತಾಯಿ ದರ್ಶನ ಪಡೆದ ನಟ ದರ್ಶನ್
ಪತ್ನಿಯೊಂದಿಗೆ ಚಾಮುಂಡೇಶ್ವರಿ ತಾಯಿ ದರ್ಶನ ಪಡೆದ ನಟ ದರ್ಶನ್
ಟ್ರಿನಿಡಾಡ್ ಮತ್ತು ಟೊಬಾಗೊ ಪ್ರಧಾನಿ ಕಮಲಾರನ್ನು ಬಿಹಾರದ ಮಗಳು
ಟ್ರಿನಿಡಾಡ್ ಮತ್ತು ಟೊಬಾಗೊ ಪ್ರಧಾನಿ ಕಮಲಾರನ್ನು ಬಿಹಾರದ ಮಗಳು
Daily Devotional: ಗುಳಿ ಕೆನ್ನೆಯವರು ನಿಜಕ್ಕೂ ಅದೃಷ್ಟವಂತರಾ ತಿಳಿಯಿರಿ
Daily Devotional: ಗುಳಿ ಕೆನ್ನೆಯವರು ನಿಜಕ್ಕೂ ಅದೃಷ್ಟವಂತರಾ ತಿಳಿಯಿರಿ