- Kannada News Photo gallery Hop coms disappearing in Bangalore due to negligence of horticulture department kannada news
ತೋಟಗಾರಿಕೆ ಇಲಾಖೆ ನಿರ್ಲಕ್ಷ್ಯದಿಂದ ಬೆಂಗಳೂರಲ್ಲಿ ಕಣ್ಮರೆಯಾಗುತ್ತಿವೆ ಹಾಪ್ ಕಾಮ್ಸ್
ತೋಟಗಾರಿಕೆ ಇಲಾಖೆ ನಿರ್ಲಕ್ಷ್ಯದಿಂದ ಬೆಂಗಳೂರಲ್ಲಿ ಹಾಪ್ ಕಾಮ್ಸ್ ಕಣ್ಮರೆಯಾಗುತ್ತಿವೆ. ನಗರದಲ್ಲಿ 50ಕ್ಕೂ ಹೆಚ್ಚು ಹಾಪ್ ಕಾಮ್ಸ್ ಗಳು ಈಗಾಗಲೇ ಬಂದ್ ಆಗಿದೆ. ಗುಣಮಟ್ಟದ, ತಾಜಾ ಹಣ್ಣು, ತರಕಾರಿಗಳನ್ನು ಗ್ರಾಹಕರಿಗೆ ಪೂರೈಸುವ ಹಾಗೂ ಮಧ್ಯವರ್ತಿಗಳಿಂದ ಮುಕ್ತ ವಾದ ಮಾರುಕಟ್ಟೆ ಒದಗಿಸುವ ಮಹತ್ವದ ಉದ್ದೇಶದಿಂದ ಹಾಪ್ಸ್ ಕಾಮ್ಸ್ ಗಳನ್ನು ಓಪನ್ ಮಾಡಲಾಗಿತ್ತು.
Updated on: Sep 21, 2024 | 8:14 AM

ತೋಟಗಾರಿಕೆ ಇಲಾಖೆ ನಿರ್ಲಕ್ಷ್ಯದಿಂದ ಬೆಂಗಳೂರಲ್ಲಿ ಹಾಪ್ ಕಾಮ್ಸ್ ಕಣ್ಮರೆಯಾಗುತ್ತಿವೆ. ನಗರದಲ್ಲಿ 50ಕ್ಕೂ ಹೆಚ್ಚು ಹಾಪ್ ಕಾಮ್ಸ್ ಗಳು ಈಗಾಗಲೇ ಬಂದ್ ಆಗಿದೆ.

ಗುಣಮಟ್ಟದ, ತಾಜಾ ಹಣ್ಣು, ತರಕಾರಿಗಳನ್ನು ಗ್ರಾಹಕರಿಗೆ ಪೂರೈಸುವ ಹಾಗೂ ಮಧ್ಯವರ್ತಿಗಳಿಂದ ಮುಕ್ತ ವಾದ ಮಾರುಕಟ್ಟೆ ಒದಗಿಸುವ ಮಹತ್ವದ ಉದ್ದೇಶದಿಂದ ಹಾಪ್ಸ್ ಕಾಮ್ಸ್ ಗಳನ್ನು ಓಪನ್ ಮಾಡಲಾಗಿತ್ತು.

ತೋಟದ ಬೆಳೆಗಾರರ ಸಹಕಾರಿ ಮಾರಾಟ ಮತ್ತು ಸಂಸ್ಕರಣ ಸಂಘದ ನಿಧಾನಕ್ಕೆ ಬೆಂಗಳೂರಿನ ಹಲವು ಕಡೆಗಳಲ್ಲಿ ಹಾಪ್ ಕಾಮ್ಸ್ ಗಳು ನಿಧಾನಕ್ಕೆ ಕಣ್ಮರೆಯಾಗುತ್ತಿದೆ. ಈ ಮಹಾತ್ವಾಕಾಂಕ್ಷಿ ಯೋಜನೆ ದಿನದಿಂದ ದಿನಕ್ಕೆ ತನ್ನ ಚಾರ್ಮ್ ಅನ್ನೇ ಕಳೆದುಕೊಳ್ಳುತ್ತಿದೆ.

ಎರಡು ವರ್ಷಗಳ ಹಿಂದೆ ಬೆಂಗಳೂರು ವ್ಯಾಪ್ತಿಯಲ್ಲಿ 316, ಜಿಲ್ಲೆಗಳಲ್ಲಿ 262 ಹಾಪ್‌ಕಾಮ್ಸ್ ಮಳಿಗೆ ಇದ್ದವು. ನಷ್ಟ, ಮೂಲಸೌಲಭ್ಯ ಕೊರತೆಯಿಂದ ಮಳಿಗೆಗಳ ಸಂಖ್ಯೆ ಬೆಂಗಳೂರಿನಲ್ಲಿ 200 ಕ್ಕೂ ಹೆಚ್ಚು ಕಡಿಮೆಯಾಗಿದೆ. ಎಲ್ಲಾ ಜಿಲ್ಲೆಗಳಲ್ಲೂ ಹಾಪ್ ಕಾಮ್ಸ್ ಮಳಿಗೆಗಳು ಕಾಣೆಯಾಗುತ್ತಿವೆ.

ನಗರದ ವಿಜಯನಗರ ಭಾಗದ ಹತ್ತಿಗುಪ್ಪೆ, ಹಂಪಿನಗರ, ಹೊಸಹಳ್ಳಿಯ ನಾಲ್ಕೈದು ಹಾಪ್ ಕಾಮ್ಸ್ ಗಳು ಬಂದ್ ಆಗಿವೆ. ಈ ಬಗ್ಗೆ ಗ್ರಾಹಕರು ನೋವು ತೋಡಿಕೊಂಡಿದ್ದಾರೆ.

ಹಾಪ್ ಕಾಮ್ಸ್ ನಿಂದ ನೇರವಾಗಿ ರೈತರಿಂದ ಹಣ್ಣು-ತರಕಾರಿ ಸಿಗ್ತಿತ್ತು. ಬೆಲೆಯೂ ಕಡಿಮೆ ಇತ್ತು. ಆದರೆ ಈಗ ಕ್ಲೋಸ್ ಆಗಿರುವುದರಿಂದ ಮಾರ್ಟ್ ಮತ್ತು ಫ್ರೆಶ್ ಗಳ ಮೂಲಕ ದುಬಾರಿ ಹಣ ಕೊಟ್ಟು ಖರೀದಿ ಮಾಡಬೇಕಿದೆ ಎಂದಿದ್ದಾರೆ.



