ಕಾರ್ತಿಕ ಮಾಸ ಎಂಬುದು ಅತ್ಯಂತ ಮಹತ್ವದ ತಿಂಗಳು. ಪೂಜೆ ಪುನಸ್ಕಾರಗಳಿಗೆ ಈ ತಿಂಗಳಲ್ಲಿ ಜಾಸ್ತಿಯಾಗಿರುತ್ತದೆ. ಹಾಗಾಗಿ ತಿಂಗಳ ಪೂರ್ತಿ ದಾನ ಧರ್ಮ ಮಾಡಿ. ಹಿಂದೂ ಪಂಚಾಂಗದಲ್ಲಿ 8ನೆಯ ತಿಂಗಳು ಕಾರ್ತಿಕ ಮಾಸವಾಗಿದೆ. ಈ ಮಾಸದಲ್ಲಿ ಧಾರ್ಮಿಕ ವಿಧಿ ವಿಧಾನಗಳಿಗೆ ಹೆಚ್ಚಿನ ಮಹತ್ವವಿದೆ. ಕಾರ್ತಿಕ ಮಾಸದಲ್ಲಿ ವಿಷ್ಣು ಭಗವಾನ್ ತನ್ನ ನಾಲ್ಕು ತಿಂಗಳ ನಿದ್ರಾವಸ್ಥೆಯನ್ನು ಪೂರೈಸಿ, ಭೂಮಂಡಲದಲ್ಲಿ ಸಂಚಾರಕ್ಕೆ ಬರುತ್ತಾರೆ ಎಂಬ ಪ್ರತೀತಿ ಇದೆ. ಜೊತೆಗೆ ಲಕ್ಷ್ಮಿ ದೇವಿ ಸಹ ಶ್ರೀ ಮನ್ನಾರಾಯಣನ ಜೊತೆ ಭೂಲೋಕ ಸಂಚಾರವಾಸಿಗಳಾಗುತ್ತಾರೆ. ಹಾಗಾಗಿ ಈ ತಿಂಗಳಲ್ಲಿ ಧಾರ್ಮಿಕವಾಗಿ ನಡೆದುಕೊಳ್ಳಬೇಕಾಗುತ್ತದೆ. ಹಾಗಾಗಿ ಧಾರ್ಮಿಕವಾಗಿ ಉತ್ತಮ ನಡತೆ ತೋರಬೇಕು.
ಅತ್ಯಂತ ಸಾಧಾರಣವಾಗಿ ಕಾಣುವ ಈ ಪೊರಕೆಯ ಮಹತ್ವವನ್ನು ನೀವು ಬಲ್ಲಿರಾ?
ಈ ಬಾರಿ ಕಾರ್ತಿಕ ಮಾಸದ ದೀಪಾವಳಿ ಶುಭ ಸಂದರ್ಭದಲ್ಲಿ ಮನೆಗೆ ಹೊಸ ಪೊರಕೆ ತನ್ನಿ, ಅದರ ಶುಭ ಲಾಭಗಳು ಏನು ಎಂಬುದನ್ನು ಈ ಲೇಖನದಲ್ಲಿ ತಿಳಿಯಿರಿ. ಮೊದಲಿಗೆ ಹೇಳಬೇಕು ಅಂದರೆ ಪೊರಕೆಯನ್ನು ಲಕ್ಷ್ಮಿಯ ಸ್ವರೂಪ ಎಂದು ಗೌರವದಿಂದ ಪೂಜಿಸುತ್ತಾರೆ.
ಹಿಂದೂ ಸಂಪ್ರದಾಯದ ಪ್ರಕಾರ ಮನೆಯಲ್ಲಿ ಯಾವುದೇ ವಸ್ತುವನ್ನು ತಂದಿಟ್ಟುಕೊಂಡರೂ ಅದಕ್ಕೊಂದು ಶಾಸ್ತ್ರ, ಪದ್ಧತಿ, ಅದರ ಪ್ರಯೋಜನಗಳ ಬಗ್ಗೆ ನಿಖರ ಮಾಹಿತಿ, ಸಂದೇಶ ಇರುತ್ತದೆ. ಮನೆಯ ಹಿರಿಯರು ಅಂತಹ ವಿಶಿಷ್ಟ ವಸ್ತುಗಳ ಬಗ್ಗೆ ಸಂಪ್ರದಾಯ, ರೀತಿ ರಿವಾಜುಗಳು ಏನು ಎಂಬುದನ್ನು ತಿಳಿಯ ಹೇಳುತ್ತಾರೆ. ಇಲ್ಲಿ ನಾವು ಮನೆ ಪೊರಕೆಯ ಬಗ್ಗೆ ತಿಳಿಯೋಣ. ಅತ್ಯಂತ ಸಾಧಾರಣವಾಗಿ ಕಾಣುವ ಈ ಪೊರಕೆಯ ಮಹತ್ವವನ್ನು ನೀವು ಬಲ್ಲಿರಾ?
ದೀಪಾವಳಿಯ ಹಿನ್ನೆಲೆಯಲ್ಲಿ ಅನೇಕ ಶುಭ ಸಂದೇಶ, ಮಾಹಿತಿಗಳನ್ನು ಇದುವರೆಗೂ ನೀಡುತ್ತಾ ಬಂದಿದ್ದೇವೆ. ದೀಪಾವಳಿ ಹಬ್ಬ ಖುಷಿ, ಉತ್ಸಾಹ ಮತ್ತು ಸಂಭ್ರಮ ಸಡಗರವನ್ನು ಹೊತ್ತುತರುತ್ತದೆ. ದೀಪಾವಳಿ ಹಬ್ಬಕ್ಕೆ ಹೊಸ ಬಟ್ಟೆ, ಚಿನ್ನಾಭರಣ, ಹೊಸ ಗೃಹೋಪಯೋಗಿ ವಸ್ತುಗಳನ್ನು ಖರೀದಿಸುವುದು ವಾಡಿಕೆ. ಆದರೆ ನಗಣ್ಯವೆನಿಸುವ ಪೊರಕೆಯನ್ನು ಖರೀದಿಸುವುದು ಎಷ್ಟು ಶುಭ ಮತ್ತು ಮಹತ್ವದ್ದು ಎಂಬುದನ್ನು ತಿಳಿಯಿರಿ.
ದೀಪಾವಳಿ ಸಂದರ್ಭದಲ್ಲಿ ಪೊರಕೆ ತಂದಿಟ್ಟುಕೊಂಡು, ಅದಕ್ಕೆ ಪೂಜೆ ಶಾಸ್ತ್ರ ಮಾಡಬೇಕು. ಬಳಿಕ,ಮಾರನೆಯ ದಿನದಿಂದ ಅದನ್ನು ಬಳಸಬೇಕು. ಪೊರಕೆಯನ್ನು ಸರಿಯಾದ ರೀತಿಯಲ್ಲಿ ಬಳಸಿದರೆ ಕುಟುಂಬದಲ್ಲಿನ ತಾಪತ್ರಯಗಳು ದೂರವಾಗಿ ಸುಖ ಸಮೃದ್ಧಿ ನೆಲೆಸುತ್ತದೆ.
1. ಒಂದು ವೇಳೆ ನೀವು ಯಃಕಶ್ಚಿತ್ ವಸ್ತು ಎಂದು ಪೊರಕೆಯನ್ನು ಅಪಮಾನ ಮಾಡಿ, ತಿರಸ್ಕರಿಸಿದ್ದೇ ಆದರೆ ಅದು ತಾಯಿ ಲಕ್ಷ್ಮಿಯನ್ನು ತಿರಸ್ಕರಿಸಿದಂತೆಯೇ ಸರಿ. ಅಕಸ್ಮಾತ್ ಪೊರಕೆಗೆ ನಮ್ಮ ಕಾಲು ತಗುಲಿದರೆ, ಮತ್ತೆ ಅದನ್ನು ಮುಟ್ಟಿ ತಪ್ಪಾಯ್ತು ಕ್ಷಮಿಸು ತಾಯಿ ಎಂದು ಬೇಡಿಕೊಳ್ಳುತ್ತೇವೆ.
2. ಧಾರ್ಮಿಕವಾಗಿಯೂ ಪೊರಕೆಗೆ ಮಹತ್ವ ನೀಡಲಾಗಿದೆ. ಪೊರೆಯನ್ನು ಧನ ಸಂಪತ್ತಿನ ಅಧಿದೇವತೆ ಲಕ್ಷ್ಮಿಯ ವಾಸ ಸ್ಥಾನ ಎಂದು ಪರಿಗಣಿಸಲಾಗುತ್ತದೆ. ಹಾಗಾಗಿ ಲಕ್ಷ್ಮಿ ನಿಮ್ಮ ಮನೆಯಲ್ಲಿ ನೆಲೆಸಬೇಕು ಎಂದರೆ ಈ ಬಾರಿ ದೀಪಾವಳಿಯ ದಿನ ಪರಕೆ ತಂದು ಅದಕ್ಕೆ ಶಾಸ್ತ್ರಬದ್ಧವಾಗಿ ಪೂಜೆ ಮಾಡಿ, ಮಾರನೆಯ ದಿನದಿಂದ ಬಳಸಿ.
3. ದೀಪಾವಳಿಯನ್ನು ಹೊರತುಪಡಿಸಿ ಉಳಿದ ಸಮಯದಲ್ಲಿ ಪೊರಕೆಯ್ನು ಖರೀದಿಸಬೇಕು ಎಂದರೆ ಶನಿವಾರ ಬಿಟ್ಟು ವಾರದ ಬೇರೆ ಯಾವುದೇ ದಿನ ಖರೀದಿಸಬಹುದು. ಪೊರಕೆ ಖರೀದಿಗೆ ಮಂಗಳವಾರ ಶ್ರೇಷ್ಠ.
4. ಹೊಸ ಮನೆಗೆ ಗೃಹ ಪ್ರವೇಶ ಮಾಡುತ್ತಿದ್ದೀರಿ ಎಂದಾದರೆ ಹೊಸ ಪೊರಕೆಯೊಂದಿಗೆ ಮನೆಯನ್ನು ಪ್ರವೇಶಿಸಿ. ಅದು ಶುಭದ ಸಂಕೇತ.
5. ಪೊರಕೆಯನ್ನು ಮನೆಯಲ್ಲಿ ವಿಶಾಲವಾಗಿರುವ ಜಾಗದಲ್ಲಿ ಇಡಬಾರದು. ಒಪ್ಪ ಓರಣದಿಂದ ಮನೆಯ ಮೂಲೆಯಲ್ಲಿ ಇಡಬೇಕು. ಎಲ್ಲೆಂದರಲ್ಲಿ ಬಿಸಾಡುವುದರಿಂದ/ಇಡುವುದರಿಂದ ಅದು ಅಪಶಕುನ ಎಂದು ಭಾವಿಸಲಾಗುತ್ತದೆ. ಕಣ್ಣಿಗೆ ಬೀಳದಂತೆ ಪೊರಕೆಯನ್ನು ಬಾಗಿಲಿನ ಹಿಂದೆ ಇಡಬೇಕು. ಉತ್ತರ ದಿಕ್ಕಿನಲ್ಲಿ ಬಚ್ಚಿಡುವ ರೀತಿ ಪೊರಕೆಯನ್ನು ಇಡಬೇಕು. ಪೊರಕೆಯನ್ನು ಬಳಸಿ, ಮನೆಯಲ್ಲಿ ಕಸ ಇಲ್ಲದಂತೆ ನೋಡಿಕೊಳ್ಳಬೇಕು.
6. ಪೊರಕೆಯನ್ನು ಪೂಜಾ ಕೋಣೆ, ಹಣ ಇಡುವ ಸ್ಥಳ, ಮಲಗುವ ಕೋಣೆಯಲ್ಲಿ ಇಡಬಾರದು. ಮಲಗುವ ಕೋಣೆಯಲ್ಲಿ ಪೊರಕೆಯನ್ನು ಇಟ್ಟರೆ ಅದು ನಿಮ್ಮ ವೈವಾಹಿಕ ಜೀವನದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಅದರಿಂದ ತಾಪತ್ರಯಗಳು ಹೆಚ್ಚಾಗುತ್ತವೆ.
7. ಪೊರಕೆಯನ್ನು ನೇರವಾಗಿ ನಿಲ್ಲಿಸಬಾರದು. ವಾರೆಯಾಗಿ ಇಡಬೇಕು. ಹೆಚ್ಚು ಸಮಯದಿಂದ ಬಳಸಲ್ಪಟ್ಟಿರುವ ಪೊರಕೆಯನ್ನು ಮನೆಯಲ್ಲಿ ಇಟ್ಟುಕೊಳ್ಳಬಾರದು. ಹಳೆಯದ್ದನ್ನು ಬಿಸಾಕಿ, ಹೊಸದನ್ನು ತಪ್ಪದೆ ತರಬೇಕು.
(Diwali 2021 buy broom on deepawali day it is auspicious know interesting things related to broom )