Hindu Puja: ಮನೆಯಲ್ಲಿ ದೇವರಿಗೆ ಒಂದು ಅಗರಬತ್ತಿ ಏಕೆ ಹಚ್ಚಬಾರದು?

|

Updated on: Mar 21, 2025 | 10:13 AM

ಪೂಜೆಯಲ್ಲಿ ಅಗರಬತ್ತಿ ಬಳಕೆ ವಾಡಿಕೆ. ಆದರೆ ಒಂದೇ ಅಗರಬತ್ತಿ ಹಚ್ಚುವುದು ಅಶುಭ. ಇದು ಮನೆಯಲ್ಲಿ ಕಲಹಕ್ಕೆ ಕಾರಣವಾಗಬಹುದು. ಜೋಡಿ ಅಗರಬತ್ತಿ ಬಳಸುವುದು ಧನಾತ್ಮಕತೆ ಮತ್ತು ಮಾನಸಿಕ ಶಾಂತಿಗೆ ಒಳ್ಳೆಯದು ಎಂದು ಜ್ಯೋತಿಷಿ ಬಸವರಾಜ ಗುರೂಜಿಯವರು ಹೇಳುತ್ತಾರೆ. ಒಂಟಿ ಅಗರಬತ್ತಿಯನ್ನು ಏಕೆ ಹಚ್ಚಬಾರದು ಇದಕ್ಕೆ ಕಾರಣವೇನು ಎಂಬುದನ್ನು ವಿಡಿಯೋದಲ್ಲಿ ವಿವರಿಸಲಾಗಿದೆ.

Hindu Puja: ಮನೆಯಲ್ಲಿ ದೇವರಿಗೆ ಒಂದು ಅಗರಬತ್ತಿ ಏಕೆ ಹಚ್ಚಬಾರದು?
Single Incense Stick
Image Credit source: Pinterest
Follow us on

ಹಿಂದೂ ಧರ್ಮದಲ್ಲಿ ಪೂಜೆಯ ಸಮಯದಲ್ಲಿ ಅಗರಬತ್ತಿ ಬಳಸುವುದು ವಾಡಿಕೆ. ಅಗರಬತ್ತಿ ಇಲ್ಲದೆ ಪೂಜೆಯು ಸಂಪನ್ನವಾಗದು ಎಂಬುದು ಸಾಕಷ್ಟು ಜನರ ನಂಬಿಕೆ. ಅಗರಬತ್ತಿಯ ಸುವಾಸನೆಯು ಪರಿಸರವನ್ನು ಶುದ್ಧೀಕರಿಸುತ್ತದೆ ಮತ್ತು ಧನಾತ್ಮಕ ಶಕ್ತಿಯನ್ನು ವೃದ್ಧಿಸುತ್ತದೆ ಎಂದು ನಂಬಲಾಗಿದೆ. ಆದಾಗ್ಯೂ, ಅಗರಬತ್ತಿ ಹಚ್ಚುವಾಗ ಸಾಕಷ್ಟು ಜನರು ಒಂದು ಅಗರ ಬತ್ತಿ ಹಚ್ಚಿಡುತ್ತಾರೆ. ಆದರೆ ಈ ಅಭ್ಯಾಸ ಶುಭವೇ ಅಥವಾ ಅಶುಭವೇ? ಈ ಕುರಿತು ಖ್ಯಾತ ಜ್ಯೋತಿಷಿ ಬಸವರಾಜ ಗುರೂಜಿಯವರು ನೀಡಿರುವ ಮಾಹಿತಿ ಇಲ್ಲಿದೆ.

ಅಗರಬತ್ತಿ ಹಚ್ಚುವಾಗ ಒಂದು ಬತ್ತಿ ಹಚ್ಚಿಡುವುದನ್ನು ತಪ್ಪಿಸಬೇಕು. ಇದು ಮನೆಯಲ್ಲಿ ಕಲಹ ಮತ್ತು ನಕಾರಾತ್ಮಕತೆಯನ್ನು ಉಂಟುಮಾಡಬಹುದು ಎಂದು ಬಸವರಾಜ ಗುರೂಜಿಯವರು ಎಚ್ಚರಿಸುತ್ತಾರೆ. ಒಂಟಿ ಅಗರಬತ್ತಿಯನ್ನು ಏಕೆ ಹಚ್ಚಬಾರದು ಇದಕ್ಕೆ ಕಾರಣವೇನು ಎಂಬುದನ್ನು ಈ ವಿಡಿಯೋದಲ್ಲಿ ವಿವರವಾಗಿ ವಿವರಿಸಲಾಗಿದೆ.

ವಿಡಿಯೋ ಇಲ್ಲಿದೆ ನೋಡಿ:

YouTube video player

ಇದನ್ನೂ ಓದಿ
ಮನೆಯಿಂದಲೇ ಕೆಲಸ ಮಾಡುತ್ತಿದ್ದೀರಾ? ಹಾಗಿದ್ರೆ ಈ ವಾಸ್ತು ಸಲಹೆ ಅನುಸರಿಸಿ
ಈ ಮೂರು ರಾಶಿಯವರಿಗೆ ಗಜಕೇಸರಿ ಯೋಗ; ಅದೃಷ್ಟ ಖುಲಾಯಿಸಲಿದೆ
ದೇವಸ್ಥಾನದಲ್ಲಿ ಪ್ರದಕ್ಷಿಣೆ ಹಾಕುವಾಗ ಈ ವಿಷ್ಯ ನೆನಪಿಟ್ಟುಕೊಳ್ಳಿ
ನರಸಿಂಹ ದ್ವಾದಶಿ ಯಾವಾಗ? ದಿನಾಂಕ, ಶುಭ ಸಮಯ ಮತ್ತು ಪೂಜಾ ವಿಧಾನ ತಿಳಿಯಿರಿ

ಇದನ್ನೂ ಓದಿ: ಮನೆಯಲ್ಲಿ ಶನಿ ದೇವರ ದಿಕ್ಕು ಯಾವುದು ಮತ್ತು ಆ ದಿಕ್ಕಿನಲ್ಲಿ ಏನು ಇಡಬಾರದು?

ಇನ್ಮುಂದೆ ಪೂಜೆಯ ಸಮಯದಲ್ಲಿ ಅಗರಬತ್ತಿ ಬಳಸುವಾ ಎರಡು ಅಗರಬತ್ತಿ ಬಳಸಿ ಜೋಡಿ ಅಗರಬತ್ತಿ ಬಳಸುವುದರಿಂದ ಧನಾತ್ಮಕತೆ ಮತ್ತು ಮಾನಸಿಕ ಶಾಂತಿ ಹೆಚ್ಚಾಗುತ್ತದೆ ಎಂದು ಹೇಳಲಾಗುತ್ತದೆ. ಆದರೆ ಇಂದಿನ ದಿನಗಳಲ್ಲಿ ಅಗರಬತ್ತಿಗಳಿಗೆ ಕೂಡ ಸುವಾಸನೆ ಭರಿಸಲು ರಾಸಾಯನಿಕಗಳನ್ನು ಅಳವಡಿಸುವ ಕಾರಣದಿಂದಾಗಿ ಇದರ ಹೊಗೆಯು ಆರೋಗ್ಯಕ್ಕೆ ಹಾನಿ ಉಂಟು ಮಾಡುವುದು. ಈ ಬಗ್ಗೆ ಎಚ್ಚರ ವಹಿಸಿದರೆ ಒಳ್ಳೆಯದು. ಆದ್ದರಿಂದ ಆದಷ್ಟು ಪರಿಸರ ಸ್ನೇಹಿ ನೈಸರ್ಗಿಕ ಅಗರಬತ್ತಿಗಳನ್ನು ಬಳಸಿ.

ಮತ್ತಷ್ಟು ಆಧ್ಯಾತ್ಮ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ