Indian Army Day 2025 : ಜನವರಿ 15 ರಂದೇ ಭಾರತೀಯ ಸೇನಾ ದಿನ ಆಚರಿಸುವುದು ಏಕೆ? ಏನಿದರ ಮಹತ್ವ? ಇಲ್ಲಿದೆ ಮಾಹಿತಿ

| Updated By: ಅಕ್ಷತಾ ವರ್ಕಾಡಿ

Updated on: Jan 15, 2025 | 8:38 AM

ಜನವರಿ 15 ರಂದು ಭಾರತೀಯ ಸೇನಾ ದಿನ. ದೇಶದ ಸುರಕ್ಷತೆಗಾಗಿ ಹಾಗೂ ದೇಶ ಸೇವೆಗಾಗಿ ತಮ್ಮನ್ನು ತಾವು ಸಮರ್ಪಿಸಿಕೊಂಡಿರುವ ಭಾರತೀಯ ಯೋಧರನ್ನು ಗೌರವಿಸುವ ದಿನವಾಗಿದೆ. ಹಾಗೂ ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ಯೋಧರನ್ನು ಸ್ಮರಿಸುವ ದಿನವು ಇದಾಗಿದೆ. ಹಾಗಾದ್ರೆ ಈ ದಿನದ ಆಚರಣೆ ಹಿಂದಿನ ಇತಿಹಾಸ ಹಾಗೂ ಮಹತ್ವ ಸೇರಿದಂತೆ ಇನ್ನಿತ್ತರ ಮಾಹಿತಿ ಇಲ್ಲಿದೆ.

Indian Army Day 2025 : ಜನವರಿ 15 ರಂದೇ ಭಾರತೀಯ ಸೇನಾ ದಿನ ಆಚರಿಸುವುದು ಏಕೆ? ಏನಿದರ ಮಹತ್ವ? ಇಲ್ಲಿದೆ ಮಾಹಿತಿ
Indian Army Day 2025
Follow us on

ಗಡಿಯಲ್ಲಿ ನಮ್ಮ ರಕ್ಷಣೆಗೆ ನಿಂತ ಪ್ರತಿಯೊಬ್ಬ ಸೈನಿಕರಿಗೂ ಗೌರವ ಸಲ್ಲಿಸುವ ದಿನವೇ ಭಾರತೀಯ ಸೇನಾ ದಿನ. ದೇಶ ರಕ್ಷಣೆಗಾಗಿ ಅದೆಷ್ಟೋ ಸೈನಿಕರು ತಮ್ಮ ಪ್ರಾಣವನ್ನೇ ನೀಡಿದ್ದಾರೆ. ಹೌದು, ದೇಶದ ಭದ್ರತೆಗ ಭಾರತೀಯ ಸೇನೆ ಕೊಟ್ಟ ಕೊಡುಗೆ ಅಪಾರವಾದದ್ದು. ನಮ್ಮ್ಮ ಭಾರತೀಯ ಸೇನೆಯು ವಿಶ್ವದ ನಾಲ್ಕನೇ ಬಲಿಷ್ಠ ಸೇನೆಯಾಗಿದ್ದು, ದೇಶದ ಭದ್ರತೆಗೆ ಸದಾ ಬದ್ಧವಾಗಿದೆ. ಈಗಾಗಲೇ ಶತ್ರು ರಾಷ್ಟ್ರಗಳನ್ನು ಯುದ್ಧದಲ್ಲಿ ಮಣಿಸಿ ವಿಜಯಿಶಾಲಿಯಾಗಿದೆ. ದೇಶ ರಕ್ಷಣೆಗಾಗಿ ತಮ್ಮ ಪ್ರಾಣವನ್ನೇ ತ್ಯಾಗ ಮಾಡಿದ ಮಹಾನ್ ವೀರರನ್ನು ಗೌರವಿಸಲು ಹಾಗೂ ಹುತಾತ್ಮರಾದ ಯೋಧರನ್ನು ಸ್ಮರಿಸಲು ಭಾರತೀಯ ಸೇನಾ ದಿನವನ್ನು ಆಚರಿಸಲಾಗುತ್ತದೆ.

ಭಾರತೀಯ ಸೇನಾ ದಿನದ ಇತಿಹಾಸ:

ಬ್ರಿಟಿಷ್ ಆಳ್ವಿಕೆಯ ಕಾಲದಲ್ಲಿ 1895 ಏಪ್ರಿಲ್ 01 ರಂದು ಭಾರತೀಯ ಸೇನೆಯನ್ನು ಸ್ಥಾಪಿಸಲಾಯಿತು. ಈ ಸೇನೆಯನ್ನು ಬ್ರಿಟಿಷ್ ಭಾರತೀಯ ಸೇನೆ ಎಂದು ಕರೆಯಲಾಗುತ್ತಿತ್ತು. ಸೇನಾ ಕಮಾಂಡರ್ ಗಳು ಬ್ರಿಟಿಷರೇ ಆಗಿದ್ದರು. ಆದರೆ, ಭಾರತವು ಸ್ವಾತಂತ್ರ್ಯ ಪಡೆದ ಬಳಿಕ ಅಂದರೆ ಎರಡು ವರ್ಷಗಳ ನಂತರದಲ್ಲಿ ಜನವರಿ 15, 1949 ರಲ್ಲಿ ಬ್ರಿಟೀಷ್ ಕಮಾಂಡರ್ ಇನ್ ಚೀಫ್, ಜನರಲ್ ಫ್ರಾನ್ಸಿಸ್ ಬುಚರ್ ಅವರು ಕೆ.ಎಂ ಕಾರ್ಯಪ್ಪ ಅವರಿಗೆ ಅಧಿಕಾರ ಹಸ್ತಾಂತರಿಸಿದರು. ಈ ಮೂಲಕ ಲೆಫ್ಟಿನೆಂಟ್ ಜನರಲ್ ಕೆ.ಎಂ ಕಾರ್ಯಪ್ಪ ಸ್ವತಂತ್ರ ಭಾರತದ ಮೊದಲ ಕಮಾಂಡರ್ ಇನ್ ಚೀಫ್ ಆಗಿ ಅಧಿಕಾರ ವಹಿಸಿಕೊಂಡರು. ಇದರ ಸವಿನೆನಪಿಗಾಗಿ ಹಾಗೂ ಭಾರತೀಯ ಸೇನೆಯ ಸೈನಿಕರ ಗೌರವಾರ್ಥವಾಗಿ ಪ್ರತಿವರ್ಷ ಜನವರಿ 15 ರಂದು ಭಾರತೀಯ ಸೇನಾ ದಿನವನ್ನು ಆಚರಿಸಿಕೊಂಡು ಬರಲಾಗುತ್ತಿದೆ.

ಇದನ್ನೂ ಓದಿ: ಮಕರ ಸಂಕ್ರಾಂತಿ ಹಬ್ಬದ ದಿನವೇ ಗಾಳಿಪಟ ಹಾರಿಸುವುದು ಏಕೆ?

ಭಾರತೀಯ ಸೇನಾ ದಿನದ ಮಹತ್ವ ಹಾಗೂ ಆಚರಣೆ:

ದೇಶದ ಸರಕ್ಷತೆಗಾಗಿ ತಮ್ಮನ್ನು ತಾವು ದೇಶ ಸೇವೆಗಾಗಿ ಸಮರ್ಪಿಸಿಕೊಂಡಿರುವ ಯೋಧರು, ದೇಶಕ್ಕಾಗಿ ಹುತಾತ್ಮರಾದ ಯೋಧರನ್ನು ಸ್ಮರಿಸುವ ದಿನವಾಗಿದೆ. ಲೆಫ್ಟಿನೆಂಟ್ ಜನರಲ್ ಕೆ.ಎಂ ಕಾರ್ಯಪ್ಪ ಸ್ವತಂತ್ರ ಭಾರತದ ಮೊದಲ ಕಮಾಂಡರ್ ಇನ್ ಚೀಫ್ ಆಗಿ ಅಧಿಕಾರ ಸ್ವೀಕರಿಸಿದ ಸವಿನೆನಪಿಗಾಗಿಯೂ ಈ ದಿನವು ಮಹತ್ವದ್ದಾಗಿದೆ. ಈ ಬಾರಿಯ 77 ನೇ ಭಾರತೀಯ ಸೇನಾ ದಿನವನ್ನು ಮಹಾರಾಷ್ಟ್ರದ ಪುಣೆಯಲ್ಲಿ ಆಚರಿಸಲಾಗುತ್ತದೆ. ಈ ವಿಶೇಷ ದಿನದಂದು ದೇಶದಾದ್ಯಂತ ಭವ್ಯವಾದ ಸಮಾರಂಭಗಳು, ಮಿಲಿಟರಿ ಮೆರವಣಿಗೆಗಳು, ಸಾಹಸಿ ಚಟುವಟಿಕೆಗಳ ಪ್ರದರ್ಶನಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು, ಸೇನಾ ಪರೇಡ್, ವೀರಯೋಧರಿಗೆ ಪ್ರಶಸ್ತಿ ಪ್ರಧಾನ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ